CONNECT WITH US  

ಇಂದಿನಿಂದ ಶ್ರಾವಣಮಾಸ ಆಚರಣೆ

ಹಾಸನ/ಹಾರನಹಳ್ಳಿ: ಅರಸೀಕೆರೆ ತಾಲೂಕಿನ ಸುಕ್ಷೇತ್ರ ಕೋಡಿಮಠ ಮಹಾಸಂಸ್ಥಾನದಲ್ಲಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಆ.12 ರಿಂದ ಸೆ. 9ರವರೆಗೆ ಶ್ರಾವಣ ಮಾಸ ಆಚರಣೆ ಹಮ್ಮಿಕೊಳ್ಳಲಾಗಿದೆ.

ಶ್ರಾವಣ ಪ್ರಯುಕ್ತ ಮಠದಲ್ಲಿ ಪ್ರತಿದಿನ ಸಂಜೆ 6.30ರಿಂದ 8 ಗಂಟೆಯ ತನಕ ಪೂಜ್ಯ ಲಿಂಗೈಕ ಶಿವಲಿಂಗಜ್ಜಯ್ಯ ಪುರಾಣ, ಪ್ರವಚನ ಹಾಗೂ ಡಾ.ಲಿಂಗೈಕ ಪುಟ್ಟರಾಜ ಗವಾಯಿಗಳ ಕಥಾ ಪ್ರವಚನ ಏರ್ಪಡಿಸಲಾಗಿದೆ. ಕೀರ್ತನ ಕೇಸರಿ ರಾಜ್ಯಪ್ರಶಸ್ತಿ ಪುರಸ್ಕೃತ  ಗದಗ ಜಿಲ್ಲೆಯ ಅಟ್ನೂರುರಿನ ಪಂಡಿತ್‌ಎಂ.ಕಲ್ಲಿನಾಥ ಶಾಸ್ತ್ರೀಗಳು ಕಾರ್ಯಕ್ರಮ ನಡೆಸಿಕೊಡುವರು.

ಬಿಳೆಬಾಳದ ಗಾನಗಂಧರ್ವ ಶಿವಲಿಂಗಯ್ಯ ಗವಾಯಿಗಳಿಂದ ಗಾಯನ, ಪಕ್ಕವಾದ್ಯದಲ್ಲಿ ಲಕ್ಷ್ಮಣ ಹೇರೂರು ತಬಲ, ಸಂಗೀತ ಸಾಹಿತ್ಯದೊಂದಿಗೆ ಪುರಾಣ ಪ್ರವಚನದಲ್ಲಿ ಸರ್ವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಮಠದವರು ಕೋರಿದ್ದಾರೆ. 


Trending videos

Back to Top