ಮಾಧ್ಯಮ ಮತ್ತು ಸಂಧಿವಾತ ಚಿಕಿತ್ಸೆ: ನಿಜವಾದ ಮಾಹಿತಿಯೇ ಅಥವಾ ಜಾಹೀರಾತೇ


Team Udayavani, Jan 21, 2018, 6:00 AM IST

sandhivaatha1.jpg

ಮಾತುಕತೆ, ಪುಸ್ತಕಗಳು, ಮಾಧ್ಯಮಗಳು (ರೇಡಿಯೊ, ಟಿವಿ, ಸುದ್ದಿಪತ್ರಿಕೆಗಳು)ಗಳಿಂದ ತೊಡಗಿ ಅತಿಯಾಗಿ ಬಳಕೆಯಲ್ಲಿರುವ ಇಂಟರ್‌ನೆಟ್‌ ವರೆಗೆ ನಾವು ಜ್ಞಾನ ಮತ್ತು ಮಾಹಿತಿಗಳನ್ನು ಪಡೆಯುತ್ತೇವೆ. ತಂತ್ರಜ್ಞಾನವು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಈ ಹಿಂದೆ ಗುಣಪಡಿಸಲಾಗದವು ಎಂದು ಭಾವಿಸಲಾಗಿದ್ದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇಂದು ಚಿಕಿತ್ಸೆಯನ್ನು ಅನ್ವೇಷಿಸಲಾಗಿದೆ. ಆದರೂ ಆರೋಗ್ಯ ಕ್ಷೇತ್ರದ ಹಲವು ವಿಚಾರಗಳಲ್ಲಿ ಮಿತಿಗಳು ಇನ್ನೂ ಉಳಿದುಕೊಂಡಿವೆ; ಇದು ಕೆಲವು ಕಾಯಿಲೆಗಳು ಗುಣಪಡಿಸಲಾಗದೆ ಉಳಿದುಕೊಂಡಿರುವುದು ಆಗಿರಬಹುದು ಅಥವಾ ಆರ್ಥಿಕ ಕಾರಣಗಳಿಂದಾಗಿ ಸಂಪನ್ಮೂಲಗಳು ಕೈಗೆಟುಕದೆ ಉಳಿದುಕೊಂಡಿರುವುದು ಆಗಿರಬಹುದು. ಜನಸಮೂಹಕ್ಕೆ ಮಾಹಿತಿಯನ್ನು ಪ್ರಸಾರ ಮಾಡುವ ವಿಚಾರದಲ್ಲಿ ಮಾಧ್ಯಮಗಳ ಪಾತ್ರ ಗಮನಾರ್ಹವಾದುದಾಗಿದೆ.  ಪ್ರಸಾರವಾಗುವ ಅಥವಾ ಮುದ್ರಣವಾಗುವ ವಸ್ತು- ವಿಷಯಗಳ ಗುಣಮಟ್ಟ ದೃಢೀಕರಣ ಇಲ್ಲದೆ ಹೋದರೆ ಅದು ಜಾಹೀರಾತಿನ ಮೂಲಕ ತಮಗೆ ತಿಳಿಯುವ ನಿರ್ದಿಷ್ಟ ಚಿಕಿತ್ಸೆಯನ್ನು ಪ್ರಯೋಗಿಸುವತ್ತ ಜನರನ್ನು ಸೆಳೆಯಬಹುದು. ಹೀಗಾಗಿ ಯಾರೇ ಆಗಲಿ, ವಿವಿಧ ಮೂಲಗಳಿಂದ ತಮಗೊದಗಿದ ಮಾಹಿತಿಯನ್ನು ಪುನರ್‌ಪರಿಶೀಲನೆಗೆ ಒಳಪಡಿಸುವುದು ಹಿತಕಾರಿಯಾಗಿದೆ. 

