ಮಧುಮೇಹ


Team Udayavani, Nov 12, 2017, 6:00 AM IST

Diabetes.jpg

ಹಿಂದಿನ ವಾರದಿಂದ – ಮಧುಮೇಹಪೂರ್ವ ಸ್ಥಿತಿ (ಪ್ರಿ ಡಯಾಬಿಟೀಸ್‌) ಎಂದರೇನು?
ರಕ್ತದಲ್ಲಿ ಗುÉಕೋಸ್‌ ಮಟ್ಟವು ಸಹಜಕ್ಕಿಂತ ಹೆಚ್ಚಿರುವ, ಆದರೆ ಮಧುಮೇಹ ಎಂದು ನಿರ್ಣಯಿಸಲಾಗದ ಸ್ಥಿತಿಯನ್ನು ಮಧುಮೇಹಪೂರ್ವ ಸ್ಥಿತಿ ಅಥವಾ ಪ್ರಿ ಡಯಾಬಿಟೀಸ್‌ ಎನ್ನುತ್ತಾರೆ. ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ತಾವು ಮಧುಮೇಹಪೂರ್ವ ಸ್ಥಿತಿಯಲ್ಲಿದ್ದೇವೆ ಎಂಬುದು ತಿಳಿಯದೆಯೇ ಬದುಕುತ್ತಿದ್ದಾರೆ. ಹೀಗಾಗಿಯೇ ಮಧುಮೇಹಪೂರ್ವ ಸ್ಥಿತಿಯನ್ನು ತಪಾಸಣೆಯ ಮೂಲಕ ಪತ್ತೆ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಎಚ್‌ಬಿಎ1ಸಿಯು 5.7% ಮತ್ತು 6.4ರ ನಡುವೆ ಇದ್ದರೆ ಅಥವಾ ಎಫ್ಪಿಜಿಯು 100ಎಂಜಿ/ಡಿಎಲ್‌ಗಿಂತ ಹೆಚ್ಚು ಇದ್ದು 126 ಎಂಜಿ/ಡಿಎಲ್‌ಗಿಂತ ಕಡಿಮೆ ಇದ್ದರೆ ಅಥವಾ ಒಜಿಟಿಟಿಯು (2 ತಾಸುಗಳ ಗುÉಕೋಸ್‌ ಪರೀಕ್ಷೆ) 140 ಮತ್ತು 199 ಎಂಜಿ/ಡಿಎಲ್‌ಗ‌ಳ ನಡುವೆ ಇದ್ದರೆ ಅಂತಹ ಸ್ಥಿತಿಯನ್ನು ಮಧುಮೇಹಪೂರ್ವ ಸ್ಥಿತಿ ಎಂದು ಕರೆಯಲಾಗುತ್ತದೆ. ಮಧುಮೇಹಪೂರ್ವ ಸ್ಥಿತಿಯಲ್ಲಿರುವ ವ್ಯಕ್ತಿಗಳು ಭವಿಷ್ಯದಲ್ಲಿ ಟೈಪ್‌ 2 ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆಗಳು ಅಧಿಕ. ಮಧುಮೇಹಪೂರ್ವ ಸ್ಥಿತಿಯನ್ನು ಹೊಂದಿರುವ ಪ್ರತೀ ಮೂವರಲ್ಲಿ ಒಬ್ಬರು ಮುಂದಿನ ಐದು ವರ್ಷಗಳಲ್ಲಿ ಮಧುಮೇಹಕ್ಕೆ ತುತ್ತಾಗುತ್ತಾರೆ; ಒಬ್ಬರು ಮಧುಮೇಹಪೂರ್ವ ಸ್ಥಿತಿಯಲ್ಲಿಯೇ ಉಳಿಯುತ್ತಾರೆ ಮತ್ತು ಇನ್ನೊಬ್ಬರು ಸಹಜ ಸ್ಥಿತಿಗೆ ಮರಳುತ್ತಾರೆ ಎಂದು ವ್ಯಾಖ್ಯಾನಿಸಲ್ಪಡುವ “”ಥರ್ಡ್ಸ್‌” ಎಂಬ ನಿಯಮವೇ ಇದೆ. ಮಧುಮೇಹಪೂರ್ವ ಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳು ಹೃದ್ರೋಗಗಳಿಗೆ ತುತ್ತಾಗುವ ಅಪಾಯ ಅತೀ ಹೆಚ್ಚು. ತೂಕವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸರಿಯಾದ ಪಥ್ಯಾಹಾರ ಕ್ರಮವನ್ನು ಅನುಸರಿಸುವುದು ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಮಧುಮೇಹಪೂರ್ವ ಸ್ಥಿತಿಯಿಂದ ಮಧುಮೇಹಿಗಳಾಗುವತ್ತ ಸಾಗುವುದನ್ನು ತಡೆಯಬಹುದು ಹಾಗೂ ಹೃದ್ರೋಗಗಳಿಗೆ ತುತ್ತಾಗುವ ಅಪಾಯವನ್ನು ತಗ್ಗಿಸಬಹುದು. ಮಧುಮೇಹ ಮತ್ತು ಮಧುಮೇಹಪೂರ್ವ ಸ್ಥಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ವಿಳಂಬಿಸದೆ ತಪಾಸಣೆ ಮಾಡಿಕೊಳ್ಳಬೇಕು; ವಿಳಂಬಿಸಿ ತೊಂದರೆಗೀಡಾಗುವುದಕ್ಕಿಂತ ಬೇಗನೆ ತಪಾಸಿಸಿಕೊಳ್ಳುವುದು ಒಳಿತು.

