CONNECT WITH US  

ವಿವಿಯಲ್ಲಿ ಕಲಿಯುವ ಹಂಬಲವಿರಲಿ

ಕಲಬುರಗಿ: ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಕಲಿಯುವ ಹಂಬಲವನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕು.
ನೊಬೆಲ್‌ ಪ್ರಶಸ್ತಿಗಳಿಸುವತ್ತ ವಿದ್ಯಾರ್ಥಿಗಳ ಕಲಿಕೆಯಾಗಬೇಕಿಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ ಅಭಿಪ್ರಾಯ ವ್ಯಕ್ತಪಡಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ನಗರದ ದೊಡ್ಡಪ್ಪ ಅಪ್ಪಾ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ವಿಜ್ಞಾನ ಅಕಾಡೆಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಪಠ್ಯಕ್ರಮ ವಿಷಯದ ಉದ್ದೇಶ, ತತ್ವಗಳನ್ನು ತಿಳಿಸುತ್ತಾರೆ. ಆದರೆ ವಿದ್ಯಾರ್ಥಿಗಳು ತಮ್ಮ ಕಲಿಕೆಯ ವಿಷಯಗಳನ್ನು ಆಳವಾಗಿ ಅಭ್ಯಸಿಸುವ ಪದ್ಧತಿ ರೂಢಿಸಿಕೊಳ್ಳಬೇಕು. ತಮ್ಮ ಕಲಿಕೆ ವಿಷಯದ ಕುರಿತು ಲೇಖನಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ ನಿಷ್ಠಿ ಮಾತನಾಡಿ, ವಿಜ್ಞಾನ ಎನ್ನುವುದು ಪ್ರತಿ ವಸ್ತುವಿನಲ್ಲೂ ಇದೆ. ವಿಜ್ಞಾನದ ವಿಷಯಗಳ ಕುರಿತು ವಿದ್ಯಾರ್ಥಿಗಳು ಲೇಖನಗಳನ್ನು ಬರೆಯಬೇಕು. ಕಠಿಣ ಪರಿಶ್ರಮ, ಧೈರ್ಯ, ಸಂವಹನ ಕೌಶಲ್ಯ ಮತ್ತು ಸರಳತೆ ಮತ್ತು ಸಹಜತೆಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬೆಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಶರಣಬಸವ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೊ| ವಿ.ಡಿ. ಮೈತ್ರಿ ಮಾತನಾಡಿ, ಕಠಿಣ ಪರಿಶ್ರಮ ಮತ್ತು ಶ್ರದ್ಧೆಯ ಮೂಲಕ ವಿದ್ಯಾರ್ಥಿಗಳು ಯಶಸ್ಸು ಸಾದಿಸಲು ಸಾಧ್ಯ. ವಿದ್ಯಾರ್ಥಿಗಳ ಜೀವನ ಯಶಸ್ಸು ಸಾಧಿಸುವತ್ತ ಸಾಗಬೇಕು. ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ,
ವಿದ್ಯಾರ್ಥಿಗಳು ಸ್ವಕಲಿಕೆ ಪದ್ಧತಿ ಅಳವಡಿಸಿಕೊಳ್ಳಬೇಕು. ಸಮಾಜಕ್ಕೆ ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಹೇಳಿದರು. 

ಶರಣಬಸವೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಡಿ.ಟಿ. ಅಂಗಡಿ , ಕೆ.ಸೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಜ್ಞಾನ ವಿಭಾಗದ ಪ್ರೊ| ಗೀತಾಂಜಲಿ, ಸೇವಾ ನಿವೃತ್ತಿ ಹೊಂದಿದ್ದ ಮುಕ್ತಾ ಬಸವರಾಜ, ಪ್ರೊ|
ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಗಣೇಶ, ಅಂಬಿಕಾ ನಿರೂಪಿಸಿದರು, ಸಂಗೀತ ವಿಭಾಗದವರು ಪ್ರಾರ್ಥನಾ ಗೀತೆ ಹಾಡಿದರು, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಜಯಶ್ರೀ ಸಿ. ವಂದಿಸಿದರು.


Trending videos

Back to Top