ಜಾಂಡಿಸ್‌ ಅಥವಾ ಕಾಮಾಲೆ


Team Udayavani, Jul 29, 2018, 6:00 AM IST

jaundice.jpg

ಹಿಂದಿನ ವಾರದಿಂದ- ಬಿಲಿರುಬಿನ್‌ನ ಈ ಸಹಜ ಮಾರ್ಗದಲ್ಲಿ ಯಾವುದೇ ಅಡಚಣೆ ಉಂಟಾದರೆ ಜಾಂಡಿಸ್‌ ಉಂಟಾಗುತ್ತದೆ. ಜಾಂಡಿಸ್‌ ಎಂಬುದು ಸ್ವತಃ ಒಂದು ಕಾಯಿಲೆಯಲ್ಲ; ಬದಲಾಗಿ ಇತರ ಅನೇಕ ಕಾಯಿಲೆಗಳಿಂದಾಗಿ ಉಂಟಾಗಬಹುದಾದ ಒಂದು ರೋಗ ಲಕ್ಷಣ ಎಂಬುದು ಈಗ ನಿಮಗೆ ಅರಿವಾಗಿರಬಹುದು.

ಕಾರಣಗಳೇನು?
ಮೂಲತಃ ಮೂರು ವಿಧವಾದ ಜಾಂಡಿಸ್‌ಗಳಿವೆ. ಜಾಂಡಿಸ್‌ ಉಂಟಾಗಿರುವ ವ್ಯಕ್ತಿ ವೈದ್ಯರಲ್ಲಿ ಬಂದ ಕೂಡಲೇ ನಾವು ಕ್ಷಿಪ್ರವಾಗಿ ರೋಗಿ ಹೊಂದಿರುವ ಜಾಂಡಿಸ್‌ ಯಾವ ವಿಧವಾದದ್ದು ಎಂಬುದನ್ನು ನಿರ್ಧರಿಸುತ್ತೇವೆ. ಬಳಿಕ ಆ ನಿರ್ದಿಷ್ಟ ವಿಧದ ಜಾಂಡಿಸ್‌ನತ್ತ ಗಮನ ಹರಿಸುತ್ತೇವೆ.

ಜಾಂಡಿಸ್‌ನ ಮೊದಲನೆಯ ವಿಧವನ್ನು ಪ್ರಿಹೆಪಾಟಿಕ್‌ ಎಂದು ಕರೆಯುತ್ತೇವೆ. ಅಂದರೆ, ಬಿಲಿರುಬಿನ್‌ ಪಿತ್ತಕೋಶವನ್ನು ಪ್ರವೇಶಿಸುವುದಕ್ಕೆ ಮುಂಚಿನದು ಎಂಬ ಅರ್ಥ. ಈ ವಿಧವಾದ ಜಾಂಡಿಸ್‌ ಕೇವಲ ಎರಡು ಸಂದರ್ಭಗಳಲ್ಲಿ ಉಂಟಾಗಬಹುದಾಗಿದೆ. ಒಂದೋ, ಮೇದೋಜೀರಕ ಗ್ರಂಥಿಯಲ್ಲಿ ಬಿಲಿರುಬಿನ್‌ ಉತ್ಪಾದನೆ ಹೆಚ್ಚಾಗಿದೆ. ರಕ್ತದಲ್ಲಿ ಕೆಂಪು ರಕ್ತಕಣಗಳು ಸಹಜವಾಗಿಲ್ಲದೆ ಬೇಗನೆ ನಾಶ ಹೊಂದುವುದರಿಂದ ಇದು ಉಂಟಾಗಬಹುದು. ನೀವು ಥಾಲಸ್‌ಮೇನಿಯಾ ಎಂಬ ಕಾಯಿಲೆಯ ಬಗ್ಗೆ ಕೇಳಿರಬಹುದು. ಹಿಮೊಗ್ಲೋಬಿನ್‌ನಲ್ಲಿ ಇರುವ ಕೆಲವು ವೈಕಲ್ಯಗಳಿಂದ ಕೆಂಪು ರಕ್ತಕಣಗಳು ಬೇಗನೆ ನಾಶ ಹೊಂದುತ್ತವೆ. ಇದು ಹೆಚ್ಚುವರಿ ಬಿಲಿರುಬಿನ್‌ ಉತ್ಪಾದನೆಗೆ ಕಾರಣವಾಗುತ್ತದೆ. ಕೆಂಪು ರಕ್ತಕಣಗಳು ನಾಶ ಹೊಂದುವುದರಿಂದ ಈ ರೋಗಿಗಳು ರಕ್ತಹೀನತೆಯನ್ನೂ ಹೊಂದಿರುತ್ತಾರೆ. ಈ ಜಾಂಡಿಸ್‌ ಅನ್ನು ಹಿಮೋಲಿಟಿಕ್‌ ಜಾಂಡಿಸ್‌ ಎಂಬುದಾಗಿ ಕರೆಯುತ್ತಾರೆ. 

