CONNECT WITH US  

ಕಾನೂನು ಪರಿಪಾಲಿಸಿ: ಮಾಣಿಕ್ಯ

ಕಲಬುರಗಿ: ಪ್ರತಿಯೊಬ್ಬರು ತಮ್ಮ ಜೀವನವನ್ನು ಸುಖಕರವಾಗಿ ನಡೆಸಲು ಕಾನೂನಿನ ಪರಿಪಾಲನೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ ತಿಳಿಸಿದರು.

ಸರ್ಕಾರಿ ಮಹಾವಿದ್ಯಾಲಯದ ಡಾ| ಬಿ.ಆರ್‌. ಅಂಬೇಡ್ಕರ್‌ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,
ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್‌), ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ
ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮೂಲಭೂತ ಕಾನೂನುಗಳು ಮತ್ತು ಕರ್ತವ್ಯಗಳು ಹಾಗೂ ಪೊಲೀಸ್‌ ದೂರು ಪ್ರಾಧಿಕಾರ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮತದಾನದ ಹಕ್ಕು ಪಡೆದು ದೇಶದ ನಾಗರಿಕರಾಗಿ ದೇಶದ ಮುನ್ನಡೆಗೆ ಕಾರಣಿಕರ್ತರಾಗಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ಸನ್ನಡತೆ ಬೆಳೆಸಿಕೊಂಡು ಹಕ್ಕು ಮತ್ತುಕರ್ತವ್ಯಗಳ ಪಾಲನೆ ಮಾಡುವ ಮೂಲಕ ಉತ್ತಮ ಪ್ರಜೆಗಳಾಗಬೇಕು. ಎಲ್ಲರೂ ಜನನ ಮರಣ ನೋಂದಣಿ, ಭ್ರೂಣಹತ್ಯೆ ನಿಷೇಧ ಕಾಯ್ದೆ, ಗ್ರಾಹಕರ ಹಿತರಕ್ಷಣಾ ಕಾಯ್ದೆ, ಮೋಟಾರ ವಾಹನ ಕಾಯ್ದೆಯ ಕುರಿತು ಅರಿತು ಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಸನ್ನಡತೆ, ಸದಾಚಾರ, ಶಿಸ್ತು, ಸದಭಿರುಚಿ ಹೊಂದಿ ವಿದ್ಯೆಯಲ್ಲಿ ಅತ್ಯುನ್ನತೆ ಸಾಧಿಸಬೇಕು. ಇಂದಿನ
ತಾಂತ್ರಿಕ ಯುಗದಲ್ಲಿ ಎಲ್ಲ ವಿಷಯಗಳ ಮಾಹಿತಿ ದೊರೆಯುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಪಡೆಯಬೇಕು ಎಂದರು.
 
ಕಲಬುರಗಿ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಎಸ್‌.ಹಿರೇಮಠ ಪೊಲೀಸ್‌ ದೂರು ಪ್ರಾಧಿಕಾರದ ಕುರಿತು ಮಾತನಾಡಿದರು. ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಂದಗಿ ರಾಚಪ್ಪ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಮಹಾವಿದ್ಯಾಲಯದ ಪ್ಲೇಸ್‌ ಮೆಂಟ್‌ ಸೆಲ್‌ ಸಂಯೋಜಕ ಚಂದ್ರಶೇಖರ ಆರ್‌.ಸಿ., ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ಡಾ| ನಾಗರಾಜ ಕುಲಕರ್ಣಿ ಪಾಲ್ಗೊಂಡಿದ್ದರು. ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಭವಾನಿ ಪ್ರಾರ್ಥನಾ ಗೀತೆ ಹಾಡಿದರು, ಬೀರಲಿಂಗ ಸ್ವಾಗತಿಸಿದರು

