ಪ್ರವಚನಕ್ಕೆ ತೆರೆ: ಸಿದ್ದೇಶ್ವರ ಶ್ರೀ ಬೀಳ್ಕೊಡುಗ

Team Udayavani, Feb 16, 2018, 10:32 AM IST

gul-3.jpg

ಕಲಬುರಗಿ: ಕಳೆದ ತಿಂಗಳು ಬೆಳಿಗ್ಗೆಯೇ 6 ಗಂಟೆಗೆ ಮಹಾನಗರದ ಬಹುತೇಕ ರಸ್ತೆಗಳು ನೂತನ ವಿದ್ಯಾಲಯಕ್ಕೆ ಸೇರುತ್ತಿರುವುದಕ್ಕೆ ಶುಕ್ರವಾರದಿಂದ ಬ್ರೇಕ್‌ ಬಿದ್ದಿದ್ದು, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರು ನಡೆಸಿಕೊಂಡು ಬರುತ್ತಿದ್ದ ಆಧ್ಯಾತ್ಮಿಕ ಪ್ರವಚನ ಮುಕ್ತಾಯವಾಗಿದ್ದರಿಂದ ಸಾವಿರಾರು ಜನರ ತಿಂಗಳ ದಿನಚರಿಗೆ ವಿದಾಯ ಹೇಳಿದಂತಾಗಿದೆ.

ಕಳೆದ ಜ.16ರಿಂದ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಆಧ್ಯಾತ್ಮಿಕ ಚಿಂತನ, ಬದುಕಿನ ಮೌಲ್ಯಗಳ ಕುರಿತಾಗಿ ಪ್ರವಚನ ನಡೆದು ಬರುತ್ತಿರುವುದಿಂದ ಜನ ಅತ್ಯಂತ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದರಲ್ಲದೇ 10-15ನೇ ನಿಮಿಷದ ಅವಧಿಯಲ್ಲಿ ಮೈದಾನ ತುಂಬುವಷ್ಟು ಜನ ಇರುವೆ ಹಾಗೆ ಬಂದು ಆಸೀನರಾಗಿ ಪೂಜ್ಯರ ಸಂದೇಶ ಆಲಿಸುತ್ತಿಸುತ್ತಿದ್ದ ಸತ್ಸಂಗ ಮುಕ್ತಾಯವಾಗಿದೆ. ಈ ಮೂಲಕ ಕಲಬುರಗಿ ಮಹಾನಗರದ ಜನತೆ ಮೂರನೇ ಬಾರಿಗೆ ಸತ್ಸಂಗ ಆಲಿಸುವ ಭಾಗ್ಯ ದೊರೆತು ಇತಿಹಾಸ ಸೇರಿತು. 

ತಿಂಗಳ ಪರ್ಯಂತ ಮಹಾನಗರ ಸಾವಿರಾರು ಜನರ ಕಡ್ಡಾಯದ ದಿನಚರಿಯಾಗಿ ಮಾರ್ಪಾಡಾಗಿದ್ದನ್ನು ಅವಲೋಕಿಸಿದರೆ ಸಿದ್ದೇಶ್ವರ ಪೂಜ್ಯರ ಪ್ರವಚನ ಎಷ್ಟರ ಮಟ್ಟಿಗೆ ಪರಿಣಾಮ ಬೀರಿಗೆ ಎಂಬುದು ಅನುಭವಕ್ಕೆ ಕಂಡುಕೊಳ್ಳ ಬಹುದಾಗಿದೆ. ಪೂಜ್ಯರು ಗಡಿಯಾರ
ನೋಡದೇ ಬರೊಬ್ಬರಿ 45 ನಿಮಿಷಗಳ ಕಾಲ ಒಂದು ನಿಮಿಷ ನಿಲ್ಲದೇ ಸರಳವಾಗಿ ಆಧ್ಯಾತ್ಮಿಕ ಚಿಂತನ ನಡೆದು ಬರುತ್ತಿತ್ತು.

ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ್‌ ಸೇಡಂ, ಸಮಾಜ ಸೇವಕ ಉಮೇಶ ಶೆಟ್ಟಿ ಅವರ ಆಸಕ್ತಿ ಹಾಗೂ
ಆಧ್ಯಾತ್ಮೀಕ ಪ್ರವಚನಾ ಸೇವಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಆರ್‌. ಗರೂರ್‌, ಸದಸ್ಯರಾದ ಜಂಬನಗೌಡ ಶೀಲವಂತರ, ಶಿವಾನಂದ ಪಾಟೀಲ್‌ ಅಷ್ಠಗಿ, ಅಪ್ಪು ಕಣಕಿ, ಈರಣ್ಣ ಗೋಳೆದ್‌, ಅಂಬಾರಾಯ ಡಿಗ್ಗಿಕರ್‌, ಸುಖದೇವ ಪೂಜಾರಿ ಸೇರಿದಂತೆ ಮುಂತಾದವರು ತಿಂಗಳ ಪರ್ಯಂತ ಪ್ರವಚನಕ್ಕಾಗಿ ಶ್ರಮಿಸಿದ್ದು, ಮೆಚ್ಚುಗೆಗೆ ಪಾತ್ರವಾಯಿತು. ಜನರಲ್ಲದೇ ನಾಡಿನ ವಿವಿಧ ಮಠಾಧೀಶರು ಸಹ ಪ್ರವಚನ ಆಲಿಸಿರುವುದು ವಿಶೇಷವಾಗಿ ಕಂಡು ಬಂತು.

