ಉದ್ಯೋಗದಲ್ಲಿ ಮಾನಸಿಕ ಆರೋಗ್ಯ


Team Udayavani, Nov 18, 2018, 6:00 AM IST

manasika.jpg

ಮನಸ್ಸಿಗೆ ಹಿತಕರವಾದ ವಾತಾವರಣ. ಎಲ್ಲ  ರೀತಿಯ ಕೆಲಸಗಳಿಗೂ/ವ್ಯಾಪಾರಿಗಳಿಗೂ/ಉದ್ಯಮಗಳಿಗೂ ಹಾಗೂ ಎಲ್ಲ ವರ್ಗಗಳ‌ ಕೆಲಸದವರಿಗೂ ಅತ್ಯಗತ್ಯ. ನಮಗೆಲ್ಲಾ  ತಿಳಿದಿರುವ ಹಾಗೆ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಾನಸಿಕ ಆರೋಗ್ಯ ಹದಗೆಟ್ಟರೆ, ದೈಹಿಕ ಆರೋಗ್ಯ ಕೂಡ ಹದಗೆಡುತ್ತದೆ ಅಥವಾ ಕೆಲಸದ ಸಾಮರ್ಥ್ಯ ಕಡಿಮೆಯಾಗುತ್ತದೆ. ಕೆಲವೊಮ್ಮೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ಕೆಲಸದಲ್ಲಿರಬಹುದು ಅಥವಾ ಕೆಲಸದಲ್ಲಿರುವಾಗಲೇ ಮಾನಸಿಕ ಆರೋಗ್ಯ ಹದಗೆಡಬಹುದು. ಹಾಗಾಗಿ ಮಾನಸಿಕ ಆರೋಗ್ಯ ಕಾಪಾಡುವುದಲ್ಲದೆ, ಯಾವುದೇ ಮಾನಸಿಕ ಸಮಸ್ಯೆ ಉಲ್ಬಣವಾಗದಂತೆ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ. ಕೆಲಸದಲ್ಲಿರುವ ಹೆಚ್ಚಿನ ವ್ಯಕ್ತಿಗಳು ತಿಳಿಸುವ ಸಮಸ್ಯೆಗಳೆಂದರೆ; ಕೆಲಸದ ಒತ್ತಡ ಮತ್ತು ಬರ್ನ್ ಔಟ್‌ (ಕನ್ನಡದಲ್ಲಿ ಇದರ ಸಮಾನಾರ್ಥಕ ಪದ ಸಿಗುವುದು ಕಷ್ಟ. ಅದರೆ ಇದನ್ನು ಕೆಲಸದಲ್ಲಿ  ದೈಹಿಕವಾಗಿ ಹಾಗೂ ಮಾನಸಿಕವಾಗಿ ದಣಿವಿನ ಭಾವನೆಯೆಂದು ಅರ್ಥಮಾಡಿಕೊಳ್ಳಬಹುದು).

ಬರ್ನ್ ಔಟ್‌ 
ಇದನ್ನು ಹೆಚ್ಚಿನ ಸಂದರ್ಭಗಳಲ್ಲಿ  ವಿವಿಧ ರೀತಿಯಲ್ಲಿ ಅರ್ಥಮಾಡಿಕೊಳ್ಳಲಾಗಿದೆ. ವ್ಯಕ್ತಿಯ ಕೆಲಸದ ಸಾಮರ್ಥ್ಯ ಕಡಿಮೆಯಾಗುವುದು. ವೈಯಕ್ತಿಕ ಸಾಧನೆಗಳು ಕಡಿಮೆಯಾಗುವುದು. ಭಾವನೆಗಳೇ ಇರದ ಹಾಗೆ ನಿರ್ಲಿಪ್ತನಾಗಿರುವುದು. ತನ್ನ ಕಾರ್ಯದಕ್ಷತೆ ಕಡಿಮೆಯೆನಿಸುವುದು.

ಕೆಲಸದ ಒತ್ತಡ
ಎಲ್ಲರಿಗೂ ಕೆಲಸದೊತ್ತಡ ಒಂದು ದೊಡ್ಡ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸವಾಲಾಗಿದೆ. ಹೆಚ್ಚಿನ ಅಧ್ಯಯನಗಳಲ್ಲಿ ಕಂಡು ಬಂದಿರುವ ಅಂಶವೆಂದರೆ, ಕೆಲಸದೊತ್ತಡ ಹೆಚ್ಚಿನ ಕೆಲಸದವರ ಮುಖ್ಯವಾಗಿರುವ ಚಿಂತೆಯ ವಿಷಯ. ಇದರಿಂದಾಗಿ, ಕೆಲಸದಲ್ಲಿನ ಸಾಮರ್ಥ್ಯ ಕಡಿಮೆಯಾಗುವುದಲ್ಲದೇ ಕೆಲಸದಿಂದ ಗೈರು ಹಾಜರಾಗುವ ಸಾಧ್ಯತೆ ಹೆಚ್ಚಿಗೆಯಾಗುತ್ತದೆ.

