2018 ತರಲಿ ಹರ್ಷ ನೂರೆಂಟು


Team Udayavani, Jan 1, 2018, 10:45 AM IST

gul-1.jpg

ಜನವರಿ ವಿಶೇಷಗಳು
ಸೇಡಂ ಉತ್ಸವ:
ಜನವರಿ 14ರಂದು ಸೇಡಂ ಉತ್ಸವ ಆಚರಿಸಲಾಗುತ್ತದೆ. ಈ ವೇಳೆ ತಾಲೂಕಿನಲ್ಲಿರುವ ಐತಿಹಾಸಿಕ ಸ್ಥಬ್ದ ಚಿತ್ರಗಳ ರ್ಯಾಲಿ ಮಾಡಲಾಗುತ್ತದೆ. ಇಡೀ ಊರಿನ ಉತ್ಸವದಂತೆ ಆಚರಿಸಲಾಗುತ್ತದೆ. ಇದರ ರೂವಾರಿ ಬಸವರಾಜ ಪಾಟೀಲ ಸೇಡಂ. ಪುರಸಭೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತದೆ.

ಅಫಜಲಪುರ: ಜನವರಿ 12, 15ರಂದು ಚಿನ್ನಮಳ್ಳಿ ಮಲ್ಲಿಕಾರ್ಜುನ ದೇವಸ್ಥಾನ ಜಾತ್ರಾ ಮಹೋತ್ಸವ ನಡೆಯುತ್ತದೆ. ಪಟ್ಟಣದ ಸಿದ್ಧರಾಮೇಶ್ವರ ಜಾತ್ರೆ ಹಾಗೂ ಚಿನ್ಮಳ್ಳಿ ಮಲ್ಲಿಕಾರ್ಜುನನ ಜಾತ್ರೆ ನಡೆಯುತ್ತದೆ. 

 ಚಿಂಚೋಳಿ: ಬನದ ಹುಣ್ಣಿಮೆಗೆ ರಾಜಾ ಧರ್ಮಪಾಲನ ಆರಾಧ್ಯ ದೈವ ಶ್ರೀ ವೆಂಕಟೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯುತ್ತದೆ. ಪಟ್ಟಣದ ಎಲ್ಲ ಪುರೋಹಿತರು, ದೇಶಪಾಂಡೆ, ದೇಶಮುಖ ವಂಶಸ್ಥರು ಬ್ರಾಹ್ಮಣ ಸಮುದಾಯದವರು ಭಾಗವಹಿಸುತ್ತಾರೆ.

ಫೆಬ್ರವರಿ
ಚಿಂಚೋಳಿ:
ಪರಮಪೂಜ್ಯ ಸದ್ಗುರು ಲಿಂಗೈಕ್ಯ ಚನ್ನಬಸವ ಶಿವಯೋಗಿಗಳ 67ನೇ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಹೈದ್ರಾಬಾದ ಕರ್ನಾಟಕದ ಎಲ್ಲ ಜಿಲ್ಲೆಗಳು ಹಾಗೂ ವಿವಿಧ ರಾಜ್ಯಗಳ ಜನರು ಜಾತ್ರೆಗೆ ಆಗಮಿಸುತ್ತಾರೆ.

 ಆಳಂದ: ಹೊನ್ನಳ್ಳಿ ಎಲ್ಲಮ್ಮ ದೇವಿ ಜಾತ್ರೆ. ಎಲ್ಲ ವರ್ಗದ ಜನರು ಜಾತ್ರೆಗೆ ಬರುತ್ತಾರೆ. ಈ ವೇಳೆ ಉಡಿ ತುಂಬುವುದು, ಚೌಡಕಿ ಕುಣಿತ ಪ್ರದರ್ಶನ ಹಾಗೂ ಹೊಸ ಬೆಳೆಯನ್ನು ದೇವಿ ಅರ್ಪಿಸಲಾಗುತ್ತದೆ. 

 ಅಫಜಲಪುರ: ದೇವಲಗಾಣಗಾಪುರದ ದತ್ತನ ಸನ್ನಿಧಾನದಲ್ಲಿ ಮಾಘ ಉತ್ಸವ ನಡೆಯುತ್ತದೆ.  ಅಫಜಲಪುರ: ಖರ್ಜಗಿಯಲ್ಲಿ ಹಜರತ್‌ ಖಾಜಾ ಸೈಫನ್‌ ಮುಲ್ಕ ಜಾತ್ರೆ ಹಾಗೂ ಯಲ್ಲಾಲಿಂಗೇಶ್ವರ ಜಾತ್ರೆ ನಡೆಯುತ್ತದೆ.

