CONNECT WITH US  

ನೂರಾರು ಎಕರೆ ಭತ್ತ ಬೆಳೆ ಜಲಾವೃತ

ಹೊಳೆನರಸೀಪುರ: ಹೇಮಾವತಿ ನದಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಹೆಚ್ಚಿದ್ದರಿಂದ ತಾಲೂಕಿನ ನದಿ ಅಕ್ಕಪಕ್ಕದ ನೂರಾರು ಎಕರೆ ಭತ್ತ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿದೆ. ನದಿಯಲ್ಲಿ ನೀರಿನ ಮಟ್ಟದ ಹೆಚ್ಚಿದ್ದರಿಂದ ತಾಲೂಕಿನ ನಾಗಲಾಪುರ, ಸೂರನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಭತ್ತ ಬೆಳೆ ಸಂಪೂರ್ಣವಾಗಿ ನೀರು ಪಾಲಾಗಿದೆ.

ಹೇಮಾವತಿ ನದಿಗೆ ಹೆಚ್ಚುವರಿ ಹರಿಸುತ್ತಿರುವುದರಿಂದ ನದಿ ಅಕ್ಕಪಕ್ಕದ ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ. ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಮನವಿ ಮಾಡಿದೆ. ಇದೇ ರೀತಿ ನೀರಿನ ಹರಿವು ಏರಿಕೆಯಾದರೆ ಹೊಳೆನರಸೀಪುರ-ಚನ್ನರಾಯಪಟ್ಟಣ- ಕುಣಿಗಲ್‌- ನೆಲಮಂಗಲ ರಸ್ತೆ ಸಂಚಾರ ವ್ಯತ್ಯತವಾಗುವ ಸಾಧ್ಯತೆ ಇದೆ.

ಹೇಮಾವತಿ ನದಿ ತುಂಬಿ ಹರಿಯುತ್ತಿದು, ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಇಕ್ಕೆಲಗಳ ಮೇಲೆ ತೀವ್ರ ನಿಗಾವಹಿಸಿದ್ದು, ಅವಶ್ಯಕತೆ ಬಿದ್ದಲ್ಲಿ ಪರಿಹಾರ ಕ್ರಮಕೈಗೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.

Trending videos

Back to Top