CONNECT WITH US  

ಸ್ಕಿಝೋಫ್ರೇನಿಯಾ

ಸಾಂದರ್ಭಿಕ ಚಿತ್ರ..

ಹಿಂದಿನ ವಾರದಿಂದ- 2. ರಸಾಯನಗಳು:ಸ್ಕಿಝೋಫ್ರೇನಿಯಾ ರೋಗಿಗಳ ಮೆದುಳಿನಲ್ಲಿ ವಿವಿಧ ರಸಾಯನಗಳ ಏರು-ಪೇರು ಕಂಡುಬಂದಿದೆ. ಉದಾ: ಡೋಪಮಿನ್‌ ಸಿರೋಟೋನಿನ್‌, ಇತ್ಯಾದಿ ಈ ರಸಾಯನಗಳು ಮೆದುಳಿನ ವಿವಿಧ ಭಾಗಗಳಲ್ಲಿ ಎರಡು ನರಗಳ ಮಧ್ಯ ಸಂದೇಶವಾಹಕಗಳಾಗಿ (Neurotransmitter) ಕಾರ್ಯ ನಿರ್ವಹಿಸುತ್ತವೆ. ಕೆಲವು ಭಾಗಗಳಲ್ಲಿ ಇವುಗಳು ಹೆಚ್ಚಾಗಿ ಉತ್ಪನ್ನಗೊಂಡಾಗ ಒಬ್ಬರೇ ಇರುವಾಗ ಕಿವಿಯಲ್ಲಿ ಮಾತು ಕೇಳುವುದು (ಭ್ರಮೆ, Hallucination) ಆಗುತ್ತದೆ. (ಉದಾ: ಡೋಪಮಿನ್‌ ಪ್ರಮಾಣ ಹೆಚ್ಚಾದಾಗ)

3. ಇನೆ#ಕ್ಷನ್ಸ್‌  (tions): 
ಸ್ಕಿಝೋಫ್ರೇನಿಯಾದಿಂದ ಬಳಲು ತ್ತಿರುವ ರೋಗಿಗಳಲ್ಲಿ ಅವರ ತಾಯಿಯ ಗರ್ಭಾವಸ್ಥೆಯ ಮತ್ತು ರೋಗಿಗಳ ಜನನ ಬಾಲ್ಯದ ವಿವರಗಳನ್ನು ಪಡೆದಾಗ ಕಂಡುಬಂದಿರುವ ಅಂಶಗಳೆಂದರೆ, ಮಹಿಳೆ ಗರ್ಭಿಣಿಯಾಗಿರುವಾಗ ವಿವಿಧ ರೋಗಾಣುಗಳಿಗೆ ತುತ್ತಾದಾಗ ಬೆಳೆಯುವ ಮೆದುಳಿಗೆ ಹಾನಿಯಾಗುತ್ತದೆ. ಆಗ ಮಗುವಿಗೆ ಭವಿಷ್ಯದಲ್ಲಿ ಈ ಸ್ಕಿಝೋಫ್ರೇನಿಯಾ  ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚಾಗಿರುವುದು ಕಂಡು ಬಂದಿದೆ. ಇನ್ನೊಂದು ಸಂಭಾವ್ಯತೆಯೆಂದರೆ, ನವಜಾತ ಶಿಶುವಿನಲ್ಲಿ ಮೆದುಳಿನ ಇನೆ#ಕ್ಷನ್‌ ಆದಾಗ, ಪೂರ್ತಿ ದಿನ ತುಂಬದೇ ಬೇಗ ಹೆರಿಗೆಯಾದಾಗ, ಹೆರಿಗೆ ಸಮಯದಲ್ಲಿ  ಮಗುವಿಗೆ ತೊಂದರೆಯಾದಾಗ, ಆ ಮಗುವಿಗೆ ಮುಂದೆ ಭವಿಷ್ಯದಲ್ಲಿ ಸ್ಕಿಝೋಫ್ರೇನಿಯಾ ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚಾಗಿರುವುದು ಕಂಡು ಬಂದಿದೆ.

4. ಇತರ: ತಲೆಗೆ/ಮೆದುಳಿಗೆ ಪೆಟ್ಟು ಬಿದ್ದ ಅನಂತರ, ಪಿಟ್ಸ್‌ /ಮೂಛೆì ರೋಗದಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಮಾದಕ ವಸ್ತು ಸೇವಿಸುವ ವ್ಯಕ್ತಿಗಳಲ್ಲಿ ಇತ್ಯಾದಿ.