ಬೀಳ್ಕೊಡುಗೆ: ತಿಂಗಳು ಪರ್ಯಂತ ಆಧ್ಯಾತ್ಮೀಕ ಪ್ರವಚನ ನೀಡಿ ಗುರುವಾರ ಬೆಳಿಗ್ಗೆ 11ಗಂಟೆ ಸುಮಾರಿಗೆ ಪೂಜ್ಯ
ಸಿದ್ದೇಶ್ವರು ಸ್ವಾಮೀಜಿಯವರು ಗುಲಬರ್ಗಾ ವಿಶ್ವವಿದ್ಯಾಲಯದ ಕೈಲಾಸ ಭವನದಿಂದ ಮರಳಿ ವಿಜಯಪುರದತ್ತ ಹೆಜ್ಜೆ ಹಾಕುವ ಸಂದರ್ಭದಲ್ಲಿ ಆಧ್ಯಾತ್ಮಿಕ ಸೇವಾ ಸಮಿತಿ ಸದಸ್ಯರು ಮತ್ತು ಪೂಜ್ಯರನ್ನು ಕಾಣುತ್ತಿದ್ದ ಜನರಲ್ಲಿ ಏನೋ ಕಳೆದುಕೊಂಡ ಭಾವನೆ ಮನೆ ಮಾಡಿತ್ತು. ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಜನರು ಹೃದಯ ಸ್ಪರ್ಶಿಯಾಗಿ ಬೀಳ್ಕೊಟ್ಟರು. ಗುರುಗಳು ಸಹ ಭಕ್ತರ ನಿಷ್ಠೆಗೆ ತಲೆದೂಗಿದರು. 

ಮುಂದಿನ ಪ್ರವಚನ ಹಳ್ಳಿಕೇರಿಯಲ್ಲಿ ಸಿದ್ದೇಶ್ವರ ಸ್ವಾಮೀಜಿಯವರ ಮುಂದಿನ ಆಧ್ಯಾತ್ಮಿಕ ಪ್ರವಚನ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಬೆಳಿಗ್ಗೆ 6 ರಿಂದ ಒಂದು ಗಂಟೆ ಕಾಲ ನಡೆದು ಬರಲಿದೆ. 

ಬಹಮನಿ ಉತ್ಸವ ವಿವಾದ ಅನಗತ್ಯ: ಖರ್ಗೆ ಕಲಬುರಗಿ: ಈ ಭಾಗದ ಕಲೆ, ಸಾಂಸ್ಕೃತಿಕ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರಕೂಟರ ಉತ್ಸವ ಹಾಗೂ ಬಹಮನಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಆದರೆ ವಿನಾಕಾರಣ ವಿವಾದ ಸೃಷ್ಟಿಸುತ್ತಿರುವುದು ಸಮಂಜಸವಲ್ಲ ಜತೆಗೆ ವಿವಾದ ಸೃಷ್ಟಿಸುವ ಅಗತ್ಯವೇನಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತ ಸಂಯುಕ್ತವಾಗಿ ಉತ್ಸವ ನಡೆಸಲಾಗುತ್ತಿದೆ. ಇಷ್ಟು ದಿನ ಈ ಉತ್ಸವಗಳನ್ನು ಮಾಡಿರಲಿಲ್ಲ. ಈಗ ಮಾಡಲಾಗುತ್ತಿದೆ. ಇದರಲ್ಲಿ ವಿವಾದ ಏನು ಬಂತು?

ರಾಷ್ಟ್ರಕೂಟರದ ಉತ್ಸವದಿಂದ ಜೈನರನ್ನು ಹಾಗೂ ಹಿಂದೂಗಳನ್ನು ಓಲೈಸಲಾಗುತ್ತಿದೆಯೇ, ಯಾರನ್ನೂ ಓಲೈಸಲು ಉತ್ಸವ ಮಾಡುತ್ತಿಲ್ಲ. ಮುಸ್ಲಿಂ ವಿರುದ್ಧವಾಗಿಯೇ ಗೆದ್ದು ಅಲ್ಲಾವುದ್ದೀನ್‌ ಹಸನ ಗಂಗೂ ಬಹಮನಿ ಶಾ ಬಹಮನಿ ರಾಜ್ಯ ಸ್ಥಾಪಿಸಿದ್ದ. ಗಂಗೂ ಎನ್ನುವುದು ಹಿಂದೂ ಪದವಾಗಿದೆ. ಇದರಲ್ಲಿ ವಿವಾದ ಮಾಡುವುದು ಸರಿಯಲ್ಲ ಎಂದರು.

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.