CONNECT WITH US  

ಗ್ಲುಟೇನ್  ಒಗ್ಗದಿರುವಿಕೆ: ಕರುಳಿನ ಕಾಯಿಲೆ

ಪಾಸ್ತಾ, ಇಡೀ ಗೋಧಿಯ ಬ್ರೆಡ್‌ ಮತ್ತು ಇಡೀ ಗೋಧಿಯ ಉತ್ಪನ್ನಗಳಂತಹ ಆಹಾರ ಪದಾರ್ಥಗಳು ಕೆಲವು ಜನರಿಗೆ ಸಂಕೀರ್ಣ ಕಾಬೋìಹೈಡ್ರೇಟ್‌, ಪೋಷಕಾಂಶಗಳು ಮತ್ತು ನಾರಿನ ಅಂಶಗಳ ಅತ್ಯುತ್ತಮ ಮೂಲಗಳು ಎನಿಸಿದರೆ; ಇನ್ನು ಕೆಲವು ಜನರಿಗೆ ಅಂದರೆ ಗ್ಲುಟೇನ್ ಅಂಶವು ಒಗ್ಗದಿರುವ ಜನರಿಗೆ ಇವು ಅತ್ಯಂತ ಕೆಟ್ಟ ಆಹಾರಗಳು ಎನಿಸಿಕೊಳ್ಳಬಹುದು. 

ಗ್ಲುಟೇನ್  ಒಗ್ಗದಿರುವಿಕೆಯ ಒಂದು ಅಸಹಜ ಸ್ಥಿತಿಯನ್ನು ಸೆಲಿಯಾಕ್‌ ಡಿಸೀಸ್‌ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ. ಅಂದರೆ ಇದು ಒಂದು ರೀತಿಯ ಕರುಳಿನ ಕಾಯಿಲೆ, ಗ್ಲುಟೇನ್ ಒಗ್ಗದಿರುವಿಕೆಯ ತೊಂದರೆ ಇರುವ ಜನರಿಗೆ ಗೋಧಿ, ರಾಗಿ, ಬಾರ್ಲಿ ಮತ್ತು ಓಟ್ಸ್‌ನಲ್ಲಿ ಇರುವ ಗ್ಲುಟೇನ್  ಅಂಶವನ್ನು ಜೀರ್ಣಿಸಿಕೊಳ್ಳಲು ಅಥವಾ ಒಗ್ಗಿಸಿಕೊಳ್ಳಲು ಕಷ್ಟವಾಗುತ್ತದೆ. 

ಈ ತೊಂದರೆ ಇರುವ ಜನರು ಗ್ಲುಟೇನ್ ಯುಕ್ತ ಆಹಾರವನ್ನು ಸೇವಿಸಿದಾಗ ಅವರ ಸಣ್ಣ ಕರುಳಿನ ಒಳಗೋಡೆಗೆ ಹಾನಿಯಾಗುತ್ತದೆ. ಇದರ ಪರಿಣಾಮವಾಗಿ, ಅಂದರೆ ಸಣ್ಣ ಕರುಳಿಗೆ ಹಾನಿ ಆಗಿರುವ ಕಾರಣ, ಕಾಬೋìಹೈಡ್ರೇಟ್‌, ಪ್ರೊಟೀನ್‌, ಕೊಬ್ಬು ಮತ್ತು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳನ್ನು ಹೀರಿಕೊಳ್ಳಲು ಕರುಳಿಗೆ ಸಾಧ್ಯ ಆಗುವುದಿಲ್ಲ ಮತ್ತು ಈ ಕಾರಣದಿಂದ ವ್ಯಕ್ತಿಯಲ್ಲಿ  ಪೋಷಕಾಂಶಗಳ ಕೊರತೆ ಕಾಣಿಸಿಕೊಳ್ಳುತ್ತದೆ.
 
