ಆ್ಯಂಟಿಬಾಡಿ ಸಿಂಡ್ರೋಮ್‌


Team Udayavani, Sep 16, 2018, 6:05 AM IST

antibody.jpg

ಹಿಂದಿನ ವಾರದಿಂದ- ಈ ಲಕ್ಷಣಗಳು ಮತ್ತು ಚಿಹ್ನೆಗಳು ಕಂಡುಬಂದಲ್ಲಿ ನೀವು ತತ್‌ಕ್ಷಣ ವೈದ್ಯಕೀಯ ಸಹಾಯ ಪಡೆಯಬೇಕು.ರಕ್ತ ಹೆಪ್ಪುಗಟ್ಟುವುದರಿಂದ ಉಂಟಾಗುವ ಲಕ್ಷಣಗಳೆಂದರೆ

ಹೃದಯಾಘಾತ
ಎದೆ ಹಿಡಿದುಕೊಳ್ಳುವುದು ಅಥವಾ ನೋವು ಕಾಣಿಸಿಕೊಳ್ಳಬಹುದು. ಬಹುತೇಕ ಹೃದಯಾಘಾತಗಳಲ್ಲಿ ಎದೆಯ ಮಧ್ಯಭಾಗದಲ್ಲಿ ಹಿಡಿದುಕೊಳ್ಳುವುದು ಅಥವಾ ನೋವು ಕಾಣಿಸಿಕೊಂಡು ಹಲವು ನಿಮಿಷಗಳವರೆಗೆ ಮುಂದುವರಿಯಬಹುದು ಅಥವಾ ಒಮ್ಮೆ ಉಂಟಾಗಿ ಮಾಯವಾಗಿ ಮತ್ತೆ ಕಾಣಿಸಿಕೊಳ್ಳಬಹುದು. ಕಿರಿಕಿರಿ ಉಂಟು ಮಾಡುವ ಅಸಹಜ ಒತ್ತಡ, ಹಿಂಡುವಿಕೆ, ಎದೆ ಬಿಗಿಹಿಡಿದಂತಾಗುವುದು ಅಥವಾ ನೋವಿನ ರೂಪಗಳಲ್ಲಿ ಇದು ಉಂಟಾಗಬಹುದು. ಸಾಮಾನ್ಯವಾಗಿ ಇದು ಸಹಿಸಲಸಾಧ್ಯವಾಗಿರುತ್ತದೆ. ಕೆಲವೊಮ್ಮೆ ಲಘು ಸ್ವರೂಪದ ನೋವು ಕೂಡ ಉಂಟಾಗಬಹುದು. 

– ದೇಹದ ಮೇಲ್ಭಾಗದ ಇತರ ಕಡೆಗಳಲ್ಲಿ ಕಿರಿಕಿರಿ ಅಥವಾ ನೋವು. ಒಂದು ಕೈ ಅಥವಾ ಎರಡೂ ಕೈಗಳಲ್ಲಿ, ಕುತ್ತಿಗೆ, ದವಡೆ ಅಥವಾ ಹೊಟ್ಟೆಯಲ್ಲಿ ಕಿರಿಕಿರಿ, ನೋವು ಕಾಣಿಸಿಕೊಳ್ಳಬಹುದು.
– ಉಸಿರು ಹಿಡಿದುಕೊಳ್ಳುವುದು, ಕಟ್ಟುವುದು. ಈ ಅನುಭವ ಸಾಮಾನ್ಯವಾಗಿ ಎದೆನೋವು ಅಥವಾ ಕಿರಿಕಿರಿಯ ಜತೆಗೆ ಕಂಡುಬರುತ್ತದೆ. ಎದೆಯ ನೋವು, ಕಿರಿಕಿರಿಗಿಂತ ಮುಂಚಿತವಾಗಿಯೂ ಕಾಣಿಸಿಕೊಳ್ಳಬಹುದು.
– ದೇಹ ತಣ್ಣಗಾಗಿ ಬೆವರುವುದು, ಹೊಟ್ಟೆ ತೊಳೆಸುವಿಕೆ ಅಥವಾ ತಲೆ ಹಗುರವಾಗುವುದು ಇತರ ಲಕ್ಷಣಗಳಲ್ಲಿ ಸೇರಿವೆ.