ಸಂಧಿವಾತ ಅನ್ನುವುದು ಹಲವು ಹಂತಗಳಷ್ಟು ವಿಸ್ತಾರವಾಗಿರುವ ಮತ್ತು ಹಲವು ವಿಧಗಳನ್ನು ಹೊಂದಿರುವ ಒಂದು ಆರೋಗ್ಯ ಸಮಸ್ಯೆಯಾಗಿದ್ದು, ಈ ಎಲ್ಲ ಹಂತ, ವಿಧಗಳಿಗೂ ಅಷ್ಟೇ ಬಗೆಯ, ವಿಧಾನಗಳ ಚಿಕಿತ್ಸೆಗಳು ಅಸ್ತಿತ್ವದಲ್ಲಿವೆ. ಯಾರಿಗೆ ಯಾವ ಚಿಕಿತ್ಸೆಯನ್ನು ನೀಡಬೇಕು ಎಂಬುದನ್ನು ಈ ಕ್ಷೇತ್ರದಲ್ಲಿ ತಜ್ಞರಾಗಿರುವ ವೈದ್ಯರು ರೋಗಿಯ ಜತೆಗೆ ಕೂಲಂಕಷ ಸಮಾಲೋಚನೆ ಹಾಗೂ ತಪಾಸಣೆಯ ಬಳಿಕವಷ್ಟೇ ನಿರ್ಧರಿಸುವುದು ಸಾಧ್ಯ. ಸಂಧಿವಾತದ ಪ್ರತೀ ವಿಧ ಮತ್ತು ಹಂತಕ್ಕೆ ಚಿಕಿತ್ಸೆಯ ಆಯ್ಕೆಗಳು ಲಭ್ಯವಿದ್ದು, ಯಾವ ಚಿಕಿತ್ಸೆಯನ್ನು ಒದಗಿಸಬೇಕು ಎಂಬುದನ್ನು ರೋಗಿಯ ಒಲವಿನ ಆಧಾರದಲ್ಲಿ ಸಮಾಲೋಚಿಸಲಾಗುತ್ತದೆ. ಚಿಕಿತ್ಸೆಯನ್ನು ಪಡೆಯುವಾಗ, ರೋಗಿಯು ತನ್ನ ಚಿಕಿತ್ಸೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಬಹಳ ಮುಖ್ಯವಾಗಿದೆ. ತನ್ನ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳುವ ಅಥವಾ ಶಸ್ತ್ರಚಿಕಿತ್ಸೆಯ ಬಳಿಕ “ಮಾಡಬೇಕಾದ್ದು’ ಯಾ “ಮಾಡಬಾರದ್ದು’ಗಳನ್ನು ಸರಿಯಾಗಿ ಪಾಲಿಸುವ ಚಿಕಿತ್ಸೆಯನ್ನು ನೀಡಿದ ವೈದ್ಯನಷ್ಟೇ ಮುಖ್ಯವಾಗಿರುತ್ತಾನೆ/ಳೆ.

