ವಿಶ್ವ ಮಾನಸಿಕ ಆರೋಗ್ಯ ದಿನ 


Team Udayavani, Oct 21, 2018, 6:15 AM IST

mental.jpg

ಹಿಂದಿನ ವಾರದಿಂದ- ಪೋಷಕರೇನು ಮಾಡಬಹುದು?
ಸಮಸ್ಯೆ ಬಂದಾಗ ನಾವೇನು ಮಾಡಬೇಕೆನ್ನುವುದಕ್ಕಿಂತ ಸಮಸ್ಯೆ ಉದ್ಭವವಾಗದ ಹಾಗೆ ನೋಡಿಕೊಳ್ಳುವುದು ಅಗತ್ಯ. ಈ ಅಂಶವನ್ನೇ ಗಮನದಲ್ಲಿಟ್ಟುಕ್ಕೊಂಡು ಈ ವರ್ಷದ ಧ್ಯೇಯವಾಕ್ಯವನ್ನು ನಿರ್ಧರಿಸಲಾಗಿದೆ. ಮೇಲೆ ನಮೂದಿಸಿದ ಹಾಗೆ ಸಮಸ್ಯೆಗಳುಂಟಾಗಲು ಇರುವ ಕಾರಣಗಳು ಹುಟ್ಟದಂತೆ ನೋಡಿಕೊಳ್ಳಬೇಕು ಹಾಗೂ ರಕ್ಷಿಸುವ ಅಂಶಗಳು ಹೆಚ್ಚಾಗಿರುವಂತೆ ಪ್ರಯತ್ನಿಸಬೇಕು. ಓರ್ವ ಪರಿಣಾಮಕಾರಿ ಪೋಷಕರಾಗಲು ಕೆಲವು ಸೂತ್ರಗಳನ್ನು ಅನುಸರಿಸಬಹುದು:

1. ಪ್ರೀತಿ/ ಕಾಳಜಿ ವ್ಯಕ್ತಪಡಿಸುವುದು: ಇದರಲ್ಲಿ ಮೂರು ಮುಖ್ಯ ಅಂಶಗಳೆಂದರೆ- ಸಂಪರ್ಕಿಸಿ ಬಾಂಧವ್ಯ ಕಲ್ಪಿಸಿ ಮಾತನಾಡಿ/ ಸಂವಾದಿಸಿ  ಪೋಷಿಸಿ : ಅಂದರೆ ಹದಿಹರೆಯದವರನ್ನು/ ಯೌವ್ವನಾವಸ್ಥೆಯಲ್ಲಿರುವವರನ್ನು ನಿಯಮಿತವಾಗಿ ಮಾತನಾಡಿಸುತ್ತಿದ್ದರೆ, ಅವರೊಟ್ಟಿಗೆ ಬಾಂಧವ್ಯ ಬೆಳೆಯುತ್ತದೆಯಲ್ಲದೇ, ತನ್ನನ್ನು ಪೋಷಕರು ಅರ್ಥಮಾಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ಅವರಲ್ಲಿ ಹುಟ್ಟುತ್ತದೆ. ಆಗ ಅವರು ಯಾವುದೇ ಮುಚ್ಚುಮರೆಯಿಲ್ಲದೆ ಪೋಷಕರಿಗೆ ತನ್ನನ್ನು ಕಾಡುವ ವಿಷಯಗಳ ಬಗ್ಗೆ ತಿಳಿಸುತ್ತಾರೆ. ಇದಲ್ಲದೆ ಪೋಷಕರು ತನ್ನ ಬಗ್ಗೆ ಕಾಳಜಿ ವಹಿಸುತ್ತಾರೆನ್ನುವ ಭಾವನೆ ಬೆಳೆಯುತ್ತಾ ಹೋಗುತ್ತದೆ. ಎಲ್ಲಕ್ಕಿಂತ ಮುಖ್ಯವಾದುದೆಂದರೆ, ಅವರು ಹೇಳುವುದನ್ನು ಕೇಳುವುದು ಅಂದರೆ ಯಾವುದೇ ಪೂರ್ವಾಗ್ರಹವಿರದೆ, ಯಾವುದೇ ತರ್ಕಕ್ಕೆ ಹಚ್ಚದೇ ಅವರು ಹೇಳುವುದನ್ನು ಆಲಿಸುವುದು.

