ಸ್ಮಾರಕವಾಗುವಂತೆ ಬದುಕು ಸಾಗಿಸಿ


Team Udayavani, Sep 3, 2018, 4:43 PM IST

3-september-21.jpg

ಹಾನಗಲ್ಲ: ದೇಶಕ್ಕೆ ಮಾರಕವಾಗಿ ಬದುಕುವ ಬದಲು ಸ್ಮಾರಕವಾಗುವಂತೆ ಬದುಕುವುದೇ ಜೀವನ. ಅಂತಹ ಜೀವನ ಎಲ್ಲರ ಪ್ರೀತಿಗೆ ಪಾತ್ರವಾಗುತ್ತದೆ ಎಂದು ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಕರೆ ನೀಡಿದರು.

ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜನಸ್ನೇಹಿ ಸಂಘ ಹುತಾತ್ಮ ಯೋಧರ
ಕುಟುಂಬಕ್ಕೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ, ಜಿಲ್ಲೆಯ ಮುಗಳಿ ಗ್ರಾಮದ ಹುತಾತ್ಮ ವೀರಯೋಧ ಚಂದ್ರಶೇಖರ
ಡವಗಿ ಅವರ ಕುಟುಂಬಕ್ಕೆ ಸೈನಿಕ ನಿಧಿ ಅರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೈನಿಕರನ್ನು ಅವಮಾನಿಸುವವರು ನೂರು ಬಾರಿ ಯೋಚಿಸಬೇಕು. ಸೈನಿಕರನ್ನು ಗೌರಿವಿಸುವ ದೇಶ ಮಾತ್ರ ಸುಭದ್ರವಾಗಿ ನೆಮ್ಮದಿಯಾಗಿ ಇರಬಲ್ಲದು. ದಯೆ ಧರ್ಮಕ್ಕೆ ಹೆಸರಾದ ಭಾರತ, ಸಂತ ಮಹಂತರ ನಾಡು. ಇಂಥ ನಾಡಿನಲ್ಲಿ ಮಾರಕವಾಗಿ ಬದುಕುವ ಬದಲು, ಸ್ಮಾರಕವಾಗುವಂತೆ ಬದುಕುವಂತೆ ಮನವಿ ಮಾಡಿದರು.

ಹೋತನಹಳ್ಳಿಯ ಸದ್ಗುರು ಶಂಕರಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ದೇಶದ ಹಿತಕ್ಕೆ ಮಠ ಮಂದಿರಗಳು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು. ಧೈರ್ಯ, ತ್ಯಾಗದ ಮೂಲಕ ನಮ್ಮನ್ನು ಕಾಯುತ್ತಿರುವ ಸೈನಿಕರು ನಮಗೆ ಪ್ರೇರಣೆಯಾಗಿದ್ದಾರೆ. ಇಂಥ ದೇಶಕಟ್ಟುವ ಕಾರ್ಯಕ್ಕೆ ಮಠ ಮಂದಿರಗಳು ಬಹುಮುಖ್ಯವಾಗಿ ಪ್ರೇರಣೆಯಾಗಿ ಜಾಗೃತಿ ಮೂಡಿಸಬೇಕು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ| ಮಾರುತಿ ಶಿಡ್ಲಾಪೂರ, ಈ ದೇಶದ ರೈತ ಹಾಗೂ ಸçನಿಕರನ್ನು ಗೌರವಿಸದವರು ಭಾರತೀಯರೇ ಅಲ್ಲ. ಕೃತಜ್ಞತೆಯಿಂದ ಬದುಕುವುದನ್ನು ಕಲಿಸಬೇಕಾಗಿದೆ. ದೇಶದ ಗಡಿಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡು ಬದುಕುವ ಸೈನಿಕರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು. 

