CONNECT WITH US  

ಕುತೂಹಲದಿಂದ ತಾಮ್ರ ಚಂದ್ರಗ್ರಹಣ ವೀಕ್ಷಿಸಿದ ಸಾರ್ವಜನಿಕರು

ಕಲಬುರಗಿ: ವಿಶಿಷ್ಟವಾಗಿ ನಡೆದ ಚಂದ್ರಗ್ರಹಣವನ್ನು ಜಿಲ್ಲೆಯಾದ್ಯಂತ ಜನರು ಕುತೂಹಲದಿಂದ ವೀಕ್ಷಿಸಿದರು.
ನಗರದ ಶರಣಬಸವೇಶ್ವರ ಶಾಲೆ ಮೈದಾನದಲ್ಲಿ ಬ್ರೆಕ್‌ ಥ್ರೂ ಸೈನ್ಸ್‌ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ
ನಾಗರಿಕರಿಗೆ ತಾಮ್ರ ಚಂದ್ರ ಗ್ರಹಣ ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಗುಲಬರ್ಗಾ ವಿಶ್ವವಿದ್ಯಾಲಯ ಸೂಕ್ಷ್ಮಶಾಸ್ತ್ರ ವಿಭಾಗದ ರಮೇಶ ಲಂಡನಕರ್‌ ಚಂದ್ರಗ್ರಹಣ ಕುರಿತಾಗಿ ಮಾಹಿತಿ ನೀಡಿದರು.

ಹಿಂದೆಂದಿಗಿಂತ ಬುಧವಾರ ಚಂದ್ರ ಶೇ. 14ರಷ್ಟು ಗಾತ್ರದಲ್ಲಿ ವಿಸ್ತೀರ್ಣ ಹೊಂದಿದ್ದು, ಶೇ. 30ರಷ್ಟು ಪ್ರಕಾಶಮಾನ ಸಹ
ಹೆಚ್ಚಳವಾಗಿದೆ ಎಂದು ವಿಜ್ಞಾನಿಗಳು ವಿವರಣೆ ನೀಡಿದರು.

ಎಸ್‌ಬಿಆರ್‌ ಕಾಲೇಜಿನ ಪ್ರಾಚಾರ್ಯರಾದ ಪ್ರೊ| ಎನ್‌.ಎಸ್‌. ದೇವರಕಲ್‌, ಅಶೋಕ ಜೀವಣಗಿ, ಅಭಯ ದಿವಾಕರ್‌, ನಿಕಿತಾ, ಶಕುಂತಲಾ, ಹರೀಶ ಮುಂತಾದವರಿದ್ದರು. ಇದೇ ರೀತಿ ನಗರದ ವಿವಿಧ ಶಾಲೆ-ಕಾಲೇಜುಗಳಲ್ಲಿಯೂ ಚಂದ್ರಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ನಾಗರಿಕರು ಸಹ ಮನೆ ಮಾಳಿಗೆ ಮೇಲೆ ಹೋಗಿ ಚಂದ್ರ ಗ್ರಹಣ ವೀಕ್ಷಿಸಿದರು. 


Trending videos

Back to Top