ಮಾಹಿತಿ ಮತ್ತು ಜಾಹೀರಾತು
ರೋಚಕವಾದ, ಸಂವೇದನೆಯನ್ನು ಬಡಿದೆಬ್ಬಿಸುವ ಸುದ್ದಿಗಳನ್ನು ಉತ್ಪಾದಿಸುವುದು ನಮ್ಮ ಮಾಧ್ಯಮಗಳ ಜಾಯಮಾನ. ಸಾಮಾನ್ಯವಾಗಿ ನಾವು ನಿರ್ದಿಷ್ಟ ತಂಡವೊಂದು ಪ್ರಕರಣವೊಂದನ್ನು ಹೇಗೆ ನಿಭಾಯಿಸಿತು ಎಂಬ ಕೇಸ್‌ ರಿಪೋರ್ಟ್‌ ಗಳನ್ನು ನೋಡುತ್ತೇವೆ. ಅಂತಹ ವರದಿಗಳಲ್ಲಿ ಉಲ್ಲೇಖಗೊಳ್ಳದ ಒಂದು ವಿಚಾರವೆಂದರೆ, ಆ ಪ್ರಕರಣವು ಅಪರೂಪವಾದದ್ದೇ ಅಥವಾ ಆಯಾ ಕ್ಷೇತ್ರದಲ್ಲಿ ಅಂತಹ ಪ್ರಕರಣಗಳು ತೀರಾ ಸಾಮಾನ್ಯವೇ ಎಂಬುದು. ವೈದ್ಯರು ವೈಯಕ್ತಿಕವಾಗಿ ಜಾಹೀರಾತು ನೀಡುವುದಕ್ಕೆ ಭಾರತೀಯ ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ ಆಸ್ಪತ್ರೆ ಮತ್ತಿತರ ಆರೋಗ್ಯ ಸೇವಾ ಸೌಲಭ್ಯ ಕೇಂದ್ರಗಳಿಗೆ ಅಂತಹ ನಿರ್ಬಂಧ ಇಲ್ಲ. ಮುದ್ರಿತ ಜಾಹೀರಾತುಗಳಲ್ಲಿ ಆರೋಗ್ಯ ಸೇವೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳದ್ದು ಸಿಂಹಪಾಲು ಎಂಬುದು ವಾಸ್ತವ. ಈ ಉತ್ಪನ್ನಗಳು ತಾವು ಪವಾಡಸದೃಶ ಎಂದು ಹೇಳಿಕೊಳ್ಳುತ್ತವೆ, ಆಗಾಗ ತಮ್ಮ ಪ್ರತಿಸ್ಪರ್ಧಿ ಉತ್ಪನ್ನಗಳನ್ನು ನಿಂದಿಸುತ್ತವೆ. ಅನೇಕ ಜಾಹೀರಾತುಗಳು, ವಿಶೇಷವಾಗಿ ಭಾರತದಲ್ಲಿ ಲಭ್ಯವಿರುವ ಪರ್ಯಾಯ ಔಷಧ ವಿಧಾನಗಳು ರೋಗಿಗಳನ್ನು ರೂಪದರ್ಶಿಗಳನ್ನಾಗಿಯೂ ಬಳಸಿಕೊಳ್ಳುತ್ತವೆ. ಈ ಜಾಹೀರಾತುಗಳ ವಿಶ್ವಾಸಾರ್ಹತೆಯನ್ನು ಸುಳ್ಳು ಅಥವಾ ನಿಜ ಎಂಬುದಾಗಿ ಸಾಬೀತುಪಡಿಸಲು ಸುಲಭ ಮಾರ್ಗವಿಲ್ಲ. ಅವುಗಳನ್ನು ನಿಯಂತ್ರಿಸುವುದಕ್ಕೂ ಸಾಧ್ಯವಿಲ್ಲ. ಇನ್ನೊಂದೆಡೆ, ನಿರ್ದಿಷ್ಟ ಕಾಯಿಲೆಯೊಂದರ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಲ್ಲಂತಹ ಮಾಹಿತಿಯುಕ್ತ ಲೇಖನಗಳು ಹೆಚ್ಚು ವಾಸ್ತವಿಕ ದೃಷ್ಟಿಕೋನವನ್ನು ಒದಗಿಸುತ್ತವೆ. ಅಂತಹ ಲೇಖನಗಳಲ್ಲಿ ಅತ್ಯುತ್ತಮವಾದವು ಆಯಾ ಕಾಯಿಲೆಗೆ ಲಭ್ಯವಿರುವ ವಿವಿಧ ಚಿಕಿತ್ಸೆಗಳು ಮತ್ತು ಪ್ರತೀ ಚಿಕಿತ್ಸೆಯ ಅನುಕೂಲ-ಪ್ರತಿಕೂಲಗಳನ್ನೂ ಪಟ್ಟಿ ಮಾಡಿ ಒದಗಿಸುತ್ತವೆ. ಹಾಗೆಯೇ ಯಶಸ್ವಿಯಾಗಿ ಚಿಕಿತ್ಸೆಗೊಳಪಟ್ಟ ರೋಗ ಪ್ರಕರಣಗಳ ಒಂದು ಸಮೂಹದ ಬಗೆಗಿನ ಮಾಹಿತಿ ಇನ್ನಷ್ಟು ಉಪಯುಕ್ತವಾಗಿರುತ್ತದೆ. ಇಂತಹವುಗಳಲ್ಲಿ ಅತ್ಯುತ್ತಮವಾದವು ಆಯಾ ವಿಚಾರದ ಬಗ್ಗೆ ತಜ್ಞ ಪುಸ್ತಕಗಳಲ್ಲಿ ಅಥವಾ ವೈಜ್ಞಾನಿಕ ಅಧ್ಯಯನ ಪ್ರಬಂಧಗಳಲ್ಲಿ ಸಿಗುವ ಮಾಹಿತಿಗೆ ಸಮಾನವಾಗಿದ್ದು, ಚಿಕಿತ್ಸೆಯಲ್ಲಿ ಎದುರಾದ ವೈಫ‌ಲ್ಯಗಳು ಮತ್ತು ಅಡ್ಡಿಗಳನ್ನು ವಿವರಿಸುತ್ತವೆ.

