ಎರಡು ವರ್ಷ ವಯಸ್ಸಿನವರೆಗಿನ ಸಣ್ಣ ಮಕ್ಕಳ ಆಹಾರ


Team Udayavani, Sep 2, 2018, 6:00 AM IST

olale-feeding.jpg

ಹಿಂದಿನ ವಾರದಿಂದ- ಎದೆಹಾಲೂಡಿಸುವಿಕೆಯನ್ನು ಆದಷ್ಟು ಬೇಗನೆ ಆರಂಭಿಸುವುದು ಯಶಸ್ವಿ ಸ್ತನ್ಯಸ್ರಾವ, ಸ್ತನ್ಯಪಾನವನ್ನು ಸ್ಥಾಪಿಸಲು ಹಾಗೂ ಶಿಶುವಿಗೆ ಪ್ರಥಮ ಸ್ತನ್ಯ (ಕೊಲೊಸ್ಟ್ರಮ್‌) ಒದಗಿಸಲು ಬಹಳ ಮುಖ್ಯವಾಗಿದೆ. ಮಗು ಜನಿಸಿದ ಬಳಿಕ ಆದಷ್ಟು ಬೇಗ, ಸಾಧ್ಯವಾದರೆ ಅರ್ಧ ತಾಸಿನ ಒಳಗೆ ಅದಕ್ಕೆ ಪ್ರಥಮ ಸ್ತನ್ಯವನ್ನು ಊಡಿಸುವುದು ಅಗತ್ಯ. ಸಿಸೇರಿಯನ್‌ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಗಳಲ್ಲಿ ತಾಯಿಗೆ ನೆರವು ನೀಡುವ ಮೂಲಕ ನಾಲ್ಕೈದು ತಾಸುಗಳ ಒಳಗೆ ನವಜಾತ ಶಿಶುವಿಗೆ ಎದೆಹಾಲು ಉಣಿಸುವಿಕೆ ಆರಂಭಿಸಬಹುದು.

ಸಾಮಾನ್ಯ ಎದೆಹಾಲಿಗಿಂತ ದಪ್ಪಗೆ, ಹಳದಿ ವರ್ಣದಲ್ಲಿದ್ದು, ಪ್ರಸವಿಸಿದ ಬಳಿಕ ಕೆಲವು ದಿನಗಳ ಕಾಲ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಉತ್ಪಾದನೆಯಾಗುವ ಪ್ರಥಮ ಸ್ತನ್ಯ ಅಥವಾ ಕೊಲೊಸ್ಟ್ರಮ್‌ ಅನ್ನು ನವಜಾತ ಶಿಶು ಪಡೆಯುವುದು ಬಹಳ ಮುಖ್ಯ. ಇದು ಶಿಶುವಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಮಾತ್ರವಲ್ಲದೆ, ಮಗುವಿನ ರೋಗನಿರೋಧಕ ಶಕ್ತಿಯನ್ನು ಶಕ್ತಿಯುತಗೊಳಿಸುವ ಆ್ಯಂಟಿಬಾಡಿಗಳನ್ನು ಒದಗಿಸುವ ಮೂಲಕ ಜನನದ ಬಳಿಕ ಮರಣಕ್ಕೆ ಈಡಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಪ್ರಥಮ ಸ್ತನ್ಯವು ವಿಟಮಿನ್‌ ಎ ಸಮೃದ್ಧವೂ ಆಗಿದೆ. 

