ಕೆಫೀನ್‌ ಸಹಿತ ಅಥವಾ ಕೆಫೀನ್‌ ರಹಿತ?


Team Udayavani, Dec 23, 2018, 6:00 AM IST

coffee1.jpg

ಮೃದು ಉದ್ದೀಪಕವಾಗಿರುವ ಕೆಫೀನ್‌ ಕಳೆದ ಹಲವಾರು ಶತಮಾನಗಳಿಂದ ನಮ್ಮ ಆಹಾರ ಶೈಲಿಯ ಭಾಗವಾಗಿದೆ. ಚೀನೀಯರು 5,000 ವರ್ಷಗಳ ಹಿಂದೆಯೇ ಚಹಾವನ್ನು ಶೋಧಿಸಿ ಕುಡಿಯುತ್ತಿದ್ದರು ಎಂಬುದಾಗಿ ದಾಖಲೆಗಳು ಹೇಳುತ್ತವೆ. ಆ ದಿನಗಳಿಂದಲೂ ಕೆಫೀನ್‌ ನಮ್ಮ ಆಹಾರದ ಭಾಗವಾಗಿದೆ. ಇವತ್ತು ಕೆಫೀನ್‌ಯುಕ್ತ ಆಹಾರಗಳು ಮತ್ತು ಪಾನೀಯಗಳು ನಮ್ಮ ಆಹಾರದ ಅವಿಭಾಜ್ಯ ಅಂಗಗಳಾಗಿವೆ. ನಮಗೆಲ್ಲರಿಗೂ ಕಾಫಿ ಅಥವಾ ಚಹಾ ಇಲ್ಲದಿದ್ದರೆ ಬೆಳಗಾಗುವುದೇ ಇಲ್ಲ!

ಸಸ್ಯಗಳಲ್ಲಿ, ವಿಶೇಷವಾಗಿ ಎಲೆಗಳು, ಬೀಜಗಳು ಮತ್ತು ಹಣ್ಣುಗಳಲ್ಲಿ ಕೆಫೀನ್‌ ಇರುತ್ತದೆ. ಸುಮಾರು 60ಕ್ಕೂ ಹೆಚ್ಚಿನ ಸಸ್ಯಗಳು ಕೆಫೀನ್‌ ಹೊಂದಿವೆ ಎಂಬುದಾಗಿ ಅಂದಾಜಿ ಸಲಾಗಿದೆ. ಅವುಗಳಲ್ಲಿ ಕಾಫಿ ಬೀಜ, ಕೊಕೊ ಬೀಜ ಮತ್ತು ಚಹಾ ಎಲೆಗಳು ಮುಖ್ಯವಾದವು.

ಕಾಫಿಯು ಕೆಫೀನ್‌ನ ಮುಖ್ಯ ಮೂಲವಾಗಿದ್ದು, ಅದರ ಪ್ರಮಾಣ ಎಷ್ಟಿದೆ ಎನ್ನುವುದು “ಮೊಚಾ’, “ಕೆಪುಚಿನೊ’ ಹೀಗೆ ಯಾವ ವಿಧದ ಕಾಫಿ ಎನ್ನುವುದನ್ನು ಅವಲಂಬಿಸಿರುತ್ತದೆ. ಕಾಫಿಯ ಪ್ರಮಾಣ ಮತ್ತು ಅದನ್ನು ತಯಾರಿಸಿದ ವಿಧಾನವು ಅದರಲ್ಲಿ ಎಷ್ಟು ಕೆಫೀನ್‌ ಇದೆ ಎಂಬುದನ್ನು ನಿರ್ಧರಿಸುತ್ತದೆ ಹಾಗೂ ಅದು ಕೆಫೀನ್‌ಯುಕ್ತವಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. 

ಸಾಫ್ಟ್ ಡ್ರಿಂಕ್‌ಗಳು ಮತ್ತು ಚಹಾ ಕೂಡ ಮಕ್ಕಳು ಹಾಗೂ ಹದಿಹರೆಯದವರಿಗೆ ಕೆಫೀನ್‌ನ ಮುಖ್ಯ ಮೂಲಗಳಾಗಿವೆ. ಸಿಟ್ರಸ್‌ ಸ್ವಾದವುಳ್ಳ ಕೆಲವು ಪಾನೀಯಗಳಲ್ಲಿಯೂ ಕೆಫೀನ್‌ ಇರುತ್ತದೆ. ಕೆಫೀನ್‌ ಕೇಂದ್ರ ನರವ್ಯವಸ್ಥೆಯಲ್ಲಿ ಸೌಮ್ಯ ಉದ್ದೀಪಕವಾಗಿ ಕೆಲಸ ಮಾಡುತ್ತದೆ. ಕೆಲವರು ತಮ್ಮನ್ನು ಜಾಗೃತರಾಗಿ ಉಳಿಸಿಕೊಳ್ಳಲು ಮತ್ತು ದಣಿವನ್ನು ತಡೆಯಲು ಈ ಪಾನೀಯಗಳನ್ನು ಕುಡಿಯುತ್ತಾರೆ. 

