CONNECT WITH US  

ಆ್ಯಂಟಿಬಾಡಿ ಸಿಂಡ್ರೋಮ್‌

ಹಿಂದಿನ ವಾರದಿಂದ- ನೀವು ಗರ್ಭ ಧರಿಸುವ ಯೋಜನೆ ಹೊಂದಿದ್ದರೆ ಅಥವಾ ಈಗಾಗಲೇ ಗರ್ಭಿಣಿಯಾಗಿದ್ದರೆ ಅದರ ಬಗ್ಗೆ ವೈದ್ಯರಿಗೆ ತತ್‌ಕ್ಷಣ ಮಾಹಿತಿ ನೀಡುವುದು ಅಗತ್ಯ. ವಾರ್ಫಾರಿನ್‌ ಸತತವಾಗಿ ಉಪಯೋಗಿಸುವುದರಿಂದ ಮಗುವಿಗೆ ವೈಕಲ್ಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಸುರಕ್ಷಿತವಾದ ಬೇರೆಯೇ ರಕ್ತ ತೆಳುಗೊಳಿಸುವ ಔಷಧವನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಸರಿಯಾದ ಚಿಕಿತ್ಸೆಯ ಮೂಲಕ ಎಪಿಎಸ್‌ ಹೊಂದಿರುವ ಮಹಿಳೆಯರು ಇತರ ಮಹಿಳೆಯರಷ್ಟೇ ಪ್ರಮಾಣದ ಅಪಾಯವನ್ನು ಹೊಂದಿರುತ್ತಾರೆ. 

ಗರ್ಭ ಧರಿಸಿದ ಸಂದರ್ಭದಲ್ಲಿ ಎಪಿಎಸ್‌ ತೊಂದರೆ ಹೊಂದಿರುವ ಅನೇಕ ಮಹಿಳೆಯರು ಗರ್ಭಿಣಿಯರಲ್ಲದಿರುವಾಗ ಸಂಪೂರ್ಣವಾಗಿ ಚೆನ್ನಾಗಿರುತ್ತಾರೆ. ಇತರರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಮುಂದುವರಿಯುತ್ತದೆ. ಇದುವರೆಗೆ, ರಕ್ತ ಹೆಪ್ಪುಗಟ್ಟುವಿಕೆ ಉಂಟಾಗದೆ ಯಾರು ಈ ವಿಚಾರದಲ್ಲಿ ದುರದೃಷ್ಟವಂತರು ಎಂಬುದನ್ನು ಮುಂಚಿತವಾಗಿ ಹೇಳುವುದು ಅಸಾಧ್ಯ. 

ಆ್ಯಂಟಿಫಾನ್ಪೊಲಿಪಿಡಲ್‌ ಆ್ಯಂಟಿಬಾಡೀಸ್‌ ಸಮಸ್ಯೆಗೂ ಬಂಜೆತನೂR ಸಂಬಂಧ ಇದೆ. ಬಂಜೆತನ ಕ್ಲಿನಿಕ್‌ಗಳಲ್ಲಿ ಈ ಆ್ಯಂಟಿಬಾಡಿಗಳಿಗಾಗಿ ತಪಾಸಣೆ ಇತ್ತೀಚೆಗೆ ರೂಢಿಗತವಾಗುತ್ತಿದೆ. 

ಗರ್ಭನಿರೋಧಕ ಮಾತ್ರೆಗಳು 
ಮತ್ತು ಹಾರ್ಮೋನ್‌ ಥೆರಪಿ

ಈಸ್ಟ್ರೋಜೆನ್‌ ಹಾರ್ಮೋನ್‌ ರಕ್ತ ಹೆಪ್ಪುಗಟ್ಟುವಿಕೆಗೆ ಪೂರಕ ಸನ್ನಿವೇಶ ಸೃಷ್ಟಿಸುವುದರಿಂದ ಮಹಿಳೆಯರು ಈಸ್ಟ್ರೊಜೆನ್‌ ಥೆರಪಿ (ಗರ್ಭನಿರೋಧಕ ಅಥವಾ ಹಾರ್ಮೋನ್‌ ಥೆರಪಿ)ಯನ್ನು ಪಡೆಯದಿರುವುದು ಒಳ್ಳೆಯದು. ಇತರ ರೂಪದ ಗರ್ಭನಿರೋಧಕಗಳ ಬಗ್ಗೆ ನಿಮ ವೈದ್ಯರ ಜತೆಗೆ ಸಮಾಲೋಚನೆ ನಡೆಸುವುದು ಸೂಕ್ತ.

ಋತುಚಕ್ರ ಸಂಬಂಧಿ ಸಮಸ್ಯೆಗಳು
ವಾರ್ಫಾರಿನ್‌ ತೆಗೆದುಕೊಳ್ಳುವ ಕೆಲವು ಮಹಿಳೆಯರಿಗೆ ರಕ್ತಸ್ರಾವ ಹೆಚ್ಚಿ ಸಮಸ್ಯೆಯುಂಟಾಗುತ್ತದೆ. ಇದರಿಂದ ರಕ್ತಹೀನತೆ ಉಂಟಾಗಬಹುದು. ಈ ಸಮಸ್ಯೆ ಇದ್ದರೆ ವೈದ್ಯರಿಗೆ ತಿಳಿಸಿ. ರಕ್ತಹೀನತೆಯನ್ನು ತಡೆಗಟ್ಟಲು ವೈದ್ಯರು ಹಲವು ಪರಿಹಾರೋಪಾಯಗಳನ್ನು ಸೂಚಿಸುತ್ತಾರೆ.

ಗಮನಿಸಬೇಕಾದ ಲಕ್ಷಣಗಳು
ನಿಮಗೆ ಎಪಿಎಸ್‌ ಆ್ಯಂಟಿಬಾಡಿಗಳು ಇರುವುದು ಪತ್ತೆಯಾಗಿದ್ದರೆ ರಕ್ತ ಹೆಪ್ಪುಗಟ್ಟುವುದರಿಂದ ಕಾಣಿಸಿಕೊಳ್ಳುವ ಲಕ್ಷಣಗಳ ಬಗ್ಗೆ ನೀವು ತಿಳಿದುಕೊಂಡಿರಬೇಕು. 

(ಮುಂದುವರಿಯುತ್ತದೆ)

Trending videos

Back to Top