CONNECT WITH US  

ಶಾಲೆ ಕಟ್ಟಡ ಎದುರು ಮ್ಯಾನ್‌ಹೋಲ್‌

ಸೇಡಂ: ದೇಶದಲ್ಲಿ ಚಿಕ್ಕ ಮಕ್ಕಳು ಕೊರೆದ ಬೋರ್‌ವೆಲ್‌ಗೆ ಬಿದ್ದು ಮೃತಪಟ್ಟಿರುವ ಘಟನೆಗಳು ಮೇಲಿಂದ ಮೇಲೆ ಕೇಳಿಬರುತ್ತಲೇ ಇವೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯಾಕ್ಕೆ ಇನ್ನೂ ಸಹ ಅನೇಕ ತೆರೆದ ಬೋರ್‌ವೆಲ್‌ಗ‌ಳು ಜೀವಕ್ಕಾಗಿ ಹಾತೊರೆಯುತ್ತಿವೆ.

ಇದಕ್ಕೆ ನೈಜ ನಿದರ್ಶನ ತಾಲೂಕಿನ ಮೋತಕಪಲ್ಲಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣ. ಇಲ್ಲಿ ತೆರೆದ ಬೋರ್‌ವೆಲ್‌ ಮಕ್ಕಳ ಜೀವಕ್ಕಾಗಿ ಕಾದುಕುಳಿತಂತೆ ಭಾಸವಾಗುತ್ತಿದೆ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಹುತೇಕ ಚಿಕ್ಕಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಾರೆ. ಇದರ ಮಾಹಿತಿ ಇದ್ದರೂ ಸಹ ಅಧಿಕಾರಿಗಳು ಮತ್ತು ಗ್ರಾಪಂನವರು ಯಾವುದೇ ರೀತಿಯ ಕ್ರಮ ನಿರ್ವಹಿಸದೇ ಇರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಅನುಮತಿ ಇಲ್ಲದೆ ಬೋರ್‌ವೆಲ್‌ ಕೊರೆತ: ಸರ್ಕಾರದ ಆದೇಶದ ಪ್ರಕಾರ ಬೋರ್‌ವೆಲ್‌ ಕೊರೆಯುವ ಮುನ್ನ
ಆಯಾ ಗ್ರಾಪಂ ಮತ್ತು ಸಂಬಂಧಿಸಿದ ಇಲಾಖೆಯ ಅನುಮತಿ ಪಡೆಯಬೇಕು. ಮೋತಕಪಲ್ಲಿ ಗ್ರಾಮವು ತೆಲಂಗಾಣ ಗಡಿಗೆ ಹೊಂದಿಕೊಂಡಿದ್ದಕ್ಕಾಗಿಯೋ ಅಥವಾ ನಿರ್ಲಕ್ಷ್ಯಾಕ್ಕೆ ಒಳಗಾಗಿಯೋ ಗ್ರಾಮದ ಸುತ್ತಲೂ ನೂರಾರು ಕೊರೆದ
ಬೋರ್‌ವೆಲ್‌ಗ‌ಳು ಸಿಗುತ್ತವೆ. ಆದರೆ ಈ ಬೋರ್‌ವೆಲ್‌ಗ‌ಳನ್ನು ಯಾವುದೇ ಅನುಮತಿ ಪಡೆಯದೇ ಕೊರೆಯಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಬೋರ್‌ವೆಲ್‌ನ ಪಂಪ್‌ ಮೋಟರ್‌ ರಿಪೇರಿಗೆಂದು ತೆಗೆದುಕೊಂಡು ಹೋಗಿ 6 ತಿಂಗಳು ಕಳೆದಿದೆ. ಶೀಘ್ರ ಅಳವಡಿಸುವುದಾಗಿ ಗ್ರಾಪಂ ಸದಸ್ಯರು ತಿಳಿಸುತ್ತಿದ್ದಾರೆ. ಆದರೆ ಇಂದಿಗೂ ಸಹ ಪಂಪ್‌ ಅಳವಡಿಸಿಲ್ಲ. ಕಲ್ಲು-ಕಟ್ಟಿಗೆಯಿಂದ ತೆರೆದ ಬೋರ್‌ ಮುಚ್ಚಲಾಗಿತ್ತು. 
 ಕಾವ್ಯಾ, ಮುಖ್ಯಗುರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಈ ಸಮಸ್ಯೆ ಬಗ್ಗೆ ಗಮನ ಹರಿಸಿದ್ದೇನೆ. ಶೀಘ್ರ ಬೋರ್‌ ವೆಲ್‌ಗೆ ಪಂಪ್‌ ಅಳವಡಿಸಲಾಗುವುದು. ಇಲ್ಲವಾದಲ್ಲಿ ತೆರೆದ ಬೋರ್‌ವೆಲ್‌ಅನ್ನು ಮುಚ್ಚುತ್ತೇವೆ. 
 ಎಂ. ಕ್ಯಾನಾಯಕ, ಮೋತಕಪಲ್ಲಿ ತಾಂಡಾ ಗ್ರಾಪಂ ಸದಸ್ಯ

 ಶಿವಕುಮಾರ ಬಿ. ನಿಡಗುಂದಾ

Trending videos

Back to Top