CONNECT WITH US  

ಬೆಳೆಹಾನಿ ಪರಿಹಾರಕ್ಕೆ ಒತ್ತಾಯ

ಸಕಲೇಶಪುರ: ಮಳೆಯಿಂದ ಅತಿವೃಷ್ಟಿ ಉಂಟಾಗಿರುವ ಹೆತ್ತೂರು ಹೋಬಳಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದೆಂದು ಎಂದು ಶಾಸಕ ಎಚ್‌.ಕೆ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಹೆತ್ತೂರು ಹೋಬಳಿಯ ವಿವಿಧೆಡೆ ಮಳೆ ಗಾಳಿಗೆ ಹಾನಿಯಾದ ಪ್ರದೇಶಗಳಿಗೆ ಶಾಸಕ ಕುಮಾರಸ್ವಾಮಿ ಮತ್ತು ಕಾಫಿ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ತೋಟಗಳನ್ನು ಪರಿಶೀಲಿಸಿದ ನಂತರ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಹೋಬಳಿಯಾದ್ಯಂತ ಸುರಿದ ಗಾಳಿ ಮಳೆಗೆ ವ್ಯಾಪಕ ಅನಾಹುತಗಳು ಸಂಭವಿಸಿದೆ.

ಹಲವಾರು ಕಡೆ ಭೂ ಕುಸಿತ ಉಂಟಾಗಿ ಅನೇಕ ಹಾನಿಯುಂಟಾಗಿದೆ. ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿವೆೆ. ಹೆತ್ತೂರು ಮತ್ತು ಯಸಳೂರು ಹೋಬಳಿಗಳ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸು, ಏಲಕ್ಕಿ, ಶುಂಠಿ, ಭತ್ತದ ಬೆಳೆಗಳಿಗೆ ಸಂಪೂರ್ಣ ಹಾನಿಯಾಗಿದೆ.

ಈ ಭಾಗವು  ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಪ್ರದೇಶವಾಗಿದ್ದು, ಇದುವರೆಗೆ ಮಳೆಯಿಂದ ಬೆಳೆ ಹಾನಿಯಾದಂತ ಸಂದರ್ಭದಲ್ಲಿ ಯಾವುದೇ ಪರಿಹಾರ ನೀಡಿಲ್ಲ. ಈ ನಿಟ್ಟಿನಲ್ಲಿ ಶೀಘ್ರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೇಂದ್ರ ಮತ್ತು ರಾಜ್ಯದ ಸಂಬಂಧಪಟ್ಟ ಅಧಿಕಾರಿಗಳೂಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಸದಸ್ಯೆ ಉಜ್ಮಾ ರುಜ್ವಿ, ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಸಚಿನ್‌, ಕಾಫಿ ಮಂಡಳಿ ಹಿರಿಯ ವಿಸ್ತರಣಾಧಿಕಾರಿ ಡಾ.ತಂಗರಾಜ್‌, ಪುನೀತ್‌, ಮಂಜೇಶ್‌, ದಿವಾಕರ್‌, ನಾಗಭೂಷಣ, ಶ್ರೀಧರ್‌, ರಾಧಾಕೃಷ್ಣ, ಮಲ್ಲೇಶ್‌, ಮಲ್ಲಪ್ಪಗೌಡ ಇತರರು ಉಪಸ್ಥಿತರಿದ್ದರು

Trending videos

Back to Top