ತಂಬಾಕು ಮತ್ತು ಬಾಯಿಯ ಆರೋಗ್ಯ


Team Udayavani, Jun 24, 2018, 6:15 AM IST

mouth-tobacco.jpg

ಹಿಂದಿನ ವಾರದಿಂದ- ಹಳ್ಳಿಯ ಜನರಲ್ಲಿ ಈಗಲೂ ತಂಬಾಕು (ಹೊಗೆಸೊಪ್ಪು) ಸೇವನೆ ತುಂಬಾ ಕಾಣಸಿಗುವುದು.ವೀಳ್ಯದ ಎಲೆಯಲ್ಲಿ ಇಂತಹ ಹೊಗೆಸೊಪ್ಪನ್ನು ಹಚ್ಚಿ ಕೆಳಗಿನ ದವಡೆಯ ಬಾಚಿ ಹಲ್ಲಿನ ಕೆಳಗೆ ಇಟ್ಟುಕೊಳ್ಳುವ ಪದ್ಧತಿ ಸಾಮಾನ್ಯ. ಇದೇ ರೀತಿ ದಿವಸದಲ್ಲಿ ಇಟ್ಟುಕೊಳ್ಳುವುದರಿಂದ ಈ ಜಾಗದಲ್ಲಿ ಕ್ರಮೇಣ ಒಳಚರ್ಮವು, ಬದಲಾವಣೆಗೊಂಡು ಕ್ಯಾನ್ಸರ್‌ ಆಗಿ ಪರಿವರ್ತನೆ ಆಗುವ ಸಾಧ್ಯತೆ ಜಾಸ್ತಿ. ಇಂತಹ ವೀಳ್ಯದೆಲೆಯೊಂದಿಗೆ, ಹೊಗೆಸೊಪ್ಪಿನ ಸೇವನೆ ನಿಲ್ಲಿಸುವುದು ಅತ್ಯುತ್ತಮ.

ಗುಟ್ಕಾ ಆಧುನಿಕ ಕಾಲದ ಮಾರಕ ಪದಾರ್ಥ. ಇದೊಂದು ಜನರಿಗೆ ನಶೆ. ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ಅಗ್ಗದ ವಸ್ತು ಕೂಡಾ.  ಈ ಗುಟ್ಕಾದಿಂದಾಗಿ ಬಾಯಿಯ ಚರ್ಮವು ಸುಕ್ಕುಗಟ್ಟಿ, ಬಾಯಿ ತೆರೆಯಲು ಸಾಧ್ಯವಾಗದೆ ಹಾಗೇ ಮಾಡುವುದು. ಇದಲ್ಲದೇ ಇಂತಹವರಲ್ಲಿ ಕ್ಯಾನ್ಸರ್‌ ಸಾಧ್ಯತೆಯೂ ಅತೀ ಹೆಚ್ಚು. ಪ್ರತಿಯೊಂದು ಗುಟ್ಕಾ ಪೊಟ್ಟಣದ ಮೇಲೆ, ಬಾಯಿಯ ಕ್ಯಾನ್ಸರ್‌ ಚಿತ್ರ ಹಾಕಿ, ಜನರಿಗೆ ಸರಕಾರವು ಎಚ್ಚರಿಕೆ ನೀಡುತ್ತಿದ್ದರೂ, ಇದರ ಬಳಕೆಯೂ ಕಡಿಮೆಯಾಗಿಲ್ಲ.

