ಆಸ್ತಮಾ – ಪರಿಹಾರ ಸಾಧ್ಯವೇ?


Team Udayavani, Oct 29, 2017, 6:15 AM IST

Asthma-28.jpg

ನೀವು ಸಹಜವಾಗಿರುವಾಗಲೂ ಸಹ ಈ ಔಷಧಿಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ. ಒಳಗೆಳೆದುಕೊಳ್ಳುವ ಅಥವಾ ಸೇದುವ ಸ್ಟಿರಾಯ್ಡುಗಳು ಬಹಳ ಪರಿಣಾಮಕಾರಿಯಾದ ಹಾಗೂ ದೀರ್ಘ‌ಕಾಲಿಕ ಆಸ್ತಮಾ ನಿಯಂತ್ರಕ ಔಷಧಿಗಳು. ಸಾಮಾನ್ಯವಾಗಿ ಹೆಚ್ಚು ಉಪಯೋಗಿಸುವ ನಿಯಂತ್ರಕ ಔಷಧಿಗಳು ಅಂದರೆ
– ನಿಯಂತ್ರಕ ಔಷಧಿಗಳು ಪ್ರತಿದಿನವೂ ತೆಗೆದುಕೊಳ್ಳುವ ಔಷಧಿಗಳಾಗಿರುತ್ತವೆ ಮತ್ತು ಸೇದುವಂತಹ ಕಾರ್ಟಿಕೋಸ್ಟೀರಾಯ್ಡ ಫ‌ೂಟಿಕ್ಯಾಸೋನ್‌ corticosteroidsfl uticasone),ಬ್ಯುಡೆಸಾನೈಡ್‌ budesonide, ಮೊಮೆಟಾಸೋನ್‌ (mometasone), ಸಿಕ್ಲೆಸೋನೈಡ್‌ (ciclesonide), ಫ‌ುನಿಸೋಲೈಡ್‌ (fl unisolide), ಬೆಕ್ಲಾಮೆಥಾಸೋನ್‌ (beclomethasone)ಗಳು ಇದರಲ್ಲಿ ಸೇರಿವೆ.
– ದೀರ್ಘ‌ಕಾಲ ಕಾರ್ಯವೆಸಗುವ ಸೇದುವಂತಹ ಬೀಟಾ-ಅಗೋನಿಸ್ಟ್‌ ಗಳೂ (Laba) ಸಹ ಆಸ್ತಮಾ ಲಕ್ಷಣಗಳನ್ನು ತಡೆ‌ಯಲು ಸಹಕಾರಿಯಾಗಿವೆ. ಈ ಔಷಧಿಗಳು ಲಕ್ಷಣ ನಿಯಂತ್ರಕಗಳಾಗಿದ್ದು, ನಿಮ್ಮ ಶ್ವಾಸನಾಳವನ್ನು ತೆರವುಗೊಳಿಸಲು ಇವು ಸಹಾಯ ಮಾಡುತ್ತವೆ. ಹಾಗಿದ್ದರೂ ಇವು ಕೆಲವು ಜನರಿಗೆ ಅಪಾಯಕಾರಿ ಎನಿಸಬಹುದು. ಆಸ್ತಮಾಕ್ಕೆವನ್ನು ಮಾತ್ರವೇ ಏಕೈಕ ಚಿಕಿತ್ಸೆಯಾಗಿ ಯಾವತ್ತೂ ಸೂಚಿಸಬಾರದು. ಇವನ್ನು ಯಾವಾಗಲೂ ಸೇದುವಂತಹ ಸ್ಟೀರಾಯ್ಡ ಔಷಧಿಯ ಜೊತೆಗೇ ಜಂಟಿಯಾಗಿ ತೆಗೆದುಕೊಳ್ಳಲು ಸೂಚಿಸುತ್ತಾರೆ. ಜಂಟೀ ಇನ್ಹೆàಲರ್‌ ಗಳಲ್ಲಿ ಕಾರ್ಟಿಕೋಸ್ಟೀರಾಯ್ಡ ಹಾಗೂ ದೀರ್ಘ‌ಕಾಲ ಕಾರ್ಯವೆಸಗುವ ಬೀಟಾ ಅಗೋನಿಸ್ಟ್‌ಗಳು ಜೊತೆಯಾಗಿರುತ್ತವೆ. ಈ ಜಂಟೀ ಇನ್ಹೆàಲರ್‌ ಅನ್ನು ಉಪಯೋಗಿಸುವುದು ಸುಲಭ. ಜಂಟಿ ಔಷಧಿಗಳಲ್ಲಿ, ಫ‌ೂÉ$Âಟಿಕ್ಯಾಸೋನ್‌ ಹಾಗೂ ಸಾಲ್ಮೆಟೆರಾಲ್‌, ಬ್ಯುಡೆಸಾನೈಡ್‌ ಹಾಗೂ ಫಾರ್ಮೋಟೆರಾಲ್‌, ಮೊಮೆಟಾಸೋನ್‌ ಹಾಗೂ ಫಾರ್ಮೋಟೆರಾಲ್‌ಗ‌ಳು ಸೇರಿವೆ. ಸೇದುವಂತಹ ಸ್ಟೀರಾಯ್ಡಗಳನ್ನು ದಿನನಿತ್ಯ ಉಪಯೋಗಿಸುವುದರಿಂದ ಈ ಪ್ರಯೋಜನಗಳು ದೊರೆಯಬಹುದು
– ಆಸ್ತಮಾ ಲಕ್ಷಣಗಳು ಕಡಿಮೆ ಯಾಗಬಹುದು. ಆರೋಗ್ಯವು ನಿಧಾನವಾಗಿ ಉತ್ತಮಗೊಳ್ಳುತ್ತಾ ಹೋಗಬಹುದು.
– ಆಸ್ತಮಾದ ತೀವ್ರ ಆಘಾತಗಳು ವಿಶೇಷವಾಗಿ ಕಡಿಮೆಯಾಗುವುದು. 
– ಕ್ಷಿಪ್ರ-ಉಪಶಮನಕಾರಿ ಔಷಧಿಗಳ ಬಳಕೆ ಕಡಿಮೆಯಾಗಬಹುದು.
– ಪೀಕ್‌ ಫ್ಲೋ, ಈಇಗಿ1 ಹಾಗೂ ಹೈಪರ್‌ರೆಸ್ಪಾನ್ಸಿವ್‌ನೆಸ್‌ಗಳ ಮಾಪನಗಳ ಪ್ರಮಾಣದಲ್ಲಿ ಶ್ವಾಸಕೋಶದ ಚಟುವಟಿಕೆಯು ಗಮನಾರ್ಹವಾಗಿ ಉತ್ತಮಗೊಳ್ಳಬಹುದು. ಉಪಯೋಗಿಸಬಹುದಾದಂತಹ ಇನ್ನಿತರ ನಿಯಂತ್ರಕ ಔಷಧಿಗಳು ಎಂದರೆ
– ಬಾಯಿಯ ಮೂಲಕ ತೆಗೆದುಕೊಳ್ಳುವಂತಹ ಲ್ಯುಕೋಟ್ರಿನ್‌ ಮಾಡಿಫೈಯಸYìಳಲ್ಲಿ ಮಾಂಟೆಲ್ಯುಕಾಸ್ಟ್‌ ಝಾμಲ್ಯುìಕಾಸ್ಟ್‌ ಹಾಗೂ ಝೈಲ್ಯುಟಾನ್‌ .
– ಒಮಾಲಿಝುಮ್ಯಾಬ್‌ .
– ಕ್ರೋಮೋಲಿನ್‌ ಸೋಡಿಯಂ ಅಥವಾ ನಿಡೋಕ್ರೋಮಿಲ್‌ ಸೋಡಿಯಂ.
– ಅಮಿನೋμಲ್ಲಿನ್‌ ಅಥವಾ ಥಿಯೋμಲ್ಲಿನ್‌ ಕ್ಷಿಪ್ರ ಉಪಶಮನಕಾರಿ ಔಷಧಿಗಳು ಅಥವಾ ಸಂರಕ್ಷಕ ಔಷಧಿಗಳನ್ನು, ಆಸ್ತಮಾ ಕೆರಳಿದ ತತ್‌ಕ್ಷಣ, ಉಪಶಮನ ದೊರಕಲು ತೆಗೆದುಕೊಳ್ಳಲಾಗುತ್ತದೆ. ಅವು ಶ್ವಾಸನಾಳಗಳನ್ನು ತೆರವುಗೊಳಿಸಿ, ರೋಗ-ಲಕ್ಷಣಗಳನ್ನು ಕಡಿಮೆಗೊಳಿಸುವ ಮತ್ತು ತ್ವರಿತ ಆರಾಮ ನೀಡುತ್ತವೆ. ಒಂದುವೇಳೆ ವೈದ್ಯರು ಸೂಚಿಸಿದ್ದರೆ, ವ್ಯಾಯಾಮಕ್ಕೆ ಮೊದಲೂ ಸಹ ಇವನ್ನು ತೆಗೆದುಕೊಳ್ಳಬಹುದು. ಈ ಔಷಧಿಗಳಲ್ಲಿ -ಶಾರ್ಟ್‌ ಆಕ್ಟಿಂಗ್‌ ಬೀಟಾ-ಅಗೋನಿಸ್ಟ್‌ ಗಳು ಸೇರಿವೆ. ಸೇದುವಂತಹ ಈ ಬ್ರಾಂಕೋಡೈಲೇಟರ್‌ ಔಷಧಿಗಳಲ್ಲಿ ಸಾಲ್‌ಬ್ಯುಟಾಮೋಲ್‌ ಲೆವಾಲ್‌ಬ್ಯುಟೆರಾಲ್‌  ಹಾಗೂ ಟರ್‌ ಬ್ಯುಟಾಲೈನ್‌ ಸೇರಿವೆ. ಇವು ಕ್ಷಿಪ್ರವಾಗಿ ಕಾರ್ಯವೆಸಗಿ, ಆಸ್ತಮಾ ರೋಗ-ಲಕ್ಷಣಗಳನ್ನು ಅತ್ಯಂತ ತ್ವರಿತವಾಗಿ ನಿಯಂತ್ರಿಸುತ್ತವೆ.