ಗರ್ಭಿಣಿ ಮಧುಮೇಹ ಎಂದರೇನು?
ಸ್ತ್ರೀ ಗರ್ಭ ಧರಿಸಿದ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ತಾತ್ಕಾಲಿಕ ವಿಧವಾದ ಮಧುಮೇಹವನ್ನು ಗರ್ಭಿಣಿ ಮಧುಮೇಹ ಎನ್ನಲಾಗುತ್ತದೆ. ಒಂದು ಬಾರಿ ಗರ್ಭ ಧರಿಸಿದಾಗ ಗರ್ಭಿಣಿ ಮಧುಮೇಹಕ್ಕೆ ತುತ್ತಾದ ಮಹಿಳೆಯು ಭವಿಷ್ಯದ ಗರ್ಭಧಾರಣೆಯ ಸಂದರ್ಭಗಳಲ್ಲಿ ಗರ್ಭಿಣಿ ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆಗಳು ಅಧಿಕ. ಗರ್ಭಧಾರಣೆ, ಪ್ರಸವದ ಬಳಿಕ ಗರ್ಭಿಣಿ ಮಧುಮೇಹವು ಮಾಯವಾಗುತ್ತದಾದರೂ, ಭವಿಷ್ಯದಲ್ಲಿ ಟೈಪ್‌ 2 ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ಅದು ಹೆಚ್ಚಿಸುತ್ತದೆ. ಆದ್ದರಿಂದ, ಗರ್ಭಿಣಿ ಮಧುಮೇಹಕ್ಕೆ ತುತ್ತಾಗಿರುವ ಮಹಿಳೆಯರು ಆಗಾಗ ಮತ್ತು ನಿಯಮಿತವಾಗಿ ಟೈಪ್‌ 2 ಮಧುಮೇಹ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಅಗತ್ಯ.
 
ಗರ್ಭಧರಿಸಿದ ಅವಧಿಯಲ್ಲಿ ರಕ್ತದ ಗುÉಕೋಸ್‌ ಮಟ್ಟವು ಹೆಚ್ಚಿ ಗರ್ಭಿಣಿ ಮಧುಮೇಹ ಉಂಟಾಗುತ್ತದೆ. ಗರ್ಭಾವಸ್ಥೆ ಮುಂದುವರಿಯುತ್ತಿದ್ದಂತೆ ಬೆಳೆಯುತ್ತಿರುವ ಮಗುವಿಗೆ ಗುÉಕೋಸ್‌ ಅಗತ್ಯ ಹೆಚ್ಚುತ್ತದೆ. ಗರ್ಭ ಧರಿಸಿದ ಸಮಯದಲ್ಲಿ ಹಾರ್ಮೋನ್‌ ಬದಲಾವಣೆಗಳು ಕೂಡ ಇನ್ಸುಲಿನ್‌ನ ಕೆಲಸದ ಮೇಲೆ ಪ್ರಭಾವ ಬೀರುತ್ತವೆ, ಇದರಿಂದಾಗಿ ರಕ್ತದಲ್ಲಿ ಗುÉಕೋಸ್‌ ಮಟ್ಟವು ಏರುತ್ತದೆ. 

