ಎಂಟಿಎಸ್‌ ಕಾಲೋನಿ ಬಗ್ಗೆ ಅನಂತ ವ್ಯಾಮೋಹ


Team Udayavani, Nov 13, 2018, 10:35 AM IST

gul-1.jpg

ಹುಬ್ಬಳ್ಳಿ: ಕೇಂದ್ರ ಸಚಿವ ಅನಂತಕುಮಾರ ಅವರು ತಮ್ಮ ಬಾಲ್ಯ ಕಳೆದ ನಗರದ ಎಂಟಿಎಸ್‌ ಕಾಲೋನಿ ಬಗ್ಗೆ ಸಾಕಷ್ಟು ವ್ಯಾಮೋಹ ಹೊಂದಿದ್ದರು. ಅನಂತ ಕುಮಾರ ಅವರ ತಂದೆ ನಾರಾಯಣ ಶಾಸ್ತ್ರೀ ರೈಲ್ವೆ ನೌಕರರಾಗಿದ್ದ ಕಾರಣ ಇಲ್ಲಿನ ಅರವಿಂದ ನಗರದ ಎಂಟಿಎಸ್‌ ಕಾಲೋನಿಯ ವಸತಿಗೃಹದಲ್ಲಿ ಸುಮಾರು 30 ವರ್ಷಗಳ ಕಾಲ ವಾಸವಾಗಿದ್ದರು. ರಾಜಕೀಯವಾಗಿ ರಾಷ್ಟ್ರಮಟ್ಟದಲ್ಲಿ ಬೆಳೆದರೂ ಅನೇಕ ಬಾರಿ ಕುಟುಂಬ ಸಮೇತರಾಗಿ ಬಂದು ತಾವು ಬಾಲ್ಯ ಕಳೆದ ಮನೆಯನ್ನು ನೋಡಿಕೊಂಡು ಹೋಗುತ್ತಿದ್ದರು ಎಂದು ಅಲ್ಲಿನ ಹಿರಿಯ ನೌಕರರೊಬ್ಬರು ಸ್ಮರಿಸುತ್ತಾರೆ. 

ಬಾಲ್ಯದಲ್ಲೇ ನಾಯಕತ್ವದ ಹಂಬಲ: ಇವರ ನಾಯಕತ್ವದ ಗುಣಕ್ಕೆ ನೀರೆರದಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಓದುತ್ತಿದ್ದ ಸಂದರ್ಭ ಎಂಟಿಎಸ್‌ ಕಾಲೋನಿಯಲ್ಲಿ ನಡೆಯುತ್ತಿದ್ದ ಆರ್‌ಎಸ್‌ಎಸ್‌ ಶಾಖೆ ಶಿಬಿರ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಇಂದಿನ ಆಸ್ಪತ್ರೆಯಿರುವ ಖಾಲಿ ಜಾಗದಲ್ಲಿ ಅಂದು ಸಂಘದ ಶಾಖೆ ನಡೆಯುತ್ತಿತ್ತು. ಶಾಖೆಗೆ ಆಗಮಿಸುತ್ತಿದ್ದ ಆರಂಭದಲ್ಲೇ ಶಾಖೆ ಅಗ್ರೇಸರ (ನಾಯಕ) ಆಗಬೇಕೆಂಬ ಬಯಕೆ ಮೊಳಕೆಯೊಡೆದಿತ್ತು. ಆದರೆ ಇವರಿಗಿಂತ ಹಿರಿಯರಿಗೆ ಅವಕಾಶ ನೀಡಿದ್ದ ಪರಿಣಾಮ ಸಾಧ್ಯವಾಗಿರಲಿಲ್ಲ. ಕಾಲೇಜು ಹಂತದಲ್ಲಿ ಎಬಿವಿಪಿಯಲ್ಲಿ ತಮ್ಮ ಸಂಘಟನಾ ಚತುರತೆ ಮೆರೆದಿದ್ದರು. ರಾಜ್ಯ-ರಾಷ್ಟ್ರಮಟ್ಟದ ಸಂಪರ್ಕ ಬೆಳೆಸಿಕೊಂಡಿದ್ದರು ಎಂಬುದನ್ನು ಅಂದಿನ ದಿನಗಳಲ್ಲಿ ಸಂಘದ ಶಾಖೆ ನಡೆಸುತ್ತಿದ್ದ ಪ್ರಭಾಕರ ದಿವಟೆ ನೆನಪಿಸಿಕೊಳ್ಳುತ್ತಾರೆ. 

ಲ್ಯಾಮಿಂಗ್ಟನ್‌ ಶಾಲೆ ವಿದ್ಯಾರ್ಥಿ: ಹುಬ್ಬಳ್ಳಿ ಬಾಸೆ ಸ್‌ಮಿಷನ್‌ ಶಾಲೆಯಲ್ಲಿ ಪ್ರಾಥ ಮಿಕ ಶಿಕ್ಷಣ, ಅತಿರಥ ಮಹಾರಥರಿಗೆ ಅಕ್ಷರ ಜ್ಞಾನ ನೀಡಿರುವ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಅನಂತಕುಮಾರ ಹೈಸ್ಕೂಲ್‌ ಶಿಕ್ಷಣ, ಪಿ.ಸಿ.ಜಾಬಿನ್‌ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯು ಪೂರೈಸಿದ್ದರು. ಅನಂತರ ಶ್ರೀ ಕಾಡಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಬಿಎ ಪದವಿ ಪೂರೈಸಿ, ಜೆಎಸ್‌ಎಸ್‌ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದರು.