ಪ್ರಿಹೆಪಟಿಕ್‌ ಜಾಂಡಿಸ್‌ ಉಂಟಾಗಬಹುದಾದ ಇನ್ನೊಂದು ಸ್ಥಿತಿಯೆಂದರೆ, ಕೆಲವು ವೈಕಲ್ಯಗಳಿಂದಾಗಿ ಬಿಲಿರುಬಿನ್‌ ಪಿತ್ತಕೋಶವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಅಥವಾ ಪ್ರವೇಶಿಸಿದರೂ ಪಿತ್ತಕೋಶಕ್ಕೆ ಅದನ್ನು ಪಿತ್ತರಸದ ಮೂಲಕ ವಿಸರ್ಜನೆಗೊಳ್ಳುವ ರೂಪಕ್ಕೆ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಇದರ ಒಂದು ಸಾಮಾನ್ಯ ರೂಪವೆಂದರೆ ಗಿಲ್ಬರ್ಟ್ಸ್ ಡಿಸೀಸ್‌. ಇದರಲ್ಲಿ ಜನ್ಮತಃ ಇರುವ ವೈಕಲ್ಯದಿಂದಾಗಿ ಪಿತ್ತಕೋಶಕ್ಕೆ ಬಿಲಿರುಬಿನ್‌ ಅನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಮೇಲೆ ವಿವರಿಸಿದ ಎರಡೂ ಸಂದರ್ಭಗಳಲ್ಲಿ ಪಿತ್ತಕೋಶವು ಸಂಪೂರ್ಣ ಆರೋಗ್ಯಯುತವಾಗಿರುತ್ತದೆ. 

ರಕ್ತದಲ್ಲಿ ಪರಿಚಲನೆಯಾಗುತ್ತಿರುವ ಬಿಲಿರುಬಿನ್‌ ನೀರಿನಲ್ಲಿ ಕರಗುವಂಥದ್ದಲ್ಲವಾದ್ದರಿಂದ ಮೂತ್ರಪಿಂಡಗಳಿಗೆ ಅದನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೂತ್ರದ ಬಣ್ಣವೂ ಸಹಜವಾಗಿಯೇ ಇರುತ್ತದೆ. ಎಲ್ಲ ಪ್ರಿಹೆಪಟಿಕ್‌ ಜಾಂಡಿಸ್‌ ಪ್ರಕರಣಗಳಲ್ಲಿ ಪಿತ್ತಕೋಶಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯ ಇರುವುದಿಲ್ಲ.
 