ಸಂಪೂರ್ಣ ಎದೆಹಾಲೂಡುವಿಕೆ ಅಂದರೇನು?
ನವಜಾತ ಶಿಶುವಿಗೆ ಮೊದಲ ಆರು ತಿಂಗಳುಗಳ ಕಾಲ ನೀರು ಸಹಿತ ಇತರ ಯಾವುದೇ ಪೂರಕ ಆಹಾರ, ದ್ರವಗಳನ್ನು ನೀಡದೆ ಎದೆಹಾಲನ್ನಷ್ಟೇ ಊಡಿಸುವುದನ್ನು ಸಂಪೂರ್ಣ ಎದೆಹಾಲೂಡುವಿಕೆ ಎನ್ನಲಾಗುತ್ತದೆ. ಆರು ತಿಂಗಳುಗಳ ಬಳಿಕ ಎರಡು ವರ್ಷಗಳ ತನಕ ಅಥವಾ ಅದಕ್ಕಿಂತ ಹೆಚ್ಚು ಕಾಲ ಶಿಶುವಿಗೆ ಎದೆಹಾಲು ನೀಡುವುದರ ಜತೆಗೆ ಇತರ ಆಹಾರಗಳನ್ನು ನೀಡಬೇಕು. ಎರಡು ವರ್ಷಗಳ ಬಳಿಕ ಎದೆಹಾಲು ಉಣ್ಣಿಸಬೇಕೇ ಬೇಡವೇ ಎನ್ನುವುದು ಸಂಪೂರ್ಣವಾಗಿ ತಾಯಿ ಮತ್ತು ಮಗುವನ್ನು ಅವಲಂಬಿಸಿದೆ. ಮೊದಲ ಆರು ತಿಂಗಳುಗಳ ಜೀವಿತಾವಧಿಯಲ್ಲಿ ಶಿಶುವಿನ ಆಹಾರ ಮತ್ತು ನೀರಿನ ಅಗತ್ಯಗಳನ್ನು ಸ್ತನ್ಯಪಾನವೇ ಸಂಪೂರ್ಣವಾಗಿ ಈಡೇರಿಸುತ್ತದೆ. ಈ ಅವಧಿಯಲ್ಲಿ ಬದುಕುಳಿಯುವುದು ಮತ್ತು ಸಂಪೂರ್ಣ ಬೆಳವಣಿಗೆಗೆ ಶಿಶುವಿಗೆ ಅಗತ್ಯವಾಗಿರುವುದು ಎದೆಹಾಲು ಮಾತ್ರ. 

ಎದೆಹಾಲು ಶಕ್ತಿಯ ಮೂಲವಾಗಿದೆಯಲ್ಲದೆ, ಕೊಬ್ಬು, ವಿಟಮಿನ್‌ ಎ, ಕ್ಯಾಲ್ಸಿಯಂ ಮತ್ತು ರಿಬೊಫ್ಲಾವಿನ್‌ನಂತಹ ಪೌಷ್ಟಿಕಾಂಶಗಳ ಪ್ರಧಾನ ಮೂಲವಾಗಿದೆ. ಮೊದಲ ಆರು ತಿಂಗಳುಗಳ ಅವಧಿಯಲ್ಲಿ ಶಿಶುವಿಗೆ ನೀಡುವ ಇತರ ಪೂರಕ ಆಹಾರಗಳು ಅವುಗಳ ಬೆಳವಣಿಗೆಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡುವುದಿಲ್ಲ. ಅಷ್ಟು ಮಾತ್ರವಲ್ಲದೆ, ಅವು ಎದೆಹಾಲಿಗೆ ಪರ್ಯಾಯವಾಗಿ ನೀಡಿಕೆಯಾಗುವುದರಿಂದ ಆಗಾಗ ಸೋಂಕುಗಳು ಹಾಗೂ ಕಳಪೆ ಬೆಳವಣಿಗೆ ಮತ್ತು ಪ್ರಗತಿಗೆ ಕಾರಣವಾಗುವ ಅಪಾಯವಿದೆ. ಮೊದಲ ಆರು ತಿಂಗಳುಗಳ ಅವಧಿಯಲ್ಲಿ ಸ್ತನ್ಯವು ಶಿಶುವಿಗೆ ಅತ್ಯುತ್ಕೃಷ್ಟವಾದ ಮತ್ತು ಸಂಪೂರ್ಣವಾದ ಪೌಷ್ಟಿಕತೆಯನ್ನು ಒದಗಿಸುತ್ತದೆ. ಸಂಪೂರ್ಣವಾಗಿ ಎದೆಹಾಲನ್ನು ಉಣ್ಣುವ ಶಿಶುವಿಗೆ ನೀರು, ಗುÉಕೋಸ್‌ ನೀರು, ಹಣ್ಣಿನ ರಸಗಳಂತಹ ಯಾವುದೇ ಆಹಾರ ಅಥವಾ ದ್ರವಾಹಾರದ ಅಗತ್ಯ ಮೊದಲ ಆರು ತಿಂಗಳುಗಳ ಅವಧಿಯಲ್ಲಿ ಇರುವುದಿಲ್ಲ. ತೀವ್ರ ಸೆಖೆಯ ಅಥವಾ ಹೆಚ್ಚು ಉಷ್ಣತೆಯ ಹವಾಮಾನದಲ್ಲಿಯೂ ಶಿಶುವಿನ ಜಲಾಂಶ ಅಗತ್ಯಗಳನ್ನು ಈಡೇರಿಸಲು ಎದೆಹಾಲು ಸಮರ್ಥವಾಗಿರುತ್ತದೆ. 

