CONNECT WITH US  

3785 ಎಕರೆಗೆ ನೀರುಣಿಸುವ ಏತ ನೀರಾವರಿಗೆ ಚಾಲನೆ

ಹೊಳೆನರಸೀಪುರ: ಹುಚ್ಚನಕೊಪ್ಪಲು ಏತ ನೀರಾವರಿ ಯೋಜನೆಯಲ್ಲಿ ಮೊದಲ ಹಂತದಲ್ಲಿ 86 ಕ್ಯೂಸೆಕ್‌ ನೀರು ಹರಿಸುವುದರಿಂದ ಈ ಭಾಗದ ಕೃಷಿ ಚಟುವಟಿಕೆಗಳು ಸರಾಗವಾಗಿ ನಡೆದು ಉತ್ತಮ ಬೆಳೆ ಬೆಳೆಯಬಹುದು ಎಂದು ಜಿಲ್ಲಾ ಉಸ್ತುವಾರಿ, ಲೊಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು.

ತಾಲೂಕಿನ ಹುಚ್ಚನಕೊಪ್ಪಲು ಏತ ನೀರಾವರಿ ಕೇಂದ್ರದಲ್ಲಿ ಹೇಮಾವತಿ ನದಿಯಿಂದ ನೀರೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 50 ಕೋಟಿ ರೂ. ವೆಚ್ಚದಲ್ಲಿ ಈ ಏತ ನೀರಾವರಿ ಯೋಜನೆ ಆರಂಭಿಸಲಾಯಿತು. ಇದರಿಂದ 15 ಗ್ರಾಮಗಳು ಮೊದಲ ಹಂತದಲ್ಲಿ ಸೇರ್ಪಡೆ ಆಗಲಿದ್ದು 3785 ಎಕರೆ ನೀರಾವರಿ ಅಚ್ಚುಕಟ್ಟು ಆಗಲಿದೆ ಎಂದರು.

ಏತ ನೀರಾವರಿ ಮೊದಲ ಹಂತದಲ್ಲಿ ಹಿರೇಹಳ್ಳಿà ಮುಖ್ಯ ಕಾಲುವೆ 17.5 ಕಿ.ಮೀ., ಲಕ್ಷ್ಮೀಪುರ ಶಾಖಾ ಕಾಲುವೆ 2.2 ಕಿ.ಮೀ., ಹಾರಗೌಡನಹಳ್ಳಿ 4.5 ಕಿ.ಮೀ. ಉದ್ದದ ನಾಲೆಗಳ ಮೂಲಕ ನೀರು ಹರಿಸಲಾಗುವುದು ಎಂದರು.

2ನೇ ಹಂತದಲ್ಲಿ 4520 ಎಕರೆಗೆ ನೀರು: ಎರಡನೇ ಹಂತದಲ್ಲಿ 72 ಕ್ಯೂಸೆಕ್‌ ನೀರು ಹರಿಯಲಿದ್ದು, ಇದಕ್ಕೆ 2011ರಲ್ಲಿ ಚಾಲನೆ ದೊರೆತಿದೆ. ಒಟ್ಟು 4250 ಎಕರೆಗೆ ನೀರು ದೊರೆ‌ಯಲಿದೆ. ಹೊಳೆನರಸೀಪುರದ 3906 ಎಕರೆ, ಅರಕಲಗೂಡು ತಾಲೂಕಿನ 555 ಎಕರೆ ಸೇರ್ಪಡೆ ಆಗಲಿದ್ದು ಒಟ್ಟು 4520 ಎಕರೆಗೆ ಜಮೀನಿಗೆ ನೀರು ಕಾಣಲಿದೆ ಎಂದರು.

ಕೆರೆಗಳ ಭರ್ತಿ: ಈ ಎರಡು ಹಂತದಲ್ಲಿ ಹೊಳೆನರಸೀಪುರ ತಾಲೂಕಿನ 11 ಕೆರೆಗಳಿಗೆ ನೀರು ತುಂಬಲಾಗುವುದು. 2ನೇ ಹಂತದಲ್ಲಿ ಅರಕಲಗೂಡು ತಾಲೂಕಿನ 7 ಕೆರೆಗಳು, ಹೊಳೆನರಸೀಪುರದ 14 ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದರಿಂದ ಈ ಭಾಗದಲ್ಲಿ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಿಲಿದೆ. ಎರಡು ಹಂತದಲ್ಲಿ ಒಟ್ಟು 32 ಗ್ರಾಮಗಳು ಒಳಪಡಲಿದ್ದು, ಉತ್ತಮ ಬೆಳೆ ಬೆಳೆಯಲು ರೈತರು ಮುಂದಾಗುವಂತೆ ಸಲಹೆ ನೀಡಿದರು.

