CONNECT WITH US  

ದೊಡ್ಡಪ್ಪಅಪ್ಪ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಕಲಬುರಗಿ: ಜೀವನದಲ್ಲಿ ತಂದೆ, ತಾಯಿ ಮತ್ತು ಗುರು ಮುಖ್ಯ. ಆದ್ದರಿಂದ ಅವರನ್ನು ಸದಾ ಗೌರವಿಸಬೇಕು ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಬಿ.ಡಿ. ಕಲಬುರಗಿ ಹೇಳಿದರು.

ನಗರದ ದೊಡ್ಡಪ್ಪ ಅಪ್ಪ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಗುವಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ
ಗುರು. ವಿದ್ಯೆ ಕಲಿಸುವ ಶಿಕ್ಷಕ ಕರುಣಾಮಯಿ ಆಗಿರುತ್ತಾನೆ ಎಂದರು.

ಶರಣಸವೇಶ್ವರ ವಿಜ್ಞಾನ ಕಾಲೇಜಿನ ಪ್ರಾಣಿ ಶಾಸ್ತ್ರಾ ವಿಭಾಗದ ಮುಖ್ಯಸ್ಥ ಡಾ| ರಾಮಕೃಷ್ಣರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನವ ಕಂಪ್ಯೂಟರ್‌ ಖ್ಯಾತಿಯ ಬಸವರಾಜ ಉಮ್ರಾಣಿ ವ್ಯಕ್ತಿತ್ವ ವಿಕಸನದ ತರಬೇತಿ ನೀಡಿದರು. ಪ್ರಾಚಾರ್ಯ ವಿನೋದಕುಮಾರ ಎಲ್‌. ಪತಂಗೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಅರ್ಚನಾ ಎಸ್‌.ಪಿ. ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಹಾಜರಿದ್ದರು. ಕುಮಾರಿ ಪೂಜಾ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಕುಮಾರಿ ವೈಷ್ಣವಿ ಪಾಟೀಲ ಸ್ವಾಗತಿಸಿ, ವಂದಿಸಿದರು. 


Trending videos

Back to Top