ತಂಬಾಕು ಸೇವನೆ ಅಪಾಯಗಳು 


Team Udayavani, Jul 15, 2018, 6:00 AM IST

tobacco-restrictions.gif

ಹಿಂದಿನ ವಾರದಿಂದ – 4 ಮಿಲಿ ಗ್ರಾಂ ಚಿವಿಂಗ್‌ಗಮ್‌ ಬಳಸುತ್ತಿದ್ದರೆ, ಅದನ್ನು 2 ಮಿಲಿ ಗ್ರಾಂ ಮಾಡಿ ನಂತರ ಮೇಲಿನ ರೀತಿಯಲ್ಲಿ ಹಂತ-ಹಂತವಾಗಿ ಮುಂದುವರಿಸಲಾಗುವುದು
– ದಿನಕ್ಕೆ ಚಪಲವಾದಾಗ ಒಂದೆರಡು ಸಲ ಬಳಕೆಯ ಹಂತದವರೆಗೆ ತಲುಪಿದಾಗ ಇವುಗಳನ್ನು ನಿಲ್ಲಿಸಲಾಗುವುದು
– ಸಾಧಾರಣವಾಗಿ ಇವುಗಳನ್ನು ಮೂರು ತಿಂಗಳಿಗಿಂತ ಹೆಚ್ಚು ಕೊಡುವುದಿಲ್ಲ

ಚಿವಿಂಗ್‌ಗಮ್‌ ನಿಂದ ಆಗಬಹುದಾದ ಅಡ್ಡ ಪರಿಣಾಮಗಳು
ಬಾಯಿ/ಗಂಟಲು ಉರಿಯುವುದು, ವಾಂತಿ ಬರುವುದು, ಬಿಕ್ಕಳಿಕೆ ಬರುವುದು, ಹೆಚ್ಚು ಜೊಲ್ಲು ಸುರಿಯುವುದು.ಚಿವಿಂಗ್‌ಗಮ್‌ ಈ ಜನರಲ್ಲಿ ಕೊಡಲಾಗುವುದಿಲ್ಲ: ಹೊಟ್ಟೆಯಲ್ಲಿ ಹುಣ್ಣಿರುವವರು, ಕಳೆದ ಎರಡು ವಾರಗಳಲ್ಲಿ ಹೃದಯಾಘಾತ (ಹಾರ್ಟ್‌ ಅಟ್ಯಾಕ್‌), ಪಾಲ್ಸಿ (ಸ್ಟ್ರೋಕ್‌) ಆದವರು, ನಿಯಂತ್ರಣದಲ್ಲಿರದ ಹೃದಯದ ಕಾಯಿಲೆಯಿರುವವರು ಮತ್ತು ಇತರ ಗಂಭೀರ ದೈಹಿಕ ಕಾಯಿಲೆಯಿರುವವರು.

2.  ನಿಕೊಟಿನ್‌ ಕೊಡದೇ ಇರುವ ಚಿಕಿತ್ಸೆ (ನಾನ್‌- ನಿಕೊಟಿನ್‌ ರಿಪ್ಲೇಸ್‌ ಮೆಂಟ್‌ ಥೆರಪಿ)
ಈ ಚಿಕಿತ್ಸೆಯಲ್ಲಿ, ನಿಕೊಟಿನ್‌ ಪರಿಣಾಮಬೀರುವ ನರವಾಹಕಗಳ ಮೇಲೆ ಪರಿಣಾಮ ಬೀರುವ ಮಾತ್ರೆಗಳನ್ನು ಉಪಯೋಗಿಸಲಾಗುತ್ತದೆ. ಮೇಲಿನ ವಿಧಾನದಲ್ಲಿ ನಿಕೊಟಿನ್‌ ಶುರುಮಾಡಿದ ಅನಂತರ ತತ್‌ಕ್ಷಣವೇ ತಂಬಾಕು ನಿಲ್ಲಿಸಲಾಗುವುದು. ಆದರೆ ಈ ವಿಧಾನದಲ್ಲಿ ಮಾತ್ರೆ ಪ್ರಾರಂಭಿಸಿದ ಒಂದರಿಂದ ಎರಡು ವಾರದ ಅನಂತರ ತಂಬಾಕನ್ನು ನಿಲ್ಲಿಸಲಾಗುತ್ತದೆ. ಈ ಮಾತ್ರೆಗಳೆಂದರೆ: 

