ಐತಿಹಾಸಿಕ ಹಿರೇಕೆರೆಗೆ ಕಾಯಕಲ್ಪ

Team Udayavani, Dec 6, 2018, 3:59 PM IST

6-december-17.gif

ನರೇಗಲ್ಲ: ಕೆರೆಕಟ್ಟೆಗಳು ಗ್ರಾಮೀಣ ಪ್ರದೇಶದ ಜನರ ಜೀವಾಳವಾಗಿದ್ದು, ಹಿಂದೆ ರಾಜ ಮಹಾರಾಜರು ತಮ್ಮ ಸಾಧನೆಗಳ ಗುರುತಿಗಾಗಿ, ಯುದ್ಧದಲ್ಲಿ ಗೆದ್ದ ವಿಜಯದ ಸಂಕೇತಕ್ಕಾಗಿ ಗ್ರಾಮಗಳಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸುವ ಮೂಲಕ ವಿಜಯೋತ್ಸವ ಆಚರಿಸುತ್ತಿರುವುದನ್ನು ಇತಿಹಾಸ ಪುಟಗಳಲ್ಲಿ ಕಾಣುತ್ತೇವೆ. ಅಂತಹ ಮಹತ್ವದ ಸಾಧನೆಯತ್ತ ಇಲ್ಲಿನ ರೈತ ಸಮೂಹ ಸಾಗಿದೆ.

ಹಾಲಕೆರೆಯ ಡಾ| ಅಭಿನವ ಅನ್ನದಾನ ಸ್ವಾಮೀಜಿಗಳು ಒಂದು ಲಕ್ಷ ರೂ. ದೇಣಿಗೆ ನೀಡುವದರ ಮೂಲಕ ಹಿರೇಕೆರೆ ಹೊಳೆತ್ತುವ ಅಭಿವೃದ್ಧಿ ಕಾರ್ಯಕ್ಕೆ ನೆಲ ಜಲ ಸಂರಕ್ಷಣೆ ಸಮಿತಿಯೊಂದಿಗೆ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಕೂಡ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಸುಮಾರು 30 ಎಕರೆ ವಿಸ್ತರಣೆ ಹೊಂದಿದ ಐತಿಹಾಸಿಕ ಹಿರೇಕೆರೆ ಈವರೆಗೆ ಅಭಿವೃದ್ಧಿ ಕಾಣದೆ, ಮೃತಪಟ್ಟ ಪ್ರಾಣಿಗಳು ಹಾಗೂ ಪಟ್ಟಣದ ತ್ಯಾಜ್ಯ ವಸ್ತುಗಳನ್ನು ಬಿಸಾಡಲಾಗುತ್ತಿತ್ತು. ಇದರಿಂದ ಕೆರೆ ತನ್ನ ಸ್ಥಾನ ಕಳೆದುಕೊಂಡು ತಿಪ್ಪೆಯಾಗಿ ಪರಿವರ್ತನೆಯಾಗಿತ್ತು. ಅದರ ಅಭಿವೃದ್ಧಿಗಾಗಿ ಹೊಳೆತ್ತುವ ಅಭಿವೃದ್ಧಿ ಸಮಿತಿ ರಚಿಸುವ ಮೂಲಕ ಕೆರೆ ಅಭಿವೃದ್ಧಿ ಕೈಗೊಂಡಿರುವುದು ರೈತನಿಗೆ ನೆರವಾಗಲಿದೆ.

