ಚಟಗಳಿಂದ ಹೊರಬರುವ ವಿಧಾನ

Team Udayavani, Sep 16, 2018, 6:00 AM IST

smoking-sss.jpg

ಹಿಂದಿನ ವಾರದಿಂದ- ನಾಲ್ಕನೇ ಹಂತ: ಒತ್ತಡದ ಸನ್ನಿವೇಶ ನಿಭಾಯಿಸುವುದು ಮಾದಕ ವಸ್ತುಗಳ ಚಟದ ಚಿಕಿತ್ಸೆಯ ಅನಂತರ ಸಹಜ ಜೀವನ ನಡೆಸುವಾಗ ಒತ್ತಡದ ಸನ್ನಿವೇಶಗಳು ಬರುವುದು ಸಹಜ. ಆದರೆ, ವ್ಯಕ್ತಿಯು ತನ್ನ ಹಳೆಯ ಜೀವನದಲ್ಲಿ ಮಾಡಿದ ಹಾಗೆ ಪುನಃ ಮಾದಕ ವಸ್ತುವಿನ ಚಟಕ್ಕೊಳಗಾಗುತ್ತಾನೆ. ಇದರ ಸಲುವಾಗಿ ಇವುಗಳನ್ನು ಎದುರಿಸಲು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು.

ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯೋಗ, ಧ್ಯಾನ, ವಿಶ್ರಮಿಸುವ ವಿಧಾನಗಳನ್ನು ಕಲಿಯುವುದು, ದೀರ್ಘ‌ ಉಸಿರಾಟದ ವ್ಯಾಯಾಮಗಳನ್ನು ಮಾಡುವುದು, ತನ್ನ ಋಣಾತ್ಮಕ ಆಲೋಚನೆಗಳನ್ನು ತರ್ಕಕ್ಕೆ ಹಚ್ಚಿ ಅವುಗಳ ಸತ್ಯಾಸತ್ಯತೆಯನ್ನು ಅರ್ಥೈಸಿಕೊಳ್ಳುವುದು. ಇವುಗಳಲ್ಲದೆ ದಿನಾ ವಾಕಿಂಗ್‌ ಹೋಗುವುದು, ಕುಟುಂಬದವರೊಟ್ಟಿಗೆ ಸಮಯ ಕಳೆಯುವುದು, ಮನಸ್ಸಿಗೆ ಸಂತೋಷ ನೀಡುವ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು, ಇತ್ಯಾದಿ.

ಐದನೇ ಹಂತ: ಮಾದಕ ವಸ್ತುಗಳ ತವಕವನ್ನು ಪ್ರಚೋದಿಸುವ ಸನ್ನಿವೇಶಗಳಿಂದ ದೂರವಿರುವುದು
– ಹಳೆಯ ಮಾದಕ ವಸ್ತುಗಳ ಸ್ನೇಹಿತರ ಗುಂಪಿನಿಂದ ದೂರವಿರುವುದು
– ಬಾರ್‌ಗಳಿಗೆ/ ಕ್ಲಬ್‌ಗಳಿಗೆ/ ಮದ್ಯದಂಗಡಿಗಳಿಗೆ ಹೋಗುವುದನ್ನು ನಿಲ್ಲಿಸಬೇಕು.
– ತನ್ನ ಮಾದಕ ವಸ್ತುವಿನ ಸಂಗತಿಯ ಬಗ್ಗೆ ನಾಚಿಕೆಪಡಬೇಕಾಗಿಲ್ಲ. 