ಹಾಗಾದರೆ ಏನು ಮಾಡಬಹುದು? 
ವ್ಯಕ್ತಿಗಳು/ಉದ್ಯೋಗಿಗಳು ಕೈಗೊಳ್ಳಬಹುದಾದ ಕ್ರಮಗಳು
– ತನ್ನ ಆರೋಗ್ಯದ ಕಾಳಜಿ ವಹಿಸುವುದು, ಮುಂಜಾಗ್ರತೆಯಿಂದಿರುವುದು.
– ಸಂಯಮದಿಂದಿರುವುದು, ತನ್ನ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು.
– ತನ್ನನ್ನು ತಾನು ಹತೋಟಿಯಲ್ಲಿಟ್ಟುಕೊಳ್ಳುವುದು.
– ಆರೋಗ್ಯದ ವಿಷಯಗಳ ಬಗ್ಗೆ /ಕಾಯಿಲೆಗಳ ಬಗ್ಗೆ ಅಗತ್ಯ ಮಾಹಿತಿ ಇಟ್ಟುಕೊಳ್ಳುವುದು.
– ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡುವುದು/ಆಟವಾಡುವುದು/ಅಥವಾ ಮನಸ್ಸಿಗೆ ಹಿತವೆನಿಸುವ ವಿರಾಮದ ಚಟುವಟಿಕೆಗಳಲ್ಲಿ ತೊಡಗುವುದು.
– ತನಗೆ ಲಭ್ಯವಿರುವ ವಿವಿಧ ಸವಲತ್ತುಗಳನ್ನು ಬಳಸಿಕೊಳ್ಳುವುದು.

ತನ್ನ ಸಾಮಾಜಿಕ ಸಂಪರ್ಕದಲ್ಲಿರುವವರ ಜತೆಗೆ ನಿಯಮಿತವಾಗಿ ಬೆರೆಯುವುದು ಮತ್ತು ಅವರೊಟ್ಟಿಗಿನ ಸಂಬಂಧಗಳನ್ನು ಕಾಯ್ದುಕೊಳ್ಳುವುದು ಮತ್ತು ವೃದ್ಧಿಸುವುದು.
– ಕೌಟುಂಬಿಕ ಮತ್ತು ವೃತ್ತಿ ಜೀವನದ ಸಮತೋಲನವನ್ನು ಕಾಪಾಡಿಕೊಂಡಿರುವುದು.
– ಅಗತ್ಯವಿದ್ದಾಗ ಸಹಾಯ ಪಡೆಯುವುದು.

ಈ ಕೆಲಸದ ಒತ್ತಡ ಮತ್ತು ಬರ್ನ್ ಔಟ್‌  ಕಂಡು ಬರಲು ಕೆಲವು ಪೋಷಕ ವಿಷಯಗಳೆಂದರೆ
– ಜಟಿಲವಾದ ಮತ್ತು ಅತಿಯಾದ ಕೆಲಸದ ಹೊರೆ
– ಸಮಯದ ಒತ್ತಡ: ನಿರ್ದಿಷ್ಟ ಸಮಯದಲ್ಲಿಯೇ ಸೂಚಿಸಿದ ಕೆಲಸ ಮುಗಿಸಬೇಕು.
– ಕೆಲಸದಲ್ಲಿನ ಭಿನ್ನಾಭಿಪ್ರಾಯಗಳು: ಸಹೋದ್ಯೋಗಿಗಳ ಜತೆಗೆ ಹೊಂದಾಣಿಕೆಯಿರದಿರುವುದು.
– ಸಮಸ್ಯೆಯನ್ನುಂಟು ಮಾಡುವ ಮುಂದಾಳತ್ವ
– ಬೆದರಿಸುವುದು, ತಂಟೆ ಕೊಡುವುದು.
– ಸ್ವಾಯತ್ತತೆ/ ಸ್ವತಂತ್ರತೆ ಇರದೆ ಇರುವುದು
– ಯಾವುದೇ ನಿಯಂತ್ರಣವಿರದಿರುವುದು
– ಇತರ ಕೆಲಸದ ಅವಕಾಶಗಳು ಕಡಿಮೆಯಿರುವುದು
– ಕೆಲಸದಿಂದ ತೃಪ್ತಿಯಿರದಿರುವುದು

