CONNECT WITH US  

ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಿ

ಬೇಲೂರು: ಸರ್ಕಾರದ ಸೌಲಭ್ಯ ಪಡೆಯುವ ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿ ಕೊಂಡಿದ್ದ ಡಾ.ರಾಧಾಕೃಷ್ಣ ಜನ್ಮ ದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಯ ಶಿಕ್ಷಕರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿದಾಗ ಮಾತ್ರ ಶಾಲೆಗಳನ್ನು ಉಳಿಸಿ ಬೆಳೆಸಬಹುದಾಗಿದೆ ಎಂದು ಹೇಳಿದರು.

ಶಾಲೆಗಳ ದುರಸ್ತಿ: ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 180 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಹಳೇಬೀಡು ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿಗೆ 2 ಕೋಟಿ ರೂ., ಬೇಲೂರು ಪದವಿ ಪೂರ್ವ ಕಾಲೇ ಜಿಗೆ 2 ಕೋಟಿ ರೂ., ಅರೇಹಳ್ಳಿ ಪದವಿ ಪೂರ್ವ ಕಾಲೇಜಿಗೆ 1 ಕೋಟಿ ರೂ., ಹಿರಿಯ ಪ್ರಾಥಮಿಕ
ಶಾಲೆ ಜಾವಗಲ್‌ಗೆ 1 ಕೋಟಿ ರೂ., ಹಿರಿಯ ಪ್ರಾಥಮಿಕ ಶಾಲೆ ಕಲ್ಯಾಡಿಗೆ 1 ಕೋಟಿ ರೂ., ಹಿರಿಯ ಪ್ರಾಥಮಿಕ ಶಾಲೆ ಹಳೇಬೀಡಿಗೆ 1 ಕೋಟಿ ರೂ., ಹಿರಿಯ ಪ್ರಾಥಮಿಕ ಶಾಲೆ ಕೋಟೆ, ಬೇಲೂ ರಿಗೆ 2 ಕೋಟಿ ರೂ. ಅನುದಾನ ನೀಡಿದ್ದು, ಶಾಲೆ ಗಳ ದುರಸ್ತಿ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಭವನಕ್ಕೆ ಜಮೀನು, ಹಣ: ಗುರು ಭವನ ನಿರ್ಮಿಸುವುದು ಶಿಕ್ಷಕರ ಬಹುದಿನದ ಬೇಡಿಕೆಯಾಗಿದೆ. ಪಟ್ಟಣದ ಹೊರವಲಯದ ಸುರಾಪುರ ಗ್ರಾಮದಲ್ಲಿ 20 ಗುಂಟೆ ಜಮೀನಿನಲ್ಲಿ 2 ಕೋಟಿ ರೂ.ನಲ್ಲಿ ಭವನ ನಿರ್ಮಿಸಲು ಕ್ರಮ ಕೈಗೊಳ್ಳು ವುದಲ್ಲದೆ, ಶಾಸಕರ ನಿಧಿಯಿಂದ 5 ಲಕ್ಷ ರೂ., ಲೋಕಸಭಾ ಸದಸ್ಯರ ನಿಧಿಯಿಂದ 5 ಲಕ್ಷ ರೂ. ಮತ್ತು ತಮ್ಮ ಸ್ವಂತ ಟ್ರಸ್ಟ್‌ನಿಂದ 1 ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದು ತಿಳಿಸಿದರು. 

ಶಿಕ್ಷಕರು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಬೇಕು. ಅಲ್ಲದೆ, ಮಕ್ಕಳ ಶಿಕ್ಷಣಕ್ಕೆ ಪೂರಕ ವಾಗಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗ ಬೇಕು. ಅಲ್ಲದೆ, ಶಿಕ್ಷಕರ ಬೇಡಿಕೆ ಈಡೇರಿಸಲು ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳ ಬಳಿ ಚರ್ಚಿಸುವುದಾಗಿ ತಿಳಿಸಿದರು.

ಪ್ರಮುಖ ಪಾತ್ರವಹಿಸಿ: ತಾಪಂ ಅಧ್ಯಕ್ಷ ಹರೀಶ್‌ ಮಾತನಾಡಿ, ಶಿಕ್ಷಕರ ವೃತ್ತಿ ಹೆಮ್ಮೆ ಪಡುವಂತದ್ದು. ದೇಶದ ಸಮಗ್ರ ಬದಲಾವಣೆ ಮಾಡುವಲ್ಲಿ ಶಿಕ್ಷಕ ಪಾತ್ರ ಬಹುಮುಖ್ಯವಾಗಿದೆ. ಹಿಂದಿನ ಶಿಕ್ಷಣಕ್ಕೂ, ಇಂದಿನ ಶಿಕ್ಷಣಕ್ಕೂ ವ್ಯತ್ಯಾಸವಿದೆ. ಮಕ್ಕಳ ಸರ್ವ ತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.

ಜಿಪಂ ಸದಸ್ಯರಾದ ಲತಾಮಂಜೇಶ್ವರಿ, ಮಂಜಪ್ಪ, ತೋಕ್‌, ಲತಾ, ತಾಪಂ ಉಪಾಧ್ಯಕ್ಷೆ ಕಮಲಾ, ಸದಸ್ಯರಾದ ಸೋಮಯ್ಯ, ರವಿ, ಪುರಸಭೆ ಅಧ್ಯಕ್ಷೆ ಭಾರತಿ, ಎಪಿಎಂಸಿ ಅಧ್ಯಕ್ಷ ವಿಷ್ಣು ಕುಮಾರ್‌, ತಹಶೀಲ್ದಾರ್‌ ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಶಾಕೀರ್‌ ಅಲಿಖಾನ್‌, ತಾಪಂ ಇಒ ರವಿಕುಮಾರ್‌ ಇತರರಿದ್ದರು.


Trending videos

Back to Top