ರಕ್ತ ಹಾಯಿಸುವಿಕೆ: ಸಂಭಾವ್ಯ ಅಪಾಯ; ತಡೆಗಟ್ಟುವಿಕೆ


Team Udayavani, Apr 16, 2017, 2:50 PM IST

hcv.jpg

ಹಿಂದಿನ ವಾರದಿಂದ-   2. ರಕ್ತ ಘಟಕ ಚಿಕಿತ್ಸೆ: ಮರುಪೂರಣಕ್ಕೆ ಸಂಪೂರ್ಣ ರಕ್ತ ಉಪಯೋಗ ಮಾಡದೆ ಇರುವುದರಿಂದ ಹೃದಯ ಕಾರ್ಯಭಾರ ಆಧಿಕ್ಯದಂತಹ ಪ್ರತಿವರ್ತನೆಗಳನ್ನು ಕಡಿಮೆ ಮಾಡಬಹುದು. ರಕ್ತ ಘಟಕ ಚಿಕಿತ್ಸೆ ಎಂದರೆ ರೋಗಿಗೆ ಅಗತ್ಯವಿರುವ ರಕ್ತ ಘಟಕವನ್ನು ಮಾತ್ರ ಮರುಪೂರಣಗೊಳಿಸುವುದು.

3. ರಕ್ತದ ಉತ್ಪನ್ನಗಳ 
ಲ್ಯುಕೊಡಿಪ್ಲಿಶನ್‌ 

ಲ್ಯುಕೋಫಿಲೆóàಶನ್‌ ಎಂಬ ವಿಧಾನದಲ್ಲಿ ರಕ್ತ ಘಟಕಗಳಿಂದ ಬಿಳಿ ರಕ್ತ ಕಣ (ಡಬ್ಲ್ಯುಬಿಸಿ) ಗಳನ್ನು ತೆಗೆದುಹಾಕಲಾಗುತ್ತದೆ. ಬಿಳಿ ರಕ್ತ ಕಣಗಳನ್ನು ತೆಗೆದುಹಾಕುವುದರಿಂದ ಅಲೊಇಮ್ಯುನೈಸೇಶನ್‌, ಮರುಪೂರಣದಿಂದ ಪ್ರಸಾರವಾಗುವ ಸೈಟೊಮೆಗಾಲೊ ವೈರಸ್‌ (ಸಿಎಂವಿ) ಸೋಂಕು ಮತ್ತು ಜ್ವರದಂತಹ ಪ್ರತಿವರ್ತನೆಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ರಕ್ತ ಮರುಪೂರಣಗೊಳ್ಳುತ್ತಿರುವ ಸಂದರ್ಭದಲ್ಲಿ ರೋಗಿಗೆ ಆಗಾಗ ಜ್ವರ ಮರುಕಳಿಸುತ್ತಿದ್ದರೆ, ಅಂತಹ ಪ್ರತಿವರ್ತನೆಯನ್ನು ತಡೆಯಲು ಬಿಳಿ ರಕ್ತ ಕಣ ವಿರಹಿತ ರಕ್ತ ಘಟಕ ನೀಡಿಕೆಯನ್ನು ಶಿಫಾರಸು ಮಾಡಲಾಗುತ್ತದೆ. 
ರಕ್ತದಲ್ಲಿ ಎಚ್‌ಐವಿ, ಎಚ್‌ಬಿವಿ, ಎಚ್‌ಸಿವಿ ಇದೆಯೇ ಎಂಬುದನ್ನು ಪತ್ತೆ ಮಾಡಲು ದಾನಿಯ ರಕ್ತವನ್ನು ನ್ಯೂಕ್ಲಿಯಿಕ್‌ ಆ್ಯಸಿಡ್‌ ಟೆಸ್ಟ್‌ (ಎನ್‌ಎಟಿ) ಎಂಬ ಮಾಲೆಕ್ಯುಲಾರ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ಯಾಥೊಜೆನ್‌ನ ಆರ್‌ಎನ್‌ಎ ಮತ್ತು ಡಿಎನ್‌ಎಗಳನ್ನು ಪುನರುತ್ಪಾದನೆಗೆ ಒಳಪಡಿಸುವ ಮೂಲಕ ಇಮ್ಮಡಿಗೊಳಿಸಿ ಈ ಪರೀಕ್ಷೆ ತನ್ನ ಕಾರ್ಯಸಾಧನೆ ಮಾಡುತ್ತದೆ. ಎನ್‌ಎಟಿ ಪರೀಕ್ಷೆಯು ಸೋಂಕನ್ನು ಅತಿ ಶೀಘ್ರ ಸಂಭಾವ್ಯ ಸಮಯದಲ್ಲಿ ಪತ್ತೆ ಮಾಡಬಲ್ಲುದು. ಇದು ಪರೀಕ್ಷೆಯ ವಿಂಡೊ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಲ್ಲುದು. ಎನ್‌ಎಟಿ ಪರೀಕ್ಷೆ ಭಾರತದಲ್ಲಿ ಕಡ್ಡಾಯವಲ್ಲದಿದ್ದರೂ, ರಕ್ತದ ಸುರಕ್ಷೆಯನ್ನು ಹೆಚ್ಚಿಸುವ ಸಲುವಾಗಿ ಕೆಲವು ರಕ್ತನಿಧಿಗಳು ಈ ಪರೀಕ್ಷೆಯನ್ನು ಅಳವಡಿಸಿಕೊಂಡಿವೆ. 