ಕ್ಯಾನ್ಸರ್‌, ಹೃದ್ರೋಗಗಳು, ಹುಣ್ಣುಗಳು, ಓಸ್ಟಿಯೊಪೊರೋಸಿಸ್‌, ಜನನವೈಕಲ್ಯಗಳು ಇತ್ಯಾದಿಯಾಗಿ ಯಾವುದೇ ಆರೋಗ್ಯ ಸಮಸ್ಯೆಗಳಿಗೂ ಕೆಫೀನ್‌ಗೂ ಸಂಬಂಧ ಕಲ್ಪಿಸುವ ಯಾವುದೇ ಸಾಕ್ಷ್ಯಗಳು ಇದುತನಕ ಲಭಿಸಿಲ್ಲ. ಕೆಫೀನ್‌ ಅಧಿಕ ರಕ್ತದೊತ್ತಡ ಅಥವಾ ದೀರ್ಘ‌ಕಾಲಿಕ ರಕ್ತದೊತ್ತಡ ಹೆಚ್ಚಳವನ್ನು ಉಂಟು ಮಾಡುವುದಿಲ್ಲ ಎಂಬುದಾಗಿ ಸಂಶೋಧನೆಗಳು ಹೇಳುತ್ತವೆ. ಆದರೆ ಕೆಲವು ತಾಸುಗಳಿಗೆ ಸೀಮಿತವಾಗುವ ಅಧಿಕ ರಕ್ತದೊತ್ತಡವನ್ನು ಕೆಫೀನ್‌ ಉಂಟು ಮಾಡಬಹುದು. 

ಮೂತ್ರ ವಿಸರ್ಜನೆಯ ಮೂಲಕ ದೇಹದ ದ್ರವಾಂಶ ಹೆಚ್ಚು ನಷ್ಟವಾಗುವ ಡಿಯೂರೆಟಿಕ್‌ ಪರಿಣಾಮವನ್ನು ಕೆಫೀನ್‌ ಉಂಟು ಮಾಡುತ್ತದೆ. ಡಿಯೂರೆಟಿಕ್‌ ಪರಿಣಾಮವು ಸೇವಿಸಿದ ಕೆಫೀನ್‌ ಪ್ರಮಾಣವನ್ನು ಅವಲಂಬಿಸಿದೆ, ಆದರೆ ಅದು ನಿರ್ಜಲೀಕರಣವನ್ನು ಉಂಟು ಮಾಡುವುದಿಲ್ಲ. ಭೇದಿಯುಂಟಾಗಿರುವ ಸಂದರ್ಭದಲ್ಲಿ ಕಾಫಿ ಸೇವನೆಯನ್ನು ವರ್ಜಿಸುವುದು ವಿಹಿತ. 

ಕ್ಯಾಲ್ಸಿಯಂ ಅಂಶವು ಮಲ ಮತ್ತು ಮೂತ್ರದ ಮೂಲಕ ನಷ್ಟವಾಗುವುದು ದಿನಕ್ಕೆ ಹೆಚ್ಚು ಕಾಫಿ ಕುಡಿಯುವ ಜನರಲ್ಲಿ ಹೆಚ್ಚು. ಆದರೆ ಕಾಫಿಗೆ ಹಾಲು ಬೆರೆಸುವ ಮೂಲಕ ಇದನ್ನು ಸರಿದೂಗಿಸಿಕೊಳ್ಳಬಹುದು. ಕಾಫಿಯಲ್ಲಿ ನೊರೆಯನ್ನು ಉಂಟು ಮಾಡಲು ಅಥವಾ ಅದನ್ನು ಹೆಚ್ಚು ಸಮೃದ್ಧವನ್ನಾಗಿಸಲು ಸಂಪೂರ್ಣ ಹಾಲನ್ನೇ ಉಪಯೋಗಿಸಬೇಕಾಗಿಲ್ಲ; ಕಡಿಮೆ ಕೊಬ್ಬಿನ ಸ್ಕಿಮ್‌ ಹಾಲು ಕೂಡ ಲಭ್ಯವಿದೆ. ಲ್ಯಾಕ್ಟೋಸ್‌ ಅಸಹಿಷ್ಣುತೆಯ ಸಮಸ್ಯೆ ಹೊಂದಿರುವವರು ಹಸುವಿನ ಹಾಲಿನ ಬದಲು ಸೊಯಾ ಹಾಲನ್ನು ಬಳಸಬಹುದು.