30 ಪರಿಷ್ಕೃತ ಕೇಂದ್ರಗಳಲ್ಲಿ  ಹೆಸರು ಕಾಳು ಖರೀದಿಗೆ ನೋಂದಣಿ ಅಜ್ಞಾನದ ಅಂಧಕಾರ ಕಳೆದ ಷಣ್ಮುಖ ಶಿವಯೋಗಿಗಳು ಸ್ಥಳ: ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನ ಉಪನ್ಯಾಸಕರು: ಪ್ರೊ| ಗೀತಾ ಎಸ್‌. ಹರವಾಳ
ತಮ್ಮ ಲೋಕಾನುಭವದ ಜೊತೆಗೆ ಅಜ್ಞಾನದ ಅಂಧಕಾರದಲ್ಲಿ ಮುಳುಗಿದ ಜನರನ್ನು ಬಡಿದೆಬ್ಬಿಸಿ ಜ್ಞಾನದ ಹಸಿವನ್ನು ನೀಗಿಸಿದವರು ಷಣ್ಮುಖ ಶಿವಯೋಗಿಗಳು. ಶರಣರ ನಾಡು ಪುಣ್ಯದ ಬೀಡು ಎಂದು ಹೆಸರು ವಾಸಿಯಾಗಿದ್ದ ಸಗರ ನಾಡಿನಲ್ಲಿ ಅನೇಕ ಶರಣರು, ಸಂತರು, ಸಾಹಿತಿಗಳು, ಕವಿಗಳು ಜನಿಸಿ ಪುನೀತರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆಯನ್ನಿತ್ತ ಕೀರ್ತಿ ಸಗರ ನಾಡಿನ ಶರಣರದ್ದು.

ಕೊಂಡುಗುಳಿ ಕೇಶಿರಾಜ, ಮದನೂರಿನ ದೇವರ ದಾಸಿಮಯ್ಯ, ಕಡಕೋಳದ ಮಡಿವಾಳಪ್ಪ, ಅರಳಗುಂಡಿಗೆಯ
ಶರಣಬಸವರು, ಹರವಾಳದ ಸಿದ್ದೇಶ್ವರ ಬೆಂಕಿ ತಾತ, ಗಂವ್ಹಾರದ ವಿಶ್ವಾರಾಧ್ಯರು ಹಾಗೂ ಅನೇಕ ಶರಣರು ಜನಿಸಿದ ಈ ನಾಡು ಅವಿಮುಕ್ತ ಕ್ಷೇತ್ರವೆನಿಸಿದೆ. 17ನೇ ಶತಮಾನದಲ್ಲಿ ಶ್ರೀ ಗುರು ಅಖಂಡೇಶ್ವರರ ಕೃಪೆಯಿಂದ ಮಲ್ಲಶೆಟ್ಟಪ್ಪ ಮತ್ತು ದೊಡ್ಡಮಾಂಬೆಯ ಮಗುವಾಗಿ ಜನಿಸಿದ ಶ್ರೀ ಷಣ್ಮುಖ ಶಿವಯೋಗಿಗಳು ಸಗರ ನಾಡಿನ ಶರಣರ ಮೇಲ್ಪಂಕ್ತಿಯಲ್ಲಿ ರಾರಾಜಿಸುವ ಧೃವತಾರೆಯಾಗಿದ್ದಾರೆ. ಲೌಕಿಕ ಜೀವನಕ್ಕೆ ಕಟ್ಟುಬೀಳದೆ ಆಧ್ಯಾತ್ಮಿಕ ಜೀವನದ ಕಡೆಗೆ ಒಲವು ಬೆಳೆಸಿಕೊಂಡವರಾಗಿದ್ದಾರೆ. ಷಣ್ಮುಖ ಶಿವಯೋಗಿಗಳು ಮುಂದೆ ಗುರುಗಳಿಂದ ದೀಕ್ಷೆ ಪಡೆದು ಲೋಕ ಸಂಚಾರಕ್ಕೆ ಹೊರಟರು.

ಬಸವಕಲ್ಯಾಣದಿಂದ ಶ್ರೀಶೈಲ, ಮಧುರೈ ಮೀನಾಕ್ಷಿ, ಕನ್ಯಾಕುಮಾರಿ, ರಾಮೇಶ್ವರ ಮುಂತಾದ ಸ್ಥಳಗಳಿಗೆ ಲೋಕಸಂಚಾರ ಮಾಡಿದರು. ಹಲವಾರು ಪವಾಡಗಳನ್ನು ಮಾಡಿ ಜನರ ಕಷ್ಟಗಳನ್ನು ಹೋಗಲಾಡಿಸಿ ಭಕ್ತರ ಆರಾಧ್ಯರಾದರು. ಗುರು ಅಖಂಡೇಶ್ವರರ ಹಾದಿಯಲ್ಲಿಯೇ ನಡೆದು ಶಿವಯೋಗವನ್ನು ಪಡೆದ ಷಣ್ಮುಖರು ಜೇವರ್ಗಿಯಲ್ಲಿ ಇದ್ದುಕೊಂಡು ಜನರ ಸೇವೆ ಮಾಡುತ್ತಾ 72ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಅವರು 322 ವಚನಗಳನ್ನು ಬರೆದಿದ್ದಾರೆ. ಅವರು ತಮ್ಮ ವಚನಗಳಿಗೆ "ಅಖಂಡೇಶ್ವರ' ಎನ್ನುವ ಅಂಕಿತನಾಮವಿಟ್ಟಿದ್ದರು. 

