CONNECT WITH US  

ಆ್ಯಂಟಿಬಾಡಿ ಸಿಂಡ್ರೋಮ್‌

ಹಿಂದಿನ ವಾರದಿಂದ- ಎಪಿಎಸ್‌ ವೈದ್ಯಕೀಯ ಚಹರೆಗಳು
- ಶ್ವಾಸಕೋಶಕ್ಕೆ ರವಾನೆಯಾಗುವ ರಕ್ತ ಕರಣೆಗಳು (ಪಲ್ಮನರಿ ಎಂಬಾಲಿಸಮ್‌)
- ಮಿದುಳು, ಹೃದಯ, ಮೂತ್ರಪಿಂಡ ಮತ್ತು ಕಣ್ಣುಗಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತ.
- ಗರ್ಭಸ್ರಾವ - ಇದು ಗರ್ಭಧಾರಣೆಯ ಯಾವುದೇ ಹಂತದಲ್ಲಿ ಉಂಟಾಗಬಹುದು. ಆದರೆ ಮೊದಲ ತ್ತೈಮಾಸಿಕದ ಕೊನೆಯಲ್ಲಿ ಮತ್ತು ದ್ವಿತೀಯ ತ್ತೈಮಾಸಿಕದ ಆರಂಭದಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ.
- ಪ್ರಿ ಎಕ್ಲಾಂಪ್ಸಿಯಾ, ಎಕ್ಲಾಂಪ್ಸಿಯಾ, ಭ್ರೂಣದ ಬೆಳವಣಿಗೆಯಲ್ಲಿ ವೈಕಲ್ಯ, ಅವಧಿಪೂರ್ವ ಜನನ
- ಹೃದಯಾಘಾತ, ಆ್ಯಂಜಿನಾ
- ಲಕ್ವಾ
- ಪ್ಲೇಟ್ಲೆಟ್‌ಗಳ ಸಂಖ್ಯೆ ಕಡಿಮೆ ಇರುವುದು (ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಒಳಗೊಳ್ಳುವ ಕಿರು ರಕ್ತಕಣಗಳು)
- ಆಗಾಗ ಅಥವಾ ಪದೇಪದೇ ರಕ್ತ ಕರಣೆಗಟ್ಟಿದ ಗಾಯಗಳು, ತರಚು ಗಾಯಗಳು (ಲಿವ್‌ಡು ರೆಟಿಕ್ಯುಲಾರಿಸ್‌)
- ಚರ್ಮದಲ್ಲಿ ವ್ರಣಗಳು - ಇವು ಕಾಲುಗಳು ಮತ್ತು ಪಾದಗಳಲ್ಲಿ ಸಾಮಾನ್ಯವಾಗಿರುತ್ತವೆ.
- "ಕ್ಯಾಟಸ್ಟ್ರೊಪಿಕ್‌' ಎಪಿಎಸ್‌- ಅಪರೂಪದ್ದಾದ ಆದರೆ ಮಾರಕವಾದ ಒಂದು ರೋಗ ಸ್ಥಿತಿ. ಇದರಲ್ಲಿ ದೇಹದ ವಿವಿಧ ಅಂಗಾಂಗಗಳ (ಉದಾ.: ಹೃದಯ, ಮಿದುಳು, ಶ್ವಾಸಕೋಶ, ಮೂತ್ರಪಿಂಡ ಇತ್ಯಾದಿ) ಸಣ್ಣ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. 

ಎಪಿಎಸ್‌ ರೋಗಪತ್ತೆ ಹೇಗೆ?
ವೈದ್ಯಕೀಯ ಗುಣಲಕ್ಷಣಗಳು ಮತ್ತು ಪ್ರಯೋಗಾಲಯ ಪರೀಕ್ಷೆಗಳನ್ನು ಜತೆಯಾಗಿ ಉಪಯೋಗಿಸಿಕೊಂಡು ಎಪಿಎಸ್‌ ರೋಗಪತ್ತೆ ನಡೆಸುತ್ತಾರೆ. ಆ್ಯಂಟಿಫಾನ್ಪೊಲಿಪಿಡ್‌ ಆ್ಯಂಟಿಬಾಡೀಸ್‌ ರೋಗಪತ್ತೆಗೆ ನಡೆಸುವ ರಕ್ತ ಪರೀಕ್ಷೆಗಳೆಂದರೆ:
- ಆ್ಯಂಟಿಕಾರ್ಡಿಯೊಲಿಪಿನ್‌ ಆ್ಯಂಟಿಬಾಡೀಸ್‌ (IgG, IgM ಮತ್ತು IgA
- ಲ್ಯೂಪಸ್‌ ಆ್ಯಂಟಿಕೊಆಗ್ಯುಲಂಟ್‌ - ರಕ್ತ ಹೆಪ್ಪುಗಟ್ಟುವಿಕೆಯ ಹಲವು ಪರೀಕ್ಷೆಗಳು
- βಗ್ಲೆ„ಕೊಪ್ರೊಟೀನ್‌ ಐಗೆ ಆ್ಯಂಟಿಬಾಡಿಗಳು (IgG, IgM, IgA)

(ಮುಂದುವರಿಯುತ್ತದೆ)

Trending videos

Back to Top