 ವಾಡಿ: ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ. ಲಂಬಾಣಿ ಸಾಂಸ್ಕೃತಿಕ ಉತ್ಸವ, ಕುದುರೆ ಮತ್ತು ಒಂಟೆ ಮೆರವಣಿಗೆ, ಸರ್ವಧರ್ಮ ಸಮ್ಮೇಳನ ನಡೆಯುತ್ತದೆ.

 ವಾಡಿ: ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿವರ್ಷ ಮಹಾಶಿವರಾತ್ರಿ ನಿಮಿತ್ತ ಪುರಾಣ ಪ್ರವಚನ ನಡೆಯುತ್ತದೆ.

ಮಾರ್ಚ್‌ 
ಕಲಬುರಗಿ:
ಶರಣಬಸವೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಈ ವೇಳೆ 15 ದಿನಗಳ ಕಾಲ ರಥೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಶರಣಬಸಪ್ಪ ಅಪ್ಪ ಪುರುಷ ಬಟ್ಟಲ ಪ್ರದರ್ಶಿಸುತ್ತಾರೆ. ಜಾತ್ರೆಯಲ್ಲಿ ಕರ್ನಾಟಕವಲ್ಲದೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ರಾಜ್ಯದ ಭಕ್ತರು ಸೇರಿದಂತೆ ಇತರ ರಾಜ್ಯದ ಭಕ್ತರು ಪಾಲ್ಗೊಳ್ಳುತ್ತಾರೆ.

ಸುಲೇಪೇಟ್‌ ವೀರಭದ್ರೇಶ್ವರ ಜಾತ್ರೆ.
 ಶಹಾಬಾದ:
ಲಂಬಾಣಿ ಸಮುದಾಯದ ಎಲ್ಲಕಡೆಯಿಂದಲೂ ಜನರು ಇಲ್ಲಿಗೆ ಆಗಮಿಸಿ ರಮಣಾದೇವಿ ಜಾತ್ರೆಯನ್ನು ಆಚರಿಸುತ್ತಾರೆ. ಇದೇ ತಿಂಗಳು ವಿಶ್ವರಾಧ್ಯ ಜಾತ್ರೆಯೂ ನಡೆಯುತ್ತದೆ. 

ಏಪ್ರಿಲ್‌ 
ಆಳಂದ:
ಗ್ರಾಮದೇವತೆ ಹನುಮಾನ್‌ ಜಾತ್ರೆ. ಇದು ಭಾವೈಕ್ಯತೆ ಸಾರುವ ಜಾತ್ರೆ. ಎಲ್ಲ ವರ್ಗದ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. 

ಶಹಾಬಾದ: ಶರಣಬಸವೇಶ್ವರರು ಪಾದಯಾತ್ರೆ ತೆರಳುವಾಗ ಇಲ್ಲಿ ತಂಗಿ ಹೋಗಿದ್ದ ನಿಮಿತ್ತ ಜಾತ್ರೆ ನಡೆಯುತ್ತದೆ. ಇಲ್ಲೇ ಶರಣನಗರವೂ ಇದೆ. 

ವಾಡಿ: ಏಪ್ರಿಲ್‌ 27, 28ಕ್ಕೆ ಅಂಬೇಡ್ಕರ್‌ ಅವರು ವಾಡಿಗೆ ಬಂದು ಹೋಗಿರುವ ನಿಮಿತ್ತ ಅಂಬೇಡ್ಕರ್‌ ಜಯಂತಿ
ಆಚರಿಸಲಾಗುತ್ತದೆ.

