ಕಳಪೆ ಬಿತ್ತನೆ ಬೀಜದಿಂದ ಬೆಳೆ ನಾಶ
Team Udayavani, Sep 1, 2018, 4:31 PM IST
ಹಾವೇರಿ: ಕಳಪೆ ಬಿತ್ತನೆ ಬೀಜದಿಂದಾಗಿ ಗೋವಿನಜೋಳ ಸಂಪೂರ್ಣ ಹಾಳಾಗಿದ್ದು, ತೆನೆ ಕಟ್ಟಿದರೂ ಕಾಳು ಆಗದೇ ಬೇರು ಕೊಳೆತು ಬೆಳೆ ಒಣಗುತ್ತಿದೆ ಎಂದು ತಾಲೂಕಿನ ಕನಕಾಪುರ ಗ್ರಾಮದ ರೈತ ಹನುಮಂತಗೌಡ ಕೆರೆಗೌಡ ಆರೋಪಿಸಿದ್ದಾರೆ.
1.33 ಎಕರೆ ಜಮೀನಿನಲ್ಲಿ ಖಾಸಗಿ ಕಂಪನಿಯ ಗೋವಿನಜೋಳ ಬಿತ್ತನೆ ಮಾಡಿದ್ದು ಪ್ರಾರಂಭದಲ್ಲಿ ಚೆನ್ನಾಗಿ ಬೆಳೆದ ಫಸಲು, ಚಿಕ್ಕಚಿಕ್ಕ ತೆನೆ ಕಟ್ಟಿತ್ತು. ನಂತರ ದಿನಗಳಲ್ಲಿ ಬೆಳೆಯ ಬೇರು ಕೊಳೆತು ಸಂಪೂರ್ಣ ಒಣಗಿ ಹೋಗುತ್ತಿದೆ. ಮೆಕ್ಕೆಜೋಳ ಬೆಳೆಗೆ ಗೊಬ್ಬರ, ಕ್ರಿಮಿನಾಷಕ ಔಷ ಧಿಗಾಗಿ ಸುಮಾರು 20-30 ಸಾವಿರ ರೂ., ಖರ್ಚು ಮಾಡಿದ್ದೇನೆ. ಆದರೆ, ಈಗ ಬೆಳೆ ಒಣಗುತ್ತಿದ್ದು ನಷ್ಟ ಅನುಭವಿಸುವಂತಾಗಿದ್ದು ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಸಲ್ಲಿಕೆ ವೇಳೆ ಉತ್ತರ ಕರ್ನಾಟಕ ರೈತ ಸಂಘದ ತಾಲೂಕಾಧ್ಯಕ್ಷ ಫಕ್ಕಿರಗೌಡ ಗಾಜೀಗೌಡ್ರ ಮಾತನಾಡಿ, ವಿವಿಧ ಕಂಪನಿಗಳು ರೈತರಿಗೆ ಬಿತ್ತನೆ ಬೀಜ ವಿತರಿಸುವ ಸಂದರ್ಭದಲ್ಲಿ ಗುಣಮಟ್ಟದ ಬೀಜ ವಿತರಿಸಲು ಸೂಚಿಸುವಂತೆ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದರಿಂದ ರೈತ ಹನಮಂತಪ್ಪ ಕಳಪೆ ಬೀಜದಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಕೃಷಿ ಅಧಿಕಾರಿಗಳು ಕೂಡಲೇ ರೈತ ಹನಮಂತಪ್ಪ ಅವರ ಜಮೀನಿಗೆ ಭೇಟಿ ನೀಡಿ, ಬೆಳೆ ಹಾಳಾಗಲು ಏನು ಕಾರಣ ಎಂಬುದನ್ನು ಪರಿಶೀಲಿಸಿ ಅವರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಫಕ್ಕಿರೇಶ ಕಾಳಿ, ಗ್ರಾಪಂ ಸದಸ್ಯರಾದ ಗಿರಿಜಾ ಕರೆಗೌಡ್ರ, ಬಸವಗೌಡ ಕರೆಗೌಡ್ರ, ಉಮೇಶ ಕರೆಪ್ಪನವರ, ಭರಮಗೌಡ್ರ ಕರೆಗೌಡ್ರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು