CONNECT WITH US  

ಅತ್ಯಾಚಾರ ಖಂಡಿಸಿ ಮುಸ್ಲಿಮರ ಆಕ್ರೋಶ 

ವಾಡಿ: ಕಾಶ್ಮೀರದಲ್ಲಿ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಟಿಪ್ಪುಸುಲ್ತಾನ್‌ ಸಂಘಟನೆ ಕಾರ್ಯಕರ್ತರು ರಾವೂರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು .

ವಾಡಿ: ಕಾಶ್ಮೀರದಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ನಡೆಸಲಾದ ಅತ್ಯಾಚಾರ ಹಾಗೂ ಕೊಲೆ ಕೃತ್ಯ ಖಂಡಿಸಿ ಪಟ್ಟಣ ಹಾಗೂ ರಾವೂರ ಗ್ರಾಮದಲ್ಲಿ ಮುಸ್ಲಿಂ ಸಂಘಟನೆಗಳು
ಪ್ರತಿಭಟನೆ ನಡೆಸಿದವು.

ಟಿಪ್ಪು ಸುಲ್ತಾನ್‌ ಸಂಯುಕ್ತ ಸಂಘದ ಕಾರ್ಯಕರ್ತರು ರಾವೂರ ಗ್ರಾಮದ ಜಾಮಿಯಾ ಮಸೀದಿಯಿಂದ ಚಿತ್ತಾಪುರ ವೃತ್ತದ ವರೆಗೆ ಮೆರವಣಿಗೆ ನಡೆಸಿ ವೃತ್ತದಲ್ಲಿ ಜಮಾಯಿಸಿದರು.

ಜಮ್ಮು ಕಾಶ್ಮೀರ ಮತ್ತು ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ದೇವಸ್ಥಾನದಂತಹ ಪವಿತ್ರ ಸ್ಥಳದಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಪಾಪಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಟಿಪ್ಪುಸುಲ್ತಾನ್‌ ಸಂಯುಕ್ತ ರಂಗದ ಜಿಲ್ಲಾ ಕಾರ್ಯದರ್ಶಿ ಮಲಿಕಪಾಷಾ ಮೌಜಾನ್‌, ತಾಲೂಕು ಅಧ್ಯಕ್ಷ ವಸೀಮ ಖಾನ್‌, ಗ್ರಾಪಂ ಸದಸ್ಯರಾದ ಇರ್ಫಾನ್‌ ಸೇಠ, ಯುನ್ಯೂಸ್‌ ಪ್ಯಾರೆ, ಮುಖಂಡರಾದ ಮಹೆಬೂಬ ಎಂ.ಆರ್‌, ಶ್ರವಣಕುಮಾರ ಮೌಸಲಗಿ, ಫೆರೋಜ್‌ ಮೌಜಾನ್‌, ರಹೆಮಾನ ಮೂಸಾವಾಲೆ, ಅಮೀರ ಪಟೇಲ, ಮಹೆಬೂಬ ಖಾನ್‌, ಯುಸೂಫ್‌, ಇರ್ಫಾನ್‌, ಮೌಲಾ ಅಡಕಿ, ಅಫಜಲ್‌ ತುನ್ನೂರ, ಮೊಹಸೀನ ಅಡಕಿ, ಸಾದಿಕ ಮಸೂಲ್ದಾರ, ಮಹ್ಮದ್‌ ದಿಗ್ಗಾಂವ ಪಾಲ್ಗೊಂಡಿದ್ದರು.

ಎಸ್‌ಡಿಪಿಐ ಪ್ರತಿಭಟನೆ: ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌.ಡಿಪಿಐ) ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಎಸ್‌ಡಿಪಿಐ ವಲಯ ಅಧ್ಯಕ್ಷ ಮಹ್ಮದ್‌ ಆಶೀಫ್‌ ಪಗಡಿವಾಲೆ, ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಶ್ರವಣಕುಮಾರ ಮೌಸಲಗಿ, ಮುಸ್ಲಿಂ ಸಮಾಜದ ಮುಖಂಡ ಫೇರೋಜ್‌ ಖಾನ್‌, ಯುವ ಮುಖಂಡ ಝಹೂರ್‌ ಖಾನ್‌, ಮಹ್ಮದ್‌ ರಫೀಕ್‌, ಇಮ್ತಿಯಾಜ್‌ ಪಟೇಲ, ಮಹ್ಮದ್‌ ಗೌಸ್‌ ಸೇರಿದಂತೆ ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಪಿಎಸ್‌ಐ ವಿಜಯಕುಮಾರ ಎನ್‌ .ಭಾವಗಿ ಮನವಿ ಸ್ವೀಕರಿಸಿದರು.


Trending videos

Back to Top