 ಕಾಳಗಿ: ನೀಲಕಂಠ ಕಾಳೇಶ್ವರ ಜಾತ್ರೆ ಆಗುತ್ತದೆ. ಇದು ಐತಿಹಾಸಿಕ ದೇಗುವಾಗಿದೆ. ಕಾಳಗಿ ಹಿರೇಮಠದ ಶಿವಬಸವ ಶಿವಾಚಾರ್ಯರು ಮತ್ತು ಭರತನೂರನ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ

ಮೇ
ಜೇವರ್ಗಿ: ಶರಣಬಸವೇಶ್ವರ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. 17ನೇ ಶತಮಾನದ ಕೊನೆಯ ವಚನಕಾರರು. ಈ ಭಾಗದಲ್ಲಿ ಪ್ರಸಿದ್ಧಿ ಪಡೆದ 717 ವಚನಗಳು ಇಲ್ಲಿವೆ. ರಥೋತ್ಸವ ನಡೆಯುತ್ತದೆ.

ಜೂನ್‌
ಅಫಜಲಪುರ:
ಭೈರಾಮಡಗಿ ದಾವಲ್‌ವುಲಿಕ್‌ ಜಾತ್ರೆ. ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಜಾತ್ರೆ. ಗಂಧ
ಮೆರವಣಿಗೆ, ಭಾಸಿ ದೀಪ ನಡೆಯುತ್ತದೆ. ಈಶಾನ್ಯ ಪದವೀಧರ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆ.

ಜುಲೈ
 ಜಿಲ್ಲೆಯಲ್ಲಿ ತೊಗರಿ, ಹೆಸರು ಬಿತ್ತನೆ ಆರಂಭ. ಕೂರಿಗೆ ಪೂಜೆ, ಗ್ರಾಮ ದೇವತೆಗಳನ್ನು ಪೂಜಿಸುವ ಪದ್ಧತಿ. ಮಳೆಗಾಗಿ ಪ್ರಾರ್ಥನೆ ಹಾಗೂ ಸಪ್ತ ಭಜನೆಗಳು ನಡೆಯುತ್ತವೆ.
ಸಚಿವ ಸಂಪುಟ ಸಭೆ ನಡೆಯಲಿ: ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಕಲಬುರಗಿಯಲ್ಲಿ ನಾಲ್ಕು ಸಲ ಸಚಿವ ಸಂಪುಟ ಸಭೆ ನಡೆಸಲಾಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಒಂದೇ ಸಲ ಸಂಪುಟ ನಡೆಸಿ ತದನಂತರ ನಡೆಸಲೇ ಇಲ್ಲ. 2018ರ ಸಾಲಿನಲ್ಲಾದರೂ ರಚನೆಯಾಗುವ ನೂತನ ಸರ್ಕಾರ ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸಲಿ
ಎಂಬುದು ಈ ಭಾಗದ ಪ್ರಮುಖ ನಿರೀಕ್ಷೆಯಾಗಿದೆ. 

ಕೊಪ್ಪಳ-ಬಳ್ಳಾರಿ ಹೈಕೋರ್ಟ್‌ ವ್ಯಾಪ್ತಿಗೆ ಸೇರಲಿ: 371ನೇ (ಜೆ) ವಿಧಿ ಅಡಿ ಹಾಗೂ ಎಚ್‌ಕೆಆರ್‌ಬಿಯ ಸೌಲಭ್ಯ ಪಡೆಯುತ್ತಿರುವ ಹೈದ್ರಾಬಾದ ಕರ್ನಾಟಕದ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳು ಕಲಬುರಗಿಯಲ್ಲಿರುವ ಕರ್ನಾಟಕ ಹೈಕೋರ್ಟ್‌ ಪೀಠ ವ್ಯಾಪ್ತಿಗೆ ಸೇರಲಿ ಎಂಬುದು ಹಲವಾರು ವರ್ಷಗಳ ನಿರೀಕ್ಷೆ ಹಾಗೂ ಈ ಭಾಗದ ಬೇಡಿಕೆಯಾಗಿದೆ. ನೂತನ 2018ರ ಸಾಲಿನಲ್ಲಿ ಈ ಆಶಯ ಸಾಕಾರಗೊಳ್ಳಲಿ.