2. ಬೆಂಬಲ ಹಾಗೂ ಪ್ರೋತ್ಸಾಹ : ಎಲ್ಲರೂ ಎಲ್ಲ ವಿಷಯಗಳಲ್ಲಿ ಪರಿಪೂರ್ಣರಾಗಿರುವುದಿಲ್ಲವೆನ್ನುವ ಮಾತನ್ನು ಪೋಷಕರೆಲ್ಲರೂ ಅರ್ಥಮಾಡಿಕೊಳ್ಳಬೇಕಿರುವುದು ಅತ್ಯಗತ್ಯ. 

ಯೌವ್ವನಾವಸ್ಥೆಯಲ್ಲಿರುವವರು ಮಾಡುವ ಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದಲ್ಲದೆ ಹುರಿದುಂಬಿಸುವುದು ಆವಶ್ಯಕ. ಅವರ ಅಭಿಪ್ರಾಯಗಳು/ ಆಲೋಚನೆಗಳು/ ನಿರ್ಧಾರಗಳು ಭಿನ್ನವಾಗಿರಬಹುದು. ಆದರೆ ಅವುಗಳನ್ನು ಖಂಡಿಸಿ ಪೋಷಕರು ತಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರದಿರುವುದು ಉತ್ತಮ. ಅದರ ಬದಲಾಗಿ ಆವಶ್ಯಕವೆನಿಸಿದರೆ, ಅದೇ ವಿಷಯದ ಬಗ್ಗೆ ಇತರ ಆಯಾಮಗಳಲ್ಲಿ ಅವಲೋಕಿಸಿ ನೋಡಲು ಸಲಹೆ ನೀಡಬಹುದು. ಇವುಗಳಿಂದ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತಾ ಹೋಗುತ್ತದೆ.

3. ಅವರೊಟ್ಟಿಗೆ ಸಮಯ ಕಳೆಯುವುದು: ಪೋಷಕರು ಯೌವ್ವನಾವಸ್ಥೆಯಲ್ಲಿರುವವರಲ್ಲಿ ಹಾಗೂ ಅವರ ಜೀವನದಲ್ಲಿನ ಆಗುಹೋಗುಗಳ ಬಗ್ಗೆ ಆಸಕ್ತಿ ವಹಿಸುವುದು ಮುಖ್ಯವಾಗಿರುತ್ತದೆ. ಯಾಕೆಂದರೆ ಅವರು ಬಾಲ್ಯಾವಸ್ಥೆಯನ್ನು ದಾಟಿ ಪ್ರೌಢಾವಸ್ಥೆಗೆ ಹೆಜ್ಜೆಯಿಡುವ ಹಂತದಲ್ಲಿರುವ ಮಧ್ಯದ ಮಾರ್ಗದಲ್ಲಿರುತ್ತಾರೆ. ಅವರಲ್ಲಿ ಆಸಕ್ತಿ ತೋರಿಸುತ್ತಾ ಅಥವಾ ಅವರೊಟ್ಟಿಗೆ ಮಾತನಾಡುತ್ತಾ, ಆಟವಾಡುತ್ತಾ, ಹರಟೆ ಹೊಡೆಯುತ್ತ ಅಥವಾ ಬೇರೆ ಯಾವುದೋ ರೀತಿಯಾಗಿ ಸಮಯ ಕಳೆಯುತ್ತಿದ್ದರೆ, ಅವರಿಗೆ ಬರುವ ಭಾವನೆಗಳೆಂದರೆ, ನನ್ನ ಪೋಷಕರಿಗೆ ನಾನು ಮುಖ್ಯವಾದವನು ಎಂದು. ಇದರಿಂದಾಗಿ ಅನ್ಯೋನ್ಯತೆ ಬೆಳೆಯುತ್ತದೆಯಲ್ಲದೇ, ಪ್ರಬುದ್ಧನಾಗಿ ಬೆಳೆಯಲು ಸಹಾಯವಾಗುತ್ತದೆ.