ತವಕ ತಡೆಗಟ್ಟುವುದು 
– ಗಮನ ಬೇರೆ ಕಡೆ ಹೋಗುವಂತೆ ಚಟುವಟಿಕೆಗಳನ್ನು ಮಾಡುವುದು; ಪುಸ್ತಕ ಓದುವುದು, ಚಲನಚಿತ್ರ ವೀಕ್ಷಣೆಗೆ ತೆರಳುವುದು, ಹವ್ಯಾಸದಲ್ಲಿ ತೊಡಗುವುದು, ವ್ಯಾಯಾಮ ಮಾಡಲು/ಆಟ ಆಡಲು ಹೋಗುವುದು, ಹಣ್ಣು ತಿನ್ನುವುದು ಅಥವಾ ಜ್ಯೂಸ್‌ ಕುಡಿಯುವುದು, ಇತ್ಯಾದಿ.
– ಆಸೆ ಬಂದಾಗ ಅದರ ಬಗ್ಗೆ ಕುಟುಂಬದವರೊಟ್ಟಿಗೆ ಅಥವಾ ಸ್ನೇಹಿತರೊಟ್ಟಿಗೆ ಮಾತನಾಡುವುದು.
– ಆಸೆ ಬಂದಾಗ, ಮಾದಕ ವಸ್ತುವಿನಿಂದಾಗಿ ಹಿಂದೆ ಆದ ಅಹಿತಕರ ಘಟನೆಗಳನ್ನು ನೆನಪಿಸಿಕೊಳ್ಳುವುದು.

ಆರನೇ ಹಂತ: ಮಾದಕ ವಸ್ತುರಹಿತ  ಅರ್ಥಪೂರ್ಣ ಜೀವನ ಆರಂಭಿಸುವುದು
– ಯಾವುದೋ ಒಂದು ತಮಗೆ 
ಇಷ್ಟವಾಗುವ ಹೊಸ ಹವ್ಯಾಸವನ್ನು ಬೆಳೆಸಿಕೊಳ್ಳುವುದು
– ಹೆಚ್ಚಾಗಿ ತಮ್ಮ ಸಮಾಜದಲ್ಲಾಗುವ ಸಾಂಸ್ಕೃತಿಕ/ ಮನೋರಂಜನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು
– ನಿಯಮಿತವಾಗಿ ಉತ್ತಮ ಆಹಾರ, ವ್ಯಾಯಾಮ, ಉತ್ತಮ ಹವ್ಯಾಸಗಳನ್ನು ಪಾಲಿಸುವುದು
– ತನ್ನ ಜೀವನಕ್ಕೆ ಅರ್ಥಪೂರ್ಣ ಗುರಿಗಳನ್ನು ನಿರ್ಧರಿಸುವುದು 
ಮತ್ತು ಅವುಗಳ ಸಲುವಾಗಿ ಕೆಲಸ ಮಾಡುವುದು

ಮಾದಕ ವಸ್ತುಗಳ ಉಪಯೋಗ ಮತ್ತು ಮಾನಸಿಕ ಕಾಯಿಲೆಗಳು
ಮಾದಕ ವಸ್ತುಗಳ ಉಪಯೋಗಗಳಲ್ಲಿ ಮಾನಸಿಕ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ವ್ಯಕ್ತಿಗಳು ಖನ್ನತೆಗೊಳಗಾಗಬಹುದು. ವಿವಿಧ ಗಾಬರಿ ಕಾಯಿಲೆಗಳಿಂದ ಬಳಲಬಹುದು. ಕೆಲವೊಮ್ಮೆ ನೆನಪಿನ ಶಕ್ತಿಯ ನ್ಯೂನತೆಯಿಂದ ಬಳಲಬಹುದು. ಕೆಲವೊಮ್ಮೆ ಚಿತ್ತಭ್ರಮೆಯಾಗಿ ವಿಚಿತ್ರ ಅನುಭವಗಳನ್ನು ಅನುಭವಿಸಬಹುದು. ಇವೆಲ್ಲವುಗಳಿಗೆ ಚಿಕಿತ್ಸೆ ಲಭ್ಯವಿದೆ.