 ಕಾರ್ಖಾನೆಗಳು ಸ್ಥಾಪನೆಯಾಗಲಿ: ಹಿಂದುಳಿದ ಹೈದ್ರಾಬಾದ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಉದ್ದೇಶದಿಂದ ಜಿಲ್ಲೆಯ ಹೊನ್ನಕಿರಣಗಿ, ನದಿ ಸಿನ್ನೂರ, ಫಿರೋಜಾಬಾದ ಬಳಿ 1200 ಎಕರೆ ಭೂಮಿ ನಾಲ್ಕು ವರ್ಷಗಳ ಹಿಂದೆಯೇ ಉಷ್ಣ ವಿದ್ಯುತ್‌ ಉತ್ಪಾದನಾ ಸ್ಥಾವರಕ್ಕೆಂದು ಪಡೆಯಲಾಗಿದ್ದರೂ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಒಂದೇ ಒಂದು ಹೆಜ್ಜೆಯನ್ನು ಇಡಲಿಕ್ಕಾಗಿಲ್ಲ. 2018ರಲ್ಲಾದರೂ ಈ ಸ್ಥಳಗಳಲ್ಲಿ ಕಾರ್ಖಾನೆಗಳು ಸ್ಥಾಪಿತವಾಗಲಿ.

 ನೀರಾವರಿ ಯೋಜನೆಗಳು ಸಾಕಾರಗೊಳ್ಳಲಿ: ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳಾದ ಬೆಣ್ಣೆತೋರಾ, ಅಮರ್ಜಾ, ಗಂಡೋರಿನಾಲಾ ನೀರಾವರಿ ಯೋಜನೆಗಳಿಗೆ ಕೋಟ್ಯಂತರ ರೂ. ಖರ್ಚು ಮಾಡಿದ್ದರೂ ರೈತರ ಹೊಲಗಳಿಗೆ ಇನ್ನೂ ಸೂಕ್ತವಾಗಿ ನೀರು ಹರಿದಿಲ್ಲ. 2018ರಲ್ಲಾದರೂ ಹೊಲಗಳಿಗೆ ಹರಿಯಲಿ ನೀರು. 

ಆಗಸ್ಟ್‌
ಶ್ರಾವಣ ತಿಂಗಳಾಗಿದ್ದರಿಂದ ಶರಣಬಸವೇಶ್ವರ ದೇವಸ್ಥಾನ ಹಾಗೂ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಪುರಾಣ ಪ್ರವಚನ ಆರಂಭವಾಗುತ್ತವೆ. ಸೇಡಂ: ಮಳಖೇಡ ಕಾಗೀಣಾ ತಟದ ಉತ್ತರಾಧಿ ಮಠದಲ್ಲಿ ಟೀಕಾಚಾರ್ಯರ ಆರಾಧನಾ ಮಹೋತ್ಸವ ನಡೆಯುತ್ತದೆ. ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಇದಕ್ಕೆ ಎರಡನೇ ಮಂತ್ರಾಲಯ ಎಂತಲೂ ಕರೆಯುತ್ತಾರೆ.

ಸೆಪ್ಟೆಂಬರ್
ಸೆಪ್ಟೆಂಬರ್‌ 17ರಂದು ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ. ಇದು ಈ ಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ. ದೇಶಕ್ಕೆ 1947ಕ್ಕೆ ಸ್ವಾತಂತ್ರ್ಯ ದೊರಕಿದರೆ ಹೈದ್ರಾಬಾದ ಕರ್ನಾಟಕಕ್ಕೆ ಸೆ. 17, 1948ರಲ್ಲಿ ದೊರಕಿದೆ. ಈ ಸ್ವಾತಂತ್ರ್ಯ ದೊರಕುವಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ರ ಪಾತ್ರ ಹಾಗೂ ಈ ಭಾಗದ ಹೋರಾಟಗಾರರ ಪಾತ್ರ ಮಹತ್ವದ್ದಾಗಿದೆ. 

ಅಕ್ಟೋಬರ್‌
ಜೇವರ್ಗಿ: ಮಹಾಲಕ್ಷ್ಮೀ ಜಾತ್ರೆ. ಗಣ್ಯರು ಪಾಲ್ಗೊಳ್ಳುವರು. ಹೈದ್ರಾಬಾದ ಕರ್ನಾಟಕದಲ್ಲೇ ವಿಶೇಷ. ಐದು ದಿನಗಳ
ಕಾಲ ನಡೆಯುತ್ತದೆ. ಎಲ್ಲ ಜಾತಿ ಜನಾಂಗದವರು ಪಾಲ್ಗೊಳ್ಳುತ್ತಾರೆ. ಹರಕೆ ಹೊತ್ತವರಿಗೆ ಒಂದೊಂದು ಕೆಲಸ
ನೀಡಲಾಗುತ್ತದೆ.

 ಸ್ಮಾರ್ಟ ಸಿಟಿ: ಕೊನೆ ಘಳಿಗೆಯಲ್ಲಿ ಕಲಬುರಗಿ ಮಹಾನಗರಕ್ಕೆ ಕೈ ತಪ್ಪಿ ಹೋಗಿರುವ ಸ್ಮಾರ್ಟ್‌ ಸಿಟಿ ಭಾಗ್ಯ 2018ರಲ್ಲಾದರೂ ದೊರೆಯಲಿ ಎಂಬುದೇ ಆಶಯವಾಗಿದೆ. 2018ರ ಸಾಲಿನಲ್ಲಿ ಜನಪ್ರತಿನಿಧಿಗಳು ಅದರಲ್ಲೂ ರಾಜ್ಯ ಸರ್ಕಾರ ತನ್ನ ಇಚ್ಚಾಶಕ್ತಿ ಪ್ರದರ್ಶಿಸಿ ಕೇಂದ್ರದ ಮೇಲೆ ಒತ್ತಡ ತರುವುದು ಅಗತ್ಯವಾಗಿದೆ. ಈ ಕಾರ್ಯ ಸಾಕಾರಗೊಳ್ಳಲಿ ಎಂಬುದೇ ನಮ್ಮ ಆಶಯವಾಗಿದೆ. 

ನವೆಂಬರ್‌ 
ಅಫಜಲಪುರ: ಚಿಣಮಗೇರಾ ವೀರಭದ್ರೇಶ್ವರ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಭಕ್ತರು ಅಗ್ಗಿ ಹಾಯುತ್ತಾರೆ. ಈ ಜಾತ್ರೆ ವರ್ಷದಲ್ಲಿ ಎರಡು ಬಾರಿ ನಡೆಯುತ್ತದೆ. ಒಮ್ಮೆ ಜಾತ್ರೆ ನಡೆದರೆ ಇನ್ನೊಮ್ಮೆ ಜನವರಿಯಲ್ಲಿ ರಥೋತ್ಸವ ನಡೆಯುತ್ತದೆ. ದೇವಲಗಾಣಗಾಪುರ ದತ್ತನ ಸನ್ನಿಧಿಯಲ್ಲಿ ಕಾರ್ತಿಕೋತ್ಸವ ನಡೆಯುತ್ತದೆ.

ಕಾಳಗಿಯ ಸುಗೂರು (ಕೆ) ಗ್ರಾಮದಲ್ಲಿ ವೆಂಕಟೇಶ್ವರನ ಸನ್ನಿಧಾನದಲ್ಲಿ ಬ್ರಹ್ಮೋತ್ಸವ ಜರುಗುತ್ತದೆ. ಒಂಭತ್ತು ದಿನಗಳ ಕಾಲ ಜರುಗುವ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ಒಂದೊಂದು ವಾಹನದ ಮೆರವಣಿಗೆ ಆಗುತ್ತದೆ. ಕೊನೆ ದಿನ ಗಜವಾಹನ ಮೆರವಣಿಗೆ ಆಗುತ್ತದೆ. 

 ವಾಡಿ: ಈದ ಮಿಲಾದ್‌ ಉನ್ನಬಿ ಜರುತ್ತದೆ. ಮಹ್ಮದ್‌ ಪೈಗಂಬರ್‌ ಅವರ ಜನ್ಮದಿನದ ನಿಮಿತ್ತ ವಿಶೇಷವಾಗಿ ಮಾಡಲಾಗುತ್ತದೆ. ಧಾರ್ಮಿಕ ಚಿತ್ರಗಳ ಸ್ತಬ್ದ ಚಿತ್ರಗಳ ಮೆರವಣಿಗೆ, ಧರ್ಮ ಸಮ್ಮೇಳನ ದೊಡ್ಡ ಪ್ರಮಾಣದಲ್ಲಿ
ನಡೆಯುತ್ತದೆ.