ಬುಪ್ರೋಪಿಯೊನ್‌ ವೆರಿನಿಕ್ಲೈನ್‌
ನಡವಳಿಕೆ ಚಿಕಿತ್ಸೆ ಮತ್ತು ಔಷಧಿ ಚಿಕಿತ್ಸೆಯನ್ನು ಒಟ್ಟಿಗೆ ಕೊಡುವುದು ಅತ್ಯಂತ ಪರಿಣಾಮಕಾರಿ ಚಿಕಿತ್ಸೆ. ಬೇರೆ-ಬೇರೆ ಚಿಕಿತ್ಸಾ ವಿಧಾನಗಳು ಬೇರೆ-ಬೇರೆ ರೀತಿಯಲ್ಲಿ ಕೆಲಸ ಮಾಡುವುದರಿಂದ, ಈ ಚಿಕಿತ್ಸೆಗಳು ಒಟ್ಟಾಗಿ ಕೊಟ್ಟಾಗ ಒಂದಕ್ಕೊಂದು ಪೂರಕವಾಗುವುದಲ್ಲದೇ ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಸ್ವಸಹಾಯ ಪದ್ಧತಿಗಳು ಸ್ವಲ್ಪ$ಮಟ್ಟದಲ್ಲಿ ಮಾತ್ರ ಪರಿಣಾಮಕಾರಿಯಾಗಿರುತ್ತವೆ. ಆದರೆ ಮೇಲೆ ನಮೂದಿಸಿದ ಚಿಕಿತ್ಸಾ ವಿಧಾನಗಳು ಒಂದೇ ತರಹದ ಅಥವಾ ಒಟ್ಟಾಗಿ ಕೊಟ್ಟಾಗ ಪರಿಣಾಮವು ಹೆಚ್ಚಿಗಿರುತ್ತದೆ.

ತಂಬಾಕು ನಿಲ್ಲಿಸಿದ ನಂತರ  ಕಂಡುಬರುವ ತೊಂದರೆಗಳು  ಮತ್ತು ಅವುಗಳ ನಿರ್ವಹಣೆ
ತಂಬಾಕಿನ ಅವಲಂಬಿತ ವ್ಯಕ್ತಿ ತಂಬಾಕು ಸೇವನೆ ನಿಲ್ಲಿಸಿದ ಅನಂತರ ವಿವಿಧ ದೈಹಿಕ/ಮಾನಸಿಕ ತೊಂದರೆಗಳು ಸ್ವಲ್ಪ ಸಮಯದವರೆಗೆ ಅಂದರೆ 2 ದಿನದಿಂದ 2 ವಾರಗಳವರೆಗೆ ಕಂಡುಬರಬಹುದು. ಇವುಗಳ ನಿರ್ವಹಣೆಗೆ ಮೇಲೆ ನಮೂದಿಸಿದ ಚಿಕಿತ್ಸೆಗಳು ಫ‌ಲಕಾರಿಯಾಗಿರುವುವು. ಅದಲ್ಲದೇ ಕೆಲವು ನಡವಳಿಕಾ ವಿಧಾನಗಳನ್ನು ಈ ಕೆಳಗಿನಂತೆ ಕೂಡ ಕಲಿಸಿಕೊಡಲಾಗುವುದು.

ಕಿರಿ-ಕಿರಿಯಾಗುವುದು: ವಾಕಿಂಗ್‌ ಹೋಗುವುದು, ಸ್ನಾನಕ್ಕೆ ಹೋಗುವುದು, ಇಷ್ಟವಾಗುವ ಸಂಗೀತ ಕೇಳುವುದು, ಸ್ನೇಹಿತರೊಂದಿಗೆ ಮಾತಾಡುವುದು, ಯೋಗ ಮಾಡುವುದು, ನಿಧಾನವಾಗಿ ಮತ್ತು ಆಳವಾಗಿ ಉಸಿರಾಡುವುದು.