ಅತ್ಯಧಿಕ ಪ್ರಮಾಣದಲ್ಲಿ ಕೆಫೀನ್‌ ಸೇವನೆಯಿಂದ ಉದ್ವಿಗ್ನತೆ ಅಥವಾ ನಿದ್ರಾಹೀನತೆ ಉಂಟಾಗಬಹುದು. ಅದು ತಾತ್ಕಾಲಿಕವಾಗಿ ಹೃದಯ ಬಡಿತದ ಗತಿಯನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಬಹುದು, ಆದರೆ ಕೆಫೀನ್‌ ದೇಹದಲ್ಲಿ ಸಂಗ್ರಹಗೊಳ್ಳುವುದಿಲ್ಲವಾದ್ದರಿಂದ ಇದು ತಾತ್ಕಾಲಿಕವಾಗಿರುತ್ತದೆ. ಒಂದು ಕಾಫಿ ಕುಡಿದ 30ರಿಂದ 60 ನಿಮಿಷಗಳಲ್ಲಿ ಅದರ ಸಾಂದ್ರತೆ ರಕ್ತಪ್ರವಾಹದಲ್ಲಿ ಅತ್ಯಂತ ಗರಿಷ್ಠ ಪ್ರಮಾಣವನ್ನು ಮುಟ್ಟುತ್ತದೆ. ಅದರ ಪರಿಣಾಮ ಮಾಯವಾಗಲು ಸಾಮಾನ್ಯವಾಗಿ 4ರಿಂದ 6 ತಾಸು ತೆಗೆದುಕೊಳ್ಳುತ್ತದೆ. ಸೇವಿಸಿದ 3-4 ತಾಸುಗಳಲ್ಲಿ ಅದು ದೇಹದಿಂದ ವಿಸರ್ಜಿಸಲ್ಪಡುತ್ತದೆ. 

“ಅತ್ಯಧಿಕ’ ಎನ್ನುವ ಪದವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಅಥವಾ ಆಧರಿಸಿರುತ್ತದೆ. ಅದು ಸೇವನೆಯ ಪ್ರಮಾಣ, ಎಷ್ಟು ಬಾರಿ ಸೇವನೆ, ದೇಹತೂಕ, ದೈಹಿಕ ಸ್ಥಿತಿಗತಿ ಇತ್ಯಾದಿಗಳನ್ನೂ ಆಧರಿಸಿರುತ್ತದೆ. ಕಾಲಕ್ರಮೇಣ ಕೆಫೀನ್‌ಗೆ ದೇಹವು ಸಹಿಷ್ಣುತೆಯನ್ನೂ ಬೆಳೆಸಿಕೊಳ್ಳುತ್ತದೆ. 

ಆರೋಗ್ಯವಂತ ವಯಸ್ಕರಿಗೆ ಕೆಫೀನ್‌ ಸೇವನೆಯ ಮಿತ ಪ್ರಮಾಣ ಎಂದರೆ ದಿನಕ್ಕೆ 200ರಿಂದ 300 ಮಿಲಿಗ್ರಾಂ ಅಥವಾ 2-3 ಕಪ್‌ ಕಾಫಿ ಆಗಿರುತ್ತದೆ. ಇಲ್ಲೂ, ವ್ಯಕ್ತಿಯಿಂದ ವ್ಯಕ್ತಿಗೆ ಕಪ್‌ ಗಾತ್ರ ಬದಲಾಗುತ್ತದೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ದಿನಕ್ಕೆ 2-3 ಕಪ್‌ ಕಾಫಿ ಸೇವನೆ ಯಾವುದೇ ಸಮಸ್ಯೆಯನ್ನು ಉಂಟು ಮಾಡದು.