ವ್ಯಕ್ತಿಯೊಬ್ಬ ಸೋಂಕಿಗೆ ತುತ್ತಾದ ಸಮಯ ಮತ್ತು ಆತನ ರಕ್ತದಲ್ಲಿ ಪ್ರತಿಜೀವಾಣುಗಳು ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಪತ್ತೆಯಾಗುವಷ್ಟು ಸಂಖ್ಯೆಯಲ್ಲಿ ಉತ್ಪಾದನೆಯಾಗುವ ಸಮಯಗಳ ನಡುವಣ ಅವಧಿಯನ್ನು ವಿಂಡೊ ಅವಧಿ ಎನ್ನಲಾಗುತ್ತದೆ. 

5. ಎಫ‌ರಿಸಿಸ್‌
ದಾನಿಯ ರಕ್ತದಿಂದ ಅಗತ್ಯವಾದ ಘಟಕವನ್ನು ಮಾತ್ರ ಸಂಗ್ರಹಿಸಿ, ಇನ್ನುಳಿದ ರಕ್ತ ಘಟಕಗಳನ್ನು ದಾನಿಯ ದೇಹಕ್ಕೆ ಮರಳಿಸುವ ತಂತ್ರಜ್ಞಾನಕ್ಕೆ ಎಫ‌ರಿಸಿಸ್‌ ಎನ್ನುತ್ತಾರೆ. ಎಫ‌ರಿಸಿಸ್‌ ಮೂಲಕ ಸಂಗ್ರಹಿಸಲಾದ ಪ್ಲೇಟ್‌ಲೆಟ್‌ಗಳ ಒಂದು ಯೂನಿಟ್‌ ಸಂಪೂರ್ಣ ರಕ್ತದಾನದ ಮೂಲಕ ಪಡೆದುಕೊಳ್ಳುವ ಪ್ಲೇಟ್‌ಲೆಟ್‌ಗಳ 6 ಯೂನಿಟ್‌ಗಳಿಗೆ ಸಮಾನವಾಗಿದೆ. ಇದರ ಮೂಲಕ ರೋಗಿಯು ದಾನಿಯ ರಕ್ತಕ್ಕೆ ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು ಹಾಗೂ ಅದರಿಂದ ಉಂಟಾಗುವ ಪ್ರತಿವರ್ತನೆಗಳನ್ನೂ ಕಡಿಮೆ ಮಾಡಬಹುದು. 

ರಕ್ತದ ತಪಾಸಣೆ, ರಕ್ತದ ಘಟಕಗಳನ್ನು ಉಪಯೋಗಿಸುವುದು, ಪರಿವರ್ತಿತ ರಕ್ತ ಉತ್ಪನ್ನಗಳನ್ನು ಬಳಕೆ ಮಾಡುವುದು ಮತ್ತು ಲಕ್ಷಣ ಆಧಾರಿತ ಮರುಪೂರಣ ಚಿಕಿತ್ಸೆಯನ್ನು ಅನುಸರಿಸುವ ಮೂಲಕ ರಕ್ತ ಮರುಪೂರಣವನ್ನು ಒಂದು ಸುರಕ್ಷಿತ ವೈದ್ಯಕೀಯ ಚಿಕಿತ್ಸೆಯನ್ನಾಗಿ ನಡೆಸಬಹುದಾಗಿದೆ. 

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.