20 ರಂದು ಕಲಬುರಗಿ ಸಾಹಿತ್ಯ ಸಂಭ್ರಮ


Team Udayavani, Jan 17, 2019, 6:03 AM IST

gul-5.jpg

ಕಲಬುರಗಿ: ವಿಶ್ವಜ್ಯೋತಿ ಪ್ರತಿಷ್ಠಾನ ಜ.20 ರಂದು ಬೆಳಗ್ಗೆ 10:15 ಕ್ಕೆ ಕಲಬುರಗಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜಗದೀಶ ಮರಪಳ್ಳಿ ಚಿಮ್ಮನಚೋಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಯುವ ಮನಸ್ಸುಗಳಿಗೆ ಸಾಹಿತ್ಯದ ಸವಿ ಉಣಬಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಲಬುರಗಿ ಸಾಹಿತ್ಯ ಸಂಭ್ರಮ ಅಪ್ಪಟ ಸಾಹಿತ್ಯಿಕ ಕಾರ್ಯಕ್ರಮವಾಗಿದೆ ಎಂದರು.

ಈ ಭಾಗದಲ್ಲಿ ಮಹಿಳಾ ಸಂಘಟನೆಯಲ್ಲಿ ತೊಡಗಿಸಿಕೊಂಡು ಮಹಿಳೆಯರಲ್ಲಿ ಅಡಗಿದ ಪ್ರತಿಭಾ ಪ್ರಕಾಶನಕ್ಕೆ ಕಂಕಣಬದ್ಧರಾಗಿದ್ದ, ಸಂಗಮೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ದಿವಂಗತ ಇಂದಿರಾ ಮಾನ್ವಿಕರ್‌ ಅವರ ಹೆಸರನ್ನು ಸಾಹಿತ್ಯ ಸಂಭ್ರಮದ ವೇದಿಕೆಗೆ ಇಡುವ ಮೂಲಕ ಮಾನ್ವಿಕರ್‌ ಅವರನ್ನು ಸ್ಮರಿಸುವ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

100 ಜನ ಹೊಸ ಯುವ ಪ್ರತಿನಿಧಿಗಳಿಗೆ ಭಾಗವಹಿಸಲು ಅನುವು ಮಾಡಿಕೊಡಲಾಗಿದೆ. ಎಲ್ಲ ವರ್ಗದ ಸಾಹಿತಿಗಳು ಭಾಗವಹಿಸಲಿದ್ದು, ಒಟ್ಟು 200 ಜನ ಮಾತ್ರ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಸಾಹಿತ್ಯ ಸಂಭ್ರಮ ಸಾಮಾಜಿಕ ಜಾತ್ರೆಯನ್ನಾಗಿಸದೆ, ಅನುಭವ ಮಂಟಪದ ರೀತಿಯಲ್ಲಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಜ.20ರಂದು ಬೆಳಗ್ಗೆ 10:15 ಕ್ಕೆ ನಡೆಯಲಿರುವ ಸಮಾರಂಭವನ್ನು ರಂಗ ಸಮಾಜದ ಸದಸ್ಯ ಮಲ್ಲಿಕಾರ್ಜುನ ಕಡಕೋಳ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ| ನಾಗೇಂದ್ರ ಮಸೂತಿ ಅಧ್ಯಕ್ಷತೆ ವಹಿಸುವರು. ಜಿಪಂ ಉಪಾಧ್ಯಕ್ಷೆ ಶೋಭಾ ಸಿರಸಗಿ ಹಾಗೂ ಮತ್ತಿತರರು ಆಗಮಿಸುವರು. ಮಧ್ಯಾಹ್ನ 12 ಕ್ಕೆ ಬರಹ ಭಾಗ್ಯದ ಮುಕುರ ಎನ್ನುವ ವಿಶೇಷ ಶೀರ್ಷಿಕೆಯಡಿ ಸಮಾಜದ ಕೈಪಿಡಿಗೆ ಸಾಹಿತ್ಯದ ಮುನ್ನುಡಿ ವಿಷಯ ಕುರಿತು ಹಿರಿಯ ಸಾಹಿತಿ ಡಾ| ಸ್ವಾಮಿರಾವ್‌ ಕುಲಕರ್ಣಿ, ಸೀಮಾತೀತ ಸಾಹಿತ್ಯಕ್ಕೆ ಕಲಬುರಗಿ ಸಾಹಿತ್ಯದ ಕೊಡುಗೆ ವಿಷಯದ ಕುರಿತು ಶರಣ ಸಾಹಿತಿ ಡಾ| ಶಿವರಾಜ ಪಾಟೀಲ ಮಾತನಾಡಲಿದ್ದಾರೆ.

