CONNECT WITH US  

ಮರ ಬೆಳೆಸಿ, ಸಂತ್ರಸ್ತರಿಗೆ ನೆರವೂ ನೀಡಿ

ಅರಸೀಕೆರೆ: ಪರಿಸರ ಅಸಮತೋಲನದಿಂದ ಕೊಡಗು ಮತ್ತು ಕೇರಳದಲ್ಲಿ ಜಲಪ್ರಳಯ ಸಂಭವಿಸಿದ್ದು, ಇದನ್ನು ತಡೆಗಟ್ಟಲು ಮರಗಳನ್ನು ಬೆಳೆಸಬೇಕು ಹಾಗೂ ಸಂತ್ರಸ್ತರಿಗೆ ನೆರವು ನೀಡಬೇಕೆಂದು ತಾಲೂಕು ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಟಿ.ವಿ.ಅರುಣ್‌ಕುಮಾರ್‌ ತಿಳಿಸಿದರು.

ನಗರದ ಪಿ.ಪಿ.ವೃತ್ತದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘ ಏರ್ಪಡಿಸಿದ್ದ ಸಸಿ ವಿತರಣೆ ಹಾಗೂ ಸಂತ್ರಸ್ತರಿಗೆ ನಿಧಿ ಸಂಗ್ರಹಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನ ದುರಾಸೆಯಿಂದ ಮರಗಳ ಮರಣ ಹೋಮ ಆಗುತ್ತಿದೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿದೆ. ಇದರ ಪರಿಣಾಮ ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಮುಂದಿನ ಪೀಳಿಗೆ ನೆಮ್ಮದಿಯಾಗಿ ಬದುಕಬೇಕಾದರೆ ಪ್ರತಿಯೊಬ್ಬರೂ ಸಸಿ ನೆಡಬೇಕು ಎಂದು ಹೇಳಿದರು.

ಇತ್ತೀಚೆಗೆ ಉಂಟಾದ ಜಲಪ್ರಳಯದಿಂದ ಕೊಡಗಿನ ಜನರು ತಮ್ಮ ಸರ್ವಸ್ವ ಕಳೆದುಕೊಂಡು ಅನಾಥರಂತೆ ಬದುಕುತ್ತಿದ್ದಾರೆ. ಅವರಿಗೆ ಪುನಃ ಬದುಕು ಕಟ್ಟಿಕೊಡಲು ಪ್ರತಿಯೊಬ್ಬ ಕನ್ನಡಿಗ ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ವಿನಂತಿಸಿದರು. ಸಂಘದ ತಾಲೂಕು ಅಧ್ಯಕ್ಷ ಜಗದೀಶ್‌, ಶ್ರೀರಾಮ್‌, ರಂಗನಾಥ್‌, ರಾಜು, ಸತೀಶ್‌, ಅಶೋಕ್‌, ಕಿರಣ್‌, ರವಿ, ರಘು ಪಾಲ್ಗೊಂಡಿದ್ದರು.

ಇಂದು ಹೆಚ್ಚು ಓದಿದ್ದು

ಕಲಘಟಗಿ: ಹಿರೇಹೊನ್ನಿಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿದರು.

Nov 16, 2018 05:31pm

ತನ್ನ ಕನಸಿನ ಮನೆಯೊಂದಿಗೆ ಫಾರೂಕ್‌.

Nov 16, 2018 11:09am

ಮತ್ಸ್ಯತೀರ್ಥ ಹೊಳೆಯ ಒಂದು ಭಾಗಕ್ಕೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. 

Nov 16, 2018 10:57am

Trending videos

Back to Top