ಲಕ್ವಾ
ಮಿದುಳಿನಲ್ಲಿ ಉಂಟಾಗುವ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಲಕ್ವಾ ಮಾರಣಾಂತಿಕ ಸ್ವರೂಪದ್ದು. ಕೆಲವು ಲಕ್ವಾ ಲಕ್ಷಣಗಳು ಕೆಲವು ನಿಮಿಷಗಳ ಕಾಲ ಅಥವಾ ಕೆಲವು ತಾಸುಗಳ ಕಾಲ ಮುಂದುವರಿಯಬಹುದಾಗಿದ್ದು ಇವುಗಳನ್ನು ಟಿಐಎ (ಟ್ರಾನ್ಸಿಯೆಂಟ್‌ ಇಶೆಮಿಕ್‌ ಅಟ್ಯಾಕ್‌ ಅಥವಾ ಮಿನಿ ಸ್ಟ್ರೋಕ್‌) ಎಂಬುದಾಗಿ ಕರೆಯುತ್ತಾರೆ. ಇದಕ್ಕೆ ತತ್‌ಕ್ಷಣ ಚಿಕಿತ್ಸೆ (ಮೂರು ತಾಸುಗಳ ಒಳಗೆ) ಪ್ರಾಮುಖ್ಯವಾಗಿದೆ. ಲಕ್ವಾದಿಂದ ಉಂಟಾದ ಹಾನಿಯನ್ನು ಸರಿಪಡಿಸುವ ಚಿಕಿತ್ಸೆಗಳು ಲಭ್ಯವಿವೆ.  ಆದರೆ ಇದಕ್ಕೆ ಲಕ್ವಾ ಆಘಾತ ಉಂಟಾದ ತತ್‌ಕ್ಷಣ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗಿರುತ್ತದೆ. 

ಲಕ್ವಾದ ಲಕ್ಷಣಗಳೆಂದರೆ
– ಮುಖ, ಕಾಲು ಅಥವಾ ಕೈಗಳಲ್ಲಿ ಹಠಾತ್‌ ಜೋಮು, ಸ್ವಾಧೀನ ತಪ್ಪುವಿಕೆ – ವಿಶೇಷವಾಗಿ ದೇಹದ ಒಂದು ಪಾರ್ಶ್ವದಲ್ಲಿ.
– ಹಠಾತ್‌ ಗೊಂದಲ, ಮಾತನಾಡಲು ಅಥವಾ ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು.
– ನಡೆಯಲು ತೊಂದರೆ, ತಲೆ ತಿರುಗುವಿಕೆ, ಸಮತೋಲನ ಅಥವಾ ಹೊಂದಾಣಿಕೆ ನಷ್ಟವಾಗುವುದು.
– ಕಾರಣವಿಲ್ಲದೆ ಹಠಾತ್ತಾಗಿ ತೀವ್ರ ತಲೆನೋವು ಕಾಣಿಸಿಕೊಳ್ಳುವುದು. ಕೆಲವು ದಿನಗಳ ಕಾಲ ಮುಂದುವರಿಯುವ ತೀವ್ರ ತಲೆನೋವಾಗಿಯೂ ಇದು ಕಾಣಿಸಿಕೊಳ್ಳಬಹುದು.

ಇತರ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟುವುದು
ಸ್ನಾಯು ನೋವು, ಜೋಮು ಹಿಡಿಯುವುದು ಅಥವಾ ಇರುವೆ ಹರಿದಂತಾಗುವುದು, ದಣಿವು, ಕೈ ಯಾ ಕಾಲುಗಳಲ್ಲಿ ಸ್ನಾಯು ಸೆಳೆತ.
– ಹಸ್ತ ಅಥವಾ ಕಾಲು-ಪಾದ ತಣ್ಣಗಾದ, ಬಿಸಿಯಾದ ಅಥವಾ ಬಾತುಕೊಂಡ ಅನುಭವವಾಗುತ್ತದೆ. ಸ್ನಾಯು ಹರಿದಂತೆ ಭಾಸವಾಗಬಹುದು. 
– ದೇಹದ ಯಾವುದೇ ಭಾಗದಲ್ಲಿ ಕಾರಣವಿಲ್ಲದೆ ತೀಕ್ಷ್ಣವಾದ ನೋವು.
– ಉಸಿರು ಹಿಡಿದುಕೊಳ್ಳುವಿಕೆ ಅಥವಾ ಎದೆನೋವು (ಸ್ತನ ಎಲುಬಿನ ಕೆಳಗೆ ಅಥವಾ ಎದೆಯ ಒಂದು ಭಾಗದಲ್ಲಿ); ಇದು ಎದೆಯಿಂದ ಹೊರಭಾಗಕ್ಕೆ ವ್ಯಾಪಿಸಬಹುದು (ಇದು ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ಅಥವಾ ಹೃದಯಾಘಾತವನ್ನು ಸಾಂಕೇತಿಸುತ್ತದೆ).
– ಹಠಾತ್ತಾಗಿ ತೀವ್ರವಾದ ಕೆಮ್ಮು, ಅದರಲ್ಲೂ ಕೆಮ್ಮಿನ ಜತೆಗೆ ರಕ್ತ ಹೊರಬರುವುದು.
– ತೀವ್ರ ವೇಗದಲ್ಲಿ ಉಸಿರಾಟ.
ಹೃದಯಾಘಾತ, ಲಕ್ವಾ ಮತ್ತು ಇತರ ರಕ್ತ ಹೆಪ್ಪುಗಟ್ಟುವ ತೊಂದರೆಗಳಿಗೆ ತತ್‌ಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅವಶ್ಯಕ. ಈ ಲಕ್ಷಣಗಳು ಕಾಣಿಸಿಕೊಂಡರೆ ವಿಳಂಬಿಸದೆ ಆಸ್ಪತ್ರೆಗೆ ದಾಖಲಾಗಿ.

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.