CONNECT WITH US  

ಕರ್ಜಗಿ: ಗ್ರಾಮದಲ್ಲಿ ಇಲ್ಲೆಡೆ ಬಿಯರ್‌ ಬಾಟಲ್‌ ಹಾವಳಿ

ಅಫಜಲಪುರ: ಕರ್ಜಗಿ ಗ್ರಾಮದಲ್ಲಿ ಕುಡಿತದ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಬಿಯರ್‌ ಬಾಟಲ್‌ಗ‌ಳು ಬಿದ್ದಿವೆ. ಕರ್ಜಗಿ ಗ್ರಾಪಂ ಆಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಲೂಕಿನ ಕರ್ಜಗಿಯಲ್ಲಿ ಎಲ್ಲಿ ನೋಡಿದರು ಬಿಯರ್‌ ಬಾಟಲ್‌ಗಳು ಮತ್ತು ಮದ್ಯದ ಬಾಟಲ್‌ಗ‌ಳು ಬಿದ್ದಿವೆ. ಕರ್ಜಗಿಯಲ್ಲಿ ಯಲ್ಲಾಲಿಂಗ ಮಹಾರಾಜರ ಜಾತ್ರೆ ಅಲ್ಲದೆ ಹಜರತ್‌ ಖಾಜಾ ಸೈಪನಮುಲ್ಕ ದರ್ಗಾದ ಉರುಸ್‌ ಬಹು ವಿಜ್ರಂಭಣೆಯಿಂದ ನಡೆಯುತ್ತದೆ. ಸಾವಿರಾರು ಜನ ಜಾತ್ರೆಗೆ ಆಗಮಿಸುತ್ತಾರೆ. ಆದರೆ ಗ್ರಾಪಂನವರು ಎಲ್ಲೆಂದರಲ್ಲಿ ಬಿದ್ದಿರುವ ಮದ್ಯದ ಬಾಟಲ್‌ಗ‌ಳನ್ನು ತೆರವುಗೊಳಿಸುವ ಕೆಲಸ ಮಾಡಿಲ್ಲ. ಹಿಂದು ಮುಸ್ಲಿಂ ಭಾವೈಕ್ಯತೆ ಈ ಗ್ರಾಮದಲ್ಲಿ ಕಾಣಬಹುದಾಗಿದೆ. 

ಇಂತಹ ಗ್ರಾಮದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿದೆ. ಕರ್ಜಗಿ ಗ್ರಾಮದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಮತ್ತು ಬಸ್‌ ನಿಲ್ದಾಣದ ಪಕ್ಕದಲ್ಲಿ ಬಿಯರ್‌ ಬಾಟಲ್‌ಗಳ ರಾಶಿ ಕಾಣುತ್ತದೆ. ಅದರ ಪಕ್ಕದಲ್ಲೆ ಸತ್ತ ನಾಯಿ ದುರ್ನಾತ ಬಿರುತ್ತಿದೆ. ಇದೆಲ್ಲವೂ ಕಣ್ಣಿಗೆ ಕಂಡರು ಕಾಣದಂತೆ ಇಲ್ಲಿನ ಗ್ರಾಪಂ ನಿರ್ಲಕ್ಷ್ಯವಹಿಸಿದೆ. ಅಲ್ಲದೆ ಜಾತ್ರೆ ಸಂದರ್ಭದಲ್ಲೂ ಕೂಡ ಅವುಗಳನ್ನು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ ಎಂದು ಆರೋಪಿಸಿದ್ದಾರೆ.

Trending videos

Back to Top