ಧೂಮಪಾನ ಮತ್ತು 
ವಸಡು ರೋಗ 

ತಂಬಾಕು ಸೇವಿಸುವವರಲ್ಲಿ ಎರಡು ರೋಗ – ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ. ತಂಬಾಕಿನಲ್ಲಿರುವ ವಿವಿಧ ಬಗೆಯ ಪದಾರ್ಥಗಳಿಂದ ನಮ್ಮ ದೇಹದ ಕೋಶಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಅಲ್ಲದೆ ನಮ್ಮ ಆರೋಗ್ಯ ಕಾಪಾಡುವ ರಕ್ಷಕ ರಕ್ತಕಣಗಳ ಮೇಲೆ ಅಡ್ಡ ಪರಿಣಾಮ ಬೀರಿ, ನಮ್ಮ  ವಸಡಿಗೆ ರಕ್ತ ಸಂಚಲನೆ ಮತ್ತು ಆಮ್ಲಜನಕ ಸಿಗುವಲ್ಲಿ ಹೆಚ್ಚುಕಡಿಮೆಯಾಗಿ, ಬಾಯಿಯಲ್ಲಿ ತಂಬಾಕಿನ ವಿಷ ಪದಾರ್ಥಗಳಿಂದ,ಹೆಚ್ಚುವ ಬ್ಯಾಕ್ಟೀರಿಯಾಗಳಿಂದಾಗಿಯೂ ಇದೆಲ್ಲವೂ ತಂಬಾಕು ಸೇವನೆಯಿಂದ ಹಲ್ಲು ಒರಟಾಗಿ, ಇದರ ಮೇಲೆ ದಂತ ಪಾಚಿಯ ಸಂಗ್ರಹವಾಗಿ, ವಸಡು ರೋಗ ಉಲ್ಬಣವಾಗುತ್ತದೆ. ಹಲ್ಲನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ  ಎಲುಬು ಕೂಡ ಬೇಗನೇ ಕರಗಿ ಹಲ್ಲು ಸವೆಯುವುದು ಮತ್ತು ಇಂತಹವರಲ್ಲಿ ಹಲ್ಲು ಕಳೆದುಕೊಂಡವರು ಜಾಸ್ತಿಯೂ ಕೂಡ.  ಇಂತಹ ವಸಡು ರೋಗವಿರುವವರು, ಒಮ್ಮೆ ಧೂಮಪಾನ ಅಭ್ಯಾಸವನ್ನು ಬಿಟ್ಟಲ್ಲಿ, ವಸಡು ಕ್ರಮೇಣ ಆರೋಗ್ಯವಾಗುವುದನ್ನು ನೋಡಬಹುದು.
 
ವಸಡು ರೋಗವೂ, ನೋವಿಲ್ಲದೇ ಅಥವಾ ಬ್ರಶ್‌ ಮಾಡುವ ರಕ್ತ ಬರದೇ ಇರುವುದು ಧೂಮಪಾನಿಗಳಲ್ಲಿ ಸಾಮಾನ್ಯ. ಇದರಿಂದಾಗಿ ವಸಡು ರೋಗವು ನಮಗೆ ಗೊತ್ತಿಲ್ಲದೇ ಉಲ್ಬಣವಾಗಿಬಿಡುತ್ತದೆ. 

ತಂಬಾಕು ಸೇವಿಸುವವರು, ಈ ದುರಭ್ಯಾಸ ಬಿಟ್ಟ ಕೂಡಲೇ, ಒಮ್ಮಗೆ ರಕ್ತ ಸಂಚಾರ ಸಾಮಾನ್ಯ ಸ್ಥಿತಿಗೆ ಬಂದು ಕೆಲವೊಮ್ಮೆ ವಸಡಿನಿಂದ ರಕ್ತ ಒಸರಬಹುದು. ಆದರೆ, ಇದರಿಂದ ಇವರು ಗಾಬರಿಯಾಗಬಾರದು ಮತ್ತು ಮತ್ತೆ ತಂಬಾಕು ಸೇವನೆ ಶುರು ಮಾಡಬಾರದು. 