ಹಿರಿಯ ಸಾಹಿತಿ ಸಿದ್ಧರಾಮ ಪೊಲೀಸ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಜಗನ್ನಾಥ ಎಲ್‌. ತರನಳ್ಳಿ ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನ 1:15 ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಈ ಭಾಗದ ಕವಿಗಳ ಕುಂಚದಿಂದ ಅರಳಿದ ಕಾವ್ಯಗಾಯನ ನೆರವೇರಲಿದೆ. ಹಿರಿಯ ಕವಿಗಳಾದ ಪ್ರಭಾಕರ ಜೋಷಿ, ಕಾವ್ಯಶ್ರೀ ಮಹಾಗಾಂವಕರ್‌, ಮಂಡಲಗಿರಿ ಪ್ರಸನ್ನ, ನಾಗೇಂದ್ರಪ್ಪ ಮಾಡ್ಯಾಳೆ, ರಾಜಶೇಖರ ಮಾಂಗ್‌ ಅವರು ರಚಿಸಿದ ಕಾವ್ಯಗಾಯನ ನಡೆಯಲಿದೆ.

ಮಧ್ಯಾಹ್ನ 2:15 ಕ್ಕೆ ಹಿರಿಯ ಸಾಹಿತಿ ಡಾ| ನೀಲಾಂಬಿಕಾ ಪೊಲೀಸ ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯುವ ಕಾವ್ಯಾಮೃತದಲ್ಲಿ ವಿವಿಧ ಕವಿಗಳು ಸ್ವರಚಿತ ಕವನ ವಾಚಿಸಲಿದ್ದಾರೆ. ಉಪನ್ಯಾಸಕ ಡಾ.ಕೆ.ಗಿರಿಮಲ್ಲ ಆಶಯ ನುಡಿಗಳನ್ನಾಡಲಿದ್ದಾರೆ. ಮಧ್ಯಾಹ್ನ 3:35ಕ್ಕೆ ಸಿಂಧು ಸೇತುವೆ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುವ ವಿಶೇಷ ಗೋಷ್ಠಿಯಲ್ಲಿ ಸಾಹಿತ್ಯದ ಬದುಕಿಗೆ ಮಾಧ್ಯಮದ ಬೆಳಕು ವಿಷಯದ ಕುರಿತು ಹಿರಿಯ ಪತ್ರಕರ್ತ ಡಾ| ಶ್ರೀನಿವಾಸ ಸಿರನೂರಕರ್‌ ಮಾತನಾಡಲಿದ್ದಾರೆ. ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ 4:05ಕ್ಕೆ ನಡೆಯುವ ಸಮಾರೋಪ ಸಂಭ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಹಿರಿಯ ಜಾನಪದ ತಜ್ಡ ಡಾ| ಹನುಮಂತರಾವ ದೊಡ್ಡಮನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಸಾಧನ ಸಿರಿಗೆ ಗರಿ ಮುಡಿಸುವ ಪರಿ ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪೂಜ್ಯ ಸುರೇಂದ್ರ ಮಹಾಸ್ವಾಮಿಗಳು, ಶೇಷಮೂರ್ತಿ ಅವಧಾನಿ, ಶಿವಶರಣಪ್ಪ ಕಮಲಾಪುರ, ಸಿದ್ಧಲಿಂಗ ಬಾಳಿ, ಹೇಮಂತ ಮಾಲಗತ್ತಿ, ರಾಮಯ್ಯಸ್ವಾಮಿ ಐನೋಳ್ಳಿ, ಕಾಶಪ್ಪ ವಾಂಜರಖೇಡೆ, ಎನ್‌.ಸಿ.ವಾರದ, ಡಾ| ರೆಹಮಾನ್‌ ಪಟೇಲ, ಕೆ.ಪಿ.ಗಿರಿಧರ, ಸುನೀಲ ಚೌಧರಿ, ಸಿದ್ಧಣ್ಣಾ ಮಾಲಗಾರ, ಭೀಮಾಶಂಕರ ಭೂಂಯ್ನಾರ, ಬಸವರಾಜ ಜಿ.ಮಲ್ಲಡ ಅವರನ್ನು ವಿಶೇಷವಾಗಿ ಸತ್ಕರಿಸಲಾಗುವುದು ಎಂದು ತಿಳಿಸಿದರು.

ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಪ್ರಮುಖರಾದ ಶಕುಂತಲಾ ಪಾಟೀಲ ಜಾವಳಿ, ಶಿವರಾಜ ಎಸ್‌.ಅಂಡಗಿ, ಪರಮೇಶ್ವರ ಶಟಕಾರ, ಬಿ.ಎಂ.ಪಾಟೀಲ ಕಲ್ಲೂರ, ಶಿವಾನಂದ ಮಠಪತಿ, ಡಾ| ಕೆ.ಗಿರಿಮಲ್ಲ, ರವೀಂದ್ರಕುಮಾರ ಭಂಟನಳ್ಳಿ, ವಿದ್ಯಾಸಾಗರ ದೇಶಮುಖ, ಪ್ರಭುಲಿಂಗ ಮೂಲಗೆ ಇದ್ದರು.

ಟಾಪ್ ನ್ಯೂಸ್

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.