ಆಯಾಸ: ವಿಶ್ರಮಿಸುವುದು, ನಿದ್ದೆ ಮಾಡುವುದು, ನೀರು/ಜ್ಯೂಸ್‌ ಕುಡಿಯುವುದು.
ನಿದ್ರಾಹೀನತೆ: 6 ಗಂಟೆಯ ಅನಂತರ ಟೀ, ಕಾಫಿ, ಕೋಲ್ಡ… ಡ್ರಿಂಕ್ಸ್‌ ಕುಡಿಯಬಾರದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು
ಕೆಮ್ಮು: ಬಿಸಿ ಆವಿ/ಹೊಗೆ ತೆಗೆದುಕೊಳ್ಳುವುದು
ಏಕಾಗ್ರತೆಗೆ ಕಷ್ಟವಾಗುವುದು: ಕೆಲಸ ಮಾಡುವ ಬಗ್ಗೆ ಮುಂಚೆಯೇ ಯೋಜನೆ ಮಾಡಿಕೊಳ್ಳುವುದು, ಸಮಯ ಪಾಲನೆ ಮಾಡುವುದು, ಕೆಲಸವನ್ನು ವಿಭಜಿಸುವುದು
ಮಲಬದ್ಧತೆ: ಹೆಚ್ಚು ನಾರಿರುವ ಆಹಾರ ತೆಗೆದುಕೊಳ್ಳುವುದು ಉದಾ: ಹಣ್ಣು, ತರಕಾರಿ, ಇತ್ಯಾದಿ; ಹೆಚ್ಚಿನ ದ್ರವ್ಯ ತೆಗೆದುಕೊಳ್ಳುವುದು
ತಲೆನೋವು: ಸರಿಯಾಗಿ ದ್ರವ್ಯ ಸ್ವೀಕರಿಸುವುದು, ಸ್ವಲ್ಪ-ಸ್ವಲ್ಪ ತಿನ್ನುತ್ತಾ ಇರುವುದು, ವಿಶ್ರಮಿಸುವುದು
ಹಸಿವು ಹೆಚ್ಚಾಗುವುದು: ಸ್ವಲ್ಪ ಸ್ವಲ್ಪ ಆಹಾರ ಪದೇ-ಪದೇ ತೆಗೆದುಕೊಳ್ಳುವುದು 
ತಂಬಾಕಿನ ಆಸೆಯಾಗುವುದು/ಚಪಲ: ಗಮನ ಬೇರೆ ಕಡೆ ಹರಿಸುವುದು- ಸಂಗೀತ ಕೇಳುವುದು, ಓದುವುದು, ಮಾತನಾಡುವುದು, ವಾಕಿಂಗ್‌ ಮಾಡುವುದು, ನೀರು ಕುಡಿಯುವುದು. ತನ್ನಷ್ಟಕ್ಕೆ ತಾನೆ ಹೇಳಿಕೊಳ್ಳುವುದು: ಈ ಚಪಲ ತಾತ್ಕಾಲಿಕ ಮತ್ತು ಕೆಲವು ಕ್ಷಣಗಳಿಗಾಗಿ ಮಾತ್ರ ಇರುವುದು; ನಾನಿದನ್ನು ನಿಯಂತ್ರಿಸಬಲ್ಲೆ.

ಕೊನೆಯದಾಗಿ ಹೆಳುವುದಾದರೆ, ತಂಬಾಕು ಒಂದು ಜೀವನಶೈಲಿಯ ಅಂಗವಾಗಿ ಕೆಲವರಲ್ಲಿ ಜೀವನದ ಭಾಗವಾಗಿ ಹೋಗಿ ತನ್ನದಲ್ಲದೇ ಕುಟುಂಬ, ಸಮಾಜದ ಆರೋಗ್ಯಕ್ಕೆ ಶಬ್ದವಿಲ್ಲದೇ ಗಂಭೀರವಾಗಿ ಹಾನಿಮಾಡುತ್ತಿದೆ. ಇವುಗಳಿಗಾಗಿ ಚಿಕಿತ್ಸೆ ಲಭ್ಯವಿದ್ದು, ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು, ವೈದ್ಯರೊಟ್ಟಿಗೆ ಈ ನಿಟ್ಟಿನಲ್ಲಿ ತಂಬಾಕು ಸೇವಿಸುವ ವ್ಯಕ್ತಿಗೆ ಸಹಾಯ ನೀಡಿದರೆ ಈ ತಂಬಾಕಿನ ಪಿಡುಗನ್ನು ಆತನಿಂದ ಶಾಶ್ವತವಾಗಿ ದೂರವಿಡಬಹುದು. ಇವುಗಳಿಗಾಗಿ ಮಾನಸಿಕ ರೋಗ ಚಿಕಿತ್ಸಾ ವಿಭಾಗದಲ್ಲಿ ಸೂಕ್ತ ಚಿಕಿತ್ಸೆಯನ್ನು ಕೊಡಲಾಗುವುದು.
(ಆಧಾರ: ವಿಶ್ವ ಆರೋಗ್ಯ ಸಂಸ್ಥೆ ಕೈಪಿಡಿ 2012, ತಂಬಾಕು ಅವಲಂಬನೆ ಚಿಕಿತ್ಸಾ ಮಾರ್ಗದರ್ಶಿ, ಭಾರತ ಸರಕಾರ, 2011)
Mob: 9972028881; 
Email: 
ravindra.nmhotmail.com

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.