4. ಎಲ್ಲೆಗಳ ನಿರ್ಧಾರ : ಹದಿಹರೆಯದವರಿಗೆ/ ಯೌವ್ವನಾವಸ್ಥೆಯಲ್ಲಿರುವವರಿಗೆ ಸ್ವತಂತ್ರವಾಗಿರಬೇಕೆನ್ನುವ ತವಕ ಹೆಚ್ಚಾಗಿರುತ್ತದೆ. ಅದು ಸಹಜ ಬದಲಾವಣೆ. ಆದರೆ, ಕೆಲವೊಮ್ಮೆ ಯಾವುದು ಸರಿ- ಯಾವುದು ತಪ್ಪು ಎನ್ನುವುದನ್ನು ಸ್ಪಷ್ಟವಾಗಿ ಹಾಗೂ ದ‌ೃಢವಾಗಿ ತಿಳಿಸಬೇಕು ಹೊರತೆ ಸಿಟ್ಟಿನಿಂದ ಅಥವಾ ಹೀಯಾಳಿಸಿ ಅಲ್ಲ ಹಾಗೂ ಕೆಲವು ವಿಷಯಗಳ ಬಗ್ಗೆ ಎಲ್ಲೆಗಳಿರಬೇಕು. ಉದಾ: ರಾತ್ರಿ ಮನೆಗೆ ಹಿಂದಿರುಗುವ ಸಮಯ, ಎಷ್ಟು ಸಮಯ ಆಟೋಟಗಳಲ್ಲಿ/ ಮೊಬೈಲ್‌ನಲ್ಲಿ/ ಕಂಪ್ಯೂಟರ್‌ನಲ್ಲಿ ಕಳೆಯಬೇಕು. ಈ ಎಲ್ಲೆಗಳ ನಿರ್ಧಾರ ಅವರೊಟ್ಟಿಗೆ ಚರ್ಚಿಸಿ ಅಳವಡಿಸಿಕೊಳ್ಳುವುದು ಆವಶ್ಯಕ. ಹಾಗೂ ಈ ರೀತಿ ಕೆಲವೊಮ್ಮೆ ಎಲ್ಲೆಗಳ ಆವಶ್ಯಕತೆ ಏಕಿರುತ್ತದೆಯೆಂದು ಪೋಷಕರು ಸ್ಪಷ್ಟವಾಗಿ ಹದಿಹರೆಯದವರಿಗೆ/ ಯೌವ್ವನಾ ವಸ್ಥೆಯಲ್ಲಿರುವವರಿಗೆ ತಿಳಿಸಬೇಕು.

5. ಪೋಷಕರು ಮಾದರಿ ವ್ಯಕ್ತಿಯಾಗಿರುವ ಪ್ರಯತ್ನ ಮಾಡಲಿ: ಎಲ್ಲರಿಗೂ ತಿಳಿದಿರುವ ಹಾಗೆ ಮಕ್ಕಳು ಹಾಗೂ ಹದಿಹರೆಯದವರು ಪೋಷಕರು ಹಾಗೂ ತನ್ನ ವಾತಾವರಣವನ್ನು ನೋಡುತ್ತಾ, ಅವುಗಳಲ್ಲಿನ ಆಗುಹೋಗುಗಳನ್ನು ಅರ್ಥಮಾಡಿಕೊಂಡು ಅನುಸರಿಸುತ್ತಾ ಹೋಗುತ್ತಾರೆ. ಹಾಗಾಗಿ ಪೋಷಕರ ವರ್ತನೆ, ಚಲನ-ವಲನಗಳು, ನಡವಳಿಕೆ, ಸಂವಾದಗಳು, ಮಾತನಾಡುವ ರೀತಿ, ಭಾವನೆಗಳನ್ನು ವ್ಯಕ್ತಪಡಿಸುವ ರೀತಿ, ನಿರ್ಧಾರ ತೆಗೆದುಕೊಳ್ಳುವ ರೀತಿ ಇತ್ಯಾದಿಗಳೆಲ್ಲವುಗಳನ್ನು ಮಕ್ಕಳು ಅನುಸರಿಸಿ ಅಳವಡಿಸಿಕೊಳ್ಳುತ್ತಾ ಹೋಗುತ್ತಾರೆ.  ಪೋಷಕರು ಆದಷ್ಟು ಓರ್ವ ಮಾದರಿ ವ್ಯಕ್ತಿಯಾಗಲು ಪ್ರಯತ್ನಿಸುವುದು ಅಗತ್ಯ. ಮಕ್ಕಳೊಂದಿಗೆಯಲ್ಲದೆ ಹಾಗೂ ಇತರರೊಂದಿಗೆ ಮಾತನಾಡುವಾಗ ಪ್ರೀತಿಯಿಂದ ಮಾತನಾಡುವುದು, ಕಾಳಜಿ ತೋರಿಸುವುದು, ಅವಾಚ್ಯ ಶಬ್ದಗಳನ್ನು ಉಪಯೋಗಿಸದಿರುವುದು, ಜಗಳವಾಡದಿರುವುದು, ಏರು ದನಿಯಲ್ಲಿ ಮಾತನಾಡದಿರದಿರುವುದು/ ಬಯ್ಯದಿರುವುದು, ಮಾದಕ ವಸ್ತುಗಳನ್ನು ಉಪಯೋಗಿಸದಿರುವುದು ಇತ್ಯಾದಿ.