ಸ್ತನ್ಯಪಾನದ ಪ್ರಯೋಜನಗಳೇನು?
– ಶಿಶುವಿಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳನ್ನು ಅಗತ್ಯವಾದ ಪ್ರಮಾಣದಲ್ಲಿ ಒದಗಿಸುತ್ತದೆ. 
– ಅಲರ್ಜಿಗಳು, ಅನಾರೋಗ್ಯಗಳು ಮತ್ತು ಬೊಜ್ಜಿನಿಂದ ರಕ್ಷಣೆ ನೀಡುತ್ತದೆ. 
– ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ. 
– ಕಿವಿಯ ಸೋಂಕಿನಂತಹ ಸೋಂಕುಗಳಿಂದ ಕಾಪಾಡುತ್ತದೆ. 
– ಎದೆಹಾಲು ಸುಲಭವಾಗಿ ಜೀರ್ಣವಾಗುತ್ತದೆ, ಹೀಗಾಗಿ ಮಲಬದ್ಧತೆ, ಭೇದಿ ಅಥವಾ ಹೊಟ್ಟೆ ಹಾಳಾಗುವ ಸಂಭವ ಇರುವುದಿಲ್ಲ. 
– ಮಗು ಬೆಳೆಯುವಾಗ ಆರೋಗ್ಯಕರ ದೇಹ ತೂಕ ಹೊಂದಿರುತ್ತದೆ. 
– ಸ್ತನ್ಯವನ್ನುಂಡು ಬೆಳೆದ ಮಕ್ಕಳು ಹೆಚ್ಚು ಬುದ್ಧಿಮತ್ತೆ ಹೊಂದಿರುತ್ತಾರೆ. 
– ಮಗು ಮೊಲೆಯನ್ನು ಚೀಪುವುದರಿಂದ ಪ್ರಸವದ ಬಳಿಕ ವಿಸ್ತಾರಗೊಂಡಿರುವ ತಾಯಿಯ ಗರ್ಭಕೋಶ ಸಂಕುಚನಗೊಳ್ಳುತ್ತದೆ ಹಾಗೂ ರಕ್ತಸ್ರಾವ ತಡೆಹಿಡಿಯಲ್ಪಡುತ್ತದೆ. 
– ಮಗುವಿಗೆ ಎದೆಹಾಲು ಉಣ್ಣಿಸುವ ಅವಧಿಯಲ್ಲಿ ಋತುಸ್ರಾವ ತಡೆಹಿಡಿಯಲ್ಪಡುವುದರಿಂದ ಇದು ಗರ್ಭಧಾರಣೆ ನಿಯಂತ್ರಣದ ಒಂದು ರೂಪವೂ ಆಗಿರುತ್ತದೆ. 
– ಮಗುವಿಗೆ ಬಾಟಲಿ ಹಾಲು ಕುಡಿಸುವ ತಾಯಂದಿರಿಗಿಂತ ಎದೆಹಾಲು ಉಣ್ಣಿಸುವ ತಾಯಂದಿರು ಹೆಚ್ಚು ಬೇಗನೆ ತೂಕ ಕಳೆದುಕೊಂಡು ಉತ್ತಮ ಅಂಗಸೌಷ್ಠವ ಪಡೆಯುತ್ತಾರೆ.
– ಎದೆಹಾಲು ಉಣ್ಣಿಸುವ ತಾಯಂದಿರು ಭವಿಷ್ಯದಲ್ಲಿ ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗುತ್ತದೆ. 
– ಇತರ ಪೂರಕ ಆಹಾರ ಒದಗಿಸುವುದಕ್ಕಿಂತ ಎದೆಹಾಲು ಉಣ್ಣಿಸುವುದು ಆರ್ಥಿಕವಾಗಿಯೂ ಉತ್ತಮ.
– ಎದೆಹಾಲು ಉಣ್ಣಿಸುವುದರಿಂದ ತಾಯಿ-ಮಗುವಿನ ಬಾಂಧವ್ಯ ಚೆನ್ನಾಗಿ ಬೆಳೆಯುತ್ತದೆ. 