ಇದರ ಚಿಕಿತ್ಸೆ  ಹೇಗೆ?
ಸ್ಕಿಝೋಫ್ರೇನಿಯಾ ಕಾಯಿಲೆಗಾಗಿ ಮನೋವೈದ್ಯರನ್ನು ಸಂಪರ್ಕಿಸಿದಾಗ, ಸಾಧಾರಣವಾಗಿ ಈ ಕೆಳಗಿನಂತೆ ಮುಂದುವರಿಯಲಾಗುತ್ತದೆ. 

ಮೊದಲಿಗೆ ರೋಗದ ಎಲ್ಲ ವಿವರಗಳನ್ನು ರೋಗಿಯಿಂದ ಮತ್ತು ಮನೆಯವರಿಂದ ಪಡೆಯಲಾಗುತ್ತದೆ.

ವಿವರವಾಗಿ ದೈಹಿಕ ಪರೀಕ್ಷೆ ಮಾಡಲಾಗುತ್ತದೆ.ಅಗತ್ಯ ರಕ್ತ ಪರೀಕ್ಷೆಗಳನ್ನು ಮಾಡಲಾಗುತ್ತದೆ: ಹಿಮೋಗ್ಲೋಬಿನ್‌ ಮತ್ತು ಇತರ ರಕ್ತ ಕಣಗಳ ಪ್ರಮಾಣವನ್ನು ನೋಡಲಾಗುತ್ತದೆ. ಕೆಲವೊಮ್ಮೆ ಸ್ಕಿಝೋಫ್ರೇನಿಯಾ ರೋಗಿಗಳು ಸರಿಯಾಗಿ ಆಹಾರ ತೆಗೆದುಕೊಳ್ಳದಿರುವಾಗ ಪೋಷಕಾಂಶಗಳ ಕೊರತೆ ಕಂಡುಬರಬಹುದು. ಇವುಗಳನ್ನು  ರಕ್ತಪರೀಕ್ಷಿಸಲಾಗುತ್ತದೆ. ಕೆಲವೊಮ್ಮೆ ಥೈರಾಯ್ಡ  ಹಾರ್ಮೋನಿನ ಏರುಪೇರಿನಿಂದಾಗಿ ಮೇಲಿನ ತರಹದ ಲಕ್ಷಣಗಳು ಕಂಡುಬರಬಹುದು. ಅದಕ್ಕಾಗಿ ಥೈರಾಯ್ಡ ಹಾರ್ಮೋನಿನ ಪ್ರಮಾಣವನ್ನು ನೋಡಲಾಗುತ್ತದೆ. ಲಿವರ್‌ ಮತ್ತು ಕಿಡ್ನಿಗೆ ಸಂಬಂಧಪಟ್ಟ ರಕ್ತಪರೀಕ್ಷೆಗಳು, ಯಾಕೆಂದರೆ, ಈ ಕಾಯಿಲೆಯ ಚಿಕಿತ್ಸೆಗಾಗಿ ಕೊಡುವ ಕೆಲವು ಮಾತ್ರೆಗಳು ಈ ಅಂಗಗಳ ಮೂಲಕ ಹಾಯ್ದು ಹೋಗಿ ವಿಸರ್ಜನೆಯಾಗುತ್ತವೆ. ಅದಕ್ಕಾಗಿ ಈ ಅಂಗಗಳ ಸ್ವಸ್ಥತೆಯನ್ನು ಮುಂಚೆಯೇ ಪರೀಕ್ಷಿಸಲಾಗುತ್ತದೆ. ಮತ್ತೆ ಮದ್ಯಪಾನ ಅಥವಾ ಮಾದಕ ವಸ್ತುಗಳನ್ನು ಉಪಯೋಗಿಸಿದ್ದಲ್ಲಿ  ಲಿವರ್‌ನ ತೊಂದರೆಗಳು ಗೊತ್ತಾಗುತ್ತವೆ. 40 ವರ್ಷಗಳಿಗಿಂತ ಹೆಚ್ಚಿನ ವಯಸ್ಸಿನವರಲ್ಲಿ ಈ ಸಿ ಜಿ  (ECG) ಮಾಡಲಾಗುತ್ತದೆ.ಈ ಕೆಳಗಿನ ಪರೀಕ್ಷೆಗಳನ್ನು ಅವಶ್ಯಕತೆಯಿದ್ದಾಗ ಮಾತ್ರ ಮಾಡಲಾಗುವುದು ವಿನಾ ಕಾರಣ ಇವುಗಳನ್ನು ಮಾಡುವುದಿಲ್ಲ. 