6. ಮಕ್ಕಳಿಗೆ/ ಹದಿಹರೆಯದವರಿಗೆ/ ಯೌವ್ವನಾವಸ್ಥೆಯಲ್ಲಿರುವವರಿಗೆ ಹಾಗೂ ಅವರ ಭಾವನೆಗಳಿಗೆ/ ಅಭಿಪ್ರಾಯಗಳಿಗೆ ಗೌರವ ನೀಡುವುದು. ಅವರು ಕುಟುಂಬದ ಓರ್ವ ಮುಖ್ಯ ಅಂಗವೆನ್ನುವ ಭಾವನೆ ಮೂಡಬೇಕು ಹಾಗೂ ಅವರಿಗೆ ಹಾಗೂ ಅವರ ಅಭಿಪ್ರಾಯಗಳಿಗೆ ಸ್ಥಾನಮಾನವಿದೆಯೆನ್ನುವ ನಂಬಿಕೆ ಬರಬೇಕು.

7. ಜವಾಬ್ದಾರಿಗಳ ಬಗ್ಗೆ ತಿಳಿಸುವುದು: ಆಯಾ ವಯಸ್ಸಿಗೆ ತಕ್ಕಂತೆ ದೈನಂದಿನ ಚಟುವಟಿಕೆಗಳಿಗೆ, ನಡವಳಿಕೆಗಳಿಗೆ ಜವಾಬ್ದಾರಿ ಮಕ್ಕಳು/ ಹದಿಹರೆಯದವರು/ ಯೌವ್ವನಾವಸ್ಥೆಯಲ್ಲಿರುವವರು ತೆಗೆದುಕೊಳ್ಳಬೇಕು. ದಿನದ ಅಭ್ಯಾಸವನ್ನು ತಾನಾಗಿಯೇ ಯಾರಿಂದನೂ ಹೇಳಿಸಿಕೊಳ್ಳದೇ ದಿನಂಪ್ರತಿ ಮುಗಿಸುವುದು, ತನ್ನ ಕೆಲಸಗಳನ್ನು ತಾನೇ ಮಾಡುವುದು, ಒಳ್ಳೆಯದು ಅಥವಾ ಕೆಟ್ಟದ್ದನ್ನೇನಾದರು ಮಾಡಿದ್ದರೆ ಅದರ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳುವುದು ಇತ್ಯಾದಿ. ಇವುಗಳ ಉದ್ದೇಶವೇನೆಂದರೆ, ಯಾವುದೇ ಕೆಲಸದಿಂದ ದೊರೆಯುವ ಫ‌ಲ ಅಥವಾ ಪರಿಣಾಮಗಳು ತನ್ನ ಪ್ರಯತ್ನದ ಮೇಲೆ ನಿರ್ಭರವಾಗಿರುತ್ತದೆಯೇ ಹೊರತು ಇತರರ ಮೇಲಲ್ಲ ಎನ್ನುವ ಜವಾಬ್ದಾರಿ ಬರಬೇಕೆನ್ನುವುದು. ಇದನ್ನು ನಿಯಮಿತವಾಗಿ ಅಳವಡಿಸಿಕೊಂಡಾಗ ಹದಿಹರೆಯದವರು/ ಯೌವ್ವನಾವಸ್ಥೆಯಲ್ಲಿರುವ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ/ಕೆಲಸ ಮಾಡುವಾಗ ಆಲೋಚನೆ ಮಾಡಿ ಮಾಡುತ್ತಾರೆ, ದುಡುಕುವುದಿಲ್ಲ ಮತ್ತು ತನ್ನ ಪರಿಸ್ಥಿತಿಗೆ ಇತರರನ್ನು ದೂರುವುದಿಲ್ಲ. ತಪ್ಪು ಮಾಡಿದಾಗ ತಿದ್ದಿಕೊಳ್ಳಲು ಅವಕಾಶಗಳನ್ನು ನೀಡಿ ಅಥವಾ ತಿದ್ದಿಕೊಳ್ಳಲು ಲಭ್ಯ ಸಹಾಯಗಳ ಬಗ್ಗೆ ತಿಳಿಸಿ ಹಾಗೂ ಅಗತ್ಯವಿದ್ದರೆ ಸಹಾಯ ಮಾಡಿ. ಸಮಸ್ಯೆಯಿ¨ªಾಗ ಅದನ್ನು ಬಗೆಹರಿಸಲು ಲಭ್ಯ ಮಾರ್ಗಗಳ ಬಗ್ಗೆ ತಿಳಿಸಿ ಹೊರತು ನೀವಾಗಿಯೇ ಸಮಸ್ಯೆಗಳನ್ನು ಬಗೆಹರಿಸಲು ಹೋಗಬೇಡಿ.

8. ಮಕ್ಕಳ ಸ್ನೇಹಿತರ ಹಾಗೂ ಅವರ ಕುಟುಂಬಗಳ ಪರಿಚಯವಿದ್ದರೆ ಒಳ್ಳೆಯದು. ಮಕ್ಕಳ ಸ್ನೇಹಿತರು ಮನೆಗೆ ಬಂದು ಹೋಗುವುದು ಅಥವಾ ಮಕ್ಕಳು ಸ್ನೇಹಿತರ ಮನೆಗೆ ಹೋಗಿ ಬರುತ್ತಾ ಇರುವುದರಿಂದ ಅವರ ಚಟುವಟಿಕೆಗಳ ಮುತುವರ್ಜಿ ಸುಲಭವಾಗಿರುತ್ತದೆ.

ಇದೇ ರೀತಿ ಹಲವಾರು ವಿಧಾನಗಳನ್ನು ಅವಶ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬಹುದು. ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಇದರ ನಿಟ್ಟಿನಲ್ಲಿ ಮಾಡಬೇಕಾದ ಕರ್ತವ್ಯಗಳನ್ನು ಮಗು ಬೆಳೆಯುತ್ತಿರುವಾಗಲೇ ಆರಂಭಿಸಬೇಕಾಗುತ್ತದೆ. ಹದಿಹರೆಯದ/ ಯೌವ್ವನಾವಸ್ಥೆ ಜೀವನದ ಅತ್ಯಂತ ಮಹತ್ವದ ಹಂತ. ಯಾಕೆಂದರೆ ಜೀವನದ ವಿವಿಧ ಆಯಾಮಗಳಲ್ಲಿ ಬದಲಾವಣೆಗಳಾಗುವುದು ಈ ಹಂತದಲ್ಲಿ ಹಾಗೂ ಹೆಚ್ಚಿನ ಮಾನಸಿಕ ಸಮಸ್ಯೆಗಳು ಹಾಗೂ ಮಾನಸಿಕ ಕಾಯಿಲೆಗಳು ಉಲ್ಬಣಗೊಳ್ಳುವುದು ಈ ಹಂತದಲ್ಲಿ. ಈ ರೀತಿ ಸಮಸ್ಯೆಗಳುಂಟಾಗಲು ಹಲವು ಕಾರಣಗಳಿರಬಹುದು ಹಾಗೂ ಸಮಸ್ಯೆಗಳುಂಟಾಗದಿರಲು ಹಲವು ರಕ್ಷಿಸುವ ಅಂಶಗಳಿರಬಹುದು. ಈ ಅಂಶಗಳ ಬಗ್ಗೆ ಪೋಷಕರು ತಿಳಿದುಕೊಂಡು ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವುದು ಅಗತ್ಯ. ಸಮಸ್ಯೆಗಳು ಹುಟ್ಟಿದ ಅನಂತರ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಕ್ಕಿಂತ ಸಮಸ್ಯೆಗಳು ಹುಟ್ಟದೇ ಇರುವ ಹಾಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗೂ ಸಮಾಜದ , ದೇಶದ ಭವಿಷ್ಯ. ಹಾಗಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಹದಿಹರೆಯದವರ / ಯೌವ್ವನಾವಸ್ಥೆಯಲ್ಲಿರುವವರ ಮಾನಸಿಕ ಆರೋಗ್ಯವನ್ನು ಕಾಪಾಡೀಕೊಂಡು ಹೋಗುವುದು ಎಲ್ಲರ ಹೊಣೆ ಹಾಗೂ ಉತ್ತಮ ಮಾನಸಿಕ ಆರೋಗ್ಯ ಹಾಗೂ ವಾತಾವರಣ ನೀಡಲು ಪೋಷಕರು, ಕುಟುಂಬಗಳು, ಶಿಕ್ಷಕರು, ಶಾಲೆಗಳು, ಸಮಾಜ, ಸರಕಾರಿ/ ಸರಕಾರೇತರ ಸಂಘ-ಸಂಸ್ಥೆಗಳು, ಆರೋಗ್ಯ ಸೇವೆ ಗಳು, ಮಾಧ್ಯಮದವರು ಎಲ್ಲರೂ ಕೈಜೋಡಿಸಬೇಕಾದ ಅಗತ್ಯವಿದೆ.

ಟಾಪ್ ನ್ಯೂಸ್

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.