ಶರಣ ಸಂಸ್ಥಾನದಲ್ಲಿ ಶ್ರಾವಣ ಉಪನ್ಯಾಸ-26  
ಕಲಬುರಗಿ:
ಜಿಲ್ಲೆಯಲ್ಲಿ ಸಹಕಾರ ಇಲಾಖೆಯ ಸರ್ಕಾರದ ಆದೇಶದಂತೆ ಹೆಸರು ಬೆಳೆಯ ಬೆಲೆ ಸ್ಥಿರೀಕರಣ ಯೋಜನೆಯಡಿ ಜಿಲ್ಲೆಯಲ್ಲಿ 30 ಪರಿಷ್ಕೃತ ಹೆಸರು ಕಾಳು ಖರೀದಿ ಕೇಂದ್ರಗಳಲ್ಲಿ ಸೆ.16 ರೊಳಗೆ ರೈತರು ನೋಂದಣಿ ಮಾಡಿಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾ ಟಾಸ್ಕಪೋರ್ಸ್‌ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಹೆಸರು ಬೆಳೆದ ರೈತರು ತಮ್ಮ ಸಮೀಪದ ಯಾವುದೇ ಹೆಸರು ಕಾಳು ಖರೀದಿ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ಸರತಿ ಸಾಲಿನಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಲು ಕೋರಲಾಗಿದೆ. ನೋಂದಾವಣೆ ಅವಧಿಯನ್ನು ಸೆ.16 ನಿಗದಿಪಡಿಸಲಾಗಿದೆ. 

ಕಂದಾಯ ಇಲಾಖೆ ಸಿಬ್ಬಂದಿ ಬೆಳೆ ಪರಿಶೀಲಿಸಿ ಬೆಳೆಯ ಬಿತ್ತನೆ ಪ್ರಮಾಣ ಪತ್ರ ನೀಡುತ್ತಿದ್ದು, ಸುಳ್ಳು ದಾಖಲಾತಿ ಹಾಗೂ ಅವ್ಯವಹಾರ ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಫಜಲಪುರ ತಾಲೂಕಿನಲ್ಲಿ ಅತನೂರ, ಆಳಂದ ತಾಲೂಕಿನಲ್ಲಿ ನಿಂಬರಗಾ, ಕಮಲಾನಗರ, ಖಜೂರಿ, ಮಾದನಹಿಪ್ಪರಗಾ, ಚಿಂಚೋಳಿ ತಾಲೂಕಿನಲ್ಲಿ ಕೋಡ್ಲಿ, ಸುಲೇಪೇಟ್‌, ಐನಾಪುರ, ಚಿಮ್ಮನಚೋಡ, ನಿಡಗುಂದಾ,
ಕನಕಪುರ, ಚಿತ್ತಾಪುರ ತಾಲೂಕಿನ ರಾವೂರ, ಭೀಮನಳ್ಳಿ, ನಾಲ್ವಾರ, ಕಾಳಗಿ, ಗುಂಡಗುರ್ತಿ, ದಂಡೋತಿ, ಕೊಡದೂರ, ಕಲಬುರಗಿ ತಾಲೂಕಿನ ಬೇಲೂರ(ಕೆ), ಮಹಾಗಾಂವ, ಸಾವಳಗಿ (ಬಿ), ಕವಲಗಾ (ಬಿ), ಜೇವರ್ಗಿ ತಾಲೂಕಿನ ನೆಲೋಗಿ, ಮುತ್ತಖೋಡ ಹಾಗೂ ಸೇಡಂ ತಾಲೂಕಿನ ಆಡಕಿ, ಕೋಡ್ಲಾ, ಮುಧೋಳ, ಮಳಖೇಡ, ಸಿಂಧನಮಡು, ಮೊತಕಪಲ್ಲಿಗಳು ಪರಿಷ್ಕೃತ ಹೆಸರು ಬೆಳೆ ಕೇಂದ್ರಗಳಾಗಿವೆ ಎಂದು ತಿಳಿಸಿದ್ದಾರೆ.


Trending videos

Back to Top