CONNECT WITH US  

ಜೆಡಿಎಸ್‌ನಿಂದ ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ

ಸಕಲೇಶಪುರ: ತಾಲೂಕಿನಲ್ಲಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳಿಂದ ಅಗಲಿದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಾಲೂಕು ಜೆಡಿಎಸ್‌ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಾಸಕ ಎಚ್‌.ಕೆ ಕುಮಾರಸ್ವಾಮಿ ಮಾತನಾಡಿ, ವಾಜಪೇಯಿ ಅವರ ನಿಧನದಿಂದಾಗಿ ರಾಷ್ಟ್ರದ ಪ್ರಜೆಗಳಿಗೆ ನಿರಾಶೆಯಾಗಿದೆ.

ರಾಷ್ಟ್ರದ ಮುನ್ನಡೆಗೆ ಸಾಕಷ್ಟು ಕೆಲಸ ಮಾಡಿದ ಅವರೊಬ್ಬರು ದೇಶದ ಪ್ರಶ್ನಾತೀತ ನಾಯಕ, 1977ರಲ್ಲಿ ದೇಶದಲ್ಲಿ ಪ್ರಪ್ರಥಮವಾಗಿ ಕಾಂಗ್ರೆಸೇತರ ಸರ್ಕಾರ ಬರಲು ಕಾರಣರಾಗಿದ್ದರು. ಅತ್ಯಂತ ಕ್ರಿಯಾಶೀಲ ಸಂಸದರಾಗಿ, ವಾಗ್ಮಿಯಾಗಿ ತಮ್ಮ ಸಂಪೂರ್ಣ ಜೀವನವನ್ನು ರಾಷ್ಟ್ರ ಸೇವೆಗಾಗಿ ಮುಡುಪಾಗಿಟ್ಟರು. ಇವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ತಾಲೂಕು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಪ್ರತಾಪ್‌ ನೇತೃತ್ವದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಪಟ್ಟಣದ ಭಜರಂಗದಳದ ಕಚೇರಿಯಲ್ಲಿ ಪ್ರಾಂತ ಸಹ ಕಾರ್ಯವಾಹ ರಘು ನೇತೃತ್ವದಲ್ಲಿ ಅಗಲಿದ ಮಾಜಿ ಪ್ರಧಾನಿಗೆ ಸಂತಾಪ ಸೂಚಿಸಲಾಯಿತು. ತಾಲೂಕಿನ ಹೆತ್ತೂರು, ವನಗೂರು, ಬಾಳ್ಳುಪೇಟೆ ಸೇರಿದಂತೆ ವಿವಿಧೆಡೆ ಸಹ ಶ್ರದ್ಧಾಂಜಲಿ ಸಲ್ಲಿಸಲಾಯಿತು.


Trending videos

Back to Top