ಗ್ಲುಟೇನ್  ಒಗ್ಗದಿರುವಿಕೆಯಿಂದ ಕಾಣಿಸಿಕೊಳ್ಳ ಬಹುದಾದ ಅಪಾಯಕಾರಿ ಅಂಶಗಳು ಅಂದರೆ, ಆಸ್ಟಿಯೋಪೊರೋಸಿಸ್‌, ದೊಡ್ಡ ಕರುಳಿನ ಕ್ಯಾನ್ಸರ್‌, ಟೈಪ್‌-1 ಡಯಾಬೆಟೆಸ್‌ ಮೆಲ್ಲಿಟಸ್‌, ಹೈಪೋಥೈರಾಯಿಡಿಸಂ, ಸಂಧಿವಾತ, ಗರ್ಭಪಾತ, ಜನ್ಮಜಾತ ವೈಕಲ್ಯ ಇತ್ಯಾದಿಗಳು. ವಿವಿಧ ರೀತಿಯ ರೋಗಲಕ್ಷಣಗಳಾದ ನಿಶ್ಶಕ್ತಿ, ಹಸಿಲ್ಲದಿರುವಿಕೆ, ಬೇಧಿ, ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳುವುದು, ದದ್ದುಗಳು, ಸಂಧಿನೋವು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಮಹಿಳೆಯರಲ್ಲಿ ಈ ರೋಗಸ್ಥಿತಿಯನ್ನು ಸರಿಯಾಗಿ ನಿರ್ವಹಿಸದೆ ಹೋದರೆ, ಬಹಳ ಅಪಾಯಕಾರಿಯಾಗಿ ಪರಿಣಮಿಸಬಹುದು. ಗ್ಲುಟೇನ್ ಒಗ್ಗದಿರುವಿಕೆಯು ಮಕ್ಕಳ ನಡವಳಿಕೆ, ಬೆಳವಣಿಗೆ ಮತ್ತು ಕಲಿಕೆಯ ಮೇಲೆಯೂ  ಪರಿಣಾಮವನ್ನು ಬೀರಬಹುದು. 

ಯಾವ ವಯಸ್ಸಿನಲ್ಲಿಯಾದರೂ ಗ್ಲುಟೇನ್  ಒಗ್ಗದಿರುವಿಕೆ ಕಾಣಿಸಿಕೊಳ್ಳಬಹುದು. ನವಜಾತ ಶಿಶುಗಳಲ್ಲಿ ಶಿಶು ಆಹಾರಗಳಿಗೆ ಒಗ್ಗದಿರುವ ರೂಪದಲ್ಲಿ ಅದು ಕಾಣಿಸಿಕೊಳ್ಳಬಹುದು. ಗ್ಲುಟೇನ್ ಒಗ್ಗದಿರುಕೆಯ ಜೊತೆಗೆ ಲ್ಯಾಕ್ಟೋಸ್‌ ಒಗ್ಗದಿರುವಿಕೆಯೂ ಸಹ ಕಾಣಿಸಿಕೊಳ್ಳಬಹುದು. ಮತ್ತು ಇದು ಸರಿಹೋಗಲು ಕೆಲವು ತಿಂಗಳು ಅಥವಾ ವರ್ಷಗಳೆ ಹಿಡಿಯಬಹುದು ಈ ಕಾರಣದಿಂದಾಗಿ ಮಗುವಿನ ಬೆಳವಣಿಗೆ ಕುಂಠಿತ ಗೊಳ್ಳಬಹುದು. ಇದು ಜೀವನಪರ್ಯಂತ ಕಾಡುವ ಸಮಸ್ಯೆ ಆಗಿರುವ ಕಾರಣ - ಗ್ಲುಟೇನ್  ಮುಕ್ತ ಆಹಾರಕ್ರಮವವನ್ನು ಅನುಸರಿಸುವುದು ಆವಶ್ಯಕ. ಆಹಾರದಲ್ಲಿ ಗ್ಲುಟೇನ್  ಅನ್ನು ಸೇವಿಸದೇ ಹೋದರೆ ಸಣ್ಣ ಕರುಳು ತನ್ನಷ್ಟಕ್ಕೆ ತಾನೇ ಸರಿ ಹೋಗುತ್ತದೆ. ಪೋಷಕಾಂಶಗಳ ಹೀರುವಿಕೆಯೂ ಉತ್ತಮಗೊಳ್ಳುತ್ತದೆ ಮತ್ತು ರೋಗಲಕ್ಷಣಗಳು ಮರೆಯಾಗುತ್ತವೆ. 