ಗರ್ಭಿಣಿ ಮಧುಮೇಹಕ್ಕೆ ತುತ್ತಾಗುವ ಅಪಾಯ ಯಾರಿಗೆ ಅಧಿಕ?
ಯಾವಳೇ ಮಹಿಳೆ ಗರ್ಭಿಣಿ ಮಧುಮೇಹವನ್ನು ಬೆಳೆಯಿಸಿಕೊಳ್ಳಬಹುದು; ಆದರೆ ಕೆಲವು ಮಹಿಳೆಯರಿಗೆ ಇದರ ಅಪಾಯ ಹೆಚ್ಚಿರುತ್ತದೆ. ಗರ್ಭಿಣಿ ಮಧುಮೇಹವನ್ನು ಬೆಳೆಯಿಸಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುವ ಕಾರಣಗಳು ಅನೇಕ ಇವೆ. ಇವುಗಳಲ್ಲಿ; 25 ವರ್ಷ ವಯಸ್ಸಿಗಿಂತ ಹೆಚ್ಚು ವಯಸ್ಸಿನವರಾಗಿರುವುದು, ಗರ್ಭಧಾರಣೆಗೆ ಮುನ್ನ ಅಧಿಕ ದೇಹತೂಕ ಹೊಂದಿರುವುದು, ಮಧುಮೇಹದ ಕೌಟುಂಬಿಕ ಇತಿಹಾಸ ಹೊಂದಿರುವವರು, ರಕ್ತದಲ್ಲಿ ಗುÉಕೋಸ್‌ ಮಟ್ಟ ಹೆಚ್ಚಿರುವ ಇತಿಹಾಸ ಹೊಂದಿರುವವರು, ಪದೇಪದೇ ಗರ್ಭಪಾತಕ್ಕೆ ತುತ್ತಾದವರು ಅಥವಾ ಮೃತ ಶಿಶುಜನನ ಹೊಂದಿದವರು ಅಥವಾ ದೊಡ್ಡ ಗಾತ್ರದ ಮಗುವನ್ನು ಈ ಹಿಂದೆ ಹೆತ್ತವರು ಯಾ ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌ ಹೊಂದಿರುವವರು. ಬೇಕಾಬಿಟ್ಟಿ ಜೀವನಶೈಲಿ, ಅಧಿಕ ರಕ್ತದೊತ್ತಡ ಮತ್ತು ಇತರ ಹೃದ್ರೋಗಗಳು ಕೂಡ ಗರ್ಭಿಣಿ ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ವೃದ್ಧಿಸುತ್ತವೆ. ಹೀಗಾಗಿ, ಎಲ್ಲ ಗರ್ಭಿಣಿ ಮಹಿಳೆಯರನ್ನು ಮಧುಮೇಹ ತಪಾಸಣೆಗೆ ಒಳಪಡಿಸುವುದು ಒಂದು ಸ್ವೀಕೃತ ವೈದ್ಯಕೀಯ ರೂಢಿಯಾಗಿದೆ. 