ಈ ಈ ಜಿ (EEG) ಅಥವಾ ಆಡುಭಾಷೆಯಲ್ಲಿ ಬ್ರೈನ್‌ ಮ್ಯಾಪಿಂಗ್‌ : ಇದು ಪಿಟ್ಸ್‌ ಅಥವಾ ಮೂಛೆì ಕಾಯಿಲೆಯಿರುವವರಿಗಾಗಿ (Seizure/Epilepsy) ಇರುವ ಪರೀಕ್ಷೆ. ಫಿಟ್ಸ್‌ ಕಾಯಿಲೆ ಇರುವವರಲ್ಲಿ ಸಾಮಾನ್ಯವಾಗಿ ಇದರಲ್ಲಿ ಬದಲಾವಣೆ ಕಂಡು ಬರುವುದು. ಆದರೆ ಕೆಲವೊಮ್ಮೆ  ಸ್ಕಿಝೋಫ್ರೇನಿಯಾ ರೋಗ ನಿರ್ಣಯಕ್ಕೆ ಉಪಯೋಗಕಾರಿಯಲ್ಲ. ಸಾಧಾರಣವಾಗಿ ಈ ಪರೀಕ್ಷೆಯನ್ನು ಸ್ಕಿಝೋಫ್ರೇನಿಯಾ ಕಾಯಿಲೆಯಲ್ಲಿ  ಮಾಡುವ ಅವಶ್ಯಕತೆಯಿರುವುದಿಲ್ಲ. ನಿಮ್ಮ ಮನೋವೈದ್ಯರು ಈ ಪರೀಕ್ಷೆ ಮಾಡುತ್ತಿದ್ದರೆ ಅದಕ್ಕೆ ಕಾರಣವಿರಬಹುದು ಮತ್ತು ಅದರ ಬಗ್ಗೆ ನೀವು ನಿಮ್ಮ ಮನೋವೈದ್ಯರಿಗೆ ಕೇಳಿ ಅದರ ಉದ್ದೇಶ ತಿಳಿದುಕೊಳ್ಳತಕ್ಕದು.

ಸಿ.ಟಿ. ಸ್ಕ್ಯಾನ್‌ (CT Scan) ಅಥವಾ  ಎಂ.ಆರ್‌.ಐ. ಸ್ಕ್ಯಾನ್‌ (MRI Scan): ಇವುಗಳು ಸಾಮಾನ್ಯವಾಗಿ ಮೆದುಳಿನಲ್ಲಿನ ತೊಂದರೆಗಳನ್ನು  ಗುರುತಿಸಲಿಕ್ಕೆ ಮಾಡಲಾಗುವುದು. ಉದಾ: ಸ್ಟ್ರೋಕ್‌ ಆದಾಗ, ಮೆದುಳಿನ ಇನೆ#ಕ್ಷನ್‌ ಆದಾಗ, ಮೆದುಳಿನ ಕ್ಯಾನ್ಸರ್‌ ಬಗ್ಗೆ ಸಂಶಯವಿರುವಾಗ, ಇತ್ಯಾದಿ, ಸ್ಕಿಝೋಫ್ರೇನಿಯಾ ಕಾಯಿಲೆಯಲ್ಲಿ ಈ ಸ್ಕ್ಯಾನ್‌ಗಳ ಉಪಯೋಗ ಕಡಿಮೆ ಯಾಕೆಂದರೆ, ಕಾಯಿಲೆಯಲ್ಲಿ ಮೆದುಳಿನ ರಸಾಯನಗಳಲ್ಲಿ ಬದಲಾವಣೆಗಳಿರಬಹುದು ಆದರೆ ಈ ಬದಲಾವಣೆಗಳು ಸ್ಕ್ಯಾನ್‌ಗಳಲ್ಲಿ ಕಂಡುಬರುವುದಿಲ್ಲ. ಮನೋವೈದ್ಯರಿಗೆ ಮೆದುಳಿನ ರಚನಾತ್ಮಕ ತೊಂದರೆಗಳಿಂದಾಗಿ ಕಾಯಿಲೆ ಬಂದಿದೆ ಎಂದು ಸಂಶಯ ಬಂದಾಗ ಅವರು ಇವುಗಳನ್ನು ಮಾಡಿಸಲು ಹೇಳಬಹುದು. ನಿಮ್ಮ ಮನೋವೈದ್ಯರು ಈ ಪರೀಕ್ಷೆ ಮಾಡುತ್ತಿದ್ದರೆ ಅದಕ್ಕೆ ಕಾರಣವಿರಬಹುದು ಮತ್ತು ಅದರ ಬಗ್ಗೆ ನೀವು ನಿಮ್ಮ ಮನೋವೈದ್ಯರಿಗೆ ಕೇಳಿ ತಿಳಿದುಕೊಳ್ಳತಕ್ಕದ್ದು. ಅನವಶ್ಯಕವಾಗಿ ವೈದ್ಯರ ಮೇಲೆ ಸ್ಕ್ಯಾನ್‌ ಮಾಡಿಯೆಂದು ಒತ್ತಡ ಹೇರುವ ಅಗತ್ಯವಿಲ್ಲ.

ಸ್ಕಿಝೋಫ್ರೇನಿಯಾ ಕಾಯಿಲೆಯಿರುವವರಲ್ಲಿ ಕಂಡುಬರುವ ಇತರ ಕಾಯಿಲೆಗಳು ಸ್ಕಿಝೋಫ್ರೇನಿಯಾದಿಂದ ಬಳಲುತ್ತಿರುವವರಲ್ಲಿ ಇತರ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳು ಕಂಡುಬರುತ್ತವೆ. ಅವುಗಳನ್ನು ಈ ಕೆಳಗಿನಂತೆ ನಮೂದಿಸಲಾಗಿದೆ.

ಜೊತೆಗೆ ಕಂಡುಬರುವ ಮಾನಸಿಕ ಕಾಯಿಲೆಗಳು:
- ಬೊಜ್ಜುತನ (obesity): ಸ್ಕಿಝೋಫ್ರೇನಿಯಾ

ದಿಂದ ಬಳಲುತ್ತಿರುವವರಲ್ಲಿ  ಹೆಚ್ಚಾಗಿ ಯಾವುದೇ ದೈಹಿಕ ಕೆಲಸ ಮಾಡದೇ ಸುಮ್ಮನೆ ಕುಳಿತುಕೊಂಡಿರುತ್ತಾರೆ. ಹೀಗೆಯೇ ತಿಂಗಳುಗಟ್ಟಲೆ - ವರ್ಷಗಟ್ಟಲೆ ಮುಂದುವರಿದಾಗ ಬೊಜ್ಜುತನ ಕಂಡುಬರುತ್ತದೆ. ನಂತರ ಈ ಬೊಜ್ಜುತನ ಇತರ ದೈಹಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಉದಾ: ರಕ್ತದಲ್ಲಿನ ಕೊಬ್ಬಿನಂಶ ಹೆಚ್ಚಾಗುವುದು. ಸಕ್ಕರೆ ಕಾಯಿಲೆ/ಮಧುಮೇಹ ರೋಗ ಬರುವುದು. ಗಂಟುನೋವುಗಳು ಶುರುವಾಗುವುದು. ಹೃದಯಸಂಬಂಧಿ ಕಾಯಿಲೆಗಳು ತಲೆದೋರುವುದು ಇತ್ಯಾದಿ.
- ಸಕ್ಕರೆ ಕಾಯಿಲೆ/ಮಧುಮೇಹ ರೋಗ ಬರುವುದು: ಇದು ಮೇಲೆ ಹೇಳಿದ ಹಾಗೆ ದೈಹಿಕ ನಿಷ್ಕಿಯೆಯಿಂದ ಬರಬಹುದು. ಅಥವಾ ಕೆಲವೊಮ್ಮೆ  ಕೆಲವು ತರಹದ ಮಾತ್ರೆಗಳಿಂದ ಹಸಿವು ಹೆಚ್ಚಾಗಿ ಊಟ ಹೆಚ್ಚಿಗೆ ಮಾಡುತ್ತಾ ಹೋಗಿ ಯಾವುದೇ ದೈಹಿಕ ಚಟುವಟಿಕೆ ಮಾಡದೇ ಹೋಗುವುದರಿಂದ ಬರಬಹುದು. 
- ಹೃದಯಸಂಬಂಧಿ ಕಾಯಿಲೆಗಳು: ಇದು ಕೂಡ ಮೇಲೆ ಹೇಳಿದ ಹಾಗೆ ಬೊಜ್ಜಿನಿಂದಾಗಿ ದೇಹದ ಕೊಬ್ಬಿನಂಶ ಹೆಚ್ಚಾಗಿ ಅನಂತರ ಹೃದಯದ ಕಾಯಿಲೆಯಾಗಿ ಕಂಡುಬರಬಹುದು ಅಥವಾ ಕೆಲವೊಮ್ಮೆ ಕೆಲವು ತರಹದ ಮಾತ್ರೆಗಳಿಂದ ಹೃದಯದ ಕಾರ್ಯದಲ್ಲಿ ಸ್ವಲ್ಪ ಬದಲಾವಣೆಗಳಾಗಿ ಬರಬಹುದು . ಆದರೆ, ಸಾಧಾರಣವಾಗಿ ಇದರ ಬಗ್ಗೆ ವೈದ್ಯರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು  ಈ ತೊಂದರೆ ಬರದಂತೆ ಸೂಕ್ತ ಮಾತ್ರೆ ನೀಡುತ್ತಾರೆ.

- ಮುಂದಿನ ವಾರಕ್ಕೆ  

Trending videos

Back to Top