371(ಜೆ )ವಿಧಿ ದೋಷದಿಂದ
ದೂರಾಗಲಿ: ಹೋರಾಟದ ಫಲವಾಗಿ ಪಡೆಯಲಾದ 371ನೇ (ಜೆ) ವಿಧಿ ಪರಿಣಾಮಕಾರಿ ಅನುಷ್ಠಾನಗೊಳ್ಳುತ್ತಿಲ್ಲ
ಎನ್ನುವ ಆರೋಪಗಳು ಕೇಳಿ ಬರ್ತಾ ಇವೆ. ನೇಮಕಾತಿ ಸಂಬಂಧಪಟ್ಟಂತೆ ಅಧಿಸೂಚನೆ ಮನಸ್ಸಿಗೆ ಬಂದಂತೆ ಅಧಿಕಾರಿಗಳು ಹೊರಡಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಇದಕ್ಕೆ 2018ರಲ್ಲಿ ಸಂಪೂರ್ಣ ಇತಿಶ್ರೀ ಹಾಡುವಂತಾಗಲಿ.

 ಅಪರಾಧ ಪ್ರಕರಣಗಳು ನಿಲ್ಲಲ್ಲಿ: ಬಿಸಿಲು ನಾಡಿನಿಂದ ಅಪರಾಧ ಪ್ರಕರಣಗಳಿಗೆ ಸಂಪೂರ್ಣ ತೀಲಾಂಜಲಿ ಹಾಕಲು
ಪೊಲೀಸ್‌ ಇಲಾಖೆ ಸನ್ನದ್ಧವಾಗಿದೆ. ಈ ಶಪಥ ಕಾರ್ಯರೂಪಕ್ಕೆ ಬರಲಿ ಎಂಬುದೇ ಜಿಲ್ಲೆಯ ಜನತೆಯ ನಿರೀಕ್ಷೆಯಾಗಿದೆ.  

ಡಿಸೆಂಬರ್‌
 ಅಫಜಲಪುರ:
ಬಡದಾಳದಲ್ಲಿ ಚನ್ನಮಲ್ಲ ಶಿವಾಚಾರ್ಯರ ರಥೋತ್ಸವ ನಡೆಯುತ್ತದೆ. ಅಫಜಲಪುರ ತಾಲೂಕಿನ ಚಿನ್ಮಯಿಗಿರಿ ಮಹಾಂತೇಶ್ವರ ಗುಡ್ಡದ ಜಾತ್ರೆ ನಡೆಯುತ್ತದೆ. ದೇವಲಗಾಣಗಾಪುರ ದತ್ತನ ಸನ್ನಿಧಿಯಲ್ಲಿ ದತ್ತ ಜಯಂತಿ
ಅದ್ಧೂರಿಯಾಗಿ ನಡೆಯುತ್ತದೆ. ಈ ವೇಳೆ ವಿವಿಧ ರಾಜ್ಯಗಳಿಂದ ದತ್ತನ ಭಕ್ತರು ಆಗಮಿಸುತ್ತಾರೆ.

ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳಲಿ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಚಾಶಕ್ತಿಯಿಂದ ಮುಕ್ತ ಮನಸ್ಸಿನಿಂದ ಕೆಲಸ ಮಾಡುವ ಇನ್ನೂ ಯಾವುದೇ ಅಪೇಕ್ಷೆ ಬಯಸದೇ ದಕ್ಷತೆಯಿಂದ ಕಾರ್ಯನಿರ್ವಹಿಸುವ ಜತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಜನರು ತಮ್ಮ ಪಾತ್ರ
ಅರಿತುಕೊಳ್ಳುವ ಸದ್ಬುದ್ಧಿ ಬರಲೆಂಬುದು ನಿರೀಕ್ಷೆಯಾಗಿದೆ. 

ಸುಸೂತ್ರವಾಗಿ ನಡೆಯಲಿ ಚುನಾವಣೆ
ನೂತನ ವರ್ಷ 2018ರಲ್ಲಿ ರಾಜ್ಯದ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಚುನಾವಣೆ ಯಾವುದೇ ಆಮಿಷ ಹಾಗೂ ಗೊಂದಲವಿಲ್ಲದೆ ನಡೆಯಲಿ. ಜತೆಗೆ ಸೂಕ್ತ ಅಭ್ಯರ್ಥಿಗಳು ಆಯ್ಕೆಯಾಗಲಿ ಎಂಬುದೇ 2018ರ ಪ್ರಮುಖ ನಿರೀಕ್ಷೆಯಾಗಿದೆ. 

