CONNECT WITH US  

ಕುದುರೆ ವ್ಯಾಪಾರಕ್ಕಿಳಿದ ಪಕ್ಷಗಳು?

ಸೇಡಂ: ಪುರಸಭೆ ಚುನಾವಣೆ ಪೂರ್ಣಗೊಂಡ ಬೆನ್ನಲ್ಲೇ ಚುನಾವಣೆ ಆಯೋಗ ಹೊರಡಿಸಿರುವ ಅಧ್ಯಕ್ಷ ಮತ್ತು
ಉಪಾಧ್ಯಕ್ಷ ಸ್ಥಾನದ ಮೀಸಲಾತಿ ರಾಜಕೀಯ ವಲಯದಲ್ಲಿ ಬಿರುಗಾಳಿ ಬೀಸಿದಂತೆ ಆಗಿದೆ.

ಪುರಸಭೆಯ 23 ಸ್ಥಾನಗಳ ಪೈಕಿ ಬಿಜೆಪಿಗೆ 13 ಮತ್ತು ಕಾಂಗ್ರೇಸ್‌ಗೆ 10 ಸ್ಥಾನಗಳು ಲಭಿಸಿದ್ದು, ಸೆ.14 ರಂದು ಚುನಾವಣಾ ದಿನಾಂಕ ನಿಗದಿಯಾಗಿದೆ. ಆದರೆ ಬಹುಮತ ಪಡೆದ ಬಿಜೆಪಿಗೆ ಅಧಿಕಾರ ಹಿಡಿಯುವುದು ಸುಲಭ ಎನ್ನುವಷ್ಟರಲ್ಲೇ ಈಗ ಮತ್ತೂಂದು ಕಂಟಕ ಎದುರಾಗಿದೆ. ಅದುವೇ ಕುದುರೆ ವ್ಯಾಪಾರ.

ಈ ಸಂಗತಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿಯ ಕೆಲ ಸದಸ್ಯರನ್ನು ಕಾಂಗ್ರೆಸ್‌ ತನ್ನ ಗಾಳಕ್ಕೆ ಬೀಳಿಸಿಕೊಳ್ಳಲು ಯತ್ನಿಸುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಬಿಜೆಪಿಯ ಬಹುತೇಕ ಸದಸ್ಯರನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ತಮ್ಮವರನ್ನು ರಕ್ಷಿಸಿಕೊಳ್ಳುವಲ್ಲಿ ಮುಖಂಡರು ಹರಸಾಹಸ ಪಡುತ್ತಿದ್ದಾರೆ.

ಬುಧವಾರ ಮಹತ್ವದ ಬೆಳವಣಿಗೆಗಳು ಕಂಡು ಬಂದಿದ್ದವು. ಕಾಂಗ್ರೆಸ್‌ ಪುರಸಭೆ ಅಧಿಕಾರ ಹಿಡಿಯಲು ಕೆಲ ಸದಸ್ಯರನ್ನು ಗುಪ್ತವಾಗಿ ಕರೆಯಿಸಿ ಮನವೊಲಿಸುವಯತ್ನ ನಡೆದಿತ್ತು ಎನ್ನಲಾಗಿತ್ತು. ತದನಂತರ ನಡೆದ ಬೆಳವಣಿಗೆಗಳು ಕುದುರೆ ವ್ಯಾಪಾರಕ್ಕೆ ಸಾಕ್ಷಿಯಾದಂತೆ ಆಗಿವೆ. ಒಟ್ಟಾರೆಯಾಗಿ ಕುದುರೆ ವ್ಯಾಪಾರ ಜೋರಾಗಿ ನಡೆದಿದ್ದು, ವಾಮ ಮಾರ್ಗದಿಂದ ಅಧಿಕಾರ ಹಿಡಿಯುವ ಕಾಂಗ್ರೆಸ್‌ ಪಕ್ಷದ ಕನಸು ಈಡೇರುವುದೇ ಕಾಯ್ದು ನೋಡಬೇಕಿದೆ.

ಕಳೆದ ಚುನಾವಣೆಯಲ್ಲೂ ಜೆಡಿಎಸ್‌ನ ಐದು ಸದಸ್ಯರು, ಕೆಜೆಪಿಯ ಒಬ್ಬ ಸದಸ್ಯಳ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಮುಂದಾಗಿದ್ದ ಬಿಜೆಪಿಗೆ ಕುದುರೆ ವ್ಯಾಪಾರದ ಕಂಟಕ ಎದುರಾಗಿತ್ತು. ಆಗಲೂ ಸಹ ಜೆಡಿಎಸ್‌, ಕೆಜೆಪಿ ಮತ್ತು ಬಿಜೆಪಿ ಸದಸ್ಯರು ಸ್ಥಾನ ಪಲ್ಲಟಕ್ಕೆ ಮುಂದಾಗಿದ್ದರು.

ಯಾವುದೇ ಪಕ್ಷದವರಾಗಿರಲಿ ಜನಾದೇಶಕ್ಕೆ ತಲೆಬಾಗಬೇಕು. ಸುಖಾಸುಮ್ಮನೆ ತಮ್ಮ ಸದಸ್ಯರನ್ನು ಸೆಳೆಯುವ ಯತ್ನ ಮಾಡಲಾಗಿರುವ ಕುರಿತು ಮಾಹಿತಿ ಬಂದಿದೆ. ಬಿಜೆಪಿಯಿಂದ ಗೆಲುವು ಕಂಡ ಎಲ್ಲ ಸದಸ್ಯರು ಪಕ್ಷದ ಬದ್ಧತೆ ಅನುಗುಣವಾಗಿ ಕೆಲಸ ಮಾಡುವವರಿದ್ದಾರೆ. ಯಾವುದೇ ರೀತಿಯ ಒತ್ತಡಕ್ಕೆ ಮಣಿಯಲ್ಲ. 
 ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕರು

ಪುರಸಭೆ ಅಧ್ಯಕ್ಷರ ಆಯ್ಕೆ ಕುರಿತು ನಾನೇನು ಮಾತನಾಡಲ್ಲ. ಕಾಯ್ದು ನೋಡೋಣ.
  ಡಾ| ಶರಣಪ್ರಕಾಶ ಪಾಟೀಲ, ಮಾಜಿ ಸಚಿವ

„ ಶಿವಕುಮಾರ ಬಿ. ನಿಡಗುಂದಾ

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top