ಸಂಘ-ಸಂಸ್ಥೆಗಳು/ಕೆಲಸ ನೀಡುವವರು/ಮಾನವ ಸಂಪನ್ಮೂಲ ತಂಡದವರು ಕೈಗೊಳ್ಳಬಹುದಾದ ಕ್ರಮಗಳು
– ಕೆಲಸ ಮಾಡಿದಾಗ ಉದ್ಯೋಗಿಗಳನ್ನು ಶ್ಲಾ ಸುವುದು/ಮೆಚ್ಚುಗೆ ವ್ಯಕ್ತಪಡಿಸುವುದು.
– ಪೂರಕ ವಾತಾವರಣ ನಿರ್ಮಿಸುವುದು.
– ಬರ್ನ್ ಔಟ್‌ ಲಕ್ಷಣಗಳನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸುವುದು.
– ಸಂಸ್ಥೆಯ ಸಂಸ್ಕೃತಿಯು, ಮೌಲ್ಯಾಧಾರಿತ ಮತ್ತು ವಿಶ್ವಾಸಾರ್ಹಕವೆಂದು ಬಿಂಬಿಸುವುದು.
– ಆವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ  ಕೆಲಸದ ಅವಕಾಶಗಳನ್ನು ಕಲ್ಪಿಸುವುದು.
– ಕುಟುಂಬದವರ ಜತೆ ಸಮಯ ಕಳೆಯಲು ಸಾಕಷ್ಟು ಸಮಯಾವಕಾಶ ಮಾಡಿಕೊಡುವುದು.
– ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯ ಹಣಕಾಸಿನ ಹಾಗೂ ಭಾವನಾತ್ಮಕ ಬೆಂಬಲ ನೀಡುವುದು.
– ಬೆದರಿಸುವುದನ್ನು, ತಂಟೆ ನೀಡುವುದನ್ನು ಮಾಡದಿರುವುದು ಹಾಗೂ ಈ ರೀತಿ ಮಾಡುವ ಸಹೋದ್ಯೋಗಿಗಳಿಂದ ಉದ್ಯೋಗಿಯನ್ನು ರಕ್ಷಿಸುವುದು.
– ಒತ್ತಡ ನಿರ್ವಹಣೆ ಕಾರ್ಯಾಗಾರಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುವುದು
– ವರ್ಷಕ್ಕೊಮ್ಮೆಯಾದರೂ ಎಲ್ಲ ಉದ್ಯೋಗಿಗಳನ್ನು, ಇಡೀ ತಂಡದ ಜತೆಗೆ ವಿರಾಮದ ಚಟುವಟಿಕೆಗಳಿಗೆ ಕರೆದುಕೊಂಡು ಹೋಗುವುದು.
– ಕೆಲಸಕ್ಕೆ ಸಂಬಂಧಪಟ್ಟಂತೆ ಬೇಕಾಗುವ ಕೌಶಲಗಳಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಉದ್ಯೋಗಿಗಳಿಗೆ ತರಬೇತಿ ನೀಡುವುದು.
– ಮುತುವರ್ಜಿ ವಹಿಸಿ ಕೆಲಸ ಮಾಡಿಸುವುದು.

ಈ ರೀತಿ ಅಗತ್ಯಕ್ಕೆ ತಕ್ಕಂತೆ ಹಾಗೂ ಕೆಲಸಕ್ಕೆ ತಕ್ಕಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯದಿಂದ ಜೀವನದ ಗುಣಮಟ್ಟ  ವೃದ್ಧಿಯಾಗುತ್ತದೆ ಮತ್ತು ವ್ಯಕ್ತಿಯು ಸಂತೋಷದಿಂದ ಉದ್ಯೋಗದಲ್ಲಿ  ತೊಡಗಿಕೊಳ್ಳುತ್ತಾನೆ ಮತ್ತು ಅದೇ ಉದ್ಯೋಗದಲ್ಲಿ /ಅದೇ ಸಂಸ್ಥೆಯಲ್ಲಿ  ಮುಂದುವರಿಯಲು ಬಯಸುತ್ತಾನೆ. ಈ ಕ್ರಮಗಳಿಂದಾಗಿ ವ್ಯಕ್ತಿಯ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ಮತ್ತು ಸಂಸ್ಥೆಯ ಮತ್ತು ವ್ಯಕ್ತಿಯ ಆರ್ಥಿಕ ಬೆಳವಣಿಗೆಗೂ ಕೂಡ ಸಹಕಾರಿಯಾಗುತ್ತದೆ. ಎಲ್ಲರಿಗೂ ತಿಳಿದಿರುವ ಹಾಗೆ ಹೆಚ್ಚಿನ ಜನರು ಭವಿಷ್ಯದಲ್ಲಿ  ಬದುಕುವ ಆಯಾಮವಾಗಿ ವಿವಿಧ ಉದ್ಯೋಗಗಳ ಮೇಲೆ ಅವಲಂಬಿತರಾಗಿರುವವರು. ಸ್ವಂತ ಉದ್ಯೋಗದ ಮೇಲೆ ಅವಲಂಬಿತರಾಗಿರುವವರು ಕಡಿಮೆ ಪ್ರಮಾಣದಲ್ಲಿದ್ದಾರೆ. ಹಾಗಾಗಿ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಹಿತ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅತ್ಯಗತ್ಯ.

– ಡಾ| ರವೀಂದ್ರ ಮುನೋಳಿ, 
ಸಹಾಯಕ ಪ್ರಾಧ್ಯಾಪಕರು,
ಮನೋರೋಗ ಚಿಕಿತ್ಸಾ ವಿಭಾಗ,
ಕಸ್ತೂರ್ಬಾ ಆಸ್ಪತ್ರೆ , ಮಣಿಪಾಲ.

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.