ಅಕ್ಕಿಆಲೂರಿನ ಜಿಡಿಜಿ ಗುರುಕುಲದ ನಾಗರಾಜ ಪಾವಲಿ ಮಾತನಾಡಿ, ಯುವಕರ ದಾರಿ ಈಗ ಆತ್ಮಾವಲೋಕನಕ್ಕೆ ಒಳಗಾಗಬೇಕಾಗಿದೆ. ಸಮಾಜಮುಖಿ ಜೀವನ ನಮ್ಮದಾಗಬೇಕು. ಈಗ ದೇಶಭಕ್ತಿಯ ಕೊರತೆ ಎಲ್ಲೆಡೆ ಕಾಣುತ್ತಿರುವುದು ವಿಷಾದದ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಹುತಾತ್ಮ ವೀರಯೋಧ ಚಂದ್ರಶೇಖರಡವಗಿ ಅವರ ಪತ್ನಿ ಶೀಲಾ ಅವರಿಗೆ ಸ್ವಾಮಿ ವಿವೇಕಾನಂದ ಜನಸ್ನೇಹಿ ಸಂಘ ಸಂಗ್ರಹಿಸಿದ ನಿಧಿಯನ್ನು ಸಮರ್ಪಿಸಲಾಯಿತು. ಕಿರಣ ಹೂಗಾರ, ಅಶೋಕ ಕೊಂಡ್ಲಿ ಉಪನ್ಯಾಸಕರಾಗಿ ಪಾಲ್ಗೊಂಡಿದ್ದರು. ಸ್ವಾಮಿ ವಿವೇಕಾನಂದ ಜನಸ್ನೇಹಿ ಸಂಘದ ಅಧ್ಯಕ್ಷ ಈರಪ್ಪ ದುಂಡಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಮುಗಳಿ ಗ್ರಾಮದ ಹುತಾತ್ಮ ವೀರಯೋಧ ಚಂದ್ರಶೇಖರ ಡವಗಿ ಅವರ ಪತ್ನಿ ಶಿಲ್ಪಾ, ಗ್ರಾಪಂ ಅಧ್ಯಕ್ಷ ಪ್ರಕಾಶ ದುಂಡಣ್ಣನವರ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂದ್ರಶೇಖರ ಶಿಸನಳ್ಳಿ, ಕಾರ್ಯದರ್ಶಿ ಟಿ.ಎಸ್‌.ಪಾಟೀಲ, ಮಾಜಿ ಸೈನಿಕರಾದ ಪಿ.ಎಲ್‌. ರಣದೇವಿ, ಜೆ.ಬಿ.ಪೊಲೀಸಗೌಡರ, ವೀರಭದ್ರಗೌಡ ಪಾಟೀಲ, ಕೃಷ್ಣಪ್ಪ ಕರಭೀಮಣ್ಣನವರ, ರೋಶನಿ ಸಮಾಜಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್‌ ಡಿಂಪಲ್‌ ಡಿಸೋಜಾ, ಪ್ರಾಚಾರ್ಯರಾದ ಎಂ.ಎಂ.ಕಡ್ಡಿಪುಡಿ, ಮಹಮ್ಮದ್‌ಶರೀಫ್‌ ಹಾನಗಲ್ಲ ಅತಿಥಿಗಳಾಗಿದ್ದರು.

ದೇಶಕ್ಕಾಗಿ ಪ್ರಾಣ ನೀಡಿದ ನನ್ನ ಪತಿ ಚಂದ್ರಶೇಖರ ಡವಗಿ ಅವರ ಬಗ್ಗೆ ಈ ದೇಶದ ಜನ ತೋರುತ್ತಿರುವ ಅಭಿಮಾನಕ್ಕೆ ನಾನು ಚಿರಋಣಿ. ಬಾಳಂಬೀಡದ ದೇಶ ಭಕ್ತರು ನನಗೆ ತವರಿನ ಪ್ರೀತಿ ತೋರಿಸಿದ್ದಾರೆ. ದೇಶಕ್ಕಾಗಿ ನನ್ನ ಪತಿ ಪ್ರಾಣಾರ್ಪಣೆ ಮಾಡಿರುವುದು ಹಾಗೂ ದೇಶ ಭಕ್ತರು ನನಗೆ ತೋರುತ್ತಿರುವ ಗೌರವದ ಮುಂದೆ ನಾನು ಜನರ ಅಭಿಮಾನವನ್ನು ಮನಸಾರೆ ಒಪ್ಪಿಕೊಂಡಿದ್ದೇನೆ.
 ಶೀಲಾ ಡವಗಿ,
 ಹುತಾತ್ಮ ಚಂದ್ರಶೇಖರ ಪತ್ನಿ

ಟಾಪ್ ನ್ಯೂಸ್

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ

Lok Sabha Election; ಸ್ಟಾರ್‌ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ

ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ

ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ

ಬೃಹತ್‌ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು

ಬೃಹತ್‌ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು

Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

Lok Sabha Elections; ಹಾವೇರಿ ಕಾಂಗ್ರೆಸ್‌ನಲ್ಲೂ ಭುಗಿಲೆದ್ದ ಆಕ್ರೋಶ

Lok Sabha Elections; ಹಾವೇರಿ ಕಾಂಗ್ರೆಸ್‌ನಲ್ಲೂ ಭುಗಿಲೆದ್ದ ಆಕ್ರೋಶ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.