ಟೈಪ್‌ 2 ಮಧುಮೇಹಕ್ಕೆ ತುತ್ತಾಗುವ ಅಪಾಯ ಯಾರಿಗೆ ಹೆಚ್ಚು?
ಕೆಲವು ಅಂಶಗಳು ಟೈಪ್‌ 2 ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತವೆ, ಅವು ಕೆಳಕಂಡಂತಿವೆ: 
– ಕೌಟುಂಬಿಕ ಇತಿಹಾಸ: ಹೆತ್ತವರಲ್ಲಿ ಒಬ್ಬರು ಅಥವಾ ಸಹೋದರ – ಸಹೋದರಿಯರಲ್ಲಿ ಯಾರಿಗಾದರೂ ಟೈಪ್‌ 2 ಮಧುಮೇಹ ಇದ್ದರೆ, ಮಧುಮೇಹಕ್ಕೆ ತುತ್ತಾಗುವ ಅಪಾಯ ಹೆಚ್ಚು. 
– ವಯಸ್ಸು: ವಯಸ್ಸು ಹೆಚ್ಚಿದಂತೆ ಟೈಪ್‌ 2 ಮಧುಮೇಹಕ್ಕೆ ತುತ್ತಾಗುವ ಅಪಾಯವೂ ವೃದ್ಧಿಸುತ್ತದೆ; ಅದರಲ್ಲೂ 40 ವರ್ಷ ವಯಸ್ಸಿನ ಬಳಿಕ ಈ ಅಪಾಯ ಇನ್ನಷ್ಟು ಹೆಚ್ಚು. ಇದು ಕಡಿಮೆ ವ್ಯಾಯಾಮ, ಸ್ನಾಯು ಮೊತ್ತ ನಷ್ಟವಾಗುವುದು ಮತ್ತು ವಯಸ್ಸು ಹೆಚ್ಚಿದಂತೆ ತೂಕ ವೃದ್ಧಿಸುವುದರ ಜತೆಗೆ ಸಂಬಂಧ ಹೊಂದಿರಬಹುದು. ವಯಸ್ಸಿನ ಜತೆಗೆ ಟೈಪ್‌ 2 ಮಧುಮೇಹ ಹೊಂದಿರುವ, ಈಗಾಗಲೇ ತಿಳಿದಿರುವ ಸಂಬಂಧದ ಜತೆಗೆ ಇತ್ತೀಚೆಗಿನ ವರ್ಷಗಳಲ್ಲಿ ಮಕ್ಕಳು, ಹದಿಹರಯದವರು ಮತ್ತು ಯುವಕರಲ್ಲಿಯೂ ಟೈಪ್‌ 2 ಮಧುಮೇಹ ಕಾಣಿಸಿಕೊಳ್ಳುತ್ತಿರುವ ಪ್ರಮಾಣ ನಾಟಕೀಯವಾಗಿ ಹೆಚ್ಚುತ್ತಿದೆ. 
– ಜನಾಂಗ: ಕೆಲವು ಜನಾಂಗೀಯ ಹಿನ್ನೆಲೆಯ ಜನರಲ್ಲಿ ಮಧುಮೇಹಕ್ಕೆ ತುತ್ತಾಗುವ ಅಪಾಯ ಹೆಚ್ಚು ಕಂಡುಬರುತ್ತದಾದರೂ ಇದಕ್ಕೆ ನಿರ್ದಿಷ್ಟವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ. 
– ಅಧಿಕ ದೇಹತೂಕ/ಬೊಜ್ಜು: ಅಧಿಕ ದೇಹತೂಕ ಹೊಂದಿರುವುದು ಟೈಪ್‌ 2 ಮಧುಮೇಹ ಉಂಟಾಗುವ ಪ್ರಾಥಮಿಕ ಅಪಾಯಾಂಶಗಳಲ್ಲಿ ಒಂದು. ಕೊಬ್ಬು ಸಹಿತ ಜೀವಕೋಶಗಳು ಹೆಚ್ಚು ಇದ್ದಷ್ಟೂ ಜೀವಕೋಶಗಳು ಇನ್ಸುಲಿನ್‌ ಪ್ರತಿರೋಧಕತೆಯನ್ನು ಬೆಳೆಸಿಕೊಳ್ಳುವುದು ಅಧಿಕ. ಇದರರ್ಥ, ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿರುವವರು ಮಾತ್ರ ಟೈಪ್‌ 2 ಮಧುಮೇಹಕ್ಕೆ ತುತ್ತಾಗುತ್ತಾರೆ ಎಂದಲ್ಲ. 
– ದೈಹಿಕ ಚಟುವಟಿಕೆಯ ಕೊರತೆ: ದೈಹಿಕ ಚಟುವಟಿಕೆಗಳು ಕಡಿಮೆಯಾದಷ್ಟು ಟೈಪ್‌ 2 ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚುತ್ತವೆ. ದೈಹಿಕ ಚಟುವಟಿಕೆಗಳು ತೂಕವನ್ನು ನಿಯಂತ್ರಿಸಿಕೊಳ್ಳಲು, ಗುÉಕೋಸನ್ನು ಶಕ್ತಿಯಾಗಿ ಉಪಯೋಗಿಸಿಕೊಳ್ಳಲು ಮತ್ತು ಇನ್ಸುಲಿನ್‌ಗೆ ಜೀವಕೋಶಗಳ ಪ್ರತಿಸ್ಪಂದನೆಯನ್ನು ವೃದ್ಧಿಸಲು ನೆರವಾಗುತ್ತವೆ. 
– ಅನಾರೋಗ್ಯಕರ ಆಹಾರ: ಕ್ಯಾಲೊರಿ, ಸ್ಯಾಚುರೇಟೆಡ್‌ ಕೊಬ್ಬುಗಳು ಮತ್ತು ಸಕ್ಕರೆ ಸಮೃದ್ಧವಾಗಿರುವ; ನಾರಿನಂಶ ಕಡಿಮೆ ಇರುವ ಆಹಾರಕ್ರಮವು ದೇಹತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಹಾಗೂ ಆ ಮೂಲಕ ಮಧುಮೇಹ ಉಂಟಾಗುವ ಅಪಾಯವನ್ನು ವೃದ್ಧಿಸುತ್ತದೆ. 
– ಅಧಿಕ ರಕ್ತದೊತ್ತಡ ಅಥವಾ ಅಧಿಕ ಲಿಪಿಡ್‌ ಪ್ರೊಫೈಲ್‌ ಹೊಂದಿರುವುದು: ಇದು ಕೂಡ ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ವೃದ್ಧಿಸುತ್ತದೆ. 
– ಗರ್ಭಿಣಿ ಮಧುಮೇಹ: ಗರ್ಭ ಧರಿಸಿದ ಸಮಯದಲ್ಲಿ ಮಧುಮೇಹಕ್ಕೆ ತುತ್ತಾದವರು ಭವಿಷ್ಯದಲ್ಲಿ ಟೈಪ್‌ 2 ಮಧುಮೇಹವನ್ನು ಬೆಳೆಯಿಸಿಕೊಳ್ಳುವ ಅಪಾಯ ಹೆಚ್ಚು. ಅಂತಹ ತಾಯಂದಿರಿಗೆ ಜನಿಸಿದ ಶಿಶು 9 ಪೌಂಡ್‌ (4 ಕಿ. ಗ್ರಾಂಗಿಂತ ಹೆಚ್ಚು) ತೂಕ ಹೊಂದಿರುವುದು ಕೂಡ ಭವಿಷ್ಯದಲ್ಲಿ ಟೈಪ್‌ 2 ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ವೃದ್ಧಿಸುತ್ತದೆ. 

ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವುದು ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುವುದು ಹೇಗೆ?
ದೇಹತೂಕವು ಆರೋಗ್ಯದ ಮೇಲೆ ಹಲವಾರು ವಿಧಗಳಲ್ಲಿ ಪ್ರಭಾವ ಬೀರುತ್ತದೆ. ಅಧಿಕ ದೇಹತೂಕವು ಇನ್ಸುಲಿನನ್ನು ಸರಿಯಾಗಿ ಉತ್ಪಾದಿಸುವುದು ಮತ್ತು ಬಳಕೆ ಮಾಡುವುದಕ್ಕೆ ತಡೆಯೊಡ್ಡಬಹುದಾಗಿದೆ. ಅದು ಅಧಿಕ ರಕ್ತದೊತ್ತಡವನ್ನೂ ಉಂಟುಮಾಡಬಲ್ಲುದು. ಸಹಜ ದೇಹತೂಕ ಹೊಂದಿರುವವರಿಗಿಂತ ಅಧಿಕ ದೇಹ ತೂಕ ಹೊಂದಿರುವವರು ಟೈಪ್‌ 2 ಮಧುಮೇಹಕ್ಕೆ ತುತ್ತಾಗುವ ಅಪಾಯ ಎರಡು ಪಟ್ಟು ಹೆಚ್ಚು. ದೇಹತೂಕ ಕಳೆದುಕೊಳ್ಳುವುದು ಮತ್ತು ದೈಹಿಕ ಚಟುವಟಿಕೆಗಳನ್ನು ಹೆಚ್ಚು ಮಾಡುವುದರಿಂದ ಈ ವಿಧವಾದ ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ತಗ್ಗಿಸಿಕೊಳ್ಳಬಹುದು. 

