CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಾಲಬಾಧೆ; ಟ್ರಾನ್ಸ್ ಫಾರ್ಮರ್ ಗೆ ಕೈಹಾಕಿ ಸಾವಿಗೆ ಶರಣಾದ ರೈತ

ಹಾವೇರಿ : ಸಾಲಬಾಧೆ ಮತ್ತು  ನೀರಿಲ್ಲದೆ ಬೆಳೆ ಸೊರಗಿ ಹೋದ ಕಾರಣ ತೀವ್ರವಾಗಿ ನೊಂದ ರೈತನೊಬ್ಬ  ಹೊಲದಲ್ಲಿನ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಏರಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಶಿಗ್ಗಾವಿಯ  ಶಿರಗೋಡ ಗ್ರಾಮದಲ್ಲಿ  ಶುಕ್ರವಾರ ಬೆಳಗ್ಗೆ ನಡೆದಿದೆ. 

ಚಮನ್‌ಸಾಬ್‌ ಅರಶಿನಗುಪ್ಪಿ (60) ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದು ಶವ ಟ್ರಾನ್ಸ್‌ಫಾರ್ಮರ್‌ನಲ್ಲೇ ಸಿಲುಕಿಕೊಂಡಿತ್ತು. 

ಖಾಸಗಿಯವರ ಬಳಿ ಮತ್ತು ಬ್ಯಾಂಕ್‌ ಬಳಿ 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಬೆಳೆಯೂ ನೀರಿಲ್ಲದೆ ಸೊರಗಿ ಹೋಗಿತ್ತು. ತೀವ್ರವಾಗಿ ನೊಂದು ಖಠಿಣ ನಿರ್ಧಾರ ತಳೆದಿದ್ದಾರೆ ಎಂದು ಹೇಳಲಾಗಿದೆ. 

ಹೆಸ್ಕಾಂ ಅಧಿಕಾರಿಗಳು  ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂದು ಹೆಚ್ಚು ಓದಿದ್ದು

ಷಷ್ಠಿ ಮಹೋತ್ಸವದ ಅಂಗವಾಗಿ ನೂತನ ಸಭಾ ವೇದಿಕೆಯನ್ನು ಉದ್ಘಾಟಿಸಲಾಯಿತು.

Nov 24, 2017 02:36pm
Back to Top