– ಕೆಮ್ಮು, ಉಬ್ಬಸ ಇರುವಾಗ, ಉಸಿರಾಡಲು ಕಷ್ಟವಾಗುವಾಗ ಅಥವಾ ಆಸ್ತಮಾ ಆಘಾತವಾದಾಗ ನೀವು ಈ ಔಷಧಿಗಳನ್ನು ತೆಗೆದುಕೊಳ್ಳಬಹುದು. ಇವನ್ನು ಸಂರಕ್ಷಕ ಔಷಧಿಗಳೆಂದೂ ಸಹ ಕರೆಯುತ್ತಾರೆ.
– ವ್ಯಾಯಾಮದಿಂದ ಉಂಟಾಗುವ ಆಸ್ತಮಾ ಲಕ್ಷಣಗಳನ್ನು ತಡೆಯಲು ವ್ಯಾಯಾಮಕ್ಕಿಂತ ಸ್ವಲ್ಪ$ ಮೊದಲೂ ಸಹ ಈ ಔಷಧಿಗಳನ್ನು ತೆಗೆದುಕೊಳ್ಳಬಹುದು. 
– ನಿಯಂತ್ರಕ ಔಷಧಿಗಳ ಬದಲಿಗೆ ಕ್ಷಿಪ್ರ ಉಪಶಮನಕಾರಿ ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲ. 
– ನಿಮ್ಮ ಆಸ್ತಮಾ ಲಕ್ಷಣಗಳ ನಿಯಂತ್ರಣಕ್ಕಾಗಿ ಕ್ಷಿಪ್ರ-ಉಪ ಶಮನಕಾರಿ  ಔಷಧಿಗಳನ್ನು ವಾರದಲ್ಲಿ ಎರಡು ಬಾರಿ ಅಥವಾ ಅದಕ್ಕಿಂತ ಹೆಚ್ಚು ಸಲ ತೆಗೆದುಕೊಳ್ಳುತ್ತಿದ್ದರೆ, ಆ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಿ. ನಿಮ್ಮ ಆಸ್ತಮಾವು ನಿಯಂತ್ರಣಕ್ಕೆ ಬಾರದೆಯೇ ಇದ್ದರೆ, ಆಗ ನಿಮ್ಮ ವೈದ್ಯರು ನೀವು ನಿತ್ಯವೂ ತೆಗೆದುಕೊಳ್ಳುವ ನಿಯಂತ್ರಕ ಔಷಧಿಯ ಪ್ರಮಾಣವನ್ನು ಹೆಚ್ಚಿಸಬಹುದು. ಆಸ್ತಮಾವು ವಿಶೇಷವಾಗಿ ತೀವ್ರವಾದಾಗ ಅಥವಾ ಆಸ್ತಮಾದ ರೋಗ ಲಕ್ಷಣಗಳು ತೀವ್ರವಾದಾಗ ಬಾಯಿಯ ಮೂಲಕ ಅಥವಾ ರಕ್ತವಾಹಿನಿಯ ಮೂಲಕ ಆಸ್ತಮಾಕ್ಕೆ ಔಷಧಿಯನ್ನು ಕೊಡುತ್ತಾರೆ. ಉದಾಹರಣೆಗೆ ಪ್ರಡ್ನಿಸಾನ್‌ ಹಾಗೂ ಮಿಥೈಲ್‌ ಪ್ರಡ್ನಿಸೋಲೋನ್‌ ಈ ಔಷಧಿಗಳನ್ನು ಬಹಳ ಸಮಯ ಉಪಯೋಗಿಸಿದರೆ ತೀವ್ರ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು. 

– ಮುಂದಿನ ವಾರಕ್ಕೆ

ಟಾಪ್ ನ್ಯೂಸ್

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.