CONNECT WITH US  

ಕಾಣೆಯಾಗಿದ್ದ ಯುವಕನ ಶವ ನಾಲೆಯಲ್ಲಿ ಪತ

ಅರಕಲಗೂಡು: ಕಳೆದ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ತಾಲೂಕಿನ ದೊಡ್ಡನಾಯಕನ ಕೊಪ್ಪಲು ಗ್ರಾಮದ ಯುವಕ ಶವ ಬುಧವಾರ ನಾಲೆಯಲ್ಲಿ ಪತ್ತೆಯಾಗಿದೆ.

ದೊಡ್ಡನಾಯಕನಕೊಪ್ಪಲು ಗ್ರಾಮದ ನಾಗ ರಾಜು (21) ಎಂಬಾತ ಸೋಮವಾರ ಮನೆ ಯಿಂದ ಹೊರ ಹೋದವ ವಾಪಸ್ಸಾಗಿರಲಿಲ್ಲ. ಆತ ಕಾಣೆಯಾಗಿದ್ದಾನೆ ಎಂದು ಆತನ ತಂದೆ ದಾಸೇ ಗೌಡ ಅರಕಲಗೂಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಆತನ ಶವ ಹಂಪಾ ಪುರದ ಬಳಿ ನಾಲೆಯಲ್ಲಿ ಬುಧವಾರ ಪತ್ತೆ ಯಾಗಿದ್ದು, ಆತನ ಕುತ್ತಿಗೆ ಭಾಗವನ್ನು ಸೀಳಿ ಕೊಲೆ ಮಾಡಿ ಶವವನ್ನು ನಾಲೆಯಲ್ಲಿ ಬೀಸಾಡಲಾಗಿದೆ.

ಮಂಗಳವಾರ ರಾಮೇನಹಳ್ಳಿ ಬಳಿ ನಾಗರಾಜು ಬೈಕ್‌ ಪತ್ತೆಯಾಗಿತ್ತು. ಬುಧವಾರ 12 ಗಂಟೆ ಸುಮಾರಿಗೆ ಹಂಪಾಪುರ ಬಳಿ ನಾಲೆಯಲ್ಲಿ ತೇಲುತ್ತಿದ್ದ ಶವವನ್ನು ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಹೊರ ತೆಗೆದು ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಪ್ರಕರಣ ಸಂಬಂಧ ಕೊಲೆ ಮೊಕದ್ದಮೆ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 


Trending videos

Back to Top