ಮಧುಮೇಹ ತಲೆದೋರಲು ಕಾರಣವೇನು?
ಮಧುಮೇಹ ಉಂಟಾಗುವುದಕ್ಕೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ. 
ಕೆಳಕಂಡ ಅಂಶಗಳು ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತವೆ: 
– ಮಧುಮೇಹದ ಕೌಟುಂಬಿಕ ಚರಿತ್ರೆ ಮತ್ತು ವಂಶವಾಹಿ ಪ್ರವೃತ್ತಿ
– ಆಫ್ರಿಕನ್‌-ಅಮೆರಿಕನ್‌, ಹಿಸ್ಪಾನಿಕ್‌, ಮೂಲ ಅಮೆರಿಕ ಅಥವಾ ಏಶ್ಯಾ – ಅಮೆರಿಕನ್‌ ಜನಾಂಗ, ಪೆಸಿಫಿಕ್‌ ದ್ವೀಪವಾಸಿಗಳು ಅಥವಾ ಆ ಜನಾಂಗೀಯ ಮೂಲ. 
– ಅಧಿಕ ದೇಹತೂಕ (ನಿಮ್ಮ ಅಗತ್ಯ ದೇಹತೂಕಕ್ಕಿಂತ ಶೇ.20 ಅಥವಾ ಹೆಚ್ಚು ತೂಕ).
– ದೈಹಿಕ ಒತ್ತಡ (ಶಸ್ತ್ರಚಿಕಿತ್ಸೆ ಅಥವಾ ಅನಾರೋಗ್ಯ)
– ಸ್ಟೀರಾಯ್ಡ ಮತ್ತು ಅಧಿಕ ರಕ್ತದೊತ್ತಡದ ಔಷಧಿಗಳ ಸಹಿತ ಕೆಲವು ಔಷಧಿಗಳ ಬಳಕೆ.
– ಮೇದೋಜೀರಕ ಗ್ರಂಥಿಗೆ ಉಂಟಾದ ಹಾನಿ, ಗಾಯ (ಸೋಂಕು, ಗಡ್ಡೆ, ಶಸ್ತ್ರಚಿಕಿತ್ಸೆ ಅಥವಾ ಅಪಘಾತ)
– ರೋಗ ಪ್ರತಿಕಾಯ ಕಾಯಿಲೆಗಳು (ಆಟೊ ಇಮ್ಯೂನ್‌ ಕಾಯಿಲೆಗಳು)
– ಅಧಿಕ ರಕ್ತದೊತ್ತಡ
– ರಕ್ತದಲ್ಲಿ ಕೊಲೆಸ್ಟ್ರಾಲ್‌ ಅಥವಾ ಟ್ರೈಗ್ಲಿಸರೈಡ್‌ ಅಸಹಜ ಮಟ್ಟ
– ವಯಸ್ಸು (ವಯಸ್ಸು ಹೆಚ್ಚಿದಂತೆ ಅಪಾಯ ಹೆಚ್ಚುತ್ತದೆ)
– ಮದ್ಯಪಾನ (ತೀವ್ರ ಮದ್ಯಪಾನ ವರ್ಷಗಳು ವೃದ್ಧಿಸಿದಂತೆ ಅಪಾಯ ಹೆಚ್ಚುತ್ತದೆ)
– ಧೂಮಪಾನ
– ಗರ್ಭಿಣಿ ಮಧುಮೇಹ ಅಥವಾ 9 ಪೌಂಡ್‌ (4.1 ಕಿ.ಗ್ರಾಂಗಿಂತ ಅಧಿಕ) ತೂಕ ಹೊಂದಿದ ಶಿಶು ಪ್ರಸವದ ಇತಿಹಾಸ.
– ಗರ್ಭಧಾರಣೆ
– ಸಕ್ಕರೆಯು ತಾನಾಗಿ ಮಧುಮೇಹಕ್ಕೆ ಕಾರಣವಾಗುತ್ತದೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಅಧಿಕ ಪ್ರಮಾಣದಲ್ಲಿ ಸಕ್ಕರೆ ಅಥವಾ ಸಿಹಿ ತಿನ್ನುವುದು ಹಲ್ಲು ಹುಳುಕಿಗೆ ಕಾರಣವಾಗಬಹುದೇ ವಿನಾ ಮಧುಮೇಹವನ್ನು ಉಂಟು ಮಾಡುವುದಿಲ್ಲ. 

ಮಧುಮೇಹದ ಸಾಮಾನ್ಯ ಲಕ್ಷಣಗಳು ಮತ್ತು ಚಿಹ್ನೆಗಳೇನು?
ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ಅತ್ಯಂತ ಮುಖ್ಯವಾದ ಸಂಗತಿ ಎಂದರೆ, ಮಧುಮೇಹವು ಯಾವತ್ತೂ ಯಾವುದೇ ಲಕ್ಷಣಗಳನ್ನು ಅದು ಸಾಕಷ್ಟು ಮುಂದುವರಿದ ಸ್ಥಿತಿಯನ್ನು ತಲುಪುವ ತನಕ ತೋರ್ಪಡಿಸುವುದಿಲ್ಲ. ಟೈಪ್‌ 1 ಮಧುಮೇಹದ ಚಿಹ್ನೆಗಳು ಕೆಲವು ವಾರಗಳ ಅವಧಿಯಲ್ಲಿ – ಶೀಘ್ರವಾಗಿ ಕಾಣಿಸಿಕೊಳ್ಳಬಹುದು. 

ಟೈಪ್‌ 2 ಮಧುಮೇಹದ ಚಿಹ್ನೆಗಳು ನಿಧಾನವಾಗಿ ಬೆಳೆಯುತ್ತವೆ – ಹಲವಾರು ವರ್ಷಗಳ ಕಾಲಾವಧಿಯಲ್ಲಿ – ಮತ್ತು ಅವು ಎಷ್ಟು ಲಘುವಾಗಿರುತ್ತವೆ ಎಂದರೆ, ಅವು ನಿಮ್ಮ ಗಮನಕ್ಕೆ ಬರುವುದೇ ಇಲ್ಲ. ಟೈಪ್‌ 2 ಮಧುಮೇಹ ಹೊಂದಿರುವ ಅನೇಕರು ಯಾವುದೇ ಚಿಹ್ನೆಗಳನ್ನು ಹೊಂದಿರುವುದಿಲ್ಲ. ಮಧುಮೇಹ ಸಂಬಂಧಿ ಆರೋಗ್ಯ ಸಮಸ್ಯೆಗಳು ಉಂಟಾಗುವ ತನಕ ಕೆಲವು ಮಂದಿಗೆ ತಮಗೆ ಮಧುಮೇಹ ಇರುವುದು ತಿಳಿಯುವುದೇ ಇಲ್ಲ.