ಪೊಲೀಸ್‌ ಆಯುಕ್ತಾಲಯ 2017ರ ಸಾಲಿನಲ್ಲಿ ಕಲಬುರಗಿ ಮಹಾನಗರಕ್ಕೆ ಪೊಲೀಸ್‌ ಆಯುಕ್ತಾಲಯ ಕಾರ್ಯರೂಪಕ್ಕೆ
ಬರಲಾಗುವುದು ಎಂಬುದಾಗಿ ಬಲವಾದ ನಿರೀಕ್ಷೆ ಹೊಂದಲಾಗಿತ್ತು. ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಕಲಬುರಗಿಗೆ 2017ರ ಅಕ್ಟೋಬರ್‌ 24ರಂದು ಬಂದ ಸಂದರ್ಭದಲ್ಲಿ 2017ರ ಡಿಸೆಂಬರ ಮಾಸಾಂತ್ಯದೊಳಗೆ ಪೊಲೀಸ್‌ ಕಮಿಷನರೇಟ್‌ ಕಚೇರಿ ಕಾರ್ಯರೂಪಕ್ಕೆ ಬರುತ್ತದೆ ಎಂಬುದಾಗಿ ಹೇಳಿದ್ದರು.  ಆದರೆ ಸಚಿವರ ಭರವಸೆ ಠುಸ್‌  ಆಗಿರುವುದರಿಂದ 2018ರಲ್ಲಾದರೂ ಕಾರ್ಯರೂಪಕ್ಕೆ ಬರುವುದೇ ಎಂದು ನಿರೀಕ್ಷೆ ಹೊಂದಲಾಗಿದೆ. 

ವಿಮಾನ ಹಾರಾಟ ಯಾವಾಗ ಈ ವರ್ಷ ವಿಮಾನ ಹಾರಾಟ ಶುರುವಾಗುತ್ತೇ ಎನ್ನುವ ಮಾತನ್ನು ಕಳೆದ ನಾಲ್ಕೈದು ವರ್ಷಗಳಿಂದ ನಿರೀಕ್ಷಿಸುತ್ತಾ ಬರಲಾಗುತ್ತಿದೆ. ಆದರೆ ಅದು ವರ್ಷ-ವರ್ಷ ಮುಂದಕ್ಕೆ ಹೋಗುತ್ತಿದೆ. ಹೀಗಾಗಿ ಪ್ರಸಕ್ತ 2018ನೇ ಸಾಲಿನಲ್ಲಾದರೂ ವಿಮಾನ ಹಾರಾಟ ಶುರುವಾಗಲಿ. 

ರೈಲ್ವೆ ವಲಯ ಕಚೇರಿ ಕಲಬುರಗಿಗೆ ರೈಲ್ವೆ ವಿಭಾಗೀಯ ಕಚೇರಿಯನ್ನು 2014 ರ ಫೆಬ್ರುವರಿ 22ರಂದು ಘೋಷಿಸಿ ಮಾರ್ಚ್‌ ತಿಂಗಳಲ್ಲಿ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಆದರೆ ಇಂದಿನ ದಿನದವರೆಗೆ ಕಲಬುರಗಿಯಲ್ಲಿ ರೈಲ್ವೇ ಕಚೇರಿ ಕಾರ್ಯಾರಂಭವಾಗದೇ ಮುಂದಕ್ಕೆ ಹೋಗ್ತಾ ಇದೆ. 2018ರಲ್ಲಾದರೂ ಕಾರ್ಯರೂಪಕ್ಕೆ ಬರುವುದೇ ಎನ್ನುವುದನ್ನು ಜನ ಕಾತರದಿಂದ ಪ್ರಶ್ನಿಸುವಂತಾಗಿದೆ.  

