CONNECT WITH US  

15ವರೆಗೆ ಹಾಸನ-ಮಂಗಳೂರು ರೈಲು ರದ್ದು

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರೈಲು ಹಳಿಗಳ ಮೇಲೆ ಸಾಕಷ್ಟು ಭೂ ಕುಸಿತವಾಗಿದೆ. ಹೀಗಾಗಿ ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಈಗಾಗಲೇ ರದ್ದುಗೊಂಡಿರುವ ಹಾಸನ - ಮಂಗಳೂರು ನಡುವೆ ರೈಲು ಸಂಚಾರ ವನ್ನು ಸೆ.15ರವರೆಗೆ ಮುಂದೂಡಲಾಗಿದೆ.

ಆ.14 ಸುರಿದ ಭಾರೀ ಮಳೆಯಿಂದ ಸಕಲೇಶ ಪುರ - ಸುಬ್ರಹ್ಮಣ್ಯ ನಡುವಿನ ಘಟ್ಟ ಪ್ರದೇಶದ 56 ಕಿ.ಮೀ. ರೈಲು ಮಾರ್ಗದಲ್ಲಿ 68 ಕಡೆ ರೈಲು ಹಳಿಗಳ ಮೇಲೆ ಗುಡ್ಡ, ಮರ, ಬೃಹತ್‌ ಬಂಡೆ, ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದೆ. ರೈಲು ಸಿಬ್ಬಂದಿ ಪರಿಹಾರ ಕಾರ್ಯಾಚರಣೆಯನ್ನು ಹಗಲು ರಾತ್ರಿ ನಡೆಸುತ್ತಿದ್ದಾರೆ. ಈಗಾಗಲೇ 40 ಕಡೆ ಮಣ್ಣು ತೆರವುಗೊಳಿ ಸಲಾಗಿದೆ. ಇನ್ನೂ 28 ಕಡೆ ಹಳಿಗಳ ಮೇಲೆ ಬಿದ್ದಿರುವ ಮಣ್ಣು, ಕಲ್ಲು, ಮರಗಳನ್ನು ರೈಲ್ವೆ ಸಿಬ್ಬಂದಿ, ಸ್ಥಳೀಯ ಕಾರ್ಮಿಕರು ಯಂತ್ರೋಪಕರಣಗಳನ್ನು ಬಳಸಿ ತೆರವು ಮಾಡುವ ಕಾರ್ಯಾ ಚರಣೆಯನ್ನು ಮುಂದು ವರಿಸಿದ್ದಾರೆ.

12 ದಿನ ತೆರವು: ಕೆಲವು ಕಡೆ ಲೋಡ್‌ಗಟ್ಟಲೇ ಮಣ್ಣು ಹಳಿಯ ಮೇಲೆ ಕುಸಿತವಾಗಿರುವ ಕಾರಣ ಅದನ್ನು ಹೊರಗಡೆ ಸಾಗಿಸುವುದೇ ಸವಾಲಾಗಿದೆ. ಕೆಲವು ಕಡೆ ಬಂಡೆಗಳು ಉರುಳಿ ಬಿದ್ದು, ಹಳಿಯೇ ಬಗ್ಗಿದೆ. ಹೀಗಾಗಿ ತೆರವು ಮಾಡಲು ವಿಳಂಬವಾಗುತ್ತಿದೆ. ಹೀಗಾಗಿ ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಳ್ಳಲು ಇನ್ನೂ 10-12 ದಿನಗಳು ಬೇಕಾಗಬಹುದು ಎನ್ನಲಾಗುತ್ತಿದೆ. ಬೆಂಗಳೂರು - ಕಣ್ಣೂರು- ಕಾರವಾರ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಸೆ.11ರವರೆಗೆ ರದ್ದುಪಡಿಸ ಲಾಗಿದೆ. ಕಣ್ಣೂರು-ಕಾರವಾರ - ಬೆಂಗಳೂರು ಎಕ್ಸ್‌ ಪ್ರಸ್‌ ರೈಲು ಸಂಚಾರ ಸೆ.15ರವರೆಗೂ ಆರಂಭವಾಗು ವುದೇ ಇಲ್ಲ. ಯಶವಂತಪುರ - ಕಾರವಾರ ಎಕ್ಸ್‌ ಪ್ರಸ್‌, ಕಾರವಾರ - ಯಶವಂತಪುರ ಎಕ್ಸ್‌ಪ್ರೆಸ್‌ ಸೆ.14ರ ವರೆಗೂ ಸಂಚಾರ ಮಾಡುವುದಿಲ್ಲ. ಹೀಗೆ 8 ರೈಲುಗಳು ಈ ಮಾರ್ಗದಲ್ಲಿ ರದ್ದಾಗಿವೆ. ಆದರೆ, ಯಶ ವಂತಪುರ - ಕಾರವಾರ ಎಕ್ಸ್‌ಪ್ರೆಸ್‌ ರೈಲು ಸಂಚಾರ ಹಾಸನದವರೆಗೆ ಮುಂದುವರಿಯುತ್ತದೆ ಎಂದು ವಿವರ ನೀಡಲಾಗಿದೆ.


Trending videos

Back to Top