ಸಂಧಿವಾತ ಮತ್ತು ಪರ್ಯಾಯ 
ಚಿಕಿತ್ಸಾ ವಿಧಾನಗಳು

ಭಾರತದಲ್ಲಿ ಹಲವು ಚಿಕಿತ್ಸಾ ವಿಧಾನಗಳು ಯಶಸ್ವಿಯಾಗಿ ಅನುಸರಿಸಲ್ಪಡುತ್ತಿವೆ. ಇವುಗಳಲ್ಲಿ ಆಯುರ್ವೇದವು ಬಹಳ ಪುರಾತನವಾದುದು ಮತ್ತು ಸುದೀರ್ಘ‌ ಕಾಲದಿಂದ ಚಾಲ್ತಿಯಲ್ಲಿರುವ, ಯಶಸ್ವಿಯಾಗಿರುವ ಚಿಕಿತ್ಸೆಗಳನ್ನು ಇದು ಹೊಂದಿದೆ. ಈ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಯಶಸ್ಸು ಗಳಿಸಿರುವಂಥವು ಕೆಲವು ಅಂಗಮರ್ದನ ಚಿಕಿತ್ಸೆಗಳು ಹಾಗೂ ರೋಗಪೀಡಿತ ಭಾಗಕ್ಕೆ ಲೇಪನ ಚಿಕಿತ್ಸೆಗಳು; ಸ್ನಾಯು ಸೆಳೆತ, ನೋವು ಮತ್ತು ಸಂಧಿವಾತದ ಪ್ರಕೋಪಗಳಿಗೆ ಯಶಸ್ವಿಯಾಗಿ ಉಪಶಮನ ನೀಡುತ್ತವೆ. ಈ ಪುರಾತನ ವೈದ್ಯ ಪದ್ಧತಿಯು ನಿಸರ್ಗ ಚಿಕಿತ್ಸೆ, ಯೋಗ, ಪಥ್ಯಾಹಾರ ಮತ್ತು ವ್ಯಾಯಾಮಗಳ ತಣ್ತೀಗಳನ್ನೂ ಒಳಗೊಂಡಿದ್ದು, ಸರಿಯಾಗಿ ಪಾಲಿಸಿದರೆ ಉತ್ತಮ ಪರಿಣಾಮ ಬೀರಿ ರೋಗದ ಪ್ರಾರಂಭಿಕ ಹಂತಗಳನ್ನು ಸಂಪೂರ್ಣವಾಗಿ ಗುಣಪಡಿಸುತ್ತದೆ (ಅಮೆರಿಕನ್‌ ಅಸೋಸಿಯೇಶನ್‌ ಆಫ್ ಆಥೊìಪೆಡಿಕ್‌ ಸರ್ಜನ್ಸ್‌ನ ಶಿಫಾರಸುಗಳಲ್ಲಿಯೂ ಸ್ವೀಕರಿಸಲ್ಪಟ್ಟಿದೆ). ಆದರೆ ಇಲ್ಲಿಯೂ ಆಯುರ್ವೇದ ವೈದ್ಯ ಚಿಕಿತ್ಸೆಯನ್ನು ಸೂಚಿಸಿದಷ್ಟೇ ಪ್ರಾಮುಖ್ಯ ರೋಗಿ ಅದನ್ನು ಅಕ್ಷರಶಃ ಪಾಲಿಸುವುದಕ್ಕೆ ಇದೆ. ಬಾಯಿಯ ಮೂಲಕ ಸೇವಿಸುವ ಔಷಧಗಳು ತಮ್ಮಿಂದ ಅಡ್ಡ ಪರಿಣಾಮಗಳು ಇಲ್ಲ ಎಂದು ಜಾಹೀರಾತುಗಳಲ್ಲಿ ಹೇಳಿಕೊಂಡರೂ ದೀರ್ಘ‌ಕಾಲ ಅವುಗಳನ್ನು ಸೇವಿಸಿದರೆ ಅಡ್ಡ ಪರಿಣಾಮಗಳು ಉಂಟಾಗಬಹುದಾಗಿದೆ. ಹೀಗೆಯೇ ಅಯಸ್ಕಾಂತ ಚಿಕಿತ್ಸೆ, ಬೆಲ್ಟ್ ಇತ್ಯಾದಿ ಅನೇಕ ಚಿಕಿತ್ಸಾ ವಿಧಾನಗಳ ಪ್ರಯೋಜನಕಾರಿ ಪರಿಣಾಮವನ್ನು ಶ್ರುತಪಡಿಸುವ ಸಾಕಷ್ಟು ವೈಜ್ಞಾನಿಕ ಸಾಕ್ಷ್ಯಗಳ ಕೊರತೆ ಇದೆ. 

– ಮುಂದಿನ ವಾರಕ್ಕೆ  

– ಡಾ| ಯೋಗೀಶ್‌ ಕಾಮತ್‌
ಕನ್ಸಲ್ಟೆಂಟ್‌ ಸ್ಪೆಶಲಿಸ್ಟ್‌ 
ಪೃಷ್ಠ ಮತ್ತು ಮೊಣಕಾಲು ಸರ್ಜನ್‌,
ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.