ಪೆರಿಫೆರಲ್‌ ವಾಸ್ಕಾಲಾರ್‌ ಕಾಯಿಲೆಗಳು


Team Udayavani, Oct 28, 2018, 6:00 AM IST

1.jpg

ಹಿಂದಿನ ವಾರದಿಂದ

ಫಿಮೊರೊ ಪೊಪ್ಲೈಟಿಯಲ್‌ ಬೈಪಾಸ್‌
ಬಾಧಿತ ತೊಡೆ ಅಥವಾ ಕಾಲಿಗೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ರೋಗಿಯ ಕಾಲಿನಿಂದ ಒಂದು ರಕ್ತನಾಳ (ಸಾಫೆನಸ್‌ ರಕ್ತನಾಳ)ವನ್ನು ತೆಗೆದು ತಿರುಗಿಸಿ ಬೈಪಾಸ್‌ಗಾಗಿ ಉಪಯೋಗಿಸಲಾಗುತ್ತದೆ. ರಕ್ತನಾಳವನ್ನು ತೊಡೆಯ ಹತ್ತಿರ ಮತ್ತು ದೂರವಾಗಿ ಸಂಪರ್ಕಿಸಲಾಗುತ್ತದೆ. ಶಸ್ತ್ರಕ್ರಿಯೆಗೆ 3ರಿಂದ 4 ತಾಸುಗಳು ತಗಲುತ್ತವೆ ಹಾಗೂ ಈ ವೇಳೆ ರೋಗಿಗೆ ಜನರಲ್‌ ಮತ್ತು ಬೆನ್ನುಹುರಿಯ ಅರಿವಳಿಕೆ ನೀಡಲಾಗುತ್ತದೆ. 
ಶಸ್ತ್ರಚಿಕಿತ್ಸೆಯ ಬಳಿಕ ರೋಗಿ ಒಂದು ವಾರಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ ಹಾಗೂ ಒಂದೆರಡು ಔಷಧಗಳನ್ನು ಜೀವನಪರ್ಯಂತ ತೆಗೆದುಕೊಳ್ಳಬೇಕಾಗುತ್ತದೆ.

ನಡಿಗೆಯ ವೇಳೆ ಉಂಟಾಗುವ ಹಿಡಿದಂತಹ ನೋವು ಸಂಪೂರ್ಣವಾಗಿ ಮಾಯವಾಗುತ್ತದೆ ಹಾಗೂ ರೋಗಿ ಓಡುವುದು, ಎಲ್ಲ ಕಾರ್ಯಚಟುವಟಿಕೆಗಳನ್ನು ನಡೆಸುವುದು ಸಾಧ್ಯವಾಗುತ್ತದೆ. ರೋಗಿಯ ರಕ್ತನಾಳ ಆರೋಗ್ಯಯುತವಲ್ಲದಿದ್ದು, ವೆರಿಕೋಸ್‌ ವೈನ್ಸ್‌ ಹೊಂದಿದ್ದರೆ ಆ ರಕ್ತನಾಳವನ್ನು ಬೈಪಾಸ್‌ಗೆ ಉಪಯೋಗಿಸುವುದು ಸಾಧ್ಯವಾಗುವುದಿಲ್ಲ. ಆಗ ಗಾರ್ಟೆಕ್ಸ್‌ ಅಥವಾ ಡ್ಯಾಕ್ರನ್‌ ಎಂದು ಕರೆಯಲ್ಪಡುವ ಕೃತಕ ಕಸಿಯನ್ನು ಉಪಯೋಗಿಸಬೇಕಾಗುತ್ತದೆ. ಈ ಸಿಂಥೆಟಿಕ್‌ ಕಸಿಗಳು ಬಹಳ ದುಬಾರಿಯಾಗಿರುತ್ತವೆ. 

ಫಿಮೊರೊ ಪೊಪ್ಲೈಟಿಯಲ್‌ ಬೈಪಾಸ್‌
ಆ್ಯಂಜಿಯೊಪ್ಲಾಸ್ಟಿ/ಸ್ಟೆಂಟಿಂಗ್‌
ರಕ್ತನಾಳದಲ್ಲಿ ತಡೆ ಕಿರಿದಾಗಿದ್ದಾಗ ಬಲೂನ್‌ ಆ್ಯಂಜಿಯೊಪ್ಲಾಸ್ಟಿ ಮತ್ತು ಸ್ಟೆಂಟಿಂಗ್‌ ಮೂಲಕ ನಿವಾರಿಸುವುದು ಸಾಧ್ಯ. ಇಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ. ಆ್ಯಂಜಿಯೊಗ್ರಾಮ್‌ ನಡೆಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 

ಶಸ್ತ್ರಚಿಕಿತ್ಸೆ ನಡೆಸಲಾಗದ ಪ್ರಕರಣಗಳು
ಬೈಪಾಸ್‌ ಶಸ್ತ್ರಚಿಕಿತ್ಸೆ ಮತ್ತು ಆ್ಯಂಜಿಯೊಪ್ಲಾಸ್ಟಿ ನಡೆಸಲು ಸಾಧ್ಯವಿಲ್ಲದ ಕೆಲವು ರೋಗಿಗಳು ಔಷಧಯನ್ನು ಮಾತ್ರ ಮುಂದುವರಿಸಬೇಕಾಗುತ್ತದೆ. ಇಂಥ ರೋಗಿಗಳಿಗೆ ಹೆಚ್ಚು ದೂರ ನಡೆಯಲು ಸಾಧ್ಯವಾಗುವುದಿಲ್ಲ, ನೋವು ಕಾಣಿಸಿಕೊಂಡಾಗ ನಿಲ್ಲಬೇಕಾಗುತ್ತದೆ. ಗಾಯ ಗುಣವಾಗುವುದು ನಿಧಾನವಾದ ಕಾರಣ ಪಾದದಲ್ಲಿ ಗಾಯ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಯಾವಾಗಲೂ ವಾಹನದಲ್ಲಿ ಪ್ರಯಾಣಿಸಬೇಕಾಗುತ್ತದೆ. 
ಕಡಿಮೆ ಮಾಲೆಕ್ಯುಲಾರ್‌ ತೂಕದ ಹೆಪಾರಿನ್‌ ಔಷಧವನ್ನು ರೋಗಿಗೆ ಒಂದು ವಾರ ನೀಡಿ ಕೊಲ್ಯಾಟರಲ್‌ ಹರಿವನ್ನು ಹೆಚ್ಚಿಸಬೇಕಾಗುತ್ತದೆ. ಐದು ದಿನಗಳ ಕಾಲ ಐವಿ ಪ್ರೊಸ್ಟಾಗ್ಲಾಂಡಿನ್‌ಗಳನ್ನು ಕೂಡ ನೀಡಬಹುದಾಗಿದ್ದು, ಇದನ್ನು ಐದು ತಿಂಗಳುಗಳ ಕಾಲ ಪ್ರತೀ ತಿಂಗಳೂ ಪುನರಾವರ್ತಿಸಲಾಗುತ್ತದೆ. ಇದು ಕೊಲ್ಯಾಟರಲ್‌ ಹರಿವನ್ನು ಉತ್ತಮಪಡಿಸುತ್ತದೆಯಲ್ಲದೆ ಹಾಲಿ ಇರುವ ಕಿರು ಅಪಧಮನಿಗಳನ್ನು ತೆಳುಗೊಳಿಸುತ್ತದೆ. 

ತಡೆ
ಇನ್ಸುಲಿನ್‌ ಅಗತ್ಯವಿರುವ ಸ್ಥಿತಿಯಿದ್ದರೂ ಮಧುಮೇಹದ ಉತ್ತಮ ನಿಯಂತ್ರಣ ಮತ್ತು ರಕ್ತದೊತ್ತಡದ ಸಮರ್ಪಕ ನಿಯಂತ್ರಣ ಅಗತ್ಯ. ಹೆಚ್ಚು ಕೊಲೆಸ್ಟರಾಲ್‌ ಹೊಂದಿರುವವರು ಅದನ್ನು ನಿಯಂತ್ರಿಸಲು ಸ್ಟಾಟಿನ್‌ಗಳನ್ನು ತೆಗೆದುಕೊಳ್ಳಬೇಕು ಹಾಗೂ ಕೊಬ್ಬು ಮತ್ತು ಎಣ್ಣೆಗಳನ್ನು ಕಡಿಮೆ ಸೇವಿಸಬೇಕು. ಇತರರು ಅಧಿಕ ದೇಹತೂಕ ಹೊಂದಿದ್ದಾಗ ತೂಕ ಇಳಿಸಿಕೊಳ್ಳಬೇಕು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಧೂಮಪಾನ ಮಾಡಬಾರದು, ಕೆಲವರು ತಮ್ಮ ಜೀವನಶೈಲಿ ಯನ್ನು ಬದಲಾಯಿಸಿಕೊಳ್ಳಬೇಕು ಹಾಗೂ ನಿಯಮಿತವಾಗಿ ಪ್ರತಿಬಂಧಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

ಔಷಧಗಳು
ಇಂತಹ ಪ್ರಕರಣಗಳಲ್ಲಿ ಉಪಯೋಗಿಸುವ ಔಷಧಗಳೆಂದರೆ, ಪೆಂಟಾಕ್ಸಿಫೈಲೈನ್‌, ಸಿಲಾಸ್ಟೊಝೋಲ್‌, ಆಸ್ಪಿರಿನ್‌, ಕ್ಲೊಪಿಡ್ರೊಜೆಲ್‌ ಮತ್ತು ಸ್ಟಾಟಿನ್‌ಗಳು. ಕಡಿಮೆ ಮಾಲೆಕ್ಯುಲಾರ್‌ ತೂಕದ ಹೆಪಾರಿನ್‌ ಅನ್ನು ಸ್ನಾಯುಗಳಿಗೆ ಮತ್ತು ಪ್ರೊಸ್ಟಾಗ್ಲಾಂಡಿನ್‌ಗಳನ್ನು ರಕ್ತನಾಳಗಳಿಗೆ ನೀಡಲಾಗುತ್ತದೆ. 

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.