ವಸಡು ಸಾಮಾನ್ಯ ಸ್ಥಿತಿಗೆ 
ಹಾಗೆಯೇ ಸ್ವಲ್ಪ ದಿನದ ಅನಂತರ ವಸಡು ಸಾಮಾನ್ಯ ಸ್ಥಿತಿಗೆ ಬಂದ ಮೇಲೆ, ರಕ್ತ ಒಸರುವುದು ನಿಲ್ಲುವುದು. ವಸಡಿನ ಬಣ್ಣ ಮತ್ತು ಗಾತ್ರ ಕೂಡ ಸಾಮಾನ್ಯ ಸ್ಥಿತಿಗೆ ಬರುವುದು.  ನಿಮ್ಮ  ಸೌಂದರ್ಯಕ್ಕೆ ಹಲ್ಲು ಅತೀ ಮುಖ್ಯ. ಇದರಿಂದಾಗಿ ತಂಬಾಕು ಸೇವನೆಯಿಂದ ಈಗಲೇ ದೂರವಿರುವುದು ಅತೀ ಮುಖ್ಯ.

ದಂತ ಇಂಪ್ಲಾಟ್‌ ವೈಫ‌ಲ್ಯ
ಹಲ್ಲು ಕಳಕೊಂಡವರು ಕೃತಕ ದಂತಪಂಕ್ತಿ ಇಟ್ಟುಕೊಳ್ಳುವುದು ಸಾಮಾನ್ಯ ಮತ್ತು ಒಳ್ಳೆಯದು ಕೂಡ. ಇಂತಹವರಿಗಾಗಿ ವರದಾನವಾಗಿರುವುದು ದಂತ ಇಂಪ್ಲಾಟ್‌.

ಈ ಇಂಪ್ಲಾಂಟ್‌ ಎಂಬ ಲೋಹದ ಮೂಳೆಯನ್ನು ಹೋಲುವ ಭಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ಬಾಯಿಯ ದವಡೆಯಲ್ಲಿ ಇಡುವುದು ಮತ್ತು ಇದರ ಸಹಾಯದಿಂದ ಇದರ ಮೇಲೆ ಕೃತಕ ಹಲ್ಲನ್ನು ಇಡಲಾಗುವುದು. ಹೇಗೆ ನಮ್ಮ ವಸಡು ಮತ್ತು ಹಲ್ಲಿನ ಸುತ್ತ ಇರುವ ಎಲುಬು ತಂಬಾಕು ಸೇವನೆಯಿಂದ ಕರಗುವುದು, ಹಾಗೆಯೇ ಶಸ್ತ್ರಚಿಕಿತ್ಸೆಯ ಮೂಲಕ ದವಡೆಯ ಒಳಗೆ ಹಾಕಿದ ದಂತ ಇಂಪ್ಲಾಟ್‌ ಸುತ್ತಾ ಬೆಳೆದಿರುವ ಎಲುಬು ಕೂಡ, ಕರಗುವುದು. ಅಲ್ಲದೇ ದಂತ ಇಂಪ್ಲಾಟ್‌ ವಿಫ‌ಲವಾಗುವುದು, ಇದರಿಂದಾಗಿ ಕೃತಕ ಹಲ್ಲು ಸಮೇತ ದಂತ ಇಂಪ್ಲಾಟ್‌, ಹೊರಗೆ ಬರುವುದು, ಧೂಮಪಾನ/ತಂಬಾಕು ಸೇವನೆ ನಿಲ್ಲಿಸುವುದು ಇಂತಹವರಲ್ಲಿ ಅತೀ ಮುಖ್ಯ. ಇಲ್ಲವಾದರೆ ಇಂತಹ ಅತೀ ವೆಚ್ಚದ, ಶಸ್ತ್ರಚಿಕಿತ್ಸೆಯ ಮೂಲ ಹಾಕಿದ ದಂತ ಇಂಪ್ಲಾಟ್‌ ವಿಫ‌ಲವಾಗುವುದು. ದಂತ ಇಂಪ್ಲಾಟ್‌ ಹಾಕುವ ಮುನ್ನ ನೀವು ಧೂಮಪಾನಿಗಳಾಗಿದ್ದಲ್ಲ ದಂತ ವೈದ್ಯರು ಧೂಮಪಾನ ನಿಲ್ಲಿಸಲು ಹೇಳುತ್ತಾರೆ. ಒಂದೊಮ್ಮೆ ನಿಲ್ಲಿಸದಿದ್ದಲ್ಲಿ, ಶಸ್ತ್ರಚಿಕಿತ್ಸೆಯ ಮೂಲಕ ಹಾಕಿದ ಇಂಪ್ಲಾಟ್‌ ವಿಫ‌ಲವಾಗುತ್ತದೆ. 