ಸರಿಯಾದ ಆಹಾರವನ್ನು 
ಆರಿಸಿಕೊಳ್ಳಲು ಕೆಲವು ಸಲಹೆಗಳು
ನಿಮಗೆ ಯಾವ ಆಹಾರ ಸಿಗುತ್ತದೆಯೋ ಆ ಆಹಾರವನ್ನು ಆನಂದಿಸಿ, ಅಕ್ಕಿ ಮತ್ತು ಜೋಳವನ್ನು ಸೇವಿಸಿ. ಒಂದು ಟಿ ಚಮಚ ಗೋಧಿ ಹಿಟ್ಟು ಒಂದೂವರೆ ಚಮಚ ಜೋಳದ ಪಿಷ್ಟಕ್ಕೆ ಅಥವಾ ಅರಾರೂಟ್‌ಗೆ ಅಥವಾ ಅಕ್ಕಿಯ ಪಿಷ್ಟಕ್ಕೆ ಅಥವಾ ಬಟಾಟೆಯ ಪಿಷ್ಟಕ್ಕೆ ಅಥವಾ ಎರಡು ಟೀ ಚಮಚ ಟ್ಯಾಪಿಯೋಕಾ ಅಥವಾ ಬೇಯಿಸಿರದ ಅಕ್ಕಿಗೆ ಸಮಾನ. ಈ ಹಿಟ್ಟುಗಳು ಗ್ಲುಟೇನ್  ಮುಕ್ತವಾಗಿರುತ್ತವೆ ಮತ್ತು ಬೇಕ್‌ ಮಾಡಿದಾಗ ಇವು ಬೇರೆ ರೀತಿಯ ಸ್ವಾದ ಕೊಡುತ್ತವೆ ಮತ್ತು ಸಂರಚನೆಯನ್ನು ಪಡೆಯುತ್ತವೆ. ಈ ಆಹಾರಗಳ ಮೂಲಕ ಅಭ್ಯಾಸ ಮತ್ತು ಪ್ರಯೋಗಗಳನ್ನು ನಡೆಸಬಹುದು. 

ಆಹಾರದ ಪೊಟ್ಟಣಗಳ ಮೇಲೆ ನಮೂದಿಸಿರುವ ಪಟ್ಟಿಯನ್ನು ಸರಿಯಾಗಿ ಓದಿ, ಅದರಲ್ಲೂ ವಿಶೇಷವಾಗಿ ನೀವು ಖರೀದಿ ಸುತ್ತಿರುವುದು ಬೇಕರಿ ಆಹಾರ, ಫೊÅàಝನ್‌ ಅಥವಾ ಕ್ಯಾನ್‌ ಆಹಾರ ಆಗಿದ್ದರೆ ಪಟ್ಟಿಯನ್ನು ಗಮನಿಸುವ ಕ್ರಮವನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಿ. ಈ ಆಹಾರಗಳಲ್ಲಿ ಹೆಚ್ಚಿನವುಗಳಲ್ಲಿ ಗ್ಲುಟೇನ್  ಇರುತ್ತದೆ. ಮೇಲ್ನೋಟಕ್ಕೆ ಎಲ್ಲಾ ಸರಿಯಾಗಿದೆ ಎಂದು ಕಂಡು ಬಂದರೂ ಸಹ. ಈ ಗ್ಲುಟೇನ್ ಅಂಶವು ಅನೇಕ ಆಹಾರಗಳಲ್ಲಿ ಇರುತ್ತದೆ. ಕೆಲವರಿಗೆ ತೊಂದರೆ ಆಗಬಹುದು ಅಥವಾ ಕೆಲವರಿಗೆ ಯಾವ ಸಮಸ್ಯೆ ಉಂಟು ಮಾಡದೆಯೆ ಇರಬಹುದು. 

ಮುಂದಿನ  ವಾರಕ್ಕೆ  

ಅರುಣಾ ಮಲ್ಯ,
ಡಯಟೀಷಿಯನ್‌, 
ಕೆ.ಎಂ.ಸಿ. ಆಸ್ಪತ್ರೆ, ಡಾ| ಅಂಬೇಡ್ಕರ್‌ ವೃತ್ತ,  ಮಂಗಳೂರು

Trending videos

Back to Top