ಪ್ರಸಕ್ತ ವರ್ಷ ಎದುರಾದ ಭೀಕರ ಬರದ ಬವಣೆಯಿಂದ ಕಂಗಾಲಾದ ನರೇಗಲ್ಲ ಪಟ್ಟಣದ ರೈತರನ್ನು ಒಗ್ಗೂಡಿಸುವ ಮೂಲಕ ಹಾಲಕೆರೆಯ ಡಾ| ಅಭಿನವ ಅನ್ನದಾನ ಸ್ವಾಮೀಜಿ ಮತ್ತು ನೆಲ ಜಲ ಸಂರಕ್ಷಣೆ ಸಮಿತಿ ವತಿಯಿಂದ ಜರುಗಿದ ರೈತರ ಸಭೆ ಕೈಗೊಂಡ ನಿರ್ಧಾರ ಸಾರ್ಥಕತೆ ಮೂಡಿಸಿದೆ. ಕೆರೆ ಮಣ್ಣನ್ನು ರೈತರೇ ತೆಗೆದು ಕೊಂಡು ಹೋಗಬೇಕು. ರೈತರು ತರುವ ಟ್ರ್ಯಾಕ್ಟರ್‌ ತುಂಬಿಸುವ ಜವಾಬ್ದಾರಿ ಸಮಿತಿ ಹೊತ್ತಿದೆ. ರೈತರಿಂದ ಒಂದು ಟ್ರ್ಯಾಕ್ಟರ್‌ ಮಣ್ಣಿಗೆ ಪಡೆಯುವ 70 ರೂ.ಗಳಲ್ಲಿ ಕೆರೆ ಮಣ್ಣು ಟ್ರ್ಯಾಕ್ಟರಿಗೆ ತುಂಬಿಸುವ ಜೆಸಿಬಿ ಯಂತ್ರದ ಖರ್ಚು ನಿರ್ವಹಿಸುತ್ತದೆ. ಎರಡು ದಿನಗಳಿಂದ ಹೂಳು ತೆಗೆಯುವ ಕಾರ್ಯ ತೀವ್ರಗೊಂಡಿದೆ. ನೂರಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಮಣ್ಣನ್ನು ರೈತರು ತೆಗೆದುಕೊಂಡಿದ್ದಾರೆ. ನರೇಗಲ್ಲ ಸೇರಿದಂತೆ ಕೋಡಿಕೊಪ್ಪ, ಕೋಚಲಾಪುರ, ಮಲ್ಲಾಪುರ, ದ್ಯಾಂಪುರ, ತೋಟಗಂಟಿ ಗ್ರಾಮದಿಂದ ರೈತರು, ಕೆರೆ ಮಣ್ಣಿಗಾಗಿ ಕಾಯ್ದು ನಿಂತು ಕೊಂಡೊಯ್ಯುತ್ತಿದ್ದಾರೆ.

ಕೆರೆ ಮಣ್ಣು ಹೊಲಕ್ಕೆ ಹಾಕಿದರೇ ಫಲವತ್ತತೆ ಹೆಚ್ಚುತ್ತದೆ. ಉತ್ತಮ ಇಳುವರಿ ಪಡೆಯಬಹುದು. ಹೀಗಾಗಿ ಕೆರೆ ಮಣ್ಣು ಪಡೆದುಕೊಳ್ಳುತ್ತಿದ್ದೇವೆ. ಹಿರೇಕೆರೆ ಮಣ್ಣಿನಲ್ಲಿ ಗೊಬ್ಬರದ ಶಕ್ತಿಯಿದೆ. ಇಂತಹ ಮಣ್ಣು ಬೇರೆ ಕೆರೆಯಲ್ಲಿ ಸಿಗುವುದಿಲ್ಲ. ಈ ಕೆರೆ ಹೂಳು ತೆಗೆಯುವ ಸುದ್ದಿ ಕೇಳಿ ಬಾಡಿಗೆ ಟ್ರ್ಯಾಕ್ಟರ್‌ ಮೂಲಕ ಮಣ್ಣು ಕೊಂಡೊಯ್ಯುತ್ತಿದ್ದೇವೆ ಎಂದು ರೈತರು ಹೇಳುತ್ತಿದ್ದಾರೆ.

ಜ್ಞಾನ ಪ್ರಸಾರ, ದಾಸೋಹ ಮಾಡುವುದು, ಮಂತ್ರಪಠಿಸುವ ಕತೆಗೆ ಗ್ರಾಮಾಭಿವೃದ್ಧಿಗಳ ಚಿಂತನೆ, ಕಾಲಕ್ಕೆ ತಕ್ಕಂತೆ ಬದಲಾದ ವಿಷಯಗಳ ಕುರಿತು ಚಿಂತನಾಶಕ್ತಿ ಮಠಮಂದಿರಗಳು ಜಾಗೃತಿ ಮೂಡಿಸುವ ಕಾಯಕಕ್ಕೆ ಇಳಿಯಬೇಕು.
ಡಾ| ಅಭಿನವ ಅನ್ನದಾನ
ಸ್ವಾಮೀಜಿ, ಹಾಲಕೆರೆ ಸಂಸ್ಥಾನ ಮಠದ ಪೀಠಾಧಿಪತಿ

ಕೆರೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರವಿದ್ದು, ಅದರ ಅಭಿವೃದ್ಧಿ ಕಾರ್ಯದಲ್ಲಿ ಕಡಿಮೆಯಾಗಬಹುದಾದ ಅನುದಾನವನ್ನು ನೀಡಲು ಬದ್ಧನಾಗಿದ್ದೇನೆ., 
ಕಳಕಪ್ಪ ಬಂಡಿ, ಶಾಸಕ

ಸಿಕಂದರ ಎಂ. ಆರಿ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.