ಅರ್ಥಪೂರ್ಣ ಹೋರಾಟ ನಡೆಯಲಿ ಕಲಬುರ್ಗಿ ಮಹಾನಗರದಲ್ಲಿ ದಿನಾಲು ಹತ್ತಾರು ಪ್ರತಿಭಟನೆ ನಡೆದು ಸಂಚಾರ ವ್ಯವಸ್ಥೆಗೆ ಧಕ್ಕೆವನ್ನುಂಟು ಮಾಡುತ್ತಿವೆ. ಕೆಲವು ಹೋರಾಟಗಳಂತೂ ಬರೀ ಪತ್ರಿಕೆಯಲ್ಲಿ ಭಾವಚಿತ್ರ ಪ್ರಕಟವಾಗಲು ಹಾಗೂ ವೈಯಕ್ತಿಕ ಹಿತಾಸಕ್ತಿ ಸಲುವಾಗಿ ನಡೆಯುತ್ತಿರುವುದು ಸ್ಪಷ್ಟವಾಗಿ ಕೇಳಿ ಬರುತ್ತಿದೆ. ಅರ್ಥಹೀನ ಪ್ರತಿಭಟನೆಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಆದ್ದರಿಂದ 2018ರ ಸಾಲಿನಲ್ಲಾದರೂ ಜನಪರ ಹಾಗೂ
ಅಭಿವೃದ್ಧಿ ಪರ ಹೋರಾಟ ನಡೆಯಲಿ ಎಂಬುದು ಮಹಾನಗರದ ಜನತೆಯ ನಿರೀಕ್ಷೆಯಾಗಿದೆ. 
 
ವಿವಿ ಪರೀಕ್ಷಾ ಪದ್ಧತಿ ಬದಲಾಗಲಿ ಸದಾ ಒಂದಿಲ್ಲ ಒಂದು ವಿವಾದ ಹಾಗೂ ಅವಾಂತರಗಳೊಂದಿಗೆ ಪರೀಕ್ಷೆ ನಡೆಸುವ ಕಲಬುರಗಿ ವಿವಿ 2018ರಲ್ಲಾದರೂ ಪರೀಕ್ಷಾ ಕ್ರಮದಲ್ಲಿ ಅಮೂಲಾಗ್ರ ಸುಧಾರಣೆಗೆ ನಾಂದಿ ಹಾಡಲಿ. ಕ್ಲಷ್ಟರ್‌ ಪದ್ಧತಿ ಜಾರಿಗೆ ಬರಲಿ. 

 ಅಕ್ರಮ ಮರಳುಗಾರಿಕೆ ನಿಲ್ಲಲಿ ಮರಳು ಸಲುವಾಗಿ ಬ್ಯಾರೇಜ್‌ ಗೇಟು ಎತ್ತಿ ನೀರು ಖಾಲಿ ಮಾಡಿ ಮರಳನ್ನು ಬಗೆದಂತಹ ಹೀನ ಕೃತ್ಯ ಜಿಲ್ಲೆಯಲ್ಲಿ ನಡೆದಿವೆ. ತಹಶೀಲ್ದಾರ್‌, ಜಿಲ್ಲಾಧಿಕಾರಿಗಳ ಮೇಲೆ ಕಾರು ಹರಿಸುವ ಯತ್ನ ಸಹ ನಡೆದಿವೆ. ಹೀಗಾಗಿ 2018ರಲ್ಲಾದರೂ ಅಕ್ರಮ ಮರಳುಗಾರಿಕೆ ನಿಂತು ಎಲ್ಲರಿಗೂ ಸಮಪರ್ಕವಾಗಿ ಸಿಗಲಿ ಎಂಬುದೇ ಸರ್ವಜನತೆಯ ನಿರೀಕ್ಷೆಯಾಗಿದೆ. 

ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

crime (2)

Kalaburagi:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್‌

Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್‌

ಮೊದಲಿನ ಗ್ಯಾರಂಟಿಗಳೇ ಕೊಟ್ಟಿಲ್ಲ, ಈಗೇನು ಕೊಡ್ತಾರೆ: ಕೇಂದ್ರಕ್ಕೆ ಖರ್ಗೆ ಪ್ರಶ್ನೆ

ಮೊದಲಿನ ಗ್ಯಾರಂಟಿಗಳೇ ಕೊಟ್ಟಿಲ್ಲ, ಈಗೇನು ಕೊಡ್ತಾರೆ: ಕೇಂದ್ರಕ್ಕೆ ಖರ್ಗೆ ಪ್ರಶ್ನೆ

Election; ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್ ಸೇರುವ ವಿಚಾರ ಸದ್ಯಕ್ಕಿಲ್ಲ:ಡಿಕೆ ಶಿವಕುಮಾರ್

Election; ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್ ಸೇರುವ ವಿಚಾರ ಸದ್ಯಕ್ಕಿಲ್ಲ:ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.