ಅಚ್ಚುಕಟ್ಟು ವ್ಯಾಪ್ತಿ: ಹುಚ್ಚನಹೊಪ್ಪಲು ಏತನೀರಾವರಿ ಯೋಜನೆ ಅಚ್ಚುಕಟ್ಟಿನಲ್ಲಿ ಹೊಳೆನರಸೀಪುರ ತಾಲೂಕಿನ ಲಕ್ಷ್ಮೀಪುರ, ಮುಂಡನಹಳ್ಳಿ, ಬ್ಯಾಡರಹಳ್ಳಿ, ಐಚನಹಳ್ಳಿ, ಬ್ಯಾಡರಹಳ್ಳಿ ಕೊಪ್ಪಲಿನ ಮಾಗೀಕರೆ, ಬಿಲ್ಲೆಹಳ್ಳಿ, ಬಂಡಿಶೆಟ್ಟಿಹಳ್ಳಿ, ಚಿಗಳ್ಳಿಯ ದೊಡ್ಡಕರೆ, ಚಿಗಳ್ಳಿ ಸಣ್ಣಕೆರೆ, ಹಿರೇಹಳ್ಳಿ ಕೊಪ್ಪಲು, ಎಲೆಚಾಗಳ್ಳಿ, ಗಾಳಿಪುರಕೊಪ್ಪಲು, ಬೂವನಹಳ್ಳಿಯ ಸಣ್ಣಕೆರೆ ಹಾಗೂ ಹಾರಗೋಡನಹಳ್ಳಿ ಕೆರೆಗಳಿಗೆ ಮೊದಲ ಹಂತದಲ್ಲಿ ನೀರು ತುಂಬುವುದರಿಂದ ಅಂತರ್ಜಲ ಹೆಚ್ಚುವುದರಿಂದ ಕೊಳವೆ ಬಾವಿಗಳು ಪುನಶ್ಚೇನಗೊಳ್ಳಲಿವೆ ಎಂದು ಸಚಿವ ರೇವಣ್ಣ ತಿಳಿಸಿದರು.

2ನೇ ಹಂತದ ಗ್ರಾಮಗಳು: 2ನೇ ಹಂತದಲ್ಲಿ ಭೂವನಹಳ್ಳಿ, ಗೋಪನಹಳ್ಳಿಸಣ್ಣಕೆರೆ, ಗೋಪನಹಳ್ಳಿ ದೊಡ್ಡಕರೆ,  ಗೋಪನಹಳ್ಳಿ ಊರ ಮುಂದಿನ ಕೆರೆ, ಗೋಪನಹಳ್ಳಿ ಭಾವನಕಟ್ಟೆ, ಕೆರೆಗೋಡು, ಮುದ್ದನಹಳ್ಳಿ ಸಣ್ಣಕೆರೆ, ಮುದ್ದನಹಳ್ಳಿ ದೊಡ್ಡಕೆರೆ, ಮುದ್ದನಹಳ್ಳಿ ಊರಮುಂದಿನ ಕೆರೆ, ಚೋಳೆನಹಳ್ಳಿ, ಯಗಟಿ, ರಂಗಪುರ, ಯಗಟಿ ಕೊಪ್ಪಲಿನ ಶೆಟ್ಟರ್‌ ಕೆರೆ, ದೇವಿಪುರದ ದ್ಯಾವಮ್ಮ ಕೆರೆ, ದೇವಿಪುರದ ದೊಡ್ಡಕೆರೆವ, ಉದ್ದೂರು ಕರೆ ಹಾಗೂ ಉದ್ದೂರು ಹೊಸಳ್ಳಿಕೆರೆಗಳಿಗೆ ನೀರು ತುಂಬಲಾಗುವುದು ಎಂದು ತಿಳಿಸಿದರು.

500 ಕೋಟಿ ವೆಚ್ಚದಲ್ಲಿ ನಾಲೆ ದುರಸ್ಥಿ: ಹೇಮಾವತಿ ನದಿಮೇಲಾºಗದ ನಾಲೆಗೆ ದುರಸ್ಥಿಗೆ 500 ಕೋಟಿ ರೂ. ವೆಚ್ಚದಲ್ಲಿ ಪುನರ್‌ ನಿರ್ಮಾಣ ಮಾಡಲಾಗುವುದು. ತಾಲೂಕಿನಲ್ಲಿ ಇನ್ನು ಮೂರ್‍ನಾಲ್ಕು ಏತ ನೀರಾವರಿ ಯೋಜನೆಗಳು ಅನುಷ್ಠಾನವಾಗಬೇಕಿದ್ದು, ಅವುಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಎ.ಟಿ. ರಾಮಸ್ವಾಮಿ, ತಾಪಂ ಸದಸ್ಯ ಜವರೇಗೌಡ, ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Trending videos

Back to Top