ಮಾದಕ ವಸ್ತುಗಳ ಉಪಯೋಗ ಒಂದು ಜಟಿಲವಾದ ಕಾಯಿಲೆಯಾಗಿದೆ. ಯಾಕೆಂದರೆ, ಇದರ ಉಗಮಕ್ಕೆ, ಉಳಿವಿಗೆ ಕೇವಲ ವ್ಯಕ್ತಿಯಲ್ಲದೇ ಆತನ ಕುಟುಂಬ, ಸಮಾಜವೂ ಕೂಡ ಕಾರಣೀಭೂತವಾಗಿವೆ ಹಾಗೂ ಇದು ನಡವಳಿಕೆಯ ಒಂದು ಭಾಗವಾಗಿದ್ದು ವ್ಯಕ್ತಿಯು ಇದನ್ನು ಕಾಯಿಲೆಯೆಂದು ಪರಿಗಣಿಸುವುದಿಲ್ಲ. ಇದರ ಮೇಲೆ ಸಮಾಜದಲ್ಲಿ ಹರಡಿರುವ ನಾನಾ ರೀತಿಯ ತಪ್ಪು ನಂಬಿಕೆಗಳಿಂದಾಗಿ ವ್ಯಕ್ತಿಯು ಚಿಕಿತ್ಸೆಗೆ ಬರಲು ವಿಳಂಬವಾಗುತ್ತದೆ, ಕೆಲವೊಮ್ಮೆ ಚಿಕಿತ್ಸೆಗೆ ಬರುವುದೇ ಇಲ್ಲ.  ಮಾದಕ ವಸ್ತುಗಳು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತವೆಯಲ್ಲದೇ, ಅವುಗಳ ದುಷ್ಪರಿಣಾಮ ವ್ಯಕ್ತಿಯ ಕುಟುಂಬ, ಸಮಾಜ, ಉದ್ಯೋಗ, ಹಣಕಾಸಿನ ಮೇಲೆಯೂ ಆಗುತ್ತದೆ. 

ಇದು ಇತ್ತೀಚಿನ ದಿನಗಳಲ್ಲಿ ಒಂದು ಬೃಹತ್‌ ಮಾರುಕಟ್ಟೆಯಾಗಿ ಬೆಳೆದುನಿಂತಿದೆ. ಈ ಸಮಸ್ಯೆಗಳಿಗೆ ಚಿಕಿತ್ಸೆಯಿದ್ದು, ಇವುಗಳಿಗಾಗಿ ವ್ಯಕ್ತಿ ಮಾತ್ರವಲ್ಲದೇ ಆತನ ಕುಟುಂಬ, ಸ್ನೇಹಿತರು ಮತ್ತು ಸಮಾಜದ ಸಹಕಾರ ಅತ್ಯಗತ್ಯ. ಆದರೆ, ಇಷ್ಟೆಲ್ಲಾ ತೊಂದರೆ ಅನುಭವಿಸುವುದಕ್ಕಿಂತ ಸೂಕ್ತ ಕ್ರಮವೆಂದರೆ, ಇವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು, ಮುಂಜಾಗ್ರತಾ ಕ್ರಮವಾಗಿ, ಸಮಾಜದ ಎಲ್ಲರಿಗೂ ನೀಡುವುದು. 

ಮಾದಕ ವಸ್ತುಗಳ ಚಟದ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮನೋರೋಗ ಚಿಕಿತ್ಸಾ ವಿಭಾಗದಲ್ಲಿ ಪ್ರತ್ಯೇಕ ಘಟಕವನ್ನು ಮಾಡಲಾಗಿದೆ. ಪ್ರತೀ ಬುಧುವಾರ ಮತ್ತು ಶನಿವಾರ (ಮೂರನೆ ಶನಿವಾರ ಹೊರತುಪಡಿಸಿ), ಮನೋರೋಗ ಚಿಕಿತ್ಸಾ ವಿಭಾಗದ ಒ.ಪಿ.ಡಿ.ಯಲ್ಲಿ ನುರಿತ ತಜ್ಞ ಮನೋವೈದ್ಯರು ಲಭ್ಯರಿರುತ್ತಾರೆ ಹಾಗೂ ಅಡ್ಮಿಶನ್‌ ಸೌಲಭ್ಯ ಕೂಡ ಇರುತ್ತದೆ.

(ಮುಗಿಯಿತು)

– ಡಾ| ರವೀಂದ್ರ ಮುನೋಳಿ

ಟಾಪ್ ನ್ಯೂಸ್

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.