CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಾವಿರಾರು ಭಕ್ತರಿಂದ ಐತಿಹಾಸಿಕ ಹಾಸನಾಂಬೆ ದೇವಿಯ ದರ್ಶನ 

ಹಾಸನ: ವರ್ಷಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕೊಡುವ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲು ಗುರುವಾರ ತೆರೆಯುವ ಮೂಲಕ ಸಾವಿರಾರು ಭಕ್ತರು ಅಧಿದೇವತೆ ಹಾಸನಾಂಬೆಯ ದರ್ಶನ ಮಾಡುತ್ತಿದ್ದಾರೆ. 10 ದಿನಗಳ ಕಾಲ ಮಾತ್ರ ದರ್ಶನದ ಅವಕಾಶವಿರುತ್ತದೆ.

ಹಿಂದೂ ಪಂಚಾಂಗದ ಆಶ್ವಯುಜ ಮಾಸದ ಹುಣ್ಣಿಮೆ ನಂತರದ ಮೊದಲ ಗುರುವಾರ ಬಾಗಿಲು ತೆಗೆಯುವುದು ಹಿಂದಿನಿಂದ ವಾಡಿಕೆಯಲ್ಲಿರುವ ಸಂಪ್ರದಾಯ. ಅದೇ ರೀತಿ ಪರಂಪರೆಯಂತೆ ಮೈಸೂರು ತಳವಾರ ವಂಶಸ್ಥರು ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆಗೆಯಲಾಯಿತು. ಮಧ್ಯಾಹ್ನ 12:30ಕ್ಕೆ ಸರಿಯಾಗಿ ಆರಿದ್ರ ನಕ್ಷತ್ರ ಸಮಯದಲ್ಲಿ  ತಹಶೀಲ್ದಾರ್, ಶಾಸಕರು, ಪ್ರಮುಖರ ಸಮ್ಮುಖದಲ್ಲಿ ಗರ್ಭ ಗುಡಿ ಬಾಗಿಲು ತೆಗೆಯಲಾಯಿತು. ಈ ಬಾರೀ ದಿನದ 24ಗಂಟೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಪುರಾಣ ಪ್ರಸಿದ್ಧ ಹಾಸನಾಂಬೆಯ ದರ್ಶನವನ್ನು ಈ ಬಾರಿ ಅಕ್ಟೋಬರ್ 12 ರಿಂದ 21ರ ತನಕ ಪಡೆಯಬಹುದಾಗಿದೆ. ದೇವಿಯ ದರ್ಶನಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲು ಹಾಸನ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವುದಾಗಿ ವರದಿ ತಿಳಿಸಿದೆ.

Back to Top