ಎರಡನೆಯ ವಿಧವಾದ ಜಾಂಡಿಸ್‌ ಪಿತ್ತಕೋಶದಲ್ಲಿ ಇರುವ ಸಮಸ್ಯೆಯಿಂದಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ಹೆಪಟಿಕ್‌ ವಿಧವಾದ ಜಾಂಡಿಸ್‌ ಎನ್ನುತ್ತೇವೆ. ಇದು ಕಡಿಮೆ ಅವಧಿಯದ್ದು ಆಗಿರಬಹುದು ಅಥವಾ ದೀರ್ಘ‌ಕಾಲಿಕವಾಗಿರಬಹುದು. ಕಡಿಮೆ ಅವಧಿಯ ಪಿತ್ತಕೋಶ ಕಾಯಿಲೆಗೆ ಅತಿ ಸಾಮಾನ್ಯವಾದ ಕಾರಣ ಎಂದರೆ ವೈರಸ್‌ಗಳಿಂದ ಉಂಟಾಗುವ ಹೆಪಟೈಟಿಸ್‌. ಇದನ್ನು ವೈರಲ್‌ ಹೆಪಟೈಟಿಸ್‌ ಎಂಬುದಾಗಿ ಕರೆಯುತ್ತೇವೆ. ಹೆಪಟೈಟಿಸ್‌ ಉಂಟುಮಾಡುವ ಐದು ಬಗೆಯ ವೈರಸ್‌ಗಳಿವೆ: ಹೆಪಟೈಟಿಸ್‌ ಎ ವೈರಸ್‌, ಹೆಪಟೈಟಿಸ್‌ ಬಿ ವೈರಸ್‌, ಹೆಪಟೈಟಿಸ್‌ ಸಿ ವೈರಸ್‌, ಹೆಪಟೈಟಿಸ್‌ ಡಿ ವೈರಸ್‌ ಮತ್ತು ಹೆಪಟೈಟಿಸ್‌ ಇ ವೈರಸ್‌. ಪಿತ್ತಕೋಶವನ್ನು ಬಾಧಿಸುವ ಇನ್ನೂ ಕೆಲವು ವೈರಸ್‌ಗಳಿದ್ದರೂ ಅವುಗಳ ಬಗ್ಗೆ ನಾವಿಲ್ಲಿ ವಿವರಿಸುವುದಿಲ್ಲ. ಈ ಐದು ಹೆಪಟೈಟಿಸ್‌ ವೈರಸ್‌ಗಳಲ್ಲಿ ಎರಡು ಕಲುಷಿತ ನೀರು ಮತ್ತು  ಆಹಾರದ ಮೂಲಕ ಹರಡುತ್ತವೆ. ಅವುಗಳೆಂದರೆ ಹೆಪಟೈಟಿಸ್‌ ಎ ಮತ್ತು ಇ. ಕೆಲವೊಮ್ಮೆ ಹೆಪಟೈಟಿಸ್‌ ಹಾವಳಿ ದೊಡ್ಡ ಪ್ರಮಾಣದಲ್ಲಿ ಉಂಟಾಗುತ್ತದೆ. ನಮ್ಮ ದೇಶದಲ್ಲಿ ಜಾಂಡಿಸ್‌ನ ಈ ಭಾರೀ ಹಾವಳಿ ಹೆಪಟೈಟಿಸ್‌ ಇ ವೈರಸ್‌ನಿಂದ ಉಂಟಾಗುತ್ತದೆ. 

ಹೆಪಟೈಟಿಸ್‌ ಎ ಮತ್ತು ಇ ವೈರಸ್‌ಗಳ ಉತ್ತಮಾಂಶ ಎಂದರೆ ಅವು ಸ್ವತಃ ನಿಯಂತ್ರಣಕ್ಕೆ ಬರಬಲ್ಲಂಥವು. ಅಂದರೆ, ನೀವು ಚಿಕಿತ್ಸೆ ಒದಗಿಸದೇ ಇದ್ದರೂ ಇದಕ್ಕೆ ತುತ್ತಾದ ರೋಗಿ ಮೂರರಿಂದ ನಾಲ್ಕು ವಾರಗಳಲ್ಲಿ ಸಹಜ ಆರೋಗ್ಯಕ್ಕೆ ಮರಳುತ್ತಾರೆ. ಇನ್ನಿತರ 3 ಹೆಪಟೈಟಿಸ್‌ ವೈರಸ್‌ಗಳಾದ ಬಿ, ಸಿ ಮತ್ತು ಡಿ ಸೋಂಕು ಪೀಡಿತ ರಕ್ತದಿಂದ ಪ್ರಸಾರವಾಗುತ್ತವೆ. ಹೀಗಾಗಿ, ಇವು ಕೇವಲ ರಕ್ತ ಪೂರಣ, ಕಲುಷಿತ ಸಿರಿಂಜ್‌, ಲೈಂಗಿಕ ಸಂಬಂಧ ಹಾಗೂ ಜನನ ಸಂದರ್ಭದಲ್ಲಿ ತಾಯಿಯಿಂದ ಮಗುವಿಗೆ ಮಾತ್ರ ಹರಡಬಹುದಾಗಿದೆ.

