CONNECT WITH US  

ಹಿರಿಯರಿಲ್ಲದ ಮನೆ ದೇವರಿಲ್ಲದ ದೇವಸ್ಥಾನ ಇದ್ದಂತೆ

ಕಲಬುರಗಿ: ಹಿರಿಯರಿಲ್ಲದ ಮನೆ ದೇವರಿಲ್ಲದ ದೇವಸ್ಥಾನವಿದ್ದಂತೆ. ಅವರ ಮಾರ್ಗದರ್ಶನ ಮನೆ ಅಥವಾ ಸಮಾಜದ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದು ಜಿಲ್ಲಾ ವೀರಶೈವ ಮಹಾಸಭಾದ ಹಿರಿಯ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ ತಿಳಿಸಿದರು.

ವಿಶ್ವಜ್ಯೋತಿ ಪ್ರತಿಷ್ಠಾನ ನಗರದ ಹೊರವಲಯದಲ್ಲಿ ಆಯೋಜಿಸಿದ್ದ ಸಂಗಮ ಸಂಭ್ರಮ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಅಜ್ಜ-ಅಜ್ಜಿಯರ ಕತೆ ಕೇಳುತ್ತಾ, ಅವರ ಪ್ರೀತಿ, ವಿಶ್ವಾಸದಲ್ಲಿ ಬೆಳೆಯುತ್ತಿದ್ದ ಮಕ್ಕಳು ಇಂದು ಅವಿಭಕ್ತ ಕುಟುಂಬಗಳು ಮರೆಯಾಗಿದ್ದರಿಂದ ಆ ಪ್ರೀತಿ, ವಿಶ್ವಾಸದಿಂದ ವಂಚಿತರಾಗುತ್ತಿದ್ದಾರೆ. ವೃದ್ಧರಿಗೆ ವೃದ್ಧಾಪ್ಯದಲ್ಲಿ ಪ್ರೀತಿ, ವಿಶ್ವಾಸದ ನಡೆಯಿಂದ ಮಾತ್ರ ಪುನಶ್ಚೇತನ ತುಂಬಬಹುದು. ದಣಿದ ಜೀವಗಳನ್ನು ದುಡ್ಡಿನಿಂದ ಸಂತೈಸಲು ಸಾಧ್ಯವಿಲ್ಲ ಎಂದರು.

ಅತಿಥಿಯಾಗಿದ್ದ ಗುಲಬರ್ಗಾ ವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ವಾಸುದೇವ ಸೇಡಂ ಮಾತನಾಡಿ, ಮನದ ಅಹಂಕಾರ ಮರೆತು ಪರಸ್ಪರ ಹೊಂದಾಣಿಕೆಯಿಂದ ಇದ್ದರೆ ಮಾತ್ರ ಸಂಸಾರದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಸಂಸಾರದಲ್ಲಿ ಸೋಲುವುದರಿಂದ ಗೆಲುವು ದೊರಕುತ್ತದೆ ಎಂದು ಹೇಳಿದರು.

ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ ಹರಸೂರ, ರೇವಣಸಿದ್ಧಯ್ಯ ಸ್ವಾಮಿ ಹುಮನಾಬಾದ ತಮ್ಮ ಕಲಾಪ್ರತಿಭೆಯಿಂದ ಮನರಂಜಿಸಿದರು. ಬಿ.ಎಸ್‌. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. 

ಕಲ್ಯಾಣಕುಮಾರ ಶೀಲವಂತ, ಸತೀಶ ಅಳ್ಳೊಳ್ಳಿ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಮಲ್ಲಿಕಾರ್ಜುನ ಖೇಮಜಿ, ಡಾ| ಎಸ್‌.ಎಸ್‌.ಗುಬ್ಬಿ, ಪ್ರೊ| ಬಿ.ಕೆ. ಚಳಗೇರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್‌ ಠಾಕೂರ, ಶಾಂತಪ್ಪ ಸಂಗಾವಿ, ದಯಾನಂದ ಪಾಟೀಲ, ಬಾಬುರಾವ ಪಾಟೀಲ, ಶಿವಕುಮಾರ ಸಿ.ಎಚ್‌, ಕೆ.ಗಿರಿಮಲ್ಲ, ಎಂ.ಬಿ. ನಿಂಗಪ್ಪ, ಎಸ್‌. ಎಂ. ಪಟ್ಟಣಕರ್‌, ನಾಗೇಂದ್ರಪ್ಪ ಮಾಡ್ಯಾಳೆ, ಕವಯತ್ರಿ ಮಹಾದೇವಿ ಎಸ್‌.ನಾಗೂರ, ಪೊಲೀಸ್‌ ಇಲಾಖೆಯ ಎ.ಎಸ್‌.ಐ. ಯಶೋಧಾ ಕಟಕೆ, ಆರ್‌. ಎಸ್‌.ದೊಡ್ಮನಿ, ಲಗುಮಣ್ಣಾ ಕರಗುಪ್ಪಿ, ಸಾಹಿತಿ ಮುಡಬಿ ಗುಂಡೇರಾವ, ರವೀಂದ್ರಕುಮಾರ ಭಂಟನಳ್ಳಿ, ಪತ್ರಕರ್ತ ದೇವೇಂದ್ರಪ್ಪ ಕಪನೂರ, ಬಿ.ಎಂ.ಪಾಟೀಲ ಕಲ್ಲೂರ, ನಿಲಯದ ಮುಖ್ಯಸ್ಥೆ ಜಲಜಾಕ್ಷಿ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಸುಬಾಷ ಚಕ್ರವರ್ತಿ, ಶಿವಾನಂದ ಮಪತಿ, ನೀಲಾಂಬಿಕಾ ಚೌಕಿಮಠ, ನೀಲಾಂಬಿಕಾ ಸೂಗುರ, ಎಸ್‌.ಎಂ.ಪಟ್ಟಣಕರ್‌, ಹಣಮಂತರಾವ ಘಂಟೇಕರ್‌, ಹಣಮಂತರಾಯ ಅಟ್ಟೂರ, ಡಾ| ಬಾಬುರಾವ ಶೇರಿಕಾರ, ಶಿವರಾಜ ಅಂಡಗಿ, ಹಾಗೂ ಇತರರು ಭಾಗವಹಿಸಿದ್ದರು. 

Trending videos

Back to Top