ಒಂದು ಸ್ತನದಿಂದ ಎದೆಹಾಲು ಸಂಪೂರ್ಣವಾಗಿ ಖಾಲಿಯಾದ ಬಳಿಕವಷ್ಟೇ ಇನ್ನೊಂದು ಸ್ತನದಿಂದ ಹಾಲು ಕುಡಿಸುವುದು ಉತ್ತಮವಾದ ಕ್ರಮ. ಮಗುವಿಗೆ ಈ ಕ್ರಮದಿಂದ ಮಾತ್ರ:
– ಬಾಯಾರಿಕೆಯನ್ನು ತಣಿಸುವ “ಮುಂದಿನ ಹಾಲು’;
– ಹಸಿವನ್ನು ಇಂಗಿಸುವ “ಹಿಂದಿನ ಹಾಲು’ಸಿಗುವುದಕ್ಕೆ ಸಾಧ್ಯವಾಗುತ್ತದೆ. ಹಗಲಿನ ಅವಧಿಯಲ್ಲಿ ತಾಯಿಯು ಶಿಶುವಿನಿಂದ ದೂರ ಇರುವುದಾಗಿದ್ದಲ್ಲಿ ಎದೆಹಾಲನ್ನು ಹಿಂಡಿ ತೆಗೆದಿರಿಸಿ ಆ ಅವಧಿಯಲ್ಲಿ ಶಿಶುವಿಗೆ ನೀಡುವುದು ಸಾಧ್ಯವಿದೆ. ಹೀಗೆ ಮಾಡುವುದಾಗಿದ್ದಲ್ಲಿ ಕೆಲವು ಅಂಶಗಳನ್ನು ಅಗತ್ಯವಾಗಿ ನೆನಪಿನಲ್ಲಿ ಇರಿಸಿಕೊಳ್ಳಬೇಕು:
– ಹಿಂಡಿ ತೆಗೆದಿರಿಸಿದ ಎದೆಹಾಲನ್ನು ಕೊಠಡಿಯ ಉಷ್ಣತೆಯಲ್ಲಿ ಎಂಟು ತಾಸುಗಳ ಕಾಲ ಮತ್ತು ಫ್ರಿಜ್‌ನಲ್ಲಿ 24 ತಾಸುಗಳ ಕಾಲ ಮಾತ್ರ ಕಾಯ್ದಿಡಬಹುದಾಗಿದೆ. 
– ಹಿಂಡಿ ತೆಗೆದಿರಿಸಿದ ಹಾಲನ್ನು ಶುಚಿಯಾಗಿರುವ ಒಳಲೆಯ ಸಹಾಯದಿಂದ ಶಿಶುವಿಗೆ ಉಣ್ಣಿಸಬಹುದು. 
– ಹಿಂಡಿ ತೆಗೆದಿರಿಸಿದ ಹಾಲನ್ನು ಬಾಟಲಿಯ ಮೂಲಕ ನೀಡಬಾರದು; ಹಾಗೆ ಮಾಡಿದರೆ ಎದೆಹಾಲನ್ನು ಚೀಪಿ ಕುಡಿಯುವ ಪ್ರಕ್ರಿಯೆಗೆ ತೊಂದರೆ ಉಂಟಾಗಬಹುದು. 

(ಮುಂದುವರಿಯುತ್ತದೆ)

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.