ಜುಲೈ 28ನ್ನು ಜಾಗತಿಕ ಹೆಪಟೈಟಿಸ್‌ ದಿನವನ್ನಾಗಿ ಆಚರಿಸ ಲಾಗುತ್ತದೆ. ಇದು ಡಾ| ಬ್ಲೂಮ್‌ಬರ್ಗ್‌ ಎಂಬ ಅಮೆರಿಕನ್‌ ವಿಜ್ಞಾನಿಯ ಜನ್ಮದಿನ. ಹೆಪಟೈಟಿಸ್‌ ಬಿ ವೈರಸ್‌ ಅನ್ನು ಕಂಡು ಹಿಡಿದವರು ಇವರು. ಈ ವೈರಸ್‌ ಶೋಧವು ಹೆಪಟೈಟಿಸ್‌ ಬಿ ಲಸಿಕೆಯ ಆವಿಷ್ಕಾರಕ್ಕೆ ಕಾರಣವಾಯಿತು, ಇದರಿಂದಾಗಿ ಇಂದು ಹೆಪಟೈಟಿಸ್‌ ಬಿಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಈ ಲಸಿಕೆಯು ಪಿತ್ತಕೋಶದ ಸಿರೋಸಿಸ್‌ ಮತ್ತು ಪಿತ್ತಕೋಶದ ಕ್ಯಾನ್ಸರ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ತಡೆಗಟ್ಟುವುದಕ್ಕೆ ಕಾರಣವಾಗಿದೆ. 

ಕಲುಷಿತ ರಕ್ತದ ಮೂಲಕ ಪ್ರಸಾರವಾಗಬಹುದಾದ ಎಲ್ಲ ಮೂರು ವಿಧದ ಹೆಪಟೈಟಿಸ್‌ ವೈರಸ್‌ಗಳೂ ಪಿತ್ತಕೋಶಕ್ಕೆ ದೀರ್ಘ‌ಕಾಲಿಕ ಹಾನಿ ಉಂಟು ಮಾಡಬಲ್ಲವಾಗಿದ್ದು, ಸಿರೋಸಿಸ್‌ ಮತ್ತು ಪಿತ್ತಕೋಶ ಕ್ಯಾನ್ಸರ್‌ಗೂ ಕಾರಣವಾಗಬಲ್ಲವು. ಸರಿಯಾದ ರಕ್ತ ಪರೀಕ್ಷೆಗಳನ್ನು ನಡೆಸುವ ಮೂಲಕ ನಾವು ರೋಗಿ ಹೆಪಟೈಟಿಸ್‌ ವೈರಸ್‌ ಸೋಂಕಿಗೆ ತುತ್ತಾಗಿದ್ದಾನೆಯೇ ಹಾಗೂ ಆಗಿದ್ದರೆ ಯಾವ ವಿಧವಾದ ವೈರಸ್‌ ಎಂಬುದನ್ನು ಪತ್ತೆಹಚ್ಚಬಹುದು. 