ತಂಬಾಕು ಮತ್ತು  ದಂತಕುಳಿ 
(ಹಲ್ಲು ಹುಳುಕು)

ತಂಬಾಕು ಸೇವಿಸುವವರಲ್ಲಿ ಹಲ್ಲಿನ ಸ್ವತ್ಛತೆಯಿಲ್ಲದೇ, ಅಲ್ಲಲ್ಲಿ ಆಹಾರ ಪದಾರ್ಥಗಳು ಸಿಲುಕಿಕೊಂಡು, ಬ್ಯಾಕ್ಟೀರಿಯಾಗಳು, ಶೇಖರಗೊಂಡು ದಂತಕುಳಿ;  ಹಲ್ಲು ಹುಳುಕು ಆಗುವುದರ ಸಾಧ್ಯತೆ ಜಾಸ್ತಿ. ಇದಲ್ಲದೇ ಈ ದಂತಕುಳಿ-ಹಲ್ಲು ಹುಳುಕು, ಹಲ್ಲಿನ ಒಳಗಿನ ಭಾಗಗಳಿಗೂ ಪಸರಿಸಿ, ಒಳಗೊಳಗೆ ಹಲ್ಲು ಹಾಳಾಗುವುದು. ಇದರಿಂದಾಗಿ, ಧೂಮಪಾನ ಮಾಡುವವರು/ತಂಬಾಕು/ಹೊಗೆಸೊಪ್ಪು ಸೇವಿಸುವವರು ಇದರಿಂದ ದೂರವಿದ್ದು ಹಲ್ಲಿನ ಆರೋಗ್ಯ/ವಸಡಿನ ಆರೋಗ್ಯ/ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬಾಯಿಯ ವಾಸನೆ : ವಯಸ್ಕರಲ್ಲಿ, ಧೂಮಪಾನ ನಿಲ್ಲಿಸುವ ಬಗ್ಗೆ ಜಾಗೃತಿ ಮೂಡಿಸುವ ಘೋಷಣೆ ನೀವೆಲ್ಲರೂ ಕೇಳಿರಬಹುದು. “ನೀವು ನಿಮ್ಮ ಹೆಂಡತಿ/ಗಂಡಂದಿರಲ್ಲಿ, ಅಥವಾ ನಿಮ್ಮ ಗೆಳೆಯ/ಗೆಳತಿಯರಲ್ಲಿ ಧೂಮಪಾನ ರಹಿತ ಮುತ್ತು ಕೇಳಿರಿ’ ಎಂದು. 

ಧೂಮಪಾನಿಗಳಲ್ಲಿ, ಬಾಯಿಯ ವಾಸನೆ ಸಾಮಾನ್ಯ. ಅದೂ ಕೂಡ ಸಿಗಾರ್‌/ಚುಟ್ಟ ಸೇವನೆ ಮಾಡುವವರಲ್ಲಿ ಇನ್ನೂ ಜಾಸ್ತಿ. ಇಂತಹವರು ಇದನ್ನು ಮುಚ್ಚಿಕೊಳ್ಳಲಿಕ್ಕಾಗಿ, ಚ್ಯುಯಿಂಗ್‌ ಗಮ್‌ ಜಗಿಯುವುದು ಕಾಣುತ್ತೇವೆ. ಪ್ರತಿಯೊಬ್ಬರು ತಮಗೆ ಬೇಕಾದವರಲ್ಲಿ ಪರಿವರ್ತನೆ ಕಾಣಬೇಕಾದರೆ, ಧೂಮಪಾನ ನಿಲ್ಲಿಸಲು ಮತ್ತು “ಧೂಮಪಾನ ವಾಸನೆ ರಹಿತ ಮುತ್ತಿನ’ ಹಕ್ಕಿಗೆ ಒತ್ತು ನೀಡಿ.

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.