ಇನ್ಸುಲಿನ್‌ ಪ್ರತಿರೋಧ ಅಂದರೇನು?
ಇನ್ಸುಲಿನ್‌ನ ಪರಿಣಾಮಗಳಿಗೆ ಪ್ರತಿಸ್ಪಂದಿಸುವ ದೇಹದ ಸಾಮರ್ಥ್ಯವು ಕುಗ್ಗಿರುವ ಸ್ಥಿತಿಯನ್ನು ಇನ್ಸುಲಿನ್‌ ಪ್ರತಿರೋಧ ಎನ್ನುತ್ತಾರೆ. ನಮ್ಮ ದೇಹದಲ್ಲಿ ಇನ್ಸುಲಿನ್‌ ಹಲವಾರು ಕಾರ್ಯಗಳನ್ನು ನಿರ್ವಹಿ ಸುತ್ತದೆ – ಕಾಬೊìಹೈಡ್ರೇಟ್‌, (ಸಕ್ಕರೆ ಮತ್ತು ಪಿಷ್ಟ), ಕೊಬ್ಬು ಮತ್ತು ಪ್ರೊಟೀನ್‌ಗಳನ್ನು ಗುÉಕೋಸ್‌ ಆಗಿ ವಿದಳನಗೊಳಿಸುವುದು. ಜೀವಕೋಶಗಳು ಬದುಕಲು ಗುÉಕೋಸ್‌ ಬೇಕು, ಇನ್ಸುಲಿನ್‌ನ ಅಸಮರ್ಪಕ ಪ್ರತಿಕ್ರಿಯೆಗೆ ಪರಿಹಾರವಾಗಿ ದೇಹವು ಇನ್ನಷ್ಟು ಇನ್ಸುಲಿನ್‌ ಉತ್ಪಾದಿಸುತ್ತದೆ. ಇದರಿಂದ ರಕ್ತದಲ್ಲಿ ಇನ್ಸುಲಿನ್‌ ಮಟ್ಟವು ಏರುತ್ತದೆ, ಇದು ಇನ್ಸುಲಿನ್‌ ಪ್ರತಿರೋಧ ಸ್ಥಿತಿ ಒಂದು ಲಕ್ಷಣ. 

ಕೆಳಕಂಡ ಚಿಹ್ನೆಗಳಲ್ಲಿ  ಕೆಲವನ್ನು ಹೊಂದಿದ್ದರೆ ಮಧುಮೇಹ ಇರುವ ಶಂಕೆ ತಾಳಬಹುದಾಗಿದೆ: 
ಲಕ್ಷಣಗಳು:

– ಅಧಿಕ ಬಾಯಾರಿಕೆ – ವ್ಯಕ್ತಿ ಅತಿಯಾದ ಬಾಯಾರಿಕೆಯನ್ನು ಹೊಂದಿರುತ್ತಾನೆ ಮತ್ತು ಅತಿಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುತ್ತಾನೆ. ಮೂತ್ರದ ಮೂಲಕ ನಷ್ಟವಾಗುವ ದ್ರವಾಂಶವನ್ನು ಸರಿದೂಗಿಸಿಕೊಳ್ಳು ದೇಹ ಪ್ರಯತ್ನಿಸುವುದು ಇದಕ್ಕೆ ಕಾರಣ. 
– ಹಸಿವು ವೃದ್ಧಿಸಬಹುದು ಹಾಗೂ ವ್ಯಕ್ತಿ ಸಾಮಾನ್ಯಕ್ಕಿಂತ ಹೆಚ್ಚು ಆಹಾರ ಸೇವಿಸಬಹುದು.
– ಬಾಯಿ ಒಣಗುವಿಕೆ
– ಆಗಾಗ ಮೂತ್ರ ವಿಸರ್ಜನೆ‌ – ವ್ಯಕ್ತಿ ಹಿಂದಿಗಿಂತ ಹೆಚ್ಚು ಬಾರಿ ಮೂತ್ರ ವಿಸರ್ಜಿಸಬಹುದು. 
– ಹಸಿವು ಚೆನ್ನಾಗಿದ್ದರೂ ಅಕಾರಣವಾದ ತೂಕ ನಷ್ಟ ಉಂಟಾಗಬಹುದು.
– ದಣಿವು, ಕಂಗಾಲುತನದ ಅನುಭವ.
– ಮಧುಮೇಹ ಕಣ್ಣುಗಳನ್ನು ಬಾಧಿಸಬಹುದು. ಅಧಿಕ ರಕ್ತದೊತ್ತಡದಿಂದ ಕಣ್ಣಿನ ಮಸೂರ ಊದಿಕೊಳ್ಳಬಹುದು ಮತ್ತು ದೃಷ್ಟಿ ಮಂದವಾಗಬಹುದು ಅಥವಾ ಮಂಜು ಮುಸುಕಿದ ಅನುಭವ ಆಗಬಹುದು. 
– ಕೈಗಳು ಮತ್ತು ಕಾಲುಗಳಲ್ಲಿ ಜೋಮು ಹಿಡಿದ ಅನುಭವ, ಇರುವೆ ಹರಿದಾಡಿದಂತಹ ಅನುಭವ.
– ನಿಮಿರು ದೌರ್ಬಲ್ಯ ಅಥವಾ ನಿಮಿರು ಕಾಯ್ದಿಟ್ಟುಕೊಳ್ಳುವಲ್ಲಿ ವೈಫ‌ಲ್ಯ
– ಗಾಯಗಳು ಮಾಯುವುದು ವಿಳಂಬವಾಗುತ್ತದೆ. 
– ಒಣಗಿದ ಮತ್ತು ತುರಿಕೆಯಿಂದ ಕೂಡಿದ ಚರ್ಮ (ಸಾಮಾನ್ಯವಾಗಿ ಜನನಾಂಗದ ಆಸುಪಾಸಿನಲ್ಲಿ)
– ಚರ್ಮ, ಬಾಯಿ ಮತ್ತು ಜನನಾಂಗ ಪ್ರದೇಶಗಳಲ್ಲಿ ಆಗಾಗ ಶಿಲೀಂಧ್ರ ಸೋಂಕು. 

ಯಾರು ಮಧುಮೇಹ ತಪಾಸಣೆಗೆ ಒಳಗಾಗಬೇಕು?
ಮಧುಮೇಹದ ಚಿಹ್ನೆಗಳನ್ನು ಹೊಂದಿರುವ ಯಾರೇ ಆದರೂ ಮಧುಮೇಹ ಪರೀಕ್ಷೆಗೆ ಒಳಗಾಗಬೇಕು. ಕೆಲವು ಮಂದಿಗೆ ಮಧುಮೇಹದ ಯಾವುದೇ ಚಿಹ್ನೆಗಳು ಇರುವುದಿಲ್ಲ; ಆದರೆ ಮಧುಮೇಹದ ಅಪಾಯಾಂಶಗಳನ್ನು ಹೊಂದಿದ್ದರೆ ತಪಾಸಣೆ ಮಾಡಿಸಿಕೊಳ್ಳಬೇಕು. ತಪಾಸಣೆಯು ಮಧುಮೇಹವನ್ನು ಶೀಘ್ರವಾಗಿ ಪತ್ತೆ ಮಾಡಲು ಸಾಧ್ಯ ಮಾಡುತ್ತದೆ ಹಾಗೂ ಮಧುಮೇಹವನ್ನು ನಿರ್ವಹಿಸಲು ಮತ್ತು ಅದರ ಸಂಕೀರ್ಣ ಸಮಸ್ಯೆಗಳನ್ನು ತಡೆಯುವುದಕ್ಕಾಗಿ ತಮ್ಮ ರೋಗಿಗಳ ಜತೆಗೂಡಿ ಕ್ರಮಗಳನ್ನು ಕೈಗೊಳ್ಳುವುದಕ್ಕೆ ವೈದ್ಯಕೀಯ ವೃತ್ತಿಪರರಿಗೆ ಅನುವು ಮಾಡಿಕೊಡುತ್ತದೆ. 

– ಡಾ| ಶಿವಶಂಕರ ಎಂ.ಡಿ. 
ಪ್ರೊಫೆಸರ್‌ ಆಫ್ ಮೆಡಿಸಿನ್‌
ಕೆಎಂಸಿ, ಮಣಿಪಾಲ

– ಮುಂದಿನ ವಾರಕ್ಕೆ

ಟಾಪ್ ನ್ಯೂಸ್

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.