CONNECT WITH US  

ಬೇಲೂರು:ನಿಗೂಢ ರೀತಿಯಲ್ಲಿ ಕಾರು ಭಸ್ಮ;ಇಬ್ಬರು ಸುಟ್ಟು ಕರಕಲು!

ಹಾಸನ: ಸಂಪೂರ್ಣ ಸುಟ್ಟು ಕರಕಲಾಗಿರುವ ಇಬ್ಬರ ಶವಗಳೊಂದಿಗೆ ಸುಟ್ಟು ಹೋಗಿರುವ ಕಾರೊಂದು ಬೇಲೂರಿನ ಪುಷ್ಟಗಿರಿ ಬೆಟ್ಟದ ಬಳಿ ಶನಿವಾರ ಪತ್ತೆಯಾಗಿದೆ. 

ಶುಕ್ರವಾರ ರಾತ್ರಿ ಘಟನೆ ನಡೆದಿದ್ದು ಐ 10 ಕಾರು ಸಂಪೂರ್ಣ ಸುಟ್ಟು ಹೋಗಿದ್ದು ಒಳಗೆ ಇಬ್ಬರ ಶವಗಳಿದ್ದು ಗುರುತು ಪತ್ತೆ ಹಚ್ಚಲು ಸಾಧ್ಯವಾಗದಷ್ಟು ಕರಕಲಾಗಿವೆ.

ಅವಘಡ ಹೇಗೆ ನಡೆಯಿತು,ಮೃತ ಪಟ್ಟವರು ಯಾರು ಎನ್ನುವುದು ಇದುವರೆಗೆ ತಿಳಿದು ಬಂದಿಲ್ಲ. 

ಹಳೆಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಾಸನ ಎಸ್‌ಪಿ ರಾಹುಲ್‌ ಕುಮಾರ್‌, ಪೊಲೀಸರ ತಂಡ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Trending videos

Back to Top