ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ


Team Udayavani, Jan 5, 2019, 12:04 PM IST

download-sss.jpg

ಮಧುಮೇಹಿಗಳಲ್ಲಿ ದೊಡ್ಡರಕ್ತನಾಳಗಳು ಸಂಕುಚಿತಗೊಂಡು ಹೃದಯ ಮತ್ತು ರಕ್ತನಾಳಗಳ ತೊಂದರೆಗಳಾದ ಹೃದಯಾಘಾತ, ಲಕ್ವ, ಕಾಲಿನಲ್ಲಿ ಮರುಕಳಿಸುವ ರಕ್ತಸಂಚಾರ ತೊಡಕು (intermittent claudication)ಇತ್ಯಾದಿ ದೀರ್ಘ‌ಕಾಲಿಕ ತೊಂದರೆಗಳು ಸಾಮಾನ್ಯ ಜನರಿಗಿಂತ ಅಧಿಕವಾಗಿ ಬರುವ ಸಾಧ್ಯತೆಗಳಿರುತ್ತದೆ.

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಹೃದಯ ಮತ್ತು ರಕ್ತನಾಳಗಳ ತೊಂದರೆಗಳು 
ಹೇಗಾಗುತ್ತವೆ?

ಸಾಮಾನ್ಯವಾಗಿ ಎಲ್ಲರಲ್ಲೂ 30ರ ವಯೋಮಾನದ ಅನಂತರ ರಕ್ತನಾಳಗಳಲ್ಲಿ ಕೊಬ್ಬಿನ ಅಂಶ ಶೇಖರಣೆಯಾಗಲು ಪ್ರಾರಂಭವಾಗುತ್ತದೆ. ಮಧುಮೇಹದೊಂದಿಗೆ ಜೀವಿಸುವರ ರಕ್ತದಲ್ಲಿ ಗುÉಕೋಸ್‌ ಅಂಶ ಅಧಿಕವಿರುವುದರಿಂದ ಆಹಾರದಲ್ಲಿನ ಕೊಬ್ಬು ಮತ್ತು ಪ್ರೊಟೀನ್‌ ಅಂಶಗಳು ಗ್ಲುಕೋಸ್  ಜತೆ ಸೇರಿ, ಗ್ಲೆ„ಕೇಟೆಡ್‌ ಎಂಡ್‌ (advanced glycated end product) ಆಮ್ಲಜನಕದ ಅಭಾವವಾಗಲು ಕಾರಣವಾಗುತ್ತದೆ. ಇದರಿಂದ ರಕ್ತನಾಳಗಳಲ್ಲಿ ಕೊಬ್ಬಿನ ಅಂಶದ  ಶೇಖರಣೆ ಅಧಿಕಗೊಂಡು ದೊಡ್ಡರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ಹೃದಯ, ಮಿದುಳು ಹಾಗೂ ಕಾಲಿಗೆ ರಕ್ತಸಂಚಾರದಲ್ಲಿ ವ್ಯತ್ಯಯವಾಗಿ ಆಮ್ಲಜನಕದ ಅಭಾವವಾಗಿ ತೊಂದರೆಗಳಾಗುತ್ತವೆ.

ಮಧುಮೇಹದೊಂದಿಗೆ 
ಜೀವಿಸುವವರಲ್ಲಿ ಯಾವ ಹೃದಯ 
ಮತ್ತು ರಕ್ತನಾಳಗಳ ತೊಂದರೆಗಳು 
ಕಂಡುಬರಬಹುದು?

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಹೃದಯ ಸಂಬಂದೀ ಕಾಯಿಲೆಗಳು, ಹೃದಯಾಘಾತ, ಪಾರ್ಶ್ವವಾಯು, ಕಾಲಿನಲ್ಲಿ ಮರುಕಳಿಸುವ ರಕ್ತಸಂಚಾರ ತೊಡಕು, ಅಧಿಕ ರಕ್ತದೊತ್ತಡದಂತಹ ತೊಂದರೆಗಳು ಕಂಡುಬರಬಹುದು 

ಹೃದಯ ಮತ್ತು ರಕ್ತನಾಳಗಳ 
ತೊಂದರೆಗಳಿಗೆ ಯಾರು ಹೆಚ್ಚು 
ಅಪಾಯದಲ್ಲಿರುತ್ತಾರೆ?

ಮಧುಮೇಹವುಳ್ಳವರಲ್ಲಿ ಹೃದಯ ಮತ್ತು ರಕ್ತನಾಳಗಳ ತೊಂದರೆಗೆ ಒಳಗಾಗುವ ಅಪಾಯ ಹೆಚ್ಚಿರುತ್ತದೆ ಹಾಗೆಯೇ ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಬ್ಬಿನ ಅಂಶ ಹೊಂದಿರುವವರು, ಬೊಜ್ಜುಳ್ಳವರು, ದೈಹಿಕ ಶ್ರಮವಿಲ್ಲದ ಜೀವನ ನಡೆಸುವವರು, ಅನಾರೋಗ್ಯಕ ಆಹಾರ ಶೈಲಿಯ ಜೊತೆಗೆ ಮದ್ಯಪಾನ ಮತ್ತು ಧೂಮಪಾನ ಮಾಡುವವರು, ಮತ್ತು ಹೆಚ್ಚು ಮಾನಸಿಕ-ಸಾಮಾಜಿಕ ಒತ್ತಡಗಳನ್ನು ಹೊಂದಿರುವವರು ಹೆಚ್ಚು ಅಪಾಯದಲ್ಲಿರುತ್ತಾರೆ.

