CONNECT WITH US  

ಸಂಸದ ಖರ್ಗೆ ಕಚೇರಿ ಎದುರು ಪ್ರತಿಭಟನೆ

ಕಲಬುರಗಿ: ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಮಾಡಿರುವ
ಶಿಫಾರಸು ಅಂಗೀಕರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಡಿಸಿ ಕಚೇರಿ ಆವರಣದಲ್ಲಿರುವ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಕಚೇರಿ ಎದುರು ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವುದರ ಜತೆಗೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವಂತೆ ಸಂಪುಟದಲ್ಲಿ ನಿರ್ಣಯ ಕೈಗೊಂಡು ಹಿಂದಿನ ಕಾಂಗ್ರೆಸ್‌ ಸರ್ಕಾರ ಕೇಂದ್ರಕ್ಕೆ ಕೇಂದ್ರ ಸರ್ಕಾರಕ್ಕೆ ಮಾನ್ಯತೆ ನೀಡಲು ಕಳುಹಿಸಿಕೊಟ್ಟಿದೆ. ಈಗ ಕೇಂದ್ರ ಸರ್ಕಾರದ ಮೇಲೆ ಸಂಸದರೆಲ್ಲ ಸೇರಿಕೊಂಡು ಒತ್ತಡ ಹೇರುವ ಮೂಲಕ ಮಾನ್ಯತೆ ನೀಡುವಂತಾಗಬೇಕು ಎಂದರು. ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಜಾಗತಿಕ ಲಿಂಗಾಯತ ಮಹಾಸಭಾದವರು, ಬಸವ ಅನುಯಾಯಿಗಳು ರಾಜ್ಯದೆಲ್ಲೆಡೆ ಸಂಸದರ ಮನೆ, ಕಚೇರಿಗಳ ಎದುರು ಹೋರಾಟ ನಡೆಸಲು ನಿರ್ಧರಿಸಿದ್ದು, ಅದರಂಗವಾಗಿ ನಗರದಲ್ಲಿ ಹೋರಾಟ ನಡೆಸಿದರು.

ಪ್ರತಿಭಟನೆಯಲ್ಲಿ ರಾಷ್ಟ್ರೀಯ ಬಸವದಳ, ಬಸವಸೇವಾ ಪ್ರತಿಷ್ಠಾನ, ಬಸವ ತತ್ವ ಆಚರಣಾ ಸಂಸ್ಥೆ, ವಚನೋತ್ಸವ ಪ್ರತಿಷ್ಠಾನ, ಬಸ ಸಮಿತಿ ಸಂಘಟನೆಗಳ ಪ್ರಮುಖರಾದ ಪ್ರಭುಲಿಂಗ ಮಹಾಗಾಂವಕರ್‌, ರವೀಂದ್ರ ಶಾಬಾದಿ, ಆರ್‌.ಜಿ. ಶೆಟಗಾರ, ಸೋಮಣ್ಣ ನಡಕಟ್ಟಿ, ನಾಗರಾಜ ಕಾಮಾ, ಸಿದ್ದರಾಮ ಯಳವಂತಗಿ, ಶಿವರಾಯ ಬಳಗಾನೂರ, ನಾಗೇಂದ್ರಪ್ಪ ನಿಂಬರ್ಗಿ, ವಿಶ್ವಾರಾಧ್ಯ ಸತ್ಯಂಪೇಟ, ಪರ್ವತಯ್ಯ ಬೀದರಕರ್‌, ಶಿವಣ್ಣ ಇಜೇರಿ, ಜಗದೀಶ ಪಾಟೀಲ ಪಾಲ್ಗೊಂಡಿದ್ದರು 


Trending videos

Back to Top