ಎಬಿವಿಪಿಯಿಂದ ರಾಜಕಾರಣ: ಎಬಿವಿಪಿಯಲ್ಲಿ ನಗರ ಸಹ ಕಾರ್ಯದರ್ಶಿ, ನಗರ ಸಂಘಟನಾ ಕಾರ್ಯದರ್ಶಿಯಾಗಿದ್ದರು. 1982ರಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಹಾಗೂ ವಿಭಾಗ ಪ್ರಮುಖ, 1985ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. ಆಪ್ತರೊಂದಿಗೆ ಹರಟೆ, ಅಭಿವೃದ್ಧಿ: ಅನಂತಕುಮಾರ ತಮ್ಮದೇ ಆದ ಒಂದಿಷ್ಟು ಆಪ್ತ ಗೆಳೆಯರನ್ನು ಹೊಂದಿದ್ದರು. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭ ಅವರೊಂದಿಗೆ ಒಂದಿಷ್ಟು ಕಾಲ ಕಳೆಯದೆ ಬೆಂಗಳೂರಿಗೆ ಹೋಗುತ್ತಿರಲಿಲ್ಲ. ಬರುವಾಗಲೇ ಒಂದಿಷ್ಟು ಸಮಯ ನಿಗದಿ ಮಾಡಿಕೊಂಡು ಅವರದೇ ಆದ ಕೆಲವೊಂದು ಸ್ಥಳಗಳಲ್ಲಿ ಎಲ್ಲರೊಂದಿಗೆ ಸೇರುತ್ತಿದ್ದರು. ಹೆಚ್ಚಿನ ಸಮಯ ಕುಶಲೋಪರಿ ಹಾಗೂ ಹರಟೆಗೆ ಮೀಸಲಿಡುತ್ತಿದ್ದರು. ಸ್ಥಳೀಯ ಅಭಿವೃದ್ಧಿ ಕುರಿತು ಒಂದಿಷ್ಟು ಸಲಹೆ ಪಡೆಯುತ್ತಿದ್ದರು ಎನ್ನುತ್ತಾರೆ ಆಪ್ತ ಸ್ನೇಹಿತರಲ್ಲಿ ಒಬ್ಬರಾದ ಅಚ್ಯುತ್‌ ಲಿಮೆ.

ತವರಿನಲ್ಲೂ ಸಾಮಾಜಿಕ ಕಾರ್ಯ
ಅದಮ್ಯ ಚೇತನ ಫೌಂಡೇಶನ್‌ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಅನಂತಕುಮಾರ ಆರಂಭಿಸಿದ್ದರು. ತಾಯಿ ಗಿರಿಜಾ ಶಾಸ್ತ್ರೀ ಹೆಸರಿನ ಟ್ರಸ್ಟ್‌ನಡಿ ಅದಮ್ಯ ಚೇತನ ಫೌಂಡೇಶನ್‌ ಮೂಲಕ ಅನ್ನ, ಅಕ್ಷರ, ಆರೋಗ್ಯ, ಪರಿಸರ ಕಾಳಜಿ ಮೂಲಕ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಅನ್ನಪೂರ್ಣ ಯೋಜನೆಯಡಿ ನಿತ್ಯವೂ ಈ ಭಾಗದಲ್ಲಿ ಸುಮಾರು 80 ಸಾವಿರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧ ಕಡೆ ಫೌಂಡೇಶನ್‌ ವತಿಯಿಂದ ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ತೋರಲಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಸ್ವತಃ ಅನಂತಕುಮಾರ ಆಗಮಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದನ್ನು ಜಿಲ್ಲೆಯ ಜನ ಸ್ಮರಿಸುತ್ತಾರೆ.

ಪ್ಲೇಟ್‌ ಬ್ಯಾಂಕ್‌: ಪರಿಸರ ಕಾಳಜಿಗೆ ಪೂರಕವಾಗಿ ಪ್ಲಾಸ್ಟಿಕ್‌ ತಟ್ಟೆ ಹಾಗೂ ಲೋಟಗಳ ಬಳಕೆ ಕಡಿಮೆ ಮಾಡುವುದಕ್ಕಾಗಿ ಸ್ಟೀಲ್‌ ತಟ್ಟೆ-ಲೋಟಗಳನ್ನು ನೀಡುವ ನಿಟ್ಟಿನಲ್ಲಿ ಫೌಂಡೇಶನ್‌ನಿಂದ ಹುಬ್ಬಳ್ಳಿಯ ವಿಜಯನಗರದ ಕೆಂಪಣ್ಣವರ ಕಲ್ಯಾಣಮಂಟಪ ಬಳಿ ಪ್ಲೇಟ್‌ ಬ್ಯಾಂಕ್‌ ಆರಂಭಿಸಲಾಗಿದೆ. ಸುಮಾರು 2000ಕ್ಕೂ ಹೆಚ್ಚು ತಟ್ಟೆಗಳು ಇಲ್ಲಿವೆ.

ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.