ಇಲ್ಲಿ ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆ ಎಂದರೆ, ಕೆಫೀನ್‌ ಚಟ (ಅಡಿಕ್ಷನ್‌) ಉಂಟಾಗುತ್ತದೆಯೇ?- ಎಂಬುದು. ಇಲ್ಲ, ಆದರೆ ಅದೊಂದು ಹವ್ಯಾಸವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ನೀವು ನಿಯಮಿತವಾಗಿ ಕೆಫೀನ್‌ಯುಕ್ತ ಪಾನೀಯ ಸೇವಿಸುತ್ತಿದ್ದು, ಹಠಾತ್ತಾಗಿ ನಿಲ್ಲಿಸಿದರೆ ಕೆಲವರಿಗೆ ತೂಕಡಿಕೆ, ತಲೆನೋವು ಉಂಟಾಗಬಹುದು, ಏಕಾಗ್ರತೆಯ ಕೆಲವು ದಿನಗಳ ಕಾಲ ಕುಸಿಯುವ ಸಾಧ್ಯತೆ ಇದೆ. ಆದರೆ ಇದೆಲ್ಲ  ಒಂದೆರಡು ದಿನಗಳಲ್ಲಿ ಮಾಯವಾಗುತ್ತದೆ. 

ನೀವು ಕೆಫೀನ್‌ ಸೇವನೆಯನ್ನು  ಕಡಿಮೆ ಮಾಡಲು ಬಯಸಿದ್ದರೆ 
ಅದು ಬಹಳ ಸುಲಭ. ಹೇಗೆ ಕಡಿಮೆ ಮಾಡಬೇಕು ಎಂಬ ಸೂತ್ರ ಇಲ್ಲಿದೆ:
1. ನಿಧಾನವಾಗಿ ಮತ್ತು ಸ್ವಲ್ಪಸ್ವಲ್ಪವೇ ಕಡಿಮೆ ಮಾಡಿ: ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡಿ. ಹಠಾತ್ತಾಗಿ ನಿಲ್ಲಿಸಿದರೆ ತಲೆನೋವು ಅಥವಾ ತೂಕಡಿಕೆ ಕೆಲವು ದಿನಗಳ ಕಾಲ ಬಾಧಿಸಬಹುದು.
2. ಅರ್ಧ ಸಾಮಾನ್ಯ ಕಾಫಿ ಮತ್ತು ಅರ್ಧ ಕೆಫೀನ್‌ಯುಕ್ತ ಕಾಫಿಗಳನ್ನು ಮಿಶ್ರಣ ಮಾಡಿ ಕುಡಿಯಿರಿ. ಅಂದರೆ ಲೈಟ್‌ ಕಾಫಿ ಕುಡಿಯಿರಿ.
3. ಕುಡಿಯಬೇಕು ಅನ್ನಿಸಿದಾಗ ಗುಟುಕರಿಸಲು ಒಂದು ಕಪ್‌ ನೀರನ್ನು ಕೈಯಳತೆಯಲ್ಲಿ ಇರಿಸಿಕೊಳ್ಳಿ. ಕುಡಿಯಲೇಬೇಕು ಅನ್ನುವ ತಡೆಯಲಸಾಧ್ಯ ತಹತಹ ಉಂಟಾದಾಗ ಒಂದು ಕಪ್‌ ಕಾಫಿಯ ಬಳಿಕ ಒಂದು ಗುಟುಕು ನೀರು ಕುಡಿಯಿರಿ. 
4. ನಿದ್ರಾಹೀನತೆ ಇರುವವರು ಸಂಜೆಯ ಕೆಫೀನ್‌ಯುಕ್ತ ಪಾನೀಯ ಸೇವನೆಯನ್ನು ವರ್ಜಿಸಿ.
ಸಾಮಾನ್ಯವಾಗಿ ಜನರು ಕಾಫಿ ಡಿಕಾಕ್ಷನ್‌ ತಯಾರಿಸಿ, ಅದಕ್ಕೆ ಬೇಕಾದಷ್ಟು ಪ್ರಮಾಣದ ಹಾಲು ಬೆರೆಸಿಕೊಳ್ಳುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ವಿಧದ ದಿಢೀರ್‌ ಕಾಫಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವನ್ನು ಕುದಿಸಬೇಕಾಗಿಲ್ಲ. ಇವುಗಳನ್ನು ಕೊಳ್ಳುವ ಮುನ್ನ ಲೇಬಲ್‌ ಪರಿಶೀಲಿಸಿಕೊಳ್ಳಿ.

– ಡಾ| ಅರುಣಾ ಮಲ್ಯ
ಹಿರಿಯ ಡಯಟೀಶನ್‌
ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.