ಪಿತ್ತಕೋಶದ ದೀರ್ಘ‌ಕಾಲಿಕ ಹಾನಿಯು ಸಿರೋಸಿಸ್‌ಗೆ ಕಾರಣವಾಗುತ್ತದೆ, ಇದರಲ್ಲಿ ಪಿತ್ತಕೋಶದ ಜೀವಕೋಶಗಳು ಗಮನಾರ್ಹ ಪ್ರಮಾಣದಲ್ಲಿ ನಾಶ ಹೊಂದಿರುತ್ತವೆ. ಇದರಿಂದ ಪಿತ್ತಕೋಶದ ಕಾರ್ಯಚಟುವಟಿಕೆ ನಷ್ಟವಾಗುತ್ತದೆ. ಬದುಕುಳಿಯಲು ಪಿತ್ತಕೋಶವು ಬಹಳ ಅಗತ್ಯ. ಪಿತ್ತಕೋಶದ ಕಾರ್ಯಾಚರಣೆ ಸರಿಯಾಗಿಲ್ಲದಿದ್ದರೆ ವ್ಯಕ್ತಿಯು ಬದುಕುಳಿಯಲು ಸಾಧ್ಯವಾಗುವುದಿಲ್ಲ. ಸಿರೋಸಿಸ್‌ ಹೊಂದಿರುವ ರೋಗಿಗಳು ಜಾಂಡಿಸ್‌ಗೆ ತುತ್ತಾಗುವುದಲ್ಲದೆ ಅವರ ಹೊಟ್ಟೆ ಮತ್ತು ಕಾಲುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಅವರು ರಕ್ತವಾಂತಿ ಮಾಡಿಕೊಳ್ಳಬಹುದು ಮತ್ತು ಸ್ಮತಿ ಕಳೆದುಕೊಳ್ಳಬಹುದು. ಸಿರೋಸಿಸ್‌ಗೆ ಮುಖ್ಯ ಕಾರಣ ಹೆಪಟೈಟಿಸ್‌ ವೈರಸ್‌. ಇಂದು ಹೆಪಟೈಟಿಸ್‌ ಬಿ ಮತ್ತು ಸಿ ವೈರಸ್‌ಗಳಿಗೆ ನಮ್ಮಲ್ಲಿ ಪರಿಣಾಮಕಾರಿ ಔಷಧಗಳಿವೆ. 

ಪಿತ್ತಕೋಶ ಕಾಯಿಲೆ ತುಂಬಾ ಮುಂದುವರಿಯದೆ ಇದ್ದಲ್ಲಿ ಆಗ ಬಹುತೇಕ ರೋಗಿಗಳು ಈ ಔಷಧಗಳಿಗೆ ಪ್ರತಿಸ್ಪಂದಿಸುತ್ತಾರೆ. ಆದರೆ ಕೆಲವೊಮ್ಮೆ, ಪಿತ್ತಕೋಶ ಕಾಯಿಲೆ ತುಂಬಾ ಮುಂದುವರಿದ ಹಂತದಲ್ಲಿದ್ದಾಗ ಈ ಔಷಧಿಗಳು ಕೆಲಸ ಮಾಡಲಾರವು. ಇಂತಹ ಸನ್ನಿವೇಶಗಳಲ್ಲಿ ರೋಗಿಗೆ ಪಿತ್ತಕೋಶ ಕಸಿ ಮಾಡಬೇಕಾಗುತ್ತದೆ. ಇದರಲ್ಲಿ ದಾನಿಯ ಪಿತ್ತಕೋಶದ ಅರ್ಧಾಂಶವನ್ನು ರೋಗಿಯ ದೇಹದಲ್ಲಿ ಕಸಿ ಮಾಡಲಾಗುತ್ತದೆ. ಪಿತ್ತಕೋಶ ಕಸಿಯ ಯಶಸ್ಸಿನ ದರವು ಉತ್ತಮವಾಗಿದ್ದರೂ ಇದು ಬಹಳ ವೆಚ್ಚದಾಯಕವಾಗಿದೆ; ಈ ಶಸ್ತ್ರಚಿಕಿತ್ಸೆಗೆ ಸುಮಾರು 20 ಲಕ್ಷ ರೂ. ವೆಚ್ಚವಾಗುತ್ತದೆ. 

– ಮುಂದಿನ ವಾರಕ್ಕೆ  

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

8

Measles: ದಡಾರ

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.