ಮಧುಮೇಹದೊಂದಿಗೆ ಜೀವಿಸುವವರು ಹೃದಯ- ರಕ್ತನಾಳಗಳ ತೊಂದರೆಗಳ ಬಗ್ಗೆ ಏಕೆ 
ಹೆಚ್ಚಿನ ಜಾಗೃತಿ ವಹಿಸಬೇಕು?

ಈ ಕೆಳಗಿನ ಆಂಶಗಳು ಮಧುಮೇಹದೊಂದಿಗೆ ಜೀವಿಸುವವರಲ್ಲಿ ಹೃದಯ-ರಕ್ತನಾಳಗಳ ತೊಂದರೆಗಳ ತೀವ್ರತೆಯ ಬಗ್ಗೆ ಅರಿವು ಮೂಡಿಸುತ್ತವೆ. 
– ಮಧುಮೇಹದೊಂದಿಗೆ ಜೀವಿಸುವ ಭಾರತೀಯರಲ್ಲಿ ದೊಡ್ಡ ರಕ್ತನಾಳದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇತರರಿಗಿಂತ ಅಧಿಕ.
– ಮಧುಮೇಹದೊಂದಿಗೆ ಜೀವಿಸುವವರಲ್ಲಿ ಇತರರಿಗಿಂತ ಸುಮಾರು 2 ರಿಂದ 3 ಪಟ್ಟು ಅಧಿಕ ಹೃದಯ ಸಂಬಂಧಿ ತೊಂದರೆಗಳು ಬರುವ ಸಾಧ್ಯತೆಗಳಿರುತ್ತವೆ. 
– ಮಧುಮೇಹದೊಂದಿಗೆ ಜೀವಿಸುವವರು ಇತರರಿಗಿಂತ 3 ದಶಕದಷ್ಟು ಮುಂಚಿತವಾಗಿ ಹೃದಯ ಸಂಬಂಧಿ ತೊಂದರೆಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. 
– ಮಧುಮೇಹದೊಂದಿಗೆ ಜೀವಿಸುವವರಲ್ಲಿ ಸುಮಾರು ಶೇ.80ರಷ್ಟು ಮರಣ ಹೃದಯ ಸಂಬಂಧಿ ತೊಂದರೆಗಳಿಂದಾಗಿದ್ದರೆ ಶೇ.75ರಷ್ಟು ಆಸ್ಪತೆ ಸೇರ್ಪಡೆ ಇದೇ ಕಾರಣಕ್ಕಾಗಿರುತ್ತದೆ. 
– ಮಧುಮೇಹಿಗಳ ವಯೋಮಾನ ಹೃದಯ ಸಂಬಂಧಿ ತೊಂದರೆಗಳಿಂದ 8ರಿಂದ 10 ವರ್ಷ ಇತರರಿಗಿಂತ ಕಡಿಮೆ ಆಗಿರುತ್ತದೆ.
– ಮಧುಮೇಹದೊಂದಿಗೆ ಜೀವಿಸುವವರು ಇತರರಿಗಿಂತ ಸುಮಾರು 1.5 ಪಟ್ಟು ಅಧಿಕ ಪಾರ್ಶ್ವವಾಯು ತೊಂದರೆಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. 
– ಮಧುಮೇಹದೊಂದಿಗೆ ಜೀವಿಸುವವರು ಇತರರಿಗಿಂತ ಸುಮಾರು 1.5 ಪಟ್ಟು ಅಧಿಕ ಮರುಕಳಿಸುವ ರಕ್ತಸಂಚಾರ ತೊಡಕು ಒಳಗಾಗುವ ಸಾಧ್ಯತೆಗಳಿರುತ್ತವೆ.
– ಪ್ರಭೇದ 2 ಮಧುಮೇಹದೊಂದಿಗೆ ಜೀವಿಸುವ ಮೂರನೆ ಒಂದರಷ್ಟು ಜನರಲ್ಲಿ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ.
ಹೃದಯ-ರಕ್ತನಾಳಗಳ ತೊಂದರೆಗಳ ಬಗ್ಗೆ ಜಾಗೃತರಾಗುವುದು ಜೀವನವನ್ನು ಪ್ರೀತಿಸುವ ಮತ್ತು ಆರೋಗ್ಯವಂತರಾಗಿ ಬಾಳಲು ಬಯಸುವ ಮಧುಮೇಹದೊಂದಿಗೆ ಜೀವಿಸುವ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ.

ಮಧುಮೇಹ ಸಂಬಂಧಿತ ಹೃದಯ ಸಂಬಂಧಿ ತೊಂದರೆಗಳಲ್ಲಿ 
ಸಾಮಾನ್ಯವಾಗಿ ಎಷ್ಟು ವಿಧಗಳಿವೆ?

ಸಾಮಾನ್ಯವಾಗಿ 2 ವಿಧದ ಹೃದಯ ಸಂಬಂಧೀ ತೊಂದರೆಗಳಿವೆ:
– ಹೃದಯಕ್ಕೆ ಬೇಕಾಗುವಷ್ಟು ಪೂರಕ ರಕ್ತ ಸಂಚಾರವಾಗದೆ ಸ್ವಲ್ಪ ಕೆಲಸ ಮಾಡಿದಾಗ ಬೇಗನೆ ಸುಸ್ತಾಗುವುದು, ಮೊದಲಿನಿಗಿಂತ ಬೇಗನೆ ಸುಸ್ತಾಗುವುದು ಇತ್ಯಾದಿ ಕಾಣಿಸಿಕೊಳ್ಳುತ್ತದೆ ಇದನ್ನು ದೀರ್ಘ‌ಕಾಲಿಕ ಅಚಲವಾದ ಹೃದಯ ಸಂಬಂದೀ ತೊಂದರೆ ಎನ್ನುತ್ತೇವೆ.
– ರಕ್ತನಾಳದಲ್ಲಿ ಕೊಬ್ಬಿನಾಂಶದ ಅಧಿಕ ಶೇಖರಣೆಯಿಂದ ರಕ್ತಸಂಚಾರ ಕುಂಠಿತಗೊಂಡು ಎದೆಭಾಗದಲ್ಲಿ ಒತ್ತಡ, ಉರಿಯುಂಟಾಗುವುದು, ಅತಿಯಾದ ನಿಶ್ಯಕ್ತಿ, ಉಸಿರುಕಟ್ಟುವುದು ಇತ್ಯಾದಿಗಳು ಕಂಡುಬರುವುದನ್ನು ತೀವ್ರತರವಾದ ಹೃದಯಾಘಾತ ಎನ್ನುತ್ತೇವೆ.

ಹೃದಯ ಸಂಬಂದೀ ತೊಂದರೆಗಳನ್ನು ಪತ್ತೆಹಚ್ಚಲು ಅಥವಾ ಪ್ರಮಾಣವನ್ನು ತಿಳಿಯಲು ಯಾವ ಪರೀಕ್ಷೆ ಮಾಡಲಾಗುತ್ತದೆ?
ಈ ಕೆಳಗಿನ ಪರೀಕ್ಷೆಗಳು ಹೃದಯ ಸಂಬಂದೀ ತೊಂದರೆಗಳ ಪತ್ತೆಗೆ ಅವಶ್ಯ:
– ದೈಹಿಕ ತಪಾಸಣೆ ಮತ್ತು ರೋಗ ಇತಿಹಾಸ ತಿಳಿದುಕೊಳ್ಳುವುದು
– ರಕ್ತ ಪರೀಕ್ಷೆ ಇಲೆಕ್ಟ್ರೋ ಕಾರ್ಡಿಯೋಗ್ರಾಮ್‌ (ಇ.ಸಿ.ಜಿ)
– ಇಕೊಕಾರ್ಡಿಯೋಗ್ರಾಮ್‌ (ಹೃದಯದ ಶ್ರವಣಾತೀತ ಧ್ವನಿ
– ಒತ್ತಡದ ಪರೀಕ್ಷೆ (ಟ್ರೆಡ್‌ ಮಿಲ್‌ ಪರೀಕ್ಷೆ)
– ಎಂಜಿಯೋಗ್ರಫಿ ಇತ್ಯಾದಿ

ಹೃದಯ ಸಂಬಂಧೀ ತೊಂದರೆಗಳಿಗೆ 
ಲಭ್ಯವಿರುವ ಚಿಕಿತ್ಸೆಗಳೇನು?

ಹೃದಯ ಸಂಬಂಧೀ ತೊಂದರೆಯ ತೀವ್ರತೆ ಮತ್ತು ವ್ಯಕ್ತಿಯ ಅಪಾಯವನ್ನಾಧರಿಸಿ ಈ ಕೆಳಗಿನ ಚಿಕಿತ್ಸೆಗಳನ್ನು ಸೂಚಿಸಲಾಗುತ್ತದೆ:
– ಜೀವನ ಶೈಲಿಯಲ್ಲಿ ಮಾರ್ಪಾಡು: ಪಥ್ಯಾಹಾರ, ದೈಹಿಕ ಚಟುವಟಿಕೆ ಮತ್ತು ಒತ್ತಡ ನಿರ್ವಹಣೆ. 
– ಔಷಧೀಯ ಚಿಕಿತ್ಸೆ: ರಕ್ತ ತೆಳುಮಾಡುವ ಔಷಧ ಮತ್ತು ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಔಷಧಗಳು.
– ಏಂಜೀಯೋಪ್ಲಾಸ್ಟಿ – ಕಿರಿದಾದ ಕೊಬ್ಬಿನ ಅಂಶ ತುಂಬಿದ ಅಪಧಮನಿಯನ್ನು ಬಲೂನ್‌ ಮೂಲಕ ಅಗಲಗೊಳಿಸಿ ನಳಿಕೆ (ಸ್ಟೆಂಟ್‌) ಅನ್ನು ಅಳವಡಿಸುವ ಚಿಕಿತ್ಸೆ. ಇದರಿಂದ ರಕ್ತಸಂಚಾರ ಸುಲಲಿತವಾಗುತ್ತದೆ.
– ತೆರೆದ ಹೃದಯದ ಶಸ್ತ್ರಚಿಕಿತ್ಸೆ: ಕೈ ಅಥವಾ ಕಾಲಿನಿಂದ ಮುಖ್ಯರಕ್ತನಾಳವನ್ನು ತೆಗೆದು ಕೊಬ್ಬಿನಾಂಶದಿಂದ ಹಾದಿಕಟ್ಟಿದ ಹೃದಯದ ರಕ್ತನಾಳದ ಪ್ರದೇಶದ ಮುಂದಕ್ಕೆ ತೆರದ ಹೃದಯದ ಶಸ್ತ್ರ ಚಿಕಿತ್ಸೆಯ  ಮೂಲಕ ಜೋಡಿಸುವ ಚಿಕಿತ್ಸೆ.

ಲಕ್ವ (ಸ್ಟ್ರೋಕ್‌) ಹೊಡೆಯುವುದು ಎಂದರೇನು ಮತ್ತು ವಿವಿಧ ರೀತಿಯ ಲಕ್ವಗಳಾವುವು?
ಮಿದುಳಿನ ರಕ್ತನಾಳಕ್ಕೆ ಹಾನಿಯಾಗುವುದನ್ನು ಲಕ್ವ ಹೊಡೆಯುವುದು ಎನ್ನುತ್ತೇವೆ. ಇವುಗಳ ಗುಣಲಕ್ಷಣಗಳು ಹಾನಿಯಾದ ಪ್ರದೇಶ, ಗಾತ್ರ ಮತ್ತು ಕಾರಣವನ್ನು ಅವಲಂಬಿತವಾಗಿರುತ್ತದೆ.
ಲಕ್ವವನ್ನು ಇಸ್ಕೀಮಿಕ್‌ (ಮಿದುಳಿಗೆ ಆಮ್ಲಜನಕವನ್ನು ಪೂರೈಸುವ ರಕ್ತನಾಳದ ಹಾದಿಕಟ್ಟುವುದು) ಸ್ಟ್ರೋಕ್‌, ಹ್ಯಾಮರೇಜಿಕ್‌ (ಮಿದುಳಿನ ರಕ್ತನಾಳದಲ್ಲಿ ರಕ್ತಸ್ರಾವವಾಗುವುದು) ಸ್ಟ್ರೋಕ್‌ ಮತ್ತು ಟ್ರಾನ್ಸಿಎಂಟ್‌ ಇಸ್ಕೀಮಿಕ್‌ (ಅಲ್ಪಾವಧಿಗೆ ಮಿದುಳಿಗೆ ರಕ್ತ ಪೂರೈಸುವ ರಕ್ತನಾಳದ ಹಾದಿಕಟ್ಟಿ ಆಗುವ ಸಣ್ಣ ಪ್ರಮಾಣದ ಲಕ್ವ) ಸ್ಟ್ರೋಕ್‌ ಎಂದು ವರ್ಗೀಕರಿಸಲಾಗಿದೆ.

ಲಕ್ವವನ್ನು ಪತ್ತೆಹಚ್ಚಲು ಅಥವಾ 
ಪ್ರಮಾಣವನ್ನು ತಿಳಿಯಲು 
ಯಾವ ಪರೀಕ್ಷೆ ಮಾಡಲಾಗುತ್ತದೆ?

ಈ ಕೆಳಗಿನ ಪರೀಕ್ಷೆಗಳು ಲಕ್ವದ ಪತ್ತೆಗೆ ಅವಶ್ಯ:
ದೈಹಿಕ ತಪಾಸಣೆ
ವಿವಿಧ ರಕ್ತ ಪರೀಕ್ಷೆ
ಗಣಕೀಕೃತ ಲಕ್ಷಣಗಳ ಸ್ಕ್ಯಾನಿಂಗ್‌
ಕಾಂತೀಯ ಅನುರಣನ ಚಿತ್ರ
ಶೀರ್ಶಧಮನಿ ಶ್ರವಣಾತೀತ ಧ್ವನಿ
ಸೆರೆಬ್ರಲ್‌ ಏಂಜಿಯೋಗ್ರಾಮ್‌
ಎಲೆಕ್ಟ್ರೋಎನ್ಸೆಫೆಲೋಗ್ರಾಮ್‌

ಲಕ್ವಕ್ಕೆ ಲಭ್ಯವಿರುವ ಚಿಕಿತ್ಸೆಗಳೇನು?
ವೈದ್ಯರು ಲಕ್ವದ ವಿಧ ಮತ್ತು ತೀವ್ರತೆಯನ್ನಾದರಿಸಿ ಈ ಕೆಳಗಿನ ಚಿಕಿತ್ಸೆಗಳಲ್ಲಿ ಸೂಕ್ತವಾದುದನ್ನು ಆಥವಾ ಮಿಶ್ರಣವನ್ನು ಆಯ್ಕೆ ಮಾಡುತ್ತಾರೆ: 
– ಔಷಧೀಯ ಚಿಕಿತ್ಸೆ: ರಕ್ತದ ಹೆಪ್ಪುಗಟ್ಟುವಿಕೆಯನ್ನು ಕರಗಿಸುವ ಔಷಧ ಚುಚ್ಚುಮದ್ದು ಅಥವಾ ನೇರವಾಗಿ ಮಿದುಳಿನ ಹಾನಿಗೊಳಗಾದ ಭಾಗಕ್ಕೆ ಕೊಡುವುದರಿಂದ ರಕ್ತಸಂಚಾರವನ್ನು ಮರುಸ್ಥಾಪಿಸಿ ಮುಂದಿನ ಸಂಭಾವ್ಯ ತೊಂದರೆಯನ್ನು ತಗ್ಗುಗೊಳಿಸಬಹುದು. ಲಕ್ವ ಹೊಡೆದ ನಾಲ್ಕುವರೆ ಗಂಟೆಯೊಳಗೆ ಇದನ್ನು ಕೊಡಬೇಕು.
– ನಳಿಕೆ (ಸ್ಟೆಂಟ್‌) ಮೂಲಕ ರಕ್ತದ ಹೆಪ್ಪುಗಟ್ಟಿಕೆಯನ್ನು ಕರಗಿಸುವುದು: ಇದು ದೊಡ್ಡ ಪ್ರಮಾಣದ ಮತ್ತು ಔಷಧದ‌ ಮೂಲಕ ತೆರವುಗೊಳಿಸಲಾಗದ ಸಂದರ್ಭದಲ್ಲಿ ಮಾಡುವ ಚಿಕಿತ್ಸಾ ವಿಧಾನ. ಈ ವಿಧಾನದಲ್ಲಿ ಉಪಾಯದಿಂದ ತೂರುನಳಿಗೆ (ಕ್ಯಾತಿಟರ್‌) ಮೂಲಕ ಹೆಪ್ಪುಗಟ್ಟಿದ ರಕ್ತವನ್ನು ಹಿಡಿದು ತಗೆಯುವುದು.

ಇದರೊಂದಿಗೆ ತೀವ್ರತೆಗನುಗುಣವಾಗಿ ಕೆಲವು ಶಸ್ತ್ರ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತದೆ.

ಕಾಲಿನಲ್ಲಿ ಮರುಕಳಿಸುವ 
ರಕ್ತಸಂಚಾರ ತೊಡಕು ಹೇಗೆ 
ಉಂಟಾಗುವುದು?

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಕಾಲಿನ ಭಾಗಕ್ಕೆ ರಕ್ತಸಂಚಾರದ ವ್ಯತ್ಯಯವಾಗಿ ಮಾಂಸ ಖಂಡಗಳ ಹಿಡಿತದ ಅನುಭವವಾಗುವುದನ್ನು ಕಾಲಿನಲ್ಲಿ ಮರುಕಳಿಸುವ ರಕ್ತಸಂಚಾರ ತೊಡಕು ಎನ್ನುತ್ತೇವೆ. ಹೆಚ್ಚಾಗಿ ಇದು ಮೊಣಕಾಲಿನ ಹಿಂಭಾಗದ ಮಾಂಸಖಂಡದಲ್ಲಿ ವೇದನೆಯಾಗುವುದು ಹಾಗೆಯೇ ಕೆಲವೊಮ್ಮೆ ತೊಡೆ ಮತ್ತು ಪೃಷ್ಟ ಭಾಗದಲ್ಲೂ ನೋವಿನ ಅನುಭವವಾಗುತ್ತದೆ. ಮಧುಮೇಹ ಭಾದಿತರಲ್ಲಿ ಈ ಸಮಸ್ಯೆ ಇತರರಿಗಿಂತ ಸುಮಾರು 20 ಪಟ್ಟು ಆಧಿಕವಾಗಿ ಕಂಡುಬರುತ್ತದೆ.

ಕಾಲಿನಲ್ಲಿ ಮರುಕಳಿಸುವ ರಕ್ತಸಂಚಾರ ತೊಡಕು ಪತ್ತೆಹಚ್ಚಲು 
ಅಥವಾ ಪ್ರಮಾಣವನ್ನು ತಿಳಿಯಲು ಯಾವ ಪರೀಕ್ಷೆ ಮಾಡಲಾಗುತ್ತದೆ?

– ವ್ಯಕ್ತಿಯ ದೈಹಿಕ ತಪಾಸಣೆ ಮತ್ತು ಇತಿಹಾಸ
– ತೋಳು ಮತ್ತು ಮೊಣಕಾಲಿನ ರಕ್ತದೊತ್ತಡದ ಸೂಚ್ಯಂಕ
– ವಿವಿಧ ರಕ್ತ ಪರೀಕ್ಷೆ
– ಗಣಕೀಕೃತ ಲಕ್ಷಣಗಳ ಎಂಜಿಯೋಗ್ರಫಿ
– ಕಾಂತೀಯ ಅನುರಣನ ಚಿತ್ರ
– ಶ್ರವಣಾತೀತ ಧ್ವನಿ

ಅಧಿಕ ರಕ್ತದೊತ್ತಡ ಎಂದರೇನು?
ಅಧಿಕ ರಕ್ತದೊತ್ತಡವನ್ನು ನಿಶ್ಯಬ್ದ ಕೊಲೆಗಾರ ಎನ್ನಲಾಗುತ್ತದೆ. ಸಾಮಾನ್ಯವಾಗಿ ಇದು ಯಾವುದೆ ರೋಗ ಲಕ್ಷಣವನ್ನು ತೋರ್ಪಡಿಸುವುದಿಲ್ಲ ಹಾಗಾಗಿ ವ್ಯಕ್ತಿಯ ಗಮನಕ್ಕೆ ಬಂದಿರುವುದಿಲ್ಲ. 

ಆದರೆ ಇದು ಲಕ್ವ ಮತ್ತು ಹೃದಯ ಸಂಭಂದೀ ತೊಂದರೆಗಳು ಬರುವ ಅಪಾಯವನ್ನು ಹೆಚ್ಚಿಸುತ್ತದೆ.ಸಾಮಾನ್ಯವಾಗಿ 120/80  ಅನ್ನು ರಕ್ತದೊತ್ತಡದ ಸಾಮಾನ್ಯ ಶ್ರೇಣಿ ಎಂದು ಪರಿಗಣಿಸಲಾಗುತ್ತದೆ. ರಕ್ತದೊತ್ತಡವು 140/90  ಶ್ರೇಣಿಗಿಂತ ಅಧಿಕವಾದಲ್ಲಿ ವೈದ್ಯರು ಅಧಿಕ ರಕ್ತದೊತ್ತಡ ಎಂದು ಪರಿಗಣಿಸುತ್ತಾರೆ. 

ಅಧಿಕ ರಕ್ತದೊತ್ತಡದ ಲಕ್ಷಣಗಳೇನು?
ಸತತವಾಗಿ ಅಧಿಕ ರಕ್ತದೊತ್ತಡವಿದ್ದರೂ ಸಾಮಾನ್ಯವಾಗಿ ವ್ಯಕ್ತಿಯಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ ಕೆಲವರಲ್ಲಿ ತಲೆನೋವು, ಏದುಸಿರು ಬರುವುದು ಅಥವಾ ಮೂಗಿನಲ್ಲಿ ರಕ್ತಸ್ರಾವವಾಗುದು ಕಂಡುಬರಬಹುದು ಆದರೆ ಅವುಗಳು ಅಧಿಕ ರಕ್ತದೊತ್ತಡಕ್ಕೆ ನೇರವಾಗಿ ಸಂಭಂದಿಸಿದ್ದೆಂದು ಹೇಳುವುದು ಅಸಾಧ್ಯ. ಆದರೆ ಅಧಿಕ ರಕ್ತದೊತ್ತಡ ಅತಿ ಹೆಚ್ಚಾದಾಗ ಅದು ಜೀವಕ್ಕೆ ಅಪಾಯ. ಹಾಗಾಗಿ ನಿಯಮಿತವಾಗಿ ರಕ್ತದೊತ್ತಡವನ್ನು ಪರೀಕ್ಷಿಸಿ ತಿಳಿದುಕೊಳ್ಳುವುದು ಮಧುಮೇಹದೊಂದಿಗೆ ಜೀವಿಸುವವರಿಗೆ ಅತ್ಯವಶ್ಯ.

ಅಧಿಕ ರಕ್ತದೊತ್ತಡವನ್ನು 
ಪತ್ತೆ ಹಚ್ಚುವುದು ಹೇಗೆ?

ಮ್ಯಾನೋಮೀಟರ್‌ ಮಾಪನವನ್ನು ಬಳಸಿ ವೈದ್ಯರು ರಕ್ತದೊತ್ತಡವನ್ನು ಪರೀಕ್ಷಿಸುತ್ತಾರೆ. ರಕ್ತದೊತ್ತಡವನ್ನು ಪತ್ತೆಮಾಡಿ ವೈದ್ಯರು 2-3 ಬಾರಿ ಪರೀಕ್ಷೆಮಾಡಿ ನಂತರವಷ್ಟೇ ಅಧಿಕರಕ್ತದೊತ್ತಡವನ್ನು ನಿರ್ಣಯ ಮಾಡುತ್ತಾರೆ.

ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಏನು?
ಉಪ್ಪು ಕಡಿಮೆ ಇರುವ ಆಹಾರ ಸೇವಿಸುವುದು ಹೃದಯಕ್ಕೆ ಒಳ್ಳೆಯದು, ನಿರಂತರ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ತೂಕ ಜಾಸ್ತಿ ಇದ್ದಲ್ಲಿ ಕಡಿಮೆ ಮಾಡಿಕೊಳ್ಳುವುದು, ಧೂಮಪಾನ ಮತ್ತು ಮದ್ಯಪಾನದ ಸೇವನೆ ಮಾಡುತಿದ್ದಲ್ಲಿ ನಿಲ್ಲಿಸುವುದು ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆಮಾಡಲು ಔಷಧಗಳ ಸೇವನೆ ಮಾಡುವುದು.

ಮಧುಮೇಹದೊಂದಿಗೆ ಜೀವಿಸುವವರು ದೊಡ್ಡ ರಕ್ತನಾಳದ ತೊಂದರೆಗಳ ಅಪಾಯವನ್ನು ಕಡಿಮೆಗೊಳಿಸಲು ಯಾವ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಬೇಕು?
ಮಧುಮೇಹದೊಂದಿಗೆ ಜೀವಿಸುವವರಲ್ಲಿ ದೊಡ್ಡ ರಕ್ತನಾಳಗಳ ತೊಂದರೆಯ ಅಪಾಯ ಹೆಚ್ಚಾಗಿರುವುದರಿಂದ ಈ ಕೆಳಗಿನ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ವಿವೇಕ:
– ಪಥ್ಯಾಹಾರದ ಅನುಸರಣೆ (ಮೊದಲಿನ ಸಂಚಿಕೆಗಳಲ್ಲಿ ಸೂಚಿಸಿದಂತೆ)
– ದೈಹಿಕ ಚಟುವಟಿಕೆ
– ಒತ್ತಡ ನಿರ್ವಹಣೆ
– ತೂಕ ಮತ್ತು ಬೊಜ್ಜುತನ ಅಧಿಕವಾಗಿದ್ದಲ್ಲಿ ತೂಕದ ನಿರ್ವಹಣೆ
– ಸರಿಯಾದ ಔಷಧದ ಬದ್ದತೆ
– ಧೂಮಪಾನ ನಿಲ್ಲಿಸುವುದು
– ನಿಯಮಿತವಾಗಿ ಯಾವುದೇ ತೊಂದರೆಗಳಿಲ್ಲದಿದ್ದರೂ ಕನಿಷ್ಟ ವರ್ಷಕ್ಕೊಮ್ಮೆ ಹೃದಯ ಮತ್ತು ಇತರ ಪರೀಕ್ಷೆಗಳನ್ನು ಮಾಡಿಸುವುದು.
– ಮೂರು ತಿಂಗಳಿಗೊಮ್ಮೆ ರಕ್ತದಲ್ಲಿನ ಗುÉಕೋಸ್‌ ಮತ್ತು ರಕ್ತದೊತ್ತಡದ ತಪಾಸಣೆ ಮಾಡಿಸುವುದು
– ವರ್ಷಕ್ಕೊಮ್ಮೆ ಪಾದದ ಪರೀಕ್ಷೆ ಮಾಡಿಸಬೇಕು
– ಹಾಗೆಯೇ ನಿಖರವಾಗಿ ಯಾವುದಾ ದರು ತೊಂದರೆಗಳಿದ್ದಲ್ಲಿ ಮೇಲೆ ಸೂಚಿಸಿದ ಅನುಸರಣೆಗೆ ಹೊರತಾಗಿ ವೈದ್ಯರು ಸೂಚಿಸಿದಂತೆ ತಪಾಸಣ ಅನು ಸರಣೆಯನ್ನು ತಪ್ಪದೇ ಪಾಲಿಸಬೇಕು.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಂಬಂಧವೇನು?
ಮಧುಮೇಹಿಗಳ ದೇಹದಲ್ಲಿ ಇನ್ಸುಲಿನ್‌ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಅಥವಾ ಇನ್ಸುಲಿನ್‌ ಸಮರ್ಪಕವಾಗಿ ಬಳಕೆಯಾಗದೆ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗುವುದು. ಇದರಿಂದ ದೇಹದಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗುವುದು ಮತ್ತು ರಕ್ತನಾಳಗಳಲ್ಲಿನ ಕೊಬ್ಬಿನ ಅಂಶದಿಂದ ರಕ್ತನಾಳಗಳು ಸಂಕುಚಿತಗೊಂಡು ಮಧುಮೇಹಿಗಳಲ್ಲಿ ಅಧಿಕ ರಕ್ತದೊತ್ತಡ ಬರುವ ಸಾಧ್ಯತೆಗಳಿವೆ. ಹಾಗು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇವೆರಡರ ಅಪಾ¿åಕಾರಿ ಅಂಶಗಳೂ ಒಂದೇ ತರಹದವಾಗಿರುವುದರಿಂದಲೂ ಮಧುಮೇಹದೊಂದಿಗೆ ಜೀವಿಸುವವರಿಗೆ ಅಧಿಕ ರಕ್ತದೊತ್ತಡ‌ ಬರುವ ಅಪಾಯದ ಸಾಧ್ಯತೆ ಹೆಚ್ಚು. ಮಧುಮೇಹದೊಂದಿಗೆ ಜೀವಿಸುವವರಲ್ಲಿ ಅಧಿಕ ರಕ್ತದೊತ್ತಡದ ವಾಡಿಕೆ ಪ್ರಮಾಣ ಇತರರಿಗಿಂತ 1.5ರಿಂದ 2 ಪಟ್ಟು ಅಧಿಕ.

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಕಂಡುಬರುವ ಹೃದಯ ಸಂಬಂಧಿ ತೊಂದರೆಗಳ ಲಕ್ಷಣಗಳೇನು?
ಸಾಮಾನ್ಯವಾಗಿ ಹೃದಯ ಸಂಬಂಧಿ ತೊಂದರೆಗಳಿದ್ದರೆ ಎದೆನೋವು, ಎದೆ ಭಾಗದಲ್ಲಿ ಬಿಗಿತ, ಹಿಂಡಿದ ಅನುಭವ, ಭಾರ ಇಟ್ಟಂತಹ ಅನುಭವ ಹಾಗೂ ಇದು ಎಡಕೈ, ಭುಜ, ಬೆನ್ನು ಕುತ್ತಿಗೆಗೆ ಹರಡಿದಂತಾಗುವುದು, ಉಸಿರು ಕಟ್ಟಿದ ಅನುಭವ, ಬೆವರು, ವಾಕರಿಕೆ, ವಾಂತಿ, ಕಫ‌, ತೀವ್ರಗತಿಯ ಹೃದಯ ಬಡಿತ, ಉಸಿರು ಕಟ್ಟಿದಂತಾಗುವುದು, ಉದ್ವೇಗ ಇತ್ಯಾದಿ ಸಾಮಾನ್ಯ ಲಕ್ಷಣಗಳು ಕಂಡುಬರುತ್ತವೆ. 

ಆದರೆ ಮಧುಮೇಹದೊಂದಿಗೆ ಜೀವಿಸುವವರಲ್ಲಿ ನರದೌರ್ಬಲ್ಯದಿಂದ ಈ ಮೇಲ್ಕಂಡ ಯಾವುದೇ ಲಕ್ಷಣಗಳು ಗೋಚರಿಸದೆ ಇರಬಹುದು ಹಾಗಾಗಿ ಗೊತ್ತಾಗದೆ ತೀವ್ರಗತಿಯ ತೊಂದರೆಗಳು ಕಾಣಿಸಿಕೊಂಡು ಅಪಾಯಕ್ಕೊಳಗಾಗುವ ಸಾಧ್ಯತೆಗಳಿವೆ.

ಕಾಲಿನಲ್ಲಿ ಮರುಕಳಿಸುವ ರಕ್ತಸಂಚಾರ ತೊಡಕು;  ಲಭ್ಯವಿರುವ ಚಿಕಿತ್ಸೆಗಳೇನು?
ವೈದ್ಯರು ಮರುಕಳಿಸುವ ರಕ್ತಸಂಚಾರ ತೊಡಕು ತೀವ್ರತೆಯನ್ನಾದರಿಸಿ ಈ ಕೆಳಗಿನ ಚಿಕಿತ್ಸೆಗಳನ್ನು ಪ್ರಾರಂಭಿಸಲು ಸಲಹೆ ನೀಡುತ್ತಾರೆ   
– ಪಥ್ಯಾಹಾರ 
– ದೈಹಿಕ ಚಟುವಟಿಕೆ
– ವ್ಯಾಯಾಮ
– ತೂಕ ಕಡಿಮೆಗೊಳಿಸುವುದು
– ನೋವು ಕಡಿಮೆಗೊಳಿಸುವ ಫಿಸಿಯೋಥೆರಪಿ ಚಿಕಿತ್ಸೆ
ಔಷಧೀಯ ಚಿಕಿತ್ಸೆ: ವೈದ್ಯರು ಸೂಚಿಸುವ ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಮತ್ತು ರಕ್ತಸಂಚಾರವನ್ನು ಹೆಚ್ಚುಗೊಳಿಸುವ ಔಷಧಗಳು.

ಕೆಲವೊಮ್ಮೆ ಎಂಜಿಯೋಪ್ಲಾಸ್ಟ್‌ (ನಳಿಗೆಯ ಮೂಲಕ ರಕ್ತನಾಳವನ್ನು ಹಿರಿದುಗೊಳಿಸುವುದು ಅಗತ್ಯವಿದ್ದಲ್ಲಿ ನಳಿಕೆ(ಸ್ಟೆಂಟ್‌) ಅನ್ನು ಅಳವಡಿಸುವ ಚಿಕಿತ್ಸೆ).

ಲಕ್ವದ ಪ್ರಮುಖ ಲಕ್ಷಣಗಳಾವುವು?
ಈ ಕೆಳಗಿನವುಗಳು ಲಕ್ವದ ಪ್ರಮುಖ ಲಕ್ಷಣಗಳು:

– ಮುಖ ಕೆಳಗೆ ಹೋಗುವುದು
– ತೋಳು, ಕಾಲು ಮತ್ತು ಮುಖದಲ್ಲಿ ನಿಶ್ಶಕ್ತಿ
– ಮಾತು ತೊದಲುವುದು
– ಮನಸ್ಸಿನಲ್ಲಿ ಗೊಂದಲ
– ತಲೆ ತಿರುಗುವಿಕೆ
– ಒಂದು ಅಥವಾ ಎರಡು ಕಣ್ಣುಗಳಿಂದ ತದೇಕಚಿತ್ತದಿಂದ ನೋಡಲು ಕಷ್ಟವಾಗುವುದು
– ತೀವ್ರವಾದ ತಲೆನೋವು
– ದೇಹದ ಸಮತೋಲನದಲ್ಲಿ ವ್ಯತ್ಯಯ
– ದೇಹದ ಕೆಲವು ಅಥವಾ ಎಲ್ಲ ಭಾಗಗಳು ಸ್ವಾಧೀನ ಕಳೆದುಕೊಳ್ಳುವುದು

– ಪ್ರಭಾತ್‌ ಕಲ್ಕೂರ ಎಂ., 
ಯೋಜನಾ ನಿರ್ವಾಹಕರು, ವಿಶ್ವ ಮಧುಮೇಹ ಪ್ರತಿಷ್ಠಾನ‌ 15: 941,
ಸ್ಕೂಲ್‌ ಆಫ್ ಅಲೈಡ್‌ ಹೆಲ್ತ್‌ ಸೈನ್ಸಸ್‌, ಮಣಿಪಾಲ.

ಟಾಪ್ ನ್ಯೂಸ್

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.