CONNECT WITH US  

ಲಾರಿಗೆ ಕಾರ್‌ ಡಿಕ್ಕಿ: ಚಾಲಕ ದುರ್ಮರಣ; ದಾಬೋಲಿ ಶ್ರೀ ಪಾರು 

ರಾಣಿಬೆನ್ನೂರ: ಲಾರಿಗೆ ಹಿಂದಿನಿಂದ ಕಾರ್‌ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕಮದೋಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಸುಕಿನ ವೇಳೆ ಸಂಭವಿಸಿದೆ. ಕಾರಿನಲ್ಲಿದ್ದ ಮಹಾರಾಷ್ಟ್ರದ ದಾಬೋಲಿಯ ಶ್ರೀಸಂಸ್ಥಾನಮಠದ ದತ್ತಾನಂದ ಸರಸ್ವತಿ ಸ್ವಾಮೀಜಿ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ. 

ಮೃತ ದುರ್ದೈವಿ ಚಾಲಕ ಪುಣೆಯ ಶೈಲೇಂದ್ರ ಶ್ಯಾಮ ಶಿರೋಡ್ಕರ್‌ (40) ಎಂದು ಗುರುತಿಸಲಾಗಿದೆ. 

ಮಹರಾಷ್ಟ್ರದ ಕುಡಾಲದ ವೆಂಗುರ್ಲದ ಮಠದಿಂದ ದತ್ತಾನಂದ ಸ್ವಾಮೀಜಿಗಳು, ಶೃಂಗೇರಿ ಮಠಕ್ಕೆ ತೆರಳುತ್ತಿದ್ದರು. ಶ್ರೀಗಳು ರಾಣಿಬೆನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್‌ ಆಗಿದ್ದಾರೆ. 

ಎದುರುಗಡೆ ಚಲಿಸುತ್ತಿದ್ದ ಲಾರಿಯು ಏಕಾಏಕಿ ವೇಗ ಕಡಿತಗೋಳಿಸಿದ ಕಾರಣ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. 

 ಹಲಗೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Trending videos

Back to Top