CONNECT WITH US  

ಜನಹಿತದ ಧೋರಣೆಯಲ್ಲಿ ತಪ್ಪಿದ್ದರೆ ಪ್ರಶ್ನಿಸಿ

ರಾಮನಾಥಪುರ: ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ತನ್ನ ನಡವಳಿಕೆಯಲ್ಲಿ ತಪ್ಪು ಕಂಡು ಬಂದರೆ ಪ್ರಶ್ನಿಸಿ ಎಂದು ಶಾಸಕ ಡಾ.ಎ.ಟಿ. ರಾಮಸ್ವಾಮಿ ಹೇಳಿದರು. ಹೋಬಳಿ ವ್ಯಾಪ್ತಿಯ ಗಂಗೂರು ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಸರ್ಕಾರದ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ಒದಗಿಸಲು ಸರ್ಕಾರದ ನಡೆ ಜನರ ಕಡೆಗೆ ಎಂಬ ಚಿಂತನೆಯ ಜನಸಂಪರ್ಕ ಸಭೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.  

ಅಧಿಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆಸಬಾರದು. ಸರ್ಕಾರದ ಸೌಲಭ್ಯಗಳನ್ನು ಸುಲಭವಾಗಿ ಜನರ ಬಳಿಗೆ ತಲುಪವಂತಾಗಬೇಕು. ನಿವೇಶನ, ವಿದ್ಯುತ್‌, ಶುದ್ಧ ಕುಡಿಯುವ ನೀರು, ಶೌಚಾಲಯ, ಗ್ರಾಮೀಣ ರಸ್ತೆಗಳು, ಚರಂಡಿ ದುರಸ್ತಿ ಸೇರಿದಂತೆ 100 ಅರ್ಜಿ ಬಂದಿವೆ. ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಮನಾಥಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಎಂ.ಎಚ್‌.ಕೃಷ್ಣಮೂರ್ತಿ, ಕೃಷ್ಣೇಗೌಡ, ವೆಂಕಟೇಶ, ತಹಶೀಲ್ದಾರ್‌ ನಂದೀಶ, ಕಾರ್ಯನಿರ್ವಣಾಧಿಕಾರಿ ಯಶವಂತ, ಕೋಣನೂರು ಠಾಣೆ ಎಸ್‌.ಐ.ರಾಜಣ್ಣ, ಎಂಜಿನಿಯರ್‌ ರುದ್ರೇಶ, ಕಂದಾಯ ನಿರೀಕ್ಷಕ ಸ್ವಾಮಿ, ಚಂದ್ರೇಗೌಡ ಉಪಸ್